ಇಂದಿನ ಸುಭಾಷಿತ, ವೈರಾಗ್ಯ ಶತಕದಿಂದ…

ಇಂದಿನ ಸುಭಾಷಿತ, ಭರ್ತೃಹರಿಯ ವೈರಾಗ್ಯ ಶತಕದಿಂದ…

ಅಶ್ನೀಮಹಿ ವಯಂ ಭಿಕ್ಷಾಂ ಆಶಾವಾಸೋ ವಸೀಮಹಿ ।
ಶಯೀಮಹಿ ಮಹೀಪೃಷ್ಠೇ ಕುರ್ವೀಮಹಿ ಕಿಮೀಶ್ವರೈಃ ॥ ವೈರಾಗ್ಯ ಶತಕ – 30 ॥ 
ಅರ್ಥ: ಭಿಕ್ಷೆ ಬೇಡಿ ತಿನ್ನೋಣ, ಬೆತ್ತಲಾಗೇ ಇದ್ದುಬಿಡೋಣ, ನೆಲದ ಮೇಲೆ ಮಲಗೋಣ (ಹೊರತು) ದೊರೆಗಳ ಮುಲಾಜು ನಮಗೆ ಯಾಕೆ ಬೇಕು! 

ತಾತ್ಪರ್ಯ: ಸಂಪನ್ಮೂಲಗಳನ್ನು ಬಳಸಿಕೊಂಡು, ನಮ್ಮ ಸ್ವಂತ ಬಲದ ಮೇಲೆ, ತೀರಾ ಕಷ್ಟ ಬಂದಾಗ ತಿರಿದಾದರೂ ತಿನ್ನೋಣ, ಆಳುವವರ ಚಮಚಾಗಿರಿ ಮಾಡಿ ಅವರ ಮುಲಾಜಿಗೆ ಬೀಳುವ ಭಟ್ಟಂಗಿತನಕ್ಕೆ ಕೈಹಾಕುವುದು ಬೇಡ ಅನ್ನುವುದು ಈ ಸುಭಾಷಿತದ ಆಶಯ.

Leave a Reply