ಕಾಲರಾತ್ರೀ ದೇವಿ: ನವರಾತ್ರಿಯ ಏಳನೇ ದಿನ

ನವರಾತ್ರಿಯ ಏಳನೆಯ ದಿನ ಕಾಲರಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ.

ಏಳನೆಯ ಕಾಲರಾತ್ರೀ ಸ್ವರೂಪವು ತಮಸ್ಸಿನ ನಿವಾರಣೆಗಾಗಿಯೇ ಇದೆ. ಈ ಸ್ವರೂಪದಲ್ಲಿ ಆದಿಶಕ್ತಿಯು ಶುಂಭನ ಸಂಹಾರ ಮಾಡಿದಳು.
ಅಜ್ಞಾನ, ಅಂಧಕಾರಗಳ ನಿವಾರಣೆಯನ್ನು ಕಾಲರಾತ್ರೀ ಸ್ವರೂಪವು ಸೂಚಿಸುತ್ತದೆ.

ಕಾಲ ಎಂದರೆ ಸಮಯವೂ ಹೌದು, ಸಾವೂ ಹೌದು. ದೇವಿ ಕಾಲರಾತ್ರಿ ಅವೆರಡೂ ಆಗಿದ್ದಾಳೆ. ಕಾಲರಾತ್ರಿ ದೇವಿಯು ಅಂಧಕಾರವನ್ನು ಹೊಡೆದೋಡಿಸಿ ಬೆಳಕೆಂಬ ಧನಾತ್ಮಕ ಶಕ್ತಿಯನ್ನು ನೀಡುತ್ತಾಳೆ. ದೇವಿಯು ತನ್ನ ಶಕ್ತಿಯಿಂದ ಅಂಧಕಾರವನ್ನು ದೂರ ಮಾಡುವಂತೆಯೇ, ಮನುಷ್ಯರ ಬದುಕಿನಲ್ಲಿ ಅನಾರೋಗ್ಯ, ಕೆಟ್ಟ ಆಲೋಚನೆಗಳನ್ನು ತೊಡೆದು ಶಾಂತಿ, ಧೈರ್ಯವನ್ನು ತುಂಬುತ್ತಾಳೆ.

Leave a Reply