ನಿಯತಿ : ಅಸ್ತಿತ್ವದ ಯೋಜನೆಯ ಕಾರ್ಯನಿರ್ವಾಹಕಿ

‘ಈ ಸೃಷ್ಟಿಯೊಂದು ಕಾಸ್ಮಿಕ್ ಕಾನ್ಸ್‍ಪಿರೆಸಿ – ಅಸ್ತಿತ್ವದ ಪಿತೂರಿ’ ಅನ್ನುತ್ತಾರೆ ಓಶೋ ರಜನೀಶ್. ಎಲ್ಲವನ್ನೂ ಅದು ಮೊದಲೇ ನಿರ್ಧರಿಸಿಯಾಗಿರುತ್ತದೆ. ತನ್ನ ನಡೆಯನ್ನೇ ಅದು ನಡೆಯುತ್ತಲೂ ಇರುತ್ತದೆ. ಸೃಷ್ಟಿಯ ಎಲ್ಲ ಜಡ ಚೇತನಗಳನ್ನು ಅದರ ಈಡೇರಿಕೆಗಾಗಿ ಬಳಸಿಕೊಳ್ಳುತ್ತದೆ. ಅಸ್ತಿತ್ವದ ಈ ಯೋಜನೆಯ ಕಾರ್ಯನಿರ್ವಾಹಕಿಯೇ `ನಿಯತಿ’. ನಿಯತಿಯು `ವಿಧಿ’ಯ ಒಡತಿ.  ~ಆನಂದಪೂರ್ಣ ಸೃಷ್ಟಿಯ ಯಾವುದೇ ಜೀವಿ ಪರಿಪೂರ್ಣ ಸ್ವಾತಂತ್ರ್ಯ ಹೊಂದಿರುವುದಿಲ್ಲ. ರಂಗಮಂಚದ ಮೇಲೆ ನಟರು ಎಷ್ಟೇ ಸ್ವತಂತ್ರವಾಗಿ ಪಾತ್ರ ನಿಭಾಯಿಸುತ್ತಿದ್ದರೂ ಅವರ ಪಾತ್ರ ಹಾಗೂ ಕಥನಗಳು ಸೂತ್ರಧಾರನ ನಿರ್ದೇಶನಕ್ಕೆ ತಕ್ಕಂತೆ […]

ಗ್ರಹಿಕೆಯಂತೆ ಬಣ್ಣಗಳು, ಗ್ರಹಿಕೆಯಂತೆ ಭಗವಂತನೂ…

ಅಲ್ಲಿಗೆ, ಆಯಾ ಬಣ್ಣವು ನಿರ್ದಿಷ್ಟ ತರಂಗಾಂತರಗಳಲ್ಲಿ ಅನುಭವಕ್ಕೆ ಬರುವಂಥ ಬೆಳಕಿನ ತರಂಗಗಳು ಎಂದಾಯ್ತು. ನಮ್ಮ ಗ್ರಹಿಕೆಯ ಸೀಮಿತಿಗೆ ತಕ್ಕಂತೆ ನಮಗೆ ಇಂತಿಷ್ಟು ಬಗೆಯ ಬಣ್ಣಗಳು ಗೋಚರಿಸುತ್ತವೆ ಎಂದಾಯ್ತು. ಒಟ್ಟಾರೆಯಾಗಿ – ಯಾವುದು ಬೆಳ್ಳಗೆ ಕಾಣುವ ಬೆಳಕಿನಲ್ಲಿ ಹುದುಗಿದೆಯೋ ಮತ್ತು ನಿರ್ದಿಷ್ಟ ಸಂದರ್ಭಗಳಲ್ಲಿ ಗೋಚರಿಸುತ್ತದೆಯೋ; ಯಾವುದು ಎಲ್ಲರಿಗೂ ಗೋಚರಿಸುವುದಿಲ್ಲವೋ, ಯಾವುದು ವಾಸ್ತವದಲ್ಲಿ ಇದೆ ಮತ್ತು ವಾಸ್ತವದಲ್ಲಿ ಇಲ್ಲವೋ ಆ ವಿಲಕ್ಷಣ ಸಂಗತಿಯೇ ಬಣ್ಣ ಎಂದಾಯ್ತು!! ~ ಆನಂದಪೂರ್ಣ ಬಣ್ಣ! ಹಾಗೆಂದರೇನು? ಅನಿರೀಕ್ಷಿತವಾಗಿ ಇಂಥದೊಂದು ಪ್ರಶ್ನೆ ತೂರಿಬಂದರೆ ಯಾರಿಗಾದರೂ ಗಲಿಬಿಲಿಯೇ. […]

ಮಾಧೋ ಬೋಧಿಸಿದ ಕೊನೆಯ ಪಾಠ ~ ಮಾಧವ ಲಾಹೋರಿ ಕಥೆಗಳು

ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದ ಮಾಧವ ಲಾಹೋರಿಗೆ ಬದುಕಿಡೀ ತಾನು ಬೇರೆ ಯಾರೋ ಆಗಲು ಯತ್ನಿಸುತ್ತಿದ್ದೆನೆಂದೂ, ನಾನು ನಾನೇ ಆಗುವಲ್ಲಿ ಸೋತಿದ್ದೇನೆಂದೂ ಅರಿವಾಯಿತು. ಈ ಅರಿವನ್ನು ಪಡೆಯಲು ನಾವೂ ಕೊನೆ ಕ್ಷಣದವರೆಗೆ ಕಾಯಬೇಕೆ? ಮಾಧೋ ಹೇಳಿಹೋದ ಪಾಠ ಸಾಲದೇ? ~ ಆನಂದಪೂರ್ಣ ಮಾಧವ ಲಾಹೋರಿ ಮರಣಶಯ್ಯೆಯಲ್ಲಿದ್ದನು. ಹೆಚ್ಚೂಕಡಿಮೆ ಕೊನೆಯುಸಿರಿನ ಕ್ಷಣಗಣನೆ ಸಾಗಿತ್ತು. ಹೀಗಿರುವಾಗ ಮಾಧವ ಲಾಹೋರಿ ಮಣಮಣ ಎಂದು ಏನೋ ಮಂತ್ರ ಹೇಳತೊಡಗಿದ. ಕಣ್ಣೀರು ದಳದಳನೆ ಇಳಿಯತೊಡಗಿತು. ಮೈ ಅದುರತೊಡಗಿತು. ಹಾಸಿಗೆಯ ಪಕ್ಕದಲ್ಲೆ ಕುಳಿತಿದ್ದವನೊಬ್ಬ ಲಾಹೋರಿಯ ಕೈಗಳನ್ನು ಅದುಮುತ್ತಾ […]

ಅವನು ಇಲ್ಲದೆ ಇದ್ದಾಗ ಅತ್ತಿರಲಿಲ್ಲ, ಅವನು ಹೋದನೆಂದು ನಾನೇಕೆ ಅಳಲಿ? ~ ಮಾಧವ ಲಾಹೋರಿ ಕಥೆಗಳು

ಊರಿನ ಜನಕ್ಕೆ ಇದೇನು ವಿಚಿತ್ರ ಅಂತ ಗಾಬರಿಯಾಯಿತು. ಬೇರೆ ಸಮಯದಲ್ಲೇನೋ ಸರಿ… ಮಗ ಸತ್ತುಹೋದಾಗಲೂ ಹೀಗೆ ಆಡಬೇಕೇ? ಎಂದು ಮಾತಾಡಿಕೊಂಡರು. ಇಷ್ಟಕ್ಕೂ ಮಾಧವ ಲಾಹೋರಿ ಹಾಗೆ ನಡೆದುಕೊಂಡಿದ್ದೇಕೆ ಗೊತ್ತೆ……? ~ ಆನಂದಪೂರ್ಣ ಮಾಧವ ಲಾಹೋರಿ ಎಂಥಾ ವಿಲಕ್ಷಣ ಮನುಷ್ಯ ಅಂದರೆ, ಅವನ ವರ್ತನೆಯನ್ನು ನೋಡಿದವರು ಒಂದು ಕ್ಷಣ ದಂಗಾಗಿಬಿಡುತ್ತಿದ್ದರು. ಅವನನ್ನು ಚೆನ್ನಾಗಿ ಬೈದುಕೊಳ್ಳುತ್ತಿದ್ದರು. ನಂತರದಲ್ಲಿ ಯಾವಾಗಲೋ ಅವರಿಗೆ ಅವನ ವರ್ತನೆಗೆ ಕಾರಣ ತಿಳಿಯುತ್ತಿತ್ತು. ಆ ಕಾರಣ ಅವರನ್ನು ಮತ್ತಷ್ಟು ದಂಗುಬಡಿಸಿ, ಮಾಧೋನ ಬಗ್ಗೆ ಬೇಸರಪಡಬೇಕೋ, ಅವನನ್ನು ಗೌರವದಿಂದ […]

ಸಮಸ್ಯೆಯ ಮೂಲ ನಮ್ಮೊಳಗೇ ಇದೆ ಎಂದು ಒಪ್ಪಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ!

ವಾಸ್ತವವಾಗಿ ಕೊಳದ ನೀರು ನೆಲದ ಕಂಪನದಿಂದ ಕಲಕಿ ರಾಡಿಯಾಗುತ್ತ ಇರುತ್ತದೆ. ನಾವು ಮಾತ್ರ ಯಾರೋ ಹೊರಗಿನಿಂದ ಕಲ್ಲೆಸೆಯುತ್ತ ಇದ್ದಾರೆಂದು ದೂರುತ್ತೇವೆ. ಸಮಸ್ಯೆಯ ಮೂಲ ನಮ್ಮೊಳಗೇ ಇದೆ ಎಂಬುದನ್ನು ಕಂಡುಕೊಳ್ಳಲು ಯಾರೂ ಇಷ್ಟಪಡುವುದಿಲ್ಲ…. ~ ಆನಂದಪೂರ್ಣ ಮನುಷ್ಯ ತನ್ನ ಅಸ್ತಿತ್ವವನ್ನು ಖಾತ್ರಿಪಡಿಸಿಕೊಳ್ಳುವುದೇ ಅಹಂಕಾರದಿಂದ. ಒಂದು ದಿನ ತಾನು ಅವಜ್ಞೆಗೆ ಒಳಗಾದೆ, ಯಾರೂ ನನ್ನನ್ನು ಗಮನಿಸುತ್ತಿಲ್ಲ ಎಂದು ಅನ್ನಿಸಿದರೂ ಸಾಕು ತೀವ್ರ ಚಡಪಡಿಸಿಹೋಗುತ್ತಾನೆ. ಜನರ ಗಮನ ಸೆಳೆಯಲು ತಂತ್ರಗಳನ್ನು ಹೂಡುತ್ತಾನೆ. ಇದು ಅತಿರೇಕಕ್ಕೆ ಹೋದಾಗಲೇ ಅಪರಾಧಗಳು ಸಂಭವಿಸುವುದು. ತನ್ನ ಅಹಂಕಾರ […]

ಇಚ್ಛಾಶಕ್ತಿ ಮತ್ತು ಸಂಕಲ್ಪಶುದ್ಧಿಯಿಂದ ಎಲ್ಲವೂ ಸಾಧ್ಯ

ಸಂಕಲ್ಪ ಶಕ್ತಿಗೆ ಮುನ್ನ ಇಚ್ಛಾಶಕ್ತಿ ಹುಟ್ಟಿಕೊಳ್ಳುತ್ತದೆ. ಆದರೆ ಅದಕ್ಕೂ ಮುನ್ನ ಹುಟ್ಟುವುದು ಆಲೋಚನೆ. ನಾವು ಪ್ರತಿ ಕ್ಷಣ ಪ್ರತಿಯೊಂದನ್ನೂ ನಾವು ಬಲ್ಲ ಮತ್ತೊಂದಕ್ಕೆ ಬೆಸೆದುಕೊಳ್ಳುತ್ತೇವೆ. ನಮ್ಮ ಸುಪ್ತ ಕಾಮನೆಗಳಿಗೆ – ಇಚ್ಛೆಗೆ ಪೂರಕವಾಗಿ ಹುಟ್ಟಿಕೊಳ್ಳುವ ಯೋಚನೆಗಳೆಲ್ಲವೂ ಸಂಕಲ್ಪಗಳೇ ~ ಆನಂದಪೂರ್ಣ ಸೃಷ್ಟಿಯಲ್ಲಿ ಅಸಾಧ್ಯವಾದದ್ದು ಏನೂ ಇಲ್ಲ. ಶೂನ್ಯದಲ್ಲಿ ಹುಟ್ಟು ಹಾಗೂ ಶೂನ್ಯವಾಗುವ ಸಾವುಗಳೇ ಸಾಧ್ಯವಾಗಿರುವ ಸೃಷ್ಟಿಯಲ್ಲಿ ಅಸಾಧ್ಯತೆಯ ಪರಿಕಲ್ಪನೆಯೇ ಪರಿಹಾಸ. ಆದರೆ ಈ ಸಾಧ್ಯಾಸಾಧ್ಯತೆಗಳು ಸಾಧಕರನ್ನು ಅವಲಂಬಿಸಿರುತ್ತದೆ ಅನ್ನುವುದು ಕೂಡ ಅಷ್ಟೇ ಸತ್ಯ. ಮಾಡಹೊರಟವರು ಯಾರು ಅನ್ನುವುದರ […]

ಗುರುತೆಂಬುದು ಕಡಲ ತಡಿಯ ಗೂಡು

ಶಾಶ್ವತತೆಯ ವ್ಯಸನವು ನಮ್ಮಲ್ಲಿ ಸ್ವಾರ್ಥ ಬುದ್ಧಿಯನ್ನೂ ಮಾತ್ಸರ್ಯವನ್ನೂ ಬೆಳೆಸುತ್ತದೆ. ನಮ್ಮ ಅಪೇಕ್ಷೆ ಕೈಗೂಡದೆ ಹೋಗಬಹುದು ಎನ್ನುವ ಅಸ್ಥಿರತೆ ನಮ್ಮನ್ನು ಕ್ರೋಧಕ್ಕೆಡೆ ಮಾಡುತ್ತದೆ. ಎಷ್ಟೆಂದರೂ ಅಸಹಾಯಕತೆಯೇ ಕೋಪಕ್ಕೆ ಮೂಲವಲ್ಲವೆ? ಈ ಎಲ್ಲದರ ಮೊತ್ತವಾಗಿ ಖಿನ್ನತೆ, ಸಂಕುಚಿತತೆಗಳು ನಮ್ಮಲ್ಲಿ ಮೊಳೆಯುತ್ತವೆ ~ ಆನಂದಪೂರ್ಣ ಚಿಕ್ಕ ಮಕ್ಕಳು ಕಡಲ ತಡಿಯಲ್ಲಿ ಕಪ್ಪೆ ಗೂಡು ಕಟ್ಟಿ ನಲಿಯುತ್ತವೆ. ಎಷ್ಟು ಬಾರಿ ಸಾಗರದಲೆಗಳು ಬಂದು ಮರಳಿನ ಗೂಡು ಕೆಡವಿ ಸೆಳೆದೊಯ್ದರೂ ಅವಕ್ಕೆ ಬೇಸರವಿಲ್ಲ. ಅದೇ ಹಿಂದಿನ ಉತ್ಸಾಹದಲ್ಲಿ ಚಪ್ಪಾಳೆ ತಟ್ಟುತ್ತ ಪುನಃ ಗೂಡು ಕಟ್ಟುವ […]

ಅನ್ನದ ನೆಲಕ್ಕೆ ಅರಿವಿನ ಮುಗಿಲು ಛಾವಣಿ

ಬಹುತೇಕ ಎಲ್ಲ ಧರ್ಮಗಳೂ ಆಕಾಶವನ್ನು ದೇವರ ನೆಲೆಯೆಂದು ನಂಬುತ್ತವೆ. ಆದ್ದರಿಂದಲೇ ಆಕಾಶದ ಬಗ್ಗೆ ಕುತೂಹಲದಷ್ಟೆ ಭಯ, ಗೌರವಗಳು ಆಸ್ತಿಕರಲ್ಲಿ ಮನೆ ಮಾಡಿರುವುದು ~ ಆನಂದಪೂರ್ಣ ಮನುಷ್ಯನ ಅರಿವು ಪ್ರಕೃತಿಯ ಬೆರಗಿಗೆ ತೆರೆದುಕೊಳ್ಳುತ್ತ ಹೋದಂತೆಲ್ಲ ಅದರೊಂದಿಗೆ ಭಾವನಾತ್ಮಕ ಸಂಬಂಧ ಬೆಸೆದುಕೊಳ್ಳತೊಡಗಿದ. ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು, ಗಾಳಿ, ಬೆಂಕಿ, ಆಕಾಶಗಳು ತನ್ನ ಜೀವನಕ್ಕೆ ಪೂರಕವಾಗಿವೆ ಎಂದು ಅರಿಯುತ್ತಲೇ ಅವುಗಳೆಡೆಗೆ ಕೃತಜ್ಞತಾ ಭಾವವನ್ನು ಬೆಳೆಸಿಕೊಂಡ. ಅವುಗಳ ಸಹಾಯವಿಲ್ಲದೆ ತಾನು ಬದುಕಲಾರೆ ಎಂಬ ಸತ್ಯ ಅವನಲ್ಲಿ ಪ್ರಕೃತಿಯ ಬಗ್ಗೆ ಭಯ ಭಕ್ತಿಗಳನ್ನು […]

ಸಂತ ಪರಂಪರೆ ಮತ್ತು ರಾಷ್ಟ್ರ ಭಾವನೆ

ಭಾರತದ ಕೇಂದ್ರ ಇರುವುದು ಧಾರ್ಮಿಕತೆಯಲ್ಲಿಯೇ. ಈ ಎಳೆಯೇ ನೂರಾರು ವೈವಿಧ್ಯಗಳ ಪ್ರಾಂತ್ಯಗಳನ್ನು ಒಂದು ಸೂತ್ರದಲ್ಲಿ ಬೆಸೆದಿಟ್ಟಿರುವುದು. ಅದಕ್ಕೆ ಪೂರಕವಾಗಿ ಇಲ್ಲಿ ಆಗಿಹೋದ ಸಂತರನೇಕರು ಸಮಾಜ ಸುಧಾರಣೆಯ ಹರಿಕಾರರಾಗಿಯೂ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ  ~ ಆನಂದಪೂರ್ಣ ಭಾರತ  ರಾಜಕೀಯವಾಗಿ ಹಲವು ರಾಜ್ಯಗಳ ಒಕ್ಕೂಟ ಎನ್ನುವುದು ನಿಜ. ಆದರೆ ವಾಸ್ತವದಲ್ಲಿದು ಹಲವು ಸಂಸ್ಕೃತಿಗಳ, ಧರ್ಮಗಳ, ತತ್ತ್ವಗಳ, ಸಂಪ್ರದಾಯಗಳ ಒಕ್ಕೂಟ. ಈ ವಿಭಿನ್ನತೆಯನ್ನು ಒಗ್ಗೂಡಿಸಿರುವ ಮಹಾನ್ ಶಕ್ತಿಯೆಂದರೆ ಅದು ಅಧ್ಯಾತ್ಮ. ಭಾರತ ಸ್ವಾತಂತ್ರ್ಯಾನಂತರ ಒಂದು ಗಣರಾಜ್ಯವಾಗಿ ರೂಪುಗೊಂಡಿರುವಲ್ಲಿ ರಾಜಕೀಯ ಇಚ್ಛಾಶಕ್ತಿಯಷ್ಟೇ ಧಾರ್ಮಿಕ – ಆಧ್ಯಾತ್ಮಿಕ […]

‘ಖಾಲಿ ಹಾಳೆ’ಯನ್ನು ಓದುವುದು…

ಪ್ರತಿಯೊಬ್ಬ ಓದುಗರೂ ಯಾವುದೇ ಬರಹವನ್ನು ತಮ್ಮ ಸಾಮರ್ಥ್ಯ – ಮಿತಿಗಳ ಅನುಸಾರವಾಗಿಯೇ ಓದುತ್ತಾರೆ. ಆದ್ದರಿಂದ ಖಾಲಿ ಹಾಳೆಯನ್ನು ಕೊಟ್ಟು, ಅದನ್ನು ಓದಲು ಹೇಳುವ ಮೂಲಕ, ಆಯಾ ವ್ಯಕ್ತಿಯು ಏನನ್ನು ಓದಲು, ಏನನ್ನು ಅರ್ಥ ಮಾಡಿಕೊಳ್ಳಲು ಬಯಸುತ್ತಾರೆ ಎಂದು ಕಂಡುಕೊಳ್ಳಬಹುದು ~ ಆನಂದಪೂರ್ಣ ಖಾಲಿತನಕ್ಕೆ ಮತ್ತು ಸುಮ್ಮನಿರುವಿಕೆಗೆ ಸಂತ ಪರಂಪರೆ ಕೊಟ್ಟ ಪ್ರಾಮುಖ್ಯತೆ ಬಹಳ ಆಸಕ್ತಿಕರ. ಖಾಲಿ ಅಥವಾ ಶೂನ್ಯವು ಪೂರ್ಣ ಮತ್ತು ಅವಕಾಶವನ್ನೂ ಸುಮ್ಮನಿರುವಿಕೆ ಅಥವಾ ಮೌನವು ದರ್ಶನವನ್ನೂ ಒದಗಿಸಿಕೊಡುವಂಥವು ಎಂದು ಅದು ವಿಶ್ಲೇಷಿಸುತ್ತದೆ. ಸತ್ಸಂಗಗಳಲ್ಲಿ, ಸಂತರ […]