ನಾಗರಿಕರು ಅಂದರೆ ಯಾರು? : ಸುಭಾಷಿತದ ವಿವರಣೆ

ಇಂದಿನ ಸುಭಾಷಿತ…

ವಿದ್ಯಾ ವಿನಯ ಭೂಷಣ ದಯಾ ಧರ್ಮ ದಾಕ್ಷಿಣ್ಯ ಸತ್ಯ ನ್ಯಾಯಯುತಾಃ ಇತಿ ನಾಗರಿಕಾಃ

ಅರ್ಥ : ವಿದ್ಯೆ ವಿನಯಗಳಿಂದ ಶೋಭಿಸುವವರು, ದಯೆಯನ್ನು ಹೊಂದಿರುವವರು, ಧರ್ಮಾಚರಣೆ ಮಾಡುವವರು, ದಾಕ್ಷಿಣ್ಯ ತೋರುವವರು, ಸತ್ಯ ನ್ಯಾಯಗಳನ್ನು ಎತ್ತಿ ಹಿಡಿಯುವವರೇ ನಾಗರಿಕರು.

ನಾಗರಿಕರು ಎಂದರೆ ಒಟ್ಟಾರೆಯಾಗಿ ಒಂದು ಸಂಸ್ಕೃತಿಯೊಡನೆ ಗುರುತಿಸಿಕೊಂಡವರಲ್ಲ. ನಗರದಲ್ಲಿ ಇರುವವರಂತೂ ಅಲ್ಲವೇ ಅಲ್ಲ. ಒಂದು ವ್ಯವಸ್ಥೆಯ ಮಿತಿಯಲ್ಲಿ ಬದ್ಧರಾಗಿರುವವರೆಂದು ಹೇಳಬಹುದಾದರೂ ಅವರು ಕೂಡಾ ನಾಗರಿಕರಲ್ಲ.
ನಾಗರಿಕರೆಂದರೆ, ವಿದ್ಯಾ ವಿನಯ ದಯಾ – ದಾಕ್ಷಿಣ್ಯ, ಸತ್ಯ – ನ್ಯಾಯ ಸಂಪನ್ನರು ಎನ್ನುತ್ತದೆ ಈ ಸುಭಾಷಿತ.
ಈ ಪ್ರಕಾರ ನಾವೆಲ್ಲರೂ ನಿಜಾರ್ಥದಲ್ಲಿ ನಾಗರಿಕರಾಗುವ ಸಂಕಲ್ಪ ತೊಡೋಣವೇ?

Leave a Reply