ಆದಿ ಶಕ್ತಿಯ ಒಂಭತ್ತು ರೂಪಗಳು : ನವರಾತ್ರಿ ವಿಶೇಷ

ಸಾಮಾನ್ಯ ಮನುಷ್ಯ ಯೋನಿಯಲ್ಲಿ ಜನಿಸಿದ ಪಾರ್ವತಿಯು ತನ್ನೊಳಗಿನ ಮಹಾಕಾಳಿ ಸ್ವರೂಪವನ್ನು ಕಂಡುಕೊಂಡು ಲೋಕೋಪಕಾರಿಯಾಗಿ ಮುನ್ನಡೆಯುವ ಹಲವು ಹಂತಗಳೇ ಆದಿಶಕ್ತಿಯ ನವ ರೂಪಗಳು. ಇವುಗಳ ಸಂಸ್ಮರಣೆಯೇ ನವರಾತ್ರಿ ~ ಆನಂದಪೂರ್ಣ ಪ್ರಥಮಂ ಶೈಲಪುತ್ರೀ ಚ  ದ್ವಿತೀಯಂ ಬ್ರಹ್ಮಚಾರಿಣಿ | ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್ || ಪಂಚಮಂ ಸ್ಕಂದಮಾತೇತಿ  ಷಷ್ಠಂ ಕಾತ್ಯಾಯಿನೀತಿ ಚ | ಸಪ್ತಮಂ ಕಾಲರಾತ್ರಿಶ್ಚ  ಮಹಾಗೌರೀತಿ ಚಾಷ್ಟಮಮ್ || ನವಮಂ ಸಿದ್ಧಿಧಾತ್ರೀ ಚ ನವದುರ್ಗಾಃ ಪ್ರಕೀರ್ತಿತಾಃ | ಸ್ವತಃ ಶಕ್ತಿಯೇ ಆಗಿರುವ ದೇವಿ ಒಂಭತ್ತು ರೂಪಗಳಲ್ಲಿ […]

ಅರಿವಿಗೆ ತಕ್ಕಂತೆ ಮಾತುಗಳು ಅರ್ಥ ಪಡೆಯುತ್ತವೆ

ಯಾವುದೇ ಪದ, ಶಬ್ದ, ಕೇಳುಗರ ಕಿವಿಯಲ್ಲಿ, ಅವರ ಅರಿವಿಗೆ ತಕ್ಕಂತೆ ಅರ್ಥ ಪಡೆಯುತ್ತದೆ. ಮಾತು ಎನ್ನುವುದು ಮಾಯೆಯಂತೆ. ಅದು ಸಮ್ಮೋಹಗೊಳಿಸುತ್ತದೆ. ನಮ್ಮನ್ನು ಒಂದು ಅರ್ಥಕ್ಕೆ ಬದ್ಧರಾಗಿ ಕಟ್ಟಿಹಾಕುತ್ತದೆ. ಆ ಅರ್ಥದ ಪಾಶದಿಂದ ಬಿಡಿಸಿಕೊಳ್ಳುವುದು ಬಹಳ ಕಷ್ಟ ~ ಚೇತನಾ ತೀರ್ಥಹಳ್ಳಿ ಮಾಡುವ ಪ್ರತಿಯೊಂದು ಕೆಲಸಕ್ಕೂ ಅರ್ಥ ಇರಬೇಕೆಂದು ನಾವು ಬಯಸುತ್ತೇವೆ. ಆಡುವ ಪ್ರತಿ ಮಾತಿಗೂ ಅರ್ಥ ಇರಬೇಕೆಂದು ಅಪೇಕ್ಷೆ ಪಡುತ್ತೇವೆ. ಅರ್ಥವಿಲ್ಲದ ಮಾತು, ನಿರುದ್ದಿಶ್ಯ ಕೆಲಸಗಳು  ಸಮಯದ ಅಪವ್ಯಯದಂತೆ ನಮಗೆ ತೋರುತ್ತವೆ. ಆದರೆ ನಾವು ಇವನ್ನು ಪ್ರಜ್ಞಾಪೂರ್ವಕವಾಗಿ […]

ಸರದಾರ ನಡೆಸಿದ ನಿಜಾಯಿತಿ ಪರೀಕ್ಷೆ : ಮಾಧವ ಲಾಹೋರಿ ಕಥೆಗಳು

ಮುಸ್ಸಂಜೆ ಕವಿಯುವಾಗ ಮಾಧವ ಲಾಹೋರಿಗೆ ಅಚ್ಚರಿ ಕಾದಿತ್ತು. ಸರದಾರ ಊರ ಜನರನ್ನು ಕರೆದುಕೊಂಡು ಲಾಹೊರಿಯ ಮನೆ ಮುಂದೆ ಬಂದ. ಅವನ ಹೆಂಡತಿಯೂ ಪಲ್ಲಕ್ಕಿಯಲ್ಲಿ ಬಂದಿದ್ದಳು. ಎಲ್ಲರೂ ಅಲ್ಲಿ ನೆರೆಯುತ್ತಲೇ ಸರದಾರನ ಸಹಾಯಕನಿಗೆ ಹೇಳಿ ಕಳಿಸಲಾಯಿತು ~ ಆನಂದಪೂರ್ಣ ಮಾಧವ ಲಾಹೋರಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಹಾನ್ ಸತ್ಯವಂತನೆಂದೇ ಹೆಸರಾಗಿದ್ದ. ಎಲ್ಲರೂ ಅವನನ್ನು ಸತ್ಯಸಂಧನೆಂದು ಕೊಂಡಾಡುತ್ತಿದ್ದರು. ಆದರೆ ಮಾಧವ ಲಾಹೋರಿ “ಅಂಥದ್ದೇನಿಲ್ಲ… ನನಗೆ ಸುಳ್ಳು ಹೇಳುವ ಅಗತ್ಯವೇ ಬಂದಿಲ್ಲ ಅಷ್ಟೆ” ಎಂದು ಬಿರುದುಬಾವಲಿಗಳನ್ನು ನಯವಾಗಿ ನಿರಾಕರಿಸಿಬಿಡುತ್ತಿದ್ದ. ಅಷ್ಟಾದರೂ ಜನ ಅವನ […]

ನಿಯತಿ : ಅಸ್ತಿತ್ವದ ಯೋಜನೆಯ ಕಾರ್ಯನಿರ್ವಾಹಕಿ

‘ಈ ಸೃಷ್ಟಿಯೊಂದು ಕಾಸ್ಮಿಕ್ ಕಾನ್ಸ್‍ಪಿರೆಸಿ – ಅಸ್ತಿತ್ವದ ಪಿತೂರಿ’ ಅನ್ನುತ್ತಾರೆ ಓಶೋ ರಜನೀಶ್. ಎಲ್ಲವನ್ನೂ ಅದು ಮೊದಲೇ ನಿರ್ಧರಿಸಿಯಾಗಿರುತ್ತದೆ. ತನ್ನ ನಡೆಯನ್ನೇ ಅದು ನಡೆಯುತ್ತಲೂ ಇರುತ್ತದೆ. ಸೃಷ್ಟಿಯ ಎಲ್ಲ ಜಡ ಚೇತನಗಳನ್ನು ಅದರ ಈಡೇರಿಕೆಗಾಗಿ ಬಳಸಿಕೊಳ್ಳುತ್ತದೆ. ಅಸ್ತಿತ್ವದ ಈ ಯೋಜನೆಯ ಕಾರ್ಯನಿರ್ವಾಹಕಿಯೇ `ನಿಯತಿ’. ನಿಯತಿಯು `ವಿಧಿ’ಯ ಒಡತಿ.  ~ಆನಂದಪೂರ್ಣ ಸೃಷ್ಟಿಯ ಯಾವುದೇ ಜೀವಿ ಪರಿಪೂರ್ಣ ಸ್ವಾತಂತ್ರ್ಯ ಹೊಂದಿರುವುದಿಲ್ಲ. ರಂಗಮಂಚದ ಮೇಲೆ ನಟರು ಎಷ್ಟೇ ಸ್ವತಂತ್ರವಾಗಿ ಪಾತ್ರ ನಿಭಾಯಿಸುತ್ತಿದ್ದರೂ ಅವರ ಪಾತ್ರ ಹಾಗೂ ಕಥನಗಳು ಸೂತ್ರಧಾರನ ನಿರ್ದೇಶನಕ್ಕೆ ತಕ್ಕಂತೆ […]

ಗ್ರಹಿಕೆಯಂತೆ ಬಣ್ಣಗಳು, ಗ್ರಹಿಕೆಯಂತೆ ಭಗವಂತನೂ…

ಅಲ್ಲಿಗೆ, ಆಯಾ ಬಣ್ಣವು ನಿರ್ದಿಷ್ಟ ತರಂಗಾಂತರಗಳಲ್ಲಿ ಅನುಭವಕ್ಕೆ ಬರುವಂಥ ಬೆಳಕಿನ ತರಂಗಗಳು ಎಂದಾಯ್ತು. ನಮ್ಮ ಗ್ರಹಿಕೆಯ ಸೀಮಿತಿಗೆ ತಕ್ಕಂತೆ ನಮಗೆ ಇಂತಿಷ್ಟು ಬಗೆಯ ಬಣ್ಣಗಳು ಗೋಚರಿಸುತ್ತವೆ ಎಂದಾಯ್ತು. ಒಟ್ಟಾರೆಯಾಗಿ – ಯಾವುದು ಬೆಳ್ಳಗೆ ಕಾಣುವ ಬೆಳಕಿನಲ್ಲಿ ಹುದುಗಿದೆಯೋ ಮತ್ತು ನಿರ್ದಿಷ್ಟ ಸಂದರ್ಭಗಳಲ್ಲಿ ಗೋಚರಿಸುತ್ತದೆಯೋ; ಯಾವುದು ಎಲ್ಲರಿಗೂ ಗೋಚರಿಸುವುದಿಲ್ಲವೋ, ಯಾವುದು ವಾಸ್ತವದಲ್ಲಿ ಇದೆ ಮತ್ತು ವಾಸ್ತವದಲ್ಲಿ ಇಲ್ಲವೋ ಆ ವಿಲಕ್ಷಣ ಸಂಗತಿಯೇ ಬಣ್ಣ ಎಂದಾಯ್ತು!! ~ ಆನಂದಪೂರ್ಣ ಬಣ್ಣ! ಹಾಗೆಂದರೇನು? ಅನಿರೀಕ್ಷಿತವಾಗಿ ಇಂಥದೊಂದು ಪ್ರಶ್ನೆ ತೂರಿಬಂದರೆ ಯಾರಿಗಾದರೂ ಗಲಿಬಿಲಿಯೇ. […]

ಮಾಧೋ ಬೋಧಿಸಿದ ಕೊನೆಯ ಪಾಠ ~ ಮಾಧವ ಲಾಹೋರಿ ಕಥೆಗಳು

ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದ ಮಾಧವ ಲಾಹೋರಿಗೆ ಬದುಕಿಡೀ ತಾನು ಬೇರೆ ಯಾರೋ ಆಗಲು ಯತ್ನಿಸುತ್ತಿದ್ದೆನೆಂದೂ, ನಾನು ನಾನೇ ಆಗುವಲ್ಲಿ ಸೋತಿದ್ದೇನೆಂದೂ ಅರಿವಾಯಿತು. ಈ ಅರಿವನ್ನು ಪಡೆಯಲು ನಾವೂ ಕೊನೆ ಕ್ಷಣದವರೆಗೆ ಕಾಯಬೇಕೆ? ಮಾಧೋ ಹೇಳಿಹೋದ ಪಾಠ ಸಾಲದೇ? ~ ಆನಂದಪೂರ್ಣ ಮಾಧವ ಲಾಹೋರಿ ಮರಣಶಯ್ಯೆಯಲ್ಲಿದ್ದನು. ಹೆಚ್ಚೂಕಡಿಮೆ ಕೊನೆಯುಸಿರಿನ ಕ್ಷಣಗಣನೆ ಸಾಗಿತ್ತು. ಹೀಗಿರುವಾಗ ಮಾಧವ ಲಾಹೋರಿ ಮಣಮಣ ಎಂದು ಏನೋ ಮಂತ್ರ ಹೇಳತೊಡಗಿದ. ಕಣ್ಣೀರು ದಳದಳನೆ ಇಳಿಯತೊಡಗಿತು. ಮೈ ಅದುರತೊಡಗಿತು. ಹಾಸಿಗೆಯ ಪಕ್ಕದಲ್ಲೆ ಕುಳಿತಿದ್ದವನೊಬ್ಬ ಲಾಹೋರಿಯ ಕೈಗಳನ್ನು ಅದುಮುತ್ತಾ […]

ಅವನು ಇಲ್ಲದೆ ಇದ್ದಾಗ ಅತ್ತಿರಲಿಲ್ಲ, ಅವನು ಹೋದನೆಂದು ನಾನೇಕೆ ಅಳಲಿ? ~ ಮಾಧವ ಲಾಹೋರಿ ಕಥೆಗಳು

ಊರಿನ ಜನಕ್ಕೆ ಇದೇನು ವಿಚಿತ್ರ ಅಂತ ಗಾಬರಿಯಾಯಿತು. ಬೇರೆ ಸಮಯದಲ್ಲೇನೋ ಸರಿ… ಮಗ ಸತ್ತುಹೋದಾಗಲೂ ಹೀಗೆ ಆಡಬೇಕೇ? ಎಂದು ಮಾತಾಡಿಕೊಂಡರು. ಇಷ್ಟಕ್ಕೂ ಮಾಧವ ಲಾಹೋರಿ ಹಾಗೆ ನಡೆದುಕೊಂಡಿದ್ದೇಕೆ ಗೊತ್ತೆ……? ~ ಆನಂದಪೂರ್ಣ ಮಾಧವ ಲಾಹೋರಿ ಎಂಥಾ ವಿಲಕ್ಷಣ ಮನುಷ್ಯ ಅಂದರೆ, ಅವನ ವರ್ತನೆಯನ್ನು ನೋಡಿದವರು ಒಂದು ಕ್ಷಣ ದಂಗಾಗಿಬಿಡುತ್ತಿದ್ದರು. ಅವನನ್ನು ಚೆನ್ನಾಗಿ ಬೈದುಕೊಳ್ಳುತ್ತಿದ್ದರು. ನಂತರದಲ್ಲಿ ಯಾವಾಗಲೋ ಅವರಿಗೆ ಅವನ ವರ್ತನೆಗೆ ಕಾರಣ ತಿಳಿಯುತ್ತಿತ್ತು. ಆ ಕಾರಣ ಅವರನ್ನು ಮತ್ತಷ್ಟು ದಂಗುಬಡಿಸಿ, ಮಾಧೋನ ಬಗ್ಗೆ ಬೇಸರಪಡಬೇಕೋ, ಅವನನ್ನು ಗೌರವದಿಂದ […]

ಮೌನಿ ಬಾಬಾ ನಿಜವಾಗಿಯೂ ಹೇಳುತ್ತಿದ್ದುದೇನು? : ಮಾಧವ ಲಾಹೋರಿ ಕಥೆಗಳು

ಅಷ್ಟೂ ದಿನಗಳ ಕಾಲ ಮೌನಿ ಬಾಬಾ ಹೇಳುತ್ತಿದ್ದುದೇನು ಎಂದು ಸ್ವತಃ ಆಶ್ರಮದ ಶಿಷ್ಯರಿಗೂ ಗೊತ್ತಾಗಿರಲಿಲ್ಲ. ಕೊನೆಗೂ ಅದನ್ನು ಕಂಡುಕೊಂಡಿದ್ದು ಮಾಧವ ಲಾಹೋರಿ ಮಾತ್ರ!  ~ ಆನಂದಪೂರ್ಣ ಒಮ್ಮೆ ಮಾಧವ ಲಾಹೋರಿಯ ಊರಿಗೆ ಒಬ್ಬ ಮೌನಿ ಬಾಬಾ ಬಂದ. ವಾಸ್ತವದಲ್ಲಿ ಅವನೊಬ್ಬ ಠಕ್ಕ. ಎಲ್ಲೋ ಕನ್ನ ಹಾಕುವಾಗ ಸಿಕ್ಕಿಬಿದ್ದು, ಜನರಿಂದ ತಪ್ಪಿಸಿಕೊಳ್ಳಲು ಒಂದು ಆಶ್ರಮದಲ್ಲಿ ಅವಿತುಕೊಂಡಿದ್ದ. ಅಲ್ಲಿದ್ದ ಸಾಧುವಿನ ಬಟ್ಟೆಗಳನ್ನು ಧರಿಸಿ, ಅವರ ಶಿಷ್ಯರ ನಡುವೆ ಸೇರಿಕೊಂಡು ಬಿಟ್ಟಿದ್ದ. ಬರಬರುತ್ತಾ ಹಿರಿಯ ಸಾಧುವಿನ ವಿಶ್ವಾಸ ಗಳಿಸಿ, ಅವನ ಆಪ್ತವಲಯದಲ್ಲಿ […]

ಸಮಸ್ಯೆಯ ಮೂಲ ನಮ್ಮೊಳಗೇ ಇದೆ ಎಂದು ಒಪ್ಪಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ!

ವಾಸ್ತವವಾಗಿ ಕೊಳದ ನೀರು ನೆಲದ ಕಂಪನದಿಂದ ಕಲಕಿ ರಾಡಿಯಾಗುತ್ತ ಇರುತ್ತದೆ. ನಾವು ಮಾತ್ರ ಯಾರೋ ಹೊರಗಿನಿಂದ ಕಲ್ಲೆಸೆಯುತ್ತ ಇದ್ದಾರೆಂದು ದೂರುತ್ತೇವೆ. ಸಮಸ್ಯೆಯ ಮೂಲ ನಮ್ಮೊಳಗೇ ಇದೆ ಎಂಬುದನ್ನು ಕಂಡುಕೊಳ್ಳಲು ಯಾರೂ ಇಷ್ಟಪಡುವುದಿಲ್ಲ…. ~ ಆನಂದಪೂರ್ಣ ಮನುಷ್ಯ ತನ್ನ ಅಸ್ತಿತ್ವವನ್ನು ಖಾತ್ರಿಪಡಿಸಿಕೊಳ್ಳುವುದೇ ಅಹಂಕಾರದಿಂದ. ಒಂದು ದಿನ ತಾನು ಅವಜ್ಞೆಗೆ ಒಳಗಾದೆ, ಯಾರೂ ನನ್ನನ್ನು ಗಮನಿಸುತ್ತಿಲ್ಲ ಎಂದು ಅನ್ನಿಸಿದರೂ ಸಾಕು ತೀವ್ರ ಚಡಪಡಿಸಿಹೋಗುತ್ತಾನೆ. ಜನರ ಗಮನ ಸೆಳೆಯಲು ತಂತ್ರಗಳನ್ನು ಹೂಡುತ್ತಾನೆ. ಇದು ಅತಿರೇಕಕ್ಕೆ ಹೋದಾಗಲೇ ಅಪರಾಧಗಳು ಸಂಭವಿಸುವುದು. ತನ್ನ ಅಹಂಕಾರ […]

ನಾವು ಶಾಪದಿಂದ ಭೂಮಿಗೆ ಬಂದವರಲ್ಲ, ಭೂಮಿಯನ್ನೆ ಶಾಪವಾಗಿಸಿಕೊಂಡವರು!

ಭೂಮಿಯಲ್ಲಿ ಹುಟ್ಟುವುದು ಅಂದರೆ ಅದೊಂದು ಘೋರ ಶಿಕ್ಷೆ. ಭಗವದ್ಧಾಮದ ನಿಜದ ನೆಲೆಯಿಂದ, ನಿತ್ಯಾನಂದದ ಒಡಲಿಂದ ಭೂಮಿಯ ಬೆಂಕಿಗೆ ಬೀಳುವುದು ಸುಮ್ಮನೆ ಮಾತಲ್ಲ. ಭಾರತೀಯ ಪುರಾಣಗಳಲ್ಲಷ್ಟೆ ಅಲ್ಲ, ಸೆಮೆಟಿಕ್ ಧರ್ಮಗಳಲ್ಲೂ ಆ್ಯಡಮ್ ಮತ್ತು ಈವ್ (ಅಥವಾ ಆದಮ್ – ಹೌವ್ವಾ) ಪಾಪ ಫಲ ತಿಂದುದಕ್ಕಾಗಿ ಭಗವಂತನಿಂದ ಶಿಕ್ಷೆ ಪಡೆದು ಭೂಮಿಗೆ ಬಂದು ಬೀಳುತ್ತಾರೆ. ಒಟ್ಟಾರೆ ಅದೊಂದು ಭಯಾನಕ ಎನ್‍ಕೌಂಟರ್  ~ ಆನಂದಪೂರ್ಣ ಭಗವಾನ್ ಮಹಾವಿಷ್ಣುವಿನ ನಾಲ್ಕನೇ ಅವತಾರ ಮಾನವಾಕೃತಿಯ ಸಿಂಹ – ನರಸಿಂಹಾವತಾರ. ಮನೆಯ ಒಳಗೂ, ಹೊರಗೂ, ಭೂಮಿಯ […]