ಜನಪದ ಹೆಣ್ಣಿನ ಪಂಚಮಿ ಹಾಡು : ನಾಗರ ಪಂಚಮಿ ವಿಶೇಷ

ಶಿವಪುತ್ರಿ, ನಾಗದೇವತೆ ಮಾನಸಾ ದೇವಿಯ ಪೂಜೆ ಎಂದು ಕೆಲವು ಕಡೆ; ಮಹಾಸರ್ಪ ಸಂಕರ್ಷಣನ ಗೌರವಕ್ಕೆ ಎಂದು ಕೆಲವು ಕಡೆ; ವಾಸುಕಿಯ ನೆನಪಿಗೆ ಎಂದು ಕೆಲವರು. ತಕ್ಷನ ನೆನಪಿಗೆ ಎಂದು ಕೆಲವರು… ಹೀಗೆ ಭಿನ್ನ ಕಥನಗಳು ಸಿಗುವುದುಂಟು. ಆತ್ಯಂತಿಕವಾಗಿ ಧರ್ಮ, ಆಧ್ಯಾತ್ಮ, ಜಾನಪದಗಳೆಲ್ಲ ಒಂದನ್ನೇ ಹೇಳುತ್ತಿದ್ದರೂ ಹೇಳುವ ಬಗೆ ಭಾವಗಳು ಬೇರೆ ಬೇರೆ. ಹಾವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಅಧ್ಯಾತ್ಮದಲ್ಲಿ ಅದು ಕುಂಡಲಿನಿ. ಅದು ಪ್ರಜ್ಞೆ. ಧರ್ಮದಲ್ಲಿ ಅದು ದೇವತೆ. ಜನಪದರ ಪಾಲಿಗೆ ಹಾವು ದೈನಂದಿನ ಬದುಕಿನ ಸಮತೋಲನ ಕೊಂಡಿ. […]

ಗೆಳೆತನದ ಕುರಿತು….. : ಖಲೀಲ್ ಗಿಬ್ರಾನನ ‘ಪ್ರವಾದಿ’

ಚೇತನವನ್ನು ಆಳವಾಗಿಸುವುದರ ಹೊರತಾಗಿ ಬೇರೆ ಯಾವ ಉದ್ದೇಶವೂ ಇರದಿರಲಿ ಗೆಳೆತನಕ್ಕೆ ~ ಖಲೀಲ್ ಗಿಬ್ರಾನ್ | ಕನ್ನಡಕ್ಕೆ : ಚಿದಂಬರ ನರೇಂದ್ರ ನಿಮ್ಮ ಗೆಳೆಯ, ನಿಮ್ಮ ಸಂತೃಪ್ತಿಯ ಕಾರಣ. ನೀವು ಪ್ರೀತಿಯಿಂದ ಬಿತ್ತುವ, ಕೃತಜ್ಞತೆಯಿಂದ ಕಟಾವು ಮಾಡುವ ನಿಮ್ಮದೇ ಸ್ವಂತ ಹೊಲ ಅವನು. ಹಸಿವಾದಾಗ ಅವನ ಬಳಿಯೇ ಧಾವಿಸುತ್ತೀರಿ ಸಮಾಧಾನಕ್ಕಾಗಿ ಅವನನ್ನೇ ಹುಡುಕುತ್ತೀರಿ ಆದ್ದರಿಂದ ಅವನೇ ನಿಮ್ಮ ಅಡುಗೆ ಒಲೆ, ಅವನೇ ನಿಮ್ಮ ಬೆಂಕಿಗೂಡು. ನಿಮ್ಮ ಗೆಳೆಯ, ನಿಮ್ಮೆದುರು ಮನ ಬಿಚ್ಚಿ ಮಾತಾಡುವಾಗ ನೀವು ಉಹೂಂ ಎನ್ನಲೂ ಹೆದರುವುದಿಲ್ಲ […]

ಗೆಳೆತನವೊಂದು ‘ಸಕಲ ಸಂಬಂಧ’

ಉಳಿದೆಲ್ಲ ಸಂಬಂಧಗಳೂ ಒಂದು ಕಾರಣದ ಎಳೆಯನ್ನು ಹೊತ್ತುಕೊಂಡೇ ಇರುತ್ತವೆಯಾದರೆ, ಗೆಳೆತನ ಅಕಾರಣವಾಗಿ ಘಟಿಸುತ್ತದೆ ಮತ್ತು ಜೊತೆಗಿರುತ್ತದೆ. ಮತ್ತು ಉಳಿದೆಲ್ಲ ಸಂಬಂಧಗಳೂ ಗೆಳೆತನವನ್ನು ಒಳಗೊಂಡಿದ್ದರಷ್ಟೆ ಅವು ಪರಿಪೂರ್ಣವೆನ್ನಿಸುತ್ತವೆ!  ~ ಗಾಯತ್ರಿ  ಸಂಬಂಧಗಳಲ್ಲಿ ಅತ್ಯಂತ ಶ್ರೇಷ್ಟವಾದ ಬಾಂಧವ್ಯವೆಂದರೆ, ಅದು ಗೆಳೆತನ. ಕಾಲಾಂತರದಲ್ಲಿ ಮಾನವನ ಧಾವಂತ, ಸ್ಪರ್ಧೆ ಹಾಗೂ `ಬಲಶಾಲಿಗಷ್ಟೆ ಬದುಕು’ ಅನ್ನುವಂಥ ಚಿಂತನೆಗಳಿಂದ ಗೆಳೆತನದ ಹೆಸರು ಅಷ್ಟಿಷ್ಟು ದುರುಪಯೋಗವಾಗಿದೆ ಅನ್ನುವುದನ್ನು ಅಲ್ಲಗಳೆಯಲಾಗದು. ಆದರೂ ಈತನಕ ಜಗತ್ತಿನಲ್ಲಿ ಸೌಹಾರ್ದ ನೆಲೆಯಾಗಿದೆ ಎಂದರೆ ಅದಕ್ಕೆ ಕಾರಣ ಈ ಕಾರಣ ಬಾಂಧವ್ಯವೇ. ಯಾವುದೇ ಸಂಬಂಧದಲ್ಲಿ ಇಬ್ಬರು […]

ಅಂತಿಮ ಗುರಿ ಇರದವನು… : ಇಕ್ಯೂ ಹಾಯ್ಕು, ಓಶೋ ವಿವರಣೆ

ಇಕ್ಯೂ ತನ್ನನ್ನು “ಯಾವ ಅಂತಿಮ ಗುರಿ ಇರದವನು, ಯಾವ ಮೌಲ್ಯವೂ ಇರದವನು” ಎಂದು ಹೇಳಿಕೊಂಡಿದ್ದಾನೆ. ಗುರಿಯೂ ಇಲ್ಲದ, ಮೌಲ್ಯವೂ ಇಲ್ಲದ ಬದುಕನ್ನು ನಿರುಮ್ಮಳವಾಗಿ ಅನುಭವಿಸಬಹುದು. ಇದರಿಂದ ಲಾಭವೇನು ಎಂದು ತಲೆ ಕೆಡಿಸಿಕೊಳ್ಳಬೇಕಿಲ್ಲ. ಇದರ ಪಾಪ ಪುಣ್ಯಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಬದುಕನ್ನು ಲೀಲಾಮಾತ್ರವಾಗಿ ಅನುಭವಿಸಬೇಕು   ಕಾಲಗಟ್ಟಲೆ ಮೊದಲು ನಾನು ಪ್ರಕೃತಿಯಲ್ಲಿ ಇಲ್ಲವಾದವನು: ಯಾವ ಅಂತಿಮ ಗುರಿ ಇರದವನು ಯಾವ ಮೌಲ್ಯವೂ ಇರದವನು ~ ಇಕ್ಯೂ Myself of long ago, In nature Nonexistent: No final destination, […]

ಖುಷಿ, ಖುಷಿಯಲ್ಲ… ಮುಖವಾಡ ಕಳಚಿದ ನಿಮ್ಮ ದುಃಖ! ~ ಖಲೀಲ್ ಗಿಬ್ರಾನ್

ದುಃಖ ನಿಮ್ಮನ್ನು ಎಷ್ಟು ಆಳವಾಗಿ ಕೊರೆಯುತ್ತದೋ ಅಷ್ಟೇ ಅಗಾಧವಾಗಿ ಆನಂದ ನಿಮ್ಮನ್ನು ತುಂಬಿಕೊಳ್ಳುವುದು ~ ಪ್ರವಾದಿ, ಖಲೀಲ್ ಗಿಬ್ರಾನ್ | ಕನ್ನಡಕ್ಕೆ : ಚಿದಂಬರ ನರೇಂದ್ರ ನಂತರ ಹೆಣ್ಣು ಮಗಳೊಬ್ಬಳು ಖುಶಿಯ ಬಗ್ಗೆ, ದುಃಖದ ಬಗ್ಗೆ ತನ್ನ ಅನುಮಾನಗಳನ್ನು ಹಂಚಿಕೊಂಡಳು. ಖುಶಿ ಮತ್ತು ದುಃಖದ ಕುರಿತು ಅವನು ಮಾತನಾಡತೊಡಗಿದ. ಖುಶಿ, ಖುಶಿಯಲ್ಲ. ಮುಖವಾಡ ಕಳಚಿದ ನಿಮ್ಮ ದುಃಖ. ಮತ್ತು ತನ್ನಿಂದ ತಾನೇ ತುಂಬಿಕೊಳ್ಳುವ ಬಾವಿ. ನಿಮ್ಮ ನಗು ಚಿಮ್ಮುವ ಈ ಬಾವಿ ಬಹುತೇಕ ತುಂಬಿಕೊಂಡಿರುವುದು ಕಣ್ಣೀರಿನಿಂದಲೇ. ಹೀಗಲ್ಲದೆ ಬೇರೆ ಹೇಗೆ ಸಾಧ್ಯ […]

ನಾಲ್ಕು ನಗರಗಳು ಮತ್ತು ಒಂದು ಮೂಟೆ ಬೀಜ : ಸೂಫಿ ದೃಷ್ಟಾಂತ ಕತೆ

ನಾಲ್ಕು ನಗರಗಳು ಅಕ್ಕಪಕ್ಕದಲ್ಲಿದ್ದವು. ಈ ನಾಲ್ಕೂ ನಗರಗಳ ಜನ ಕ್ಷಾಮಡಾಮರಕ್ಕೆ ತುತ್ತಾಗಿ, ತಿನ್ನಲು ಏನೂ ಇಲ್ಲದೆ ಒದ್ದಾಡುತ್ತಿದ್ದರು. ಈ ನಾಲ್ಕೂ ನಗರಗಳಲ್ಲಿ ತಲಾ ಒಂದು ಮೂಟೆ ಬೀಜವಿತ್ತು.ಮೊದಲನೆಯ ನಗರದಲ್ಲಿ ಬೀಜದ ಮೂಟೆಯನ್ನು ತೆಗೆದುಕೊಂಡು ಏನು ಮಾಡಬೇಕೆಂದೇ ಯಾರಿಗೂ ತಿಳಿದಿರಲಿಲ್ಲ. ಅವರೆಲ್ಲ ಕಣ್ಣೆದುರೇ ಮೂಟೆಯಿದ್ದರೂ ಹೊಟ್ಟೆಗಿಲ್ಲದೆ ಸತ್ತರು. ಎರಡನೆಯ ನಗರದಲ್ಲಿ ಒಬ್ಬನಿಗೆ ಮಾತ್ರ ಬೀಜದ ಮೂಟೆಯನ್ನು ಹೇಗೆ ಬಳಸಬೇಕೆಂದು ಗೊತ್ತಿತ್ತು. ಆದರೆ ನಾನೇ ಯಾಕೆ ಅದನ್ನು ಮಾಡಬೇಕು? ಎಂದು ಭಾವಿಸಿ ಸುಮ್ಮನಾದ. ಪರಿಣಾಮವಾಗಿ, ಅವನೂ ಸೇರಿದಂತೆ ಇಡಿಯ ನಗರ […]

ಪ್ರತಿಯೊಬ್ಬರ ಎದೆಯೂ ಸೌಹಾರ್ದ ಬಿತ್ತನೆಗೆ ಭೂಮಿಯಾಗಲಿ…

ಯಾವಾಗ ಬೇಲಿ ಕಟ್ಟಲ್ಪಡುತ್ತದೆಯೋ ಆಗ ಅದರ ಒಳಗಿನವರು ಅದು ಉಳಿದರೆ ಮಾತ್ರ ನಮಗೆ ರಕ್ಷೆ ಎಂಬ ತಪ್ಪು ಕಲ್ಪನೆಗೆ ಬೀಳುತ್ತಾರೆ ಮತ್ತು ಯಥಾಯಗತಾಯ ಅದನ್ನು ಉಳಿಸಿಕೊಳ್ಳುವ ಯತ್ನ ಮಾಡುತ್ತಾರೆ. ಮತ್ತೂ ಮುಂದುವರೆದು, ಸ್ವಯಂ ರಕ್ಷಣೆಯ ನೆಪದಲ್ಲಿ, ತಮ್ಮ ಬಣದ ಮೇಲ್ಮೆಯ ಹಪಾಹಪಿಯಲ್ಲಿ ಆಕ್ರಮಣಗಳಿಗೆ ಮುಂದಾಗುತ್ತಾರೆ. ಇದು ದ್ವೇಷದ ಕಿಡಿ ಹೊತ್ತಿಸುತ್ತದೆ ~ ಆನಂದಪೂರ್ಣ ಜಗತ್ತು ರಾಗದ್ವೇಷಗಳಿಂದ ಮುಕ್ತವಾಗಬೇಕು ಎಂದರೆ ಏನು ಮಾಡಬೇಕು? ಈ ಪ್ರಶ್ನೆಗೆ ಉತ್ತರವನ್ನು ಪೂರ್ವಕಾಲದಿಂದಲೂ ಋಷಿ ಮುನಿಗಳು ಹೇಳುತ್ತಲೇ ಬಂದಿದ್ದಾರೆ. ಎಲ್ಲವೂ ಒಂದೇ ಪರಮ […]

ಕೂಡಿಟ್ಟ ಹಣ, ಕಟ್ಟಿದ ಜೇನು ಯಾವತ್ತೂ ಪರರ ಪಾಲು : ಸುಭಾಷಿತ

ದಾತವ್ಯಂ ಭೋಕ್ತವ್ಯಂ ಧನವಿಷಯೇ ಸಂಚಯೋ ನ ಕರ್ತವ್ಯಃ | ಪಶ್ಯೇಹ ಮಧುಕರೀಣಾಂ ಸಂಚಿತಮರ್ಥಃ ಹರಂತ್ಯನ್ಯೇ || ಪಂಚತಂತ್ರ || “ಹಣವನ್ನು ದಾನ ಮಾಡಬೇಕು, ಅನುಭವಿಸಲೂಬೇಕು. ಸುಮ್ಮನೆ ಕೂಡಿಡಬಾರದು. ಜೇನು ಹುಳುಗಳು ಹಗಲಿರುಳು ಶ್ರಮಿಸಿ ಕೂಡಿಟ್ಟ ಜೇನನ್ನು ಇತರರು ಅಪಹರಿಸುತ್ತಾರೆ ನೋಡಿ!!” ಅನ್ನುತ್ತದೆ ಪಂಚತಂತ್ರ. ಹಣವನ್ನು ಸಂಗ್ರಹಿಸಿ ಇಡಬಾರದು ಅನ್ನುವುದು ಎಲ್ಲಾ ಕಾಲದಲ್ಲಿಯೂ ಗುರುಸ್ಥಾನದಲ್ಲಿ ನಿಂತವರು ಹೇಳುತ್ತಲೇ ಬಂದಿರುವ ಮಾತು. ನಮ್ಮ ಪ್ರಾಚೀನ ಕಥೆಗಳು, ಬೋಧಪ್ರದ ಸಾಹಿತ್ಯ ಕೂಡ ಇದನ್ನು ಮೇಲಿಂದ ಮೇಲೆ ಹೇಳುತ್ತಲೇ ಬಂದಿವೆ. ಆದರೂ ನಮಗೆ […]

ಈ ಪ್ರೀತಿ ಕೂಡ, ಈ ಹೊತ್ತಿನ ನಿಜ ಮಾತ್ರ! : ಪ್ರೇಮಿಯ ದಿನಚರಿ

ಖಾಲಿಯಲ್ಲಿ ಬದುಕೋದು ಕಲಿತರೆ ಆವರಣ ಬೇಕಾಗೋದಿಲ್ಲ. ಆವರಣ ಕಟ್ಟಿಕೊಂಡ ಕೂಡಲೆ ಅಲ್ಲೊಂದು ಮಿತಿ. ಜಿಗಿದಾಡುವ ಚೈತನ್ಯಕ್ಕೆ ಉಬ್ಬಸ. ಮತ್ತೆ, ಈ ಆವರಣ ಇದೆಯಲ್ಲ, ಅದು ತನ್ನನ್ನ ತಾನು ಸುರಕ್ಷೆ ಅಂತ ತೋರಿಸಿಕೊಳ್ಳುತ್ತೆ. ಅದೇ ಹೊತ್ತಿಗೆ ನಮ್ಮ ದೌರ್ಬಲ್ಯವೂ ಆಗಿರುತ್ತೆ. ಅದಕ್ಕೇ ಅವನು ನನ್ನ ಆವರಣವೂ ಅಲ್ಲ, ದೌರ್ಬಲ್ಯವೂ ಆಗೋದಿಲ್ಲ. ಅಂವ ನನ್ನ ರಕ್ಷೆ ಅಂದುಕೊಂಡಾಗ ಮಾತ್ರ ಅದು ಕದಲುವ ಆತಂಕ ಹುಟ್ಟೋದು ~ ಚೇತನಾ ತೀರ್ಥಹಳ್ಳಿ ಅಲೆಮಾರಿ ಗಾಳಿ ಎಳೆಯೊಟ್ಟಿಗೆ ಕಾದ ಮಣ್ಣಿನ ಘಮ ತೂರಿ ಹಿತಾನುಭವ. […]

ಬೆಂಗಳೂರಿನಲ್ಲಿ ರಾಮಕೃಷ್ಣ ಮಠ ಸ್ಥಾಪಿಸಿದ ಶ್ರೀ ರಾಮಕೃಷ್ಣಾನಂದರ ಬಗ್ಗೆ ತಿಳಿದಿದೆಯೇ?

ಇಡೀ ಭಾರತವನ್ನು ಸಂಚಾರಮಾಡಿ ರಾಮಕೃಷ್ಣಪರಮಹಂಸರ ಚರಿತ್ರೆಯನ್ನು ನಮಗಾಗಿ ನೀಡಿದ ಮಹಾಪುರುಷನ ಜಯಂತಿ ಇಂದು ಎಲ್ಲಾ ರಾಮಕೃಷ್ಣಮಠದಲ್ಲಿ ಈ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ರಾಮಕೃಷ್ಣಾನಂದರ ಪೂರ್ವಾಶ್ರಮದ ಹೆಸರು ಶಶಿಭೂಷನ್  ಚಕ್ರವರ್ತಿ. ಇವರು ಭಗವಾನ್ ರಾಮಕೃಷ್ಣಪರಮಹಂಸರ ನೇರಶಿಷ್ಯರಲ್ಲಿ ಇವರು ಒಬ್ಬರು. ಇವರ ತಂದೆ ವೇದ ಮತ್ತು ಧರ್ಮಶಾಸ್ತ್ರಗಳಲ್ಲಿ ಪ್ರಖಾಂಡ ಪಂಡಿತರು ಆ ಪರಂಪರೆಯನ್ನು ಮುಂದುವರೆಸಿದಂತಹ ಶಶಿಭೂಷನ್ ಚಕ್ರವರ್ತಿ, ರಾಮಕೃಷ್ಣರ ಸೆಳೆತೆಕ್ಕೆ ಸಿಕ್ಕಿ ಅವರ ಸೇವೆಯಲ್ಲಿ ತಲ್ಲೀನರಾಗಿ ಸನ್ಯಾಸತ್ವದ ದೀಕ್ಷೆಯನ್ನು ಪಡೆದು  ರಾಮಕೃಷ್ಣ ಪರಮಹಂಸರ ನೇರ ಶಿಷ್ಯರಾಗಿ ರಾಮಕೃಷ್ಣಾನಂದರಾದರು (ನೇರಶಿಷ್ಯರು 16 […]