‘ಬ್ರಹ್ಮಚಾರಿಣೀ’ ದೇವಿಯ ಮಂತ್ರ: ನವರಾತ್ರಿಯ ಎರಡನೇ ದಿನ

ನವರಾತ್ರಿಯ ಎರಡನೇ ದಿನ, ಬ್ರಹ್ಮಚಾರಿಣೀ ಪೂಜೆ

ದಧಾನಾ ಕರಪದ್ಮಾಭ್ಯಾಮಕ್ಷಮಾಲಾಕಮಂಡಲೂ
ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ

ಸತಿ ದೇವಿಯು ಶಿವನನ್ನು ಹೊಂದುವುದಕ್ಕಾಗಿ ಕಾನನವನ್ನು ಸೇರಿ ತಪಸ್ಸು ಮಾಡುತ್ತಾಳೆ. ಬ್ರಹ್ಮಚರ್ಯದ ಪಾಲನೆಯೇ ಒಂದು ಮಹಾನ್ ತಪಸ್ಸು. ಅಂತಹ ಕಟ್ಟುನಿಟ್ಟಾದ ನಿಯಮಗಳಿಂದ ತಪಸ್ಸನ್ನು ಮಾಡಿದಾಗ ಬ್ರಹ್ಮದೇವನು ಒಲಿದು ಬಂದು, ನಿನಗೆ ಶಿವನು ಸಿಗಲೆಂದು ಆಶೀರ್ವದಿಸುತ್ತಾನೆ. ಆ ಬಳಿಕ ಆಕೆ ಶಿವನನ್ನು ಸೇರುತ್ತಾಳೆ. ಇದು ಬ್ರಹ್ಮಚಾರಿಣಿಯ ಕಥೆ.

ದೇವಿಯು ಬಲಗೈಯಲ್ಲಿ ಜಪಮಾಲೆಯನ್ನು ಮತ್ತು ಎಡದ ಕೈಯಲ್ಲಿ ಕಮಂಡಲವನ್ನು ಧರಿಸಿರುತ್ತಾಳೆ. ಬ್ರಹ್ಮಚಾರಿಣಿ ದೇವಿಯು ಪ್ರೀತಿ ಹಾಗೂ ಶಾಂತಿಯ ಸಂಕೇತ. ಅಲ್ಲದೆ ಶಾಂತಿ, ಸಂತೋಷ, ಸಂಕಲ್ಪ ಮತ್ತು ಭಕ್ತಿಯ ರೂಪವೂ ಇವಳೇ ಆಗಿದ್ದಾಳೆ. ಮದುವೆಯಾಗದೆ ಇರುವ ಪಾರ್ವತಿಯ ರೂಪವೇ ಈ ಬ್ರಹ್ಮಚಾರಿಣಿ ದೇವಿ ಎನ್ನಲಾಗಿದೆ.

Leave a Reply