ನವರಾತ್ರಿಯ ಒಂಭತ್ತನೆಯ ಹಾಗೂ ಕೊನೆಯ ದಿನದಂದು ತಾಯಿ ಸಿದ್ಧಿದಾತ್ರಿ ಯ ಪೂಜೆ ಮಾಡಲಾಗುವುದು.
ಮಹಾ ನವಮಿಯನ್ನು ತಾಯಿ ಚಾಮುಂಡೇಶ್ವರಿಯನ್ನು ಮಹಿಷಾಸುರ ಮರ್ದಿನಿ ಎಂದೂ ಪೂಜಿಸಲಾಗುತ್ತದೆ. ಪುರಾಣದಲ್ಲಿನ ಕತೆಯ ಪ್ರಕಾರ ಪಾರ್ವತಿ ದೇವಿ ಸೌಮ್ಯ ಸ್ವಭಾವದ ಹೆಣ್ಣುಮಗಳು. ಆಕೆಗೆ ಕೋಪವೇ ಬರುವುದಿಲ್ಲ. ಮಹಿಷಾಸುರನನ್ನು ಮರ್ಧನ ಮಾಡಲು ತಾಯಿಯು ಚಾಮುಂಡೇಶ್ವರಿಯ ಅವತಾರ ಎತ್ತುತ್ತಾಳೆ. ಈ ದಿನ ಅವಳು ತ್ರಿಮೂರ್ತಿಗಳು ಸೇರಿದಂತೆ ಸರ್ವರಿಗೂ ಸಿದ್ಧಿ ಕರುಣಿಸುತ್ತಾಳೆ. ಆದ್ದರಿಂದ ಈಕೆ ಸಿದ್ಧಿದಾತ್ರಿ ಎನಿಸಿದ್ದಾಳೆ.
ಪುರಾಣದ ಕತೆಗಳ ಪ್ರಕಾರ ತಾಯಿ ಸಿದ್ಧಿದಾತ್ರಿಯಿಂದ ಆಶೀರ್ವಾದ ಪಡೆದ ಶಿವನು ಆಕೆಯಿಂದ ಎಂಟು ಸಿದ್ಧಿಗಳನ್ನು ಪಡೆದ ಎಂದು ಹೇಳಲಾಗುತ್ತದೆ. ಬ್ರಹ್ಮಾಂಡದ ಸೃಷ್ಟಿಯ ವೇಳೆ ಶಿವನು ಆದಿ ಪರಾಕಾಷ್ಟೆಯನ್ನು ಆರಾಧಿಸಿದನು. ಎಷ್ಟೇ ಆರಾಧಿಸಿದರೂ ಶಕ್ತಿ ದೇವತೆಯು ಪ್ರತ್ಯಕ್ಷಳಾಗಲಿಲ್ಲ. ನಂತರ ಆಕೆಯು ಶಿವನ ಎಡ ಭಾಗದ ಅರ್ಧದಲ್ಲಿ ಕಾಣಿಸಿಕೊಂಡಳು. ಆಗಿನಿಂದ ಪರಶಿವನು ಅರ್ಧನಾರೀಶ್ವರ ಎನ್ನುವ ಇನ್ನೊಂದು ಹೆಸರಿನಿಂದ ಗುರುತಿಸಿಕೊಂಡನು ಎಂದು ಹೇಳಲಾಗುತ್ತದೆ