ನವರಾತ್ರಿಯ ಐದನೇ ದಿನ ದೇವಿಯನ್ನು ಸ್ಕಂದಮಾತೆಯ ರೂಪದಲ್ಲಿ ಪೂಜಿಸಲಾಗುತ್ತದೆ.
ಸುಬ್ರಹ್ಮಣ್ಯ ಅಥವಾ ಕಾರ್ತಿಕೇಯ ಶಿವ ಹಾಗೂ ಪಾರ್ವತಿಯ ಹಿರಿಯ ಪುತ್ರ. ಕಾರ್ತಿಕೇಯನಿಗೆ ಸ್ಕಂದ ಎನ್ನುವ ಇನ್ನೊಂದು ಹೆಸರೂ ಇದೆ. ಸ್ಕಂದನ ಜನನದ ನಂತರದ ಪಾರ್ವತಿಯ ರೂಪವನ್ನು ಸ್ಕಂದಮಾತೆ ಎಂದು ಕರೆಯಲಾಗುತ್ತದೆ. ಪದ್ಮಾಸನದ ಭಂಗಿಯಲ್ಲಿ ಕುಳಿತಿರುವ ತಾಯಿ ಪಾರ್ವತಿಯ ತೊಡೆಯ ಮೇಲೆ ಸ್ಕಂದನು ಕುಳಿತಿದ್ದು, ಇದರಿಂದಲೇ ಆಕೆಗೆ ಸ್ಕಂದ ಮಾತೆ ಎನ್ನುವ ಹೆಸರು ಬಂದಿದೆ.
ಸ್ಕಂದ ಮಾತೆಯು ಕರುಣಾಮಯಿಯಾಗಿದ್ದು ಬೇಗನೇ ಒಲಿಯುತ್ತಾಳೆ. ಶ್ರದ್ಧೆಯಿಂದ ಬೇಡಿದವರಿಗೆ ಯಶಸ್ಸು ದಯಪಾಲಿಸುತ್ತಾಳೆ ಎಂಬ ನಂಬಿಕೆ ಇದೆ.