ಕಾತ್ಯಾಯನೀ ದೇವಿ : ನವರಾತ್ರಿಯ ಆರನೇ ದಿನ

ನವರಾತ್ರಿಯ ಆರನೇ ದಿನದಂದು ಕಾತ್ಯಾಯನೀ ರೂಪದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ.

ಕಾತ್ಯಾಯನೀ ರೂಪವು ತ್ರಿಮೂರ್ತಿಗಳ ಶಕ್ತಿಯೊಡನೆ ಮಿಳಿತವಾಗಿ ಹೊರಹೊಮ್ಮಿದ ಪಾರ್ವತಿಯ ಸರ್ವಶಕ್ತ ರೂಪ. ಕಾತ್ಯಾತನಿಯು ಮಹಿಷಾಸುರ ಮರ್ದಿನಿಯಾಗಿ ನಮ್ಮೊಳಗಿನ ಮಾನವೇತರ ಸ್ವಭಾವವನ್ನು (ಮೃಗೀಯ ಸ್ವಭಾವವನ್ನು) ತೊಡೆದು ಹಾಕುತ್ತಾಳೆ. ಇವಳಿಗೆ ‘ದುರ್ಗಾ’ ಎಂಬ ಹೆಸರೂ ಇದೆ. ಈಕೆಯು ಜ್ಞಾನ ಮತ್ತು ವಿವೇಕದ ದೇವತೆಯಾಗಿದ್ದಾಳೆ. 

ಕಾತ್ಯಾಯಿನಿಯು ಒಂದು ಕೈಯಲ್ಲಿ ಕಮಲದ ಪುಷ್ಪ, ಎರಡು ಕೈಗಳಲ್ಲಿ ಖಡ್ಗ ಹಾಗೂ ನಾಲ್ಕನೇ ಕೈಯು ಅಭಯ ಹಸ್ತ ಮುದ್ರೆಯಲ್ಲಿರುತ್ತದೆ. 

ಕಾತ್ಯಾಯನಿಯೀ ಧೈರ್ಯ, ಬುದ್ಧಿ, ಮಂಗಳ ಉಂಟುಮಾಡುವ ದೇವಿಯಾಗಿದ್ದಾಳೆ. ಒಳಹೊರಗಿನ ಆಸುರೀ ಶಕ್ತಿಯನ್ನು ನಾಶ ಮಾಡುತ್ತಾಳೆ.,

Leave a Reply