ಭದ್ರಂ ನೋ ಅಪಿ ವಾತಯ
ಮನೋ ದಕ್ಷಮುತ ಕ್ರತುಮ್ |
ಅಧಾ ತೇ ಸಖ್ಯೇ ಅಂಧಸೋ ವಿವೋ ಮದೇ
ರಣಾನ್ಗಾವೋ ನ ಯವಸೇ ವಿವಕ್ಷಸೇ ||
| ಋಗ್ವೇದ 10.25.1 |
ಹೇ ದೇವ! ನಮಗೆ ಶುಭಕರವಾದ ಮತ್ತು ಸಂತೋಷದಾಯಕವಾದ ಮನಸ್ಸನ್ನು ದಯಪಾಲಿಸು.
ಕರ್ಮಕೌಶಲವನ್ನೂ ಜ್ಞಾನವನ್ನೂ ನೀಡಿ ಸತ್ಕರ್ಮಗಳನ್ನು ಮಾಡುವಂತೆ ಪ್ರೇರಣೆ ನೀಡು.
ಸದಾ ಗೆಳೆಯನಂತೆ ಜೊತೆಗಿರುವ ನಿನ್ನನ್ನು ಸ್ತುತಿಸುವವರು, ಹಸುಗಳು ಹುಲ್ಲುಗಾವಲಿನಲ್ಲಿ ನಿರಾತಂಕ ಸಂತಸವನ್ನು ಅನುಭವಿಸುವಂತೆ ಆನಂದ ಹೊಂದುವರು. ನಿನ್ನ ಸಾಹಚರ್ಯ ಎಲ್ಲಕ್ಕಿಂತ ಶ್ರೇಷ್ಠವಾದುದು. ಅದು ಸದಾ ನನ್ನ ಜೊತೆಗಿರಲಿ.