ಮಹಾ ಗೌರಿ : ನವರಾತ್ರಿಯ ಎಂಟನೇ ದಿನ

ನವರಾತ್ರಿಯ ಎಂಟನೆಯ ದಿನ ದೇವಿಯನ್ನು ಮಹಾಗೌರಿಯ ರೂಪದಲ್ಲಿ ಪೂಜಿಸಲಾಗುತ್ತದೆ.

ರೂಪ ಮಹಾದೇವನಿಗೆ ಅತ್ಯಂತ ಪ್ರಯವಾದ ರೂಪ. ಮಹಾಗೌರಿಯು ವಿಸ್ಮರಣೆಯ ಕಶ್ಮಲವನ್ನು ಶುದ್ಧಗೊಳಿಸಿ, ಸ್ವರೂಪದ ಸಾಕ್ಷಾತ್ಕಾರ ಮಾಡಿಸುವ ಚಕ್ರವಾದ ವಿಶುದ್ಧಿ ಚಕ್ರದಲ್ಲಿ ನೆಲೆಸಿರುತ್ತಾಳೆ.
ಆದಿಶಕ್ತಿಯು ಮಹಾಕಾಲನನ್ನು ಪತಿಯಾಗಿ ಸ್ವೀಕರಿಸಿದ್ದು ಮಹಾಗೌರಿಯ ರೂಪದಲ್ಲೇ.

ವೃಷಭಾರೂಢಳಾದ ಗೌರಿಗೆ ನಾಲ್ಕು ಕೈಗಳು. ಒಂದು ಕೈಯಲ್ಲಿ ಢಮರು ಹಾಗೂ ಇನ್ನೊಂದು ಕೈಯಲ್ಲಿ ತ್ರಿಶೂಲ ಇರುತ್ತದೆ. ಶ್ವೇತ ವಸ್ತ್ರಧಾರಿಣಿಯಾಗಿರುವ ಗೌರಿ ದೇವಿಯ ಮುಖವು ಶಾಂತವಾಗಿರುತ್ತದೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply