ಇಂದಿನ ಸುಭಾಷಿತ “ಶಾರ್ಙ್ಗಧರ ಪದ್ಧತಿ”ಯಿಂದ…
ಗುಣಾಃ ಕುರ್ವನ್ತಿ ದೂತತ್ವ೦ ದೂರೊsಅಪಿ ವಸತಾ೦ ಸತಾಮ್ ।
ಕೇತಕೀಗ೦ಧಮಾಘ್ರಾಯ ಸ್ವಮಾಯಾನ್ತಿ ಷಟ್ಟದಾಃ ॥ ಶಾರ್ಜ್ಜಧರ ಪದ್ಧತಿ : 290 ॥
ಅರ್ಥ: ಸಜ್ಜನರು ದೂರದಲ್ಲಿದ್ದರೂ ಅವರ ಗುಣಗಳೇ ದೂತರಂ೦ತೆ ಊರೆಲ್ಲ ಸುತ್ತಾಡಿ ಅವರ ಇರುವಿನ ಸುಳಿವು ನೀಡುತ್ತವೆ. ಕೇದಗೆ ಹೂವಿನ ಘಮಲು ದುಂಬಿಗಳನ್ನು ಸೆಳೆದು ತರುವುದಿಲ್ಲವೆ, ಹಾಗೇ!
ತಾತ್ಪರ್ಯ: ಸಜ್ಜನರು ತಾವು ಇಂಥವರೊಬ್ಬರು ಇದ್ದೇವೆ, ನಮ್ಮನ್ನು ಗಮನಿಸಿ ಎಂದು ಕೈಯೆತ್ತಿ ಕೂಗುವುದಿಲ್ಲ. ಜಗತ್ತಿನ ಗಮನ ಸೆಳೆಯಲು ಏನಕೇನ ಪ್ರಕಾರೇಣ ಕಸರತ್ತು ಮಾಡುವುದಿಲ್ಲ. ವನಸುಮದ ಹಾಗೆ ತಮ್ಮಷ್ಟಕ್ಕೆ ತಾವು ಸದ್ಗುಣಗಳಿಂದ ಕೂಡಿದವರಾಗಿ, ಪರೋಪಕಾರಿಗಳಾಗಿ ಬದುಕುತ್ತ ಇರುತ್ತಾರೆ. ಆದರೆ ಹೇಗೆ ಕೇದಗೆ ಹೂವಿನ ಘಮಲು ಸುತ್ತಮುತ್ತಲೂ ದೂರದವರೆಗೆ ಹಬ್ಬು ದುಂಬಿಗಳನ್ನು ಹೂವಿನತ್ತ ಸೆಳೆಯುತ್ತದೋ, ಹಾಗೆಯೇ ಸಜ್ಜನರ ಸದ್ಗುಣಗಳು ಊರ ತುಂಬ ಹಬ್ಬಿ ಅವರ ಗುರುತನ್ನು ಜಾಹೀರುಗೊಳಿಸುತ್ತವೆ. ಜನ ತಾವಾಗಿಯೇ ಅವರನ್ನು ಅರಸಿ ಬರುತ್ತಾರೆ.