ಪ್ರೇಮ ಒಂದು ನಿತ್ಯ ಹಂಬಲ ಮತ್ತು ನಿತ್ಯ ವಿರಹದ ಸ್ಥಿತಿ

ಪ್ರೇಮಿಯ ಜೊತೆಯಲ್ಲೇ ಇರುವಾಗಲೂ ಅವನ/ಅವಳ/ಅದರ ಪ್ರೇಮಕ್ಕೆ ಹಂಬಲಿಸುವುದು ಮತ್ತು ಮಿಲನದಲ್ಲೂ ವಿರಹವನ್ನೇ ಕಂಡು ಹಾತೊರೆಯುವುದು ನಮಗೆ ಒಂದಷ್ಟು ನೈಜ ಪ್ರೇಮದ ಅನುಭೂತಿ ಮೂಡಿಸಬಲ್ಲದು. ಪ್ರೇಮದಲ್ಲಿ ತೃಪ್ತಿ ಸಿಕ್ಕಿಬಿಟ್ಟರೆ, ಅದು ಪ್ರೇಮದ ವಿನಾಶಕ್ಕೆ ಮುನ್ನುಡಿಯಾಗುವುದು. । ಅಲಾವಿಕಾ

ಕುಂಡಲಿನಿ ಶಕ್ತಿ : ಓಶೋ ವ್ಯಾಖ್ಯಾನ

ಪ್ರತಿ ಮನುಷ್ಯನಲ್ಲೂ ಅವನ ಮೂಲಾಧಾರ ಚಕ್ರದಲ್ಲಿ ಮೂರು ಸುತ್ತು ಹಾಕಿಕೊಂಡು ಕುಳಿತಿರುವ ಸರ್ಪವನ್ನ ಅವನ ಧೀಶಕ್ತಿಯ ಮೂಲ ಎಂದು ಸಂಕೇತೀಕರಿಸಲಾಗುತ್ತದೆ. ಹಲವಾರು ಧ್ಯಾನ ಪದ್ಧತಿಗಳ ಮೂಲಕ, ತಂತ್ರ ವಿಜ್ಞಾನದ ಮೂಲಕ ಮೂಲಾಧಾರದಲ್ಲಿ ಕೇಂದ್ರೀಕೃತವಾಗಿರುವ ಶಕ್ತಿಯನ್ನ ಉದ್ದೀಪನಗೊಳಿಸಿ, ಹಲವಾರು ಚಕ್ರ ಕೇಂದ್ರಗಳ ಮೂಲಕ ಸಹಸ್ರಾರವನ್ನು ಮುಟ್ಟಿಸಿದಾಗ ಮನುಷ್ಯ ಸುತ್ತಲಿನ ಪ್ರಕೃತಿಯೊಂದಿಗೆ ತಾದಾತ್ಮ್ಯವನ್ನು ಸಾಧಿಸುತ್ತಾನೆ ಎಂದು ಸಾಧಕರು ಒಪ್ಪಿಕೊಳ್ಳುತ್ತಾರೆ. ಹೀಗೆ ಸರ್ಪ, ಮನುಷ್ಯನ ಧೀಶಕ್ತಿಯ ಚಲನೆಯ ರೂಪಕವಾಗಿ ಬಳಕೆಯಾಗುತ್ತದೆ… ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ

ನೈಜ ಪ್ರಜ್ಞೆ ಎಂದರೇನು? ಅದರ ನೆಲೆ ಯಾವುದು?

ನೈಜಪ್ರಜ್ಞೆ ಅಹಂಮುಕ್ತ. ಅದು ವೈಶ್ವಿಕವಾದದ್ದು. ನೈಜಪ್ರಜ್ಞೆ ಒಂದು ವ್ಯಕ್ತಿ ಅಥವಾ ಜೀವದ ಪರಿಧಿಯಲ್ಲಿ ಸೀಮಿತವಾಗಿರುವಂಥದ್ದಲ್ಲ. ಒಬ್ಬ ವ್ಯಕ್ತಿ ನೈಜ ಪ್ರಜ್ಞೆಯನ್ನು ಹೊಂದುತ್ತಾನೆ/ಳೆ ಎಂದರೆ ಆತ/ ಆಕೆ ವಿಶ್ವದ ನೆಲೆಗಟ್ಟಿನಲ್ಲಿ ಘಟನೆಗಳನ್ನು ನೋಡುತ್ತಾನೆ/ಳೆ ಎಂದರ್ಥ. ನೈಜ ಪ್ರಜ್ಞಾವಂತರು ತಮ್ಮನ್ನೂ ವಿಶ್ವಚೇತನದ ಭಾಗವಾಗಿ ಗುರುತಿಸಿಕೊಳ್ಳುತ್ತಾರೆ. ಇತರರನ್ನೂ ಹಾಗೆಯೇ ಭಾವಿಸುತ್ತಾರೆ | ಸಾ.ಹಿರಣ್ಮಯಿ

ಸಮಕಾಲೀನ ಪಾಶ್ಚಾತ್ಯ ಸಮಾಜದಲ್ಲಿ ಪ್ರೀತಿ ಮತ್ತು ಅದರ ವಿಘಟನೆ… (ಭಾಗ- 9) : Art of love #41

ಮಧ್ಯ ಯುಗದ ಧಾರ್ಮಿಕ ಸಂಸ್ಕೃತಿಗಳಲ್ಲಿ, ಸಾಮಾನ್ಯ ಮನುಷ್ಯ ದೇವರನ್ನು ತನಗೆ ಸಹಾಯ ಮಾಡುವ ತಂದೆಯಂತೆ, ತಾಯಿಯಂತೆ ಕಾಣುತ್ತಿದ್ದ. ಅದೇ ಸಮಯದಲ್ಲಿ ಅವನು ದೇವರನ್ನು ತುಂಬ ಗಂಭೀರವಾಗಿಯೂ ಪರಿಗಣಿಸಿದ್ದ, ತನ್ನ ಬದುಕಿನ ಆತ್ಯಂತಿಕ ಗುರಿ ದೇವರ ತತ್ವಗಳಿಗನುಸಾರವಾಗಿ ಬದುಕುವುದು ಎಂದು ತಿಳಿದುಕೊಂಡಿದ್ದ ಮತ್ತು, “ಮುಕ್ತಿ”ಯನ್ನ ಅವನ ಬದುಕಿನ ಘನ ಉದ್ದೇಶವೆಂದೂ ಹಾಗು ಬೇರೆಲ್ಲವೂ ಈ ಉದ್ದೇಶಕ್ಕೆ ಪೂರಕ ಎಂದೂ ಅರ್ಥ ಮಾಡಿಕೊಂಡಿದ್ದ. ಈಗ ಇಂಥ ಯಾವ ಪ್ರಯತ್ನಗಳೂ ಚಾಲ್ತಿಯಲ್ಲಿಲ್ಲ . ದೈನಂದಿನ ಬದುಕು ಕಟ್ಟು ನಿಟ್ಟಾಗಿ ಧಾರ್ಮಿಕ ಮೌಲ್ಯಗಳಿಂದ […]

ಮೆಹೆರ್ ಬಾಬಾ ಮತ್ತು ಮೈಂಡ್ ರೀಡರ್ : ಓಶೋ ವ್ಯಾಖ್ಯಾನ

ಪೌರಸ್ತ್ಯರ ಪ್ರಕಾರ ಕನಸುವುದು ಮತ್ತು ಆಲೋಚಿಸುವುದು ಎರಡೂ ಒಂದೇ. ಕನಸುವುದು ನಿಂತು ಹೋದರೆ, ಆಲೋಚನೆಗಳೂ ನಿಂತು ಹೋಗುತ್ತವೆ. ಆಲೋಚನೆಗಳು ನಿಂತು ಹೋದರೆ ಕನಸುಗಳೂ ಮಾಯವಾಗುತ್ತವೆ. ಇಡೀ ಪೂರ್ವದ ಪ್ರಯತ್ನವೆಂದರೆ ಹೇಗೆ ಈ ಆಲೋಚನೆ ಮತ್ತು ಕನಸುಗಳಿಂದ ಕಳಚಿಕೊಳ್ಳುವದು ಎನ್ನುವುದು. ಈ ಆಲೊಚನೆಗಳೊಂದಿಗೆ ಕನಸುಗಳೊಂದಿಗೆ ಹೇಗೆ ಹೊಂದಾಣಿಕೆ ಮಾಡಿಕೊಳ್ಳುವುದು, ಇವನ್ನ ಹೇಗೆ ಅರ್ಥಮಾಡಿಕೊಳ್ಳುವುದು ಎನ್ನುವುದು ನಮ್ಮ ಪ್ರಯತ್ನವಲ್ಲ, ಇವುಗಳನ್ನ ಹೇಗೆ ಡ್ರಾಪ್ ಮಾಡುವುದು ಎನ್ನುವುದೇ ನಮ್ಮ ಏಕೈಕ ಪ್ರಯತ್ನ… ~ ಓಶೋ । ಕನ್ನಡಕ್ಕೆ: ಚಿದಂಬರ ನರೇಂದ್ರ

ಪ್ರಜ್ಞೆಯ ಭಾಗವಹಿಸುವಿಕೆ ಮುಖ್ಯ : ಓಶೋ ವ್ಯಾಖ್ಯಾನ

ಕಬೀರ ಹೇಳುತ್ತಾನೆ; ಸಹಜವಾಗಿರಿ, ಸ್ವಾಭಾವಿಕವಾಗಿರಿ. ನೀವು ಸುಮ್ಮನೇ ಕುಳಿತಿರುವಾಗ, ನಿಮ್ಮೊಳಗೆ ಒಂದು ಪ್ರಾರ್ಥನೆ ಹುಟ್ಟಿಕೊಂಡರೆ, ಅದನ್ನ ಹೇಳಿಬಿಡಿ. ಯಾವ ಫಾರ್ಮಲ್ ಪ್ರಾರ್ಥನೆಯ ಅವಶ್ಯಕತೆಯೂ ಇಲ್ಲ. ನಿಮ್ಮ ಮನಸ್ಸಿನಲ್ಲಿ ಹುಟ್ಟಿಕೊಂಡಿರುವ ಪ್ರಾರ್ಥನೆಯನ್ನ ಹಾಗೇ ಹೇಳಿಬಿಡಿ , ಯಾವ ದೇವರಿಗೂ ನೀವು ನಿಮ್ಮ ಪ್ರಾರ್ಥನೆಯನ್ನ ಮೀಸಲಾಗಿಡಬೇಕಿಲ್ಲ… ~ ಓಶೋ । ಕನ್ನಡಕ್ಕೆ: ಚಿದಂಬರ ನರೇಂದ್ರ

‘ಬದಲಾವಣೆ ಬರೀ ಊಹೆಯಷ್ಟೇ’ ಅಂತಾನೆ ಪರ್ಮೆನಿಡಸ್! : ಅಧ್ಯಾತ್ಮ ಡೈರಿ

ಯಾವುದು ಆತ್ಯಂತಿಕವೋ ಅದು ಸತ್ಯ, ಯಾವುದು ಸತ್ಯವೋ ಅದು ಆತ್ಯಂತಿಕ. ಸತ್ಯ, ನಿತ್ಯ ಮತ್ತು ಶಾಶ್ವತ. ಸತ್ಯ ಬದಲಾವಣೆಯಿಲ್ಲದ್ದು. ಸಮಸ್ತ ಸೃಷ್ಟಿ ಆತ್ಯಂತಿಕ ಪರಮಸತ್ಯ ಅಥವಾ ಋತದ ತುಣುಕುಗಳಾದ ಮೇಲೆ ಅವು ತನ್ನ ಮೂಲದ ಗುಣಲಕ್ಷಣಕ್ಕಿಂತ ಭಿನ್ನವಾಗಿ ಮಿಥ್ಯೆ ಆಗೋದು ಹೇಗೆ? ~ ಚೇತನಾ ತೀರ್ಥಹಳ್ಳಿ । ಅಧ್ಯಾತ್ಮ ಡೈರಿ ಟಿಪ್ಪಣಿಗಳು