ಈ ಗುಣಗಳಿದ್ದರೆ ಕುಳಿತಲ್ಲೇ ತೀರ್ಥಯಾತ್ರೆ! : ಸುಭಾಷಿತ ಸದಾಶಯ

ಕ್ಷಮಾತೀರ್ಥಂ ತಪಸ್ತೀರ್ಥಂ ತೀರ್ಥಮಿಂದ್ರಿಯನಿಗ್ರಃ ಸರ್ವಭೂತದಯಾ ತೀರ್ಥಂ ಧ್ಯಾನತೀರ್ಥಮನುತ್ತಮಮ್ ~ ಯೋಗಸಿದ್ಧಾಂತ ಚಂದ್ರಿಕಾ, 1.38

“ಕ್ಷಮೆಯೊಂದು ತೀರ್ಥ, ತಪವೊಂದು ತೀರ್ಥ, ಇಂದ್ರಿಯನಿಗ್ರಹವೊಂದು ತೀರ್ಥ, ಸಕಲ ಜೀವಿಗಳಲ್ಲಿ ದಯೆ ತೋರುವುದೊಂದು ತೀರ್ಥ, ಧ್ಯಾನ ಮಾಡುವುದು ಅತ್ಯುತ್ತಮ ತೀರ್ಥ” ಅನ್ನುತ್ತದೆ ಯೋಗಸಿದ್ಧಾಂತ ಚಂದ್ರಿಕಾ.

ತೀರ್ಥಯಾತ್ರೆ ಅಂದರೆ ಮಹಿಮಾನ್ವಿತ ಸ್ಥಳಕ್ಕೆ ಪ್ರಯಾಣಿಸುವುದು ಹೌದಾದರೂ, ಅಂತರಂಗ ಕಲುಷಿತವಾಗಿದ್ದರೆ ಅದರಿಂದ ಪ್ರಯೋಜನವಿಲ್ಲ. ಅದರ ಬದಲು ಕ್ಷಮೆ, ಇಂದ್ರಿಯ ನಿಗ್ರಹ, ತಪಸ್ಸು, ಭೂತದಯೆಯೇ ಮೊದಲಾದ ಗುಣಗಳನ್ನು ಬೆಳೆಸಿಕೊಂಡು ನಮ್ಮನ್ನು ಧ್ಯಾನದ ಮೂಲಕ ಅರಿಯಲು ಅಂತರ್ ಯಾತ್ರೆ ನಡೆಸಿದರೆ; ಈ ಗುಣ, ಈ ಕ್ರಿಯೆಗಳು ತೀರ್ಥಯಾತ್ರೆಗೋ ಸರಿಸಮನಾಗಿರುತ್ತವೆ. ತೀರ್ಥಯಾತ್ರೆಯ ಫಲವನ್ನೇ ನೀಡುತ್ತವೆ.

ಹೊರಗೆ ಪಯಣಿಸಲಾಗದ ಈ ಅವಧಿಯಲ್ಲಿ ಇಂತಹ ಅಂತರಂಗದ ಯಾತ್ರೆ ಮಾಡೋಣ. ದಾನ, ದಯೆ, ಧ್ಯಾನಗಳ ಮೂಲಕ ನಮ್ಮೊಳಗನ್ನು ನಾವು ತಲುಪೋಣ. ಈ ಮೂಲಕ ಸುಭಾಷಿತದ ಸದಾಶಯ ನೆರವೇರಿಸೋಣ!

Leave a Reply