ಕ್ಷಮಿಸಲು ಬೇಕಿರುವುದು ಉದಾರ ಹೃದಯವಲ್ಲ, ಕ್ಷಮಿಸುವ ಧೈರ್ಯ!

ಕ್ಷಾಂತಿ ಎಂದರೆ ಕ್ಷಮಿಸುವ ಧೈರ್ಯ; ಕ್ಷಮಿಸುವ ಸಹಾನುಭೂತಿ. ಇದು ಕೇವಲ ಕ್ಷಮಿಸುವ ಗುಣವಲ್ಲ, ಆ ಗುಣದ ಮೂಲ ಬೀಜ. ಮೋಕ್ಷದ ಹಾದಿಯಲ್ಲಿ ಮಾತ್ರವಲ್ಲ, ಅನುದಿನದ ಬದುಕಿಗೂ `ಕ್ಷಾಂತಿ’ಯು ದಿವ್ಯ ಮಂತ್ರವಾಗಿದೆ. ~ ಗಾಯತ್ರಿ ನೆಮ್ಮದಿಯಾಗಿ ಬದುಕಲಿಕ್ಕೆ ಏನೆಲ್ಲ ಬೇಕು? ಹೊಟ್ಟೆ ಬಟ್ಟೆಗೆ ತಕ್ಕಷ್ಟು, ಇರಲಿಕ್ಕೆ – ಮಲಗಲಿಕ್ಕೊಂದು ಜಾಗ. ಇವಿಷ್ಟಿದ್ದರೆ ನೆಮ್ಮದಿ ಖಾತ್ರಿ. ಇವುಗಳ ಅಗತ್ಯಗಳ ಜೊತೆಗೆ ಮಹತ್ವಾಕಾಂಕ್ಷೆಗಳು ಸೇರಿಕೊಂಡಾಗ ಪಟ್ಟಿ ಬೆಳೆಯುತ್ತ ಹೋದರೂ ಅವು ಈ ಮೂಲಭೂತ ಅಗತ್ಯಗಳ ಬೀಜದಿಂದಲೇ ಚಿಗಿತು ಹಬ್ಬಿದಂಥವಷ್ಟೆ. ವಾಸ್ತವವಾಗಿ ನೆಮ್ಮದಿ […]

ನೀರು ಕುಡಿಯಲೊಲ್ಲದ ಕುದುರೆಯನ್ನುಯಾರು ಪಳಗಿಸಬೇಕು?

ಕುದುರೆಗೆ ದಣಿವಾಗಿದೆ. ಆದರೆ ಅದು ನೀರು ಕುಡಿಯಲು ಮನಸ್ಸು ಮಾಡುತ್ತಿಲ್ಲ. ಸೋಮಾರಿತವೋ, ದಾರಿಯ ದೂರ ತಿಳಿದಿಲ್ಲವೋ, ದಾಹ ತಣಿಸಿಕೊಳ್ಳುವ ಅಗತ್ಯ ಮನಗಾಣಲಿಲ್ಲವೋ…. ಒಟ್ಟಾರೆ ನೀರು ಕುಡಿಯುತ್ತಿಲ್ಲ. ಹಾಗೆಯೇ ನಾವು ಕೂಡಾ…. ~ ಗಾಯತ್ರಿ ಇವತ್ತಿನ ದಿನವನ್ನು ಆದಷ್ಟು ಎಚ್ಚರಿಕೆಯಿಂದ ಕಳೆಯಬೇಕು, ಕೆಲಸಗಳನ್ನು ಫಲಿತಾಂಶದೊಡನೆ ತಾಳೆ ಹಾಕಿ ಮಾಡಬೇಕು ಎಂದೆಲ್ಲ ನೀವು ನಿರ್ಧರಿಸಿ ಆಗಿದೆ. ಇನ್ನು ಮುಂದಿನ ಹಂತ…. ಈಗ ನೀವು ಕೊಳದ ಎದುರು ನಿಂತ ಕುದುರೆಯನ್ನು ನೆನೆಯಿರಿ. ಅದರ ಪಕ್ಕ ಒಬ್ಬ ಕುದುರೆಸವಾರನನ್ನೂ. ನೀವು ಕುದುರೆ. ಕುದುರೆ ಸವಾರ […]

ಶಿಷ್ಯನು ಸಿದ್ಧನಾದಾಗ ಗುರುವು ಕಾಣಿಸಿಕೊಳ್ಳುತ್ತಾನೆ… : ಬೆಳಗಿನ ಹೊಳಹು

ವಾಸ್ತವದಲ್ಲಿ ದತ್ತ ಅವಧೂತನೊಳಗೆ ಗುರುತನವಿದ್ದಿತು. ಅರಿವೇ ಗುರು ಅಲ್ಲವೆ? ದತ್ತ ಅವಧೂತನ ಚಿಂತನೆಗಳನ್ನು ಯಾವೆಲ್ಲ ಜಡ / ಜೀವಗಳು ಪ್ರತಿಫಲಿಸಿದವೋ ಅವೆಲ್ಲವೂ ಅವನಿಗೆ ಗುರುವಾದವು… ~ ಗಾಯತ್ರಿ ನಮ್ಮ ಬದುಕಿನಲ್ಲಿ ಈವರೆಗೆ ಒಬ್ಬ ಸದ್ಗುರುವೂ ದೊರೆತಿಲ್ಲವೆಂದರೆ, ಅದು ನಮ್ಮ ಸಿದ್ಧತೆಯ ಕೊರತೆ ಎಂದು ಅರ್ಥೈಸಿಕೊಳ್ಳಬೇಕೇ ಹೊರತು, ಲೋಕದಲ್ಲಿ ಗುರುವಿನ ಕೊರತೆ ಇದೆ ಎಂದು ಭಾವಿಸಬಾರದು. ಏಕೆಂದರೆ, ನಾವು ಶಿಷ್ಯರಾಗಲು ಸಿದ್ಧರಾದ ನಂತರವಷ್ಟೆ ಗುರುವು ಕಾಣಿಸಿಕೊಳ್ಳೋದು. ದತ್ತ ಅವಧೂತನು ಇಪ್ಪತ್ನಾಲ್ಕು ಗುರುಗಳಿಂದ ಬೋಧೆ ಪಡೆದನೆಂದು ಹೇಳಲಾಗುತ್ತದೆ. ದತ್ತನು ತನಗೆ […]

ಶ್ರೀಕೃಷ್ಣನನ್ನೇ ಬೆರಗುಗೊಳಿಸಿದ ಬರ್ಬರೀಕನ ಕಥೆ ಗೊತ್ತೇ? : ಭಾರತೀಯ ಪುರಾಣ ಕಥೆಗಳು

“ಈ ಆಲದ ಮರದಲ್ಲಿರುವ ಎಲ್ಲ ಎಲೆಗಳನ್ನು ನಿನ್ನ ಮೊದಲನೆಯ ಬಾಣದಿಂದ ಗುರುತಿಸಿ, ನಂತರದ ಬಾಣದಿಂದ ಅವುಗಳನ್ನು ಒಟ್ಟುಗೂಡಿಸಿ ನಾಶ ಮಾಡು ನೋಡೋಣ?” ಎಂದು ಶ್ರೀ ಕೃಷ್ಣ ಸವಾಲು ಹಾಕಿದ. ಆಗ ಬರ್ಬರೀಕ ಏನು ಮಾಡಿದ ಗೊತ್ತೆ? ~ ಗಾಯತ್ರಿ ಬರ್ಬರೀಕ, ಭೀಮಸೇನನ ಮೊಮ್ಮಗ. ಭೀಮಸೇನನ ಪುತ್ರ ಘಟೋತ್ಕಚನಿಗೆ ಅಹಿಲವತಿ ಎಂಬ ಪತ್ನಿಯಲ್ಲಿ ಹುಟ್ಟಿದ ಮಗ. ಇವನು ಅಪ್ರತಿಮ ಬಿಲ್ಗಾರ. ತಪಶ್ಚರ್ಯ ನಡೆಸಿ ಮಹಾದೇವನಿಂದ ವರಗಳನ್ನು ಪಡೆದಿದ್ದ ಕೂಡಾ. ಬಿಲ್ಗಾರಿಕೆಯಲ್ಲಿ ಕರ್ಣಾರ್ಜುನರೂ ಇವನನ್ನು ಸರಿಗಟ್ಟಲಾರರು ಅನ್ನುವಷ್ಟು ಹಬ್ಬಿತ್ತು ಬರ್ಬರೀಕನ […]

ಗೋಡೆಗೆಸೆದ ಚೆಂಡಿನಂತೆ ಕರ್ಮ ಮತ್ತು ಕರ್ಮಫಲ

ಚೆಂಡನ್ನು ಸರಿಯಾಗಿ ಎಸೆಯುವಷ್ಟೇ, ಅದನ್ನು ಮರಳಿ ಹಿಡಿಯುವುದೂ ಮುಖ್ಯ. ಕರ್ಮ ಮಾಡುವಷ್ಟೇ ಅದರ ಫಲವನ್ನು ಸರಿಯಾಗಿ ಅರಗಿಸಿಕೊಳ್ಳುವುದೂ ಮುಖ್ಯ ~ ಗಾಯತ್ರಿ ಪ್ರತಿ ಮುಂಜಾನೆ ಎದ್ದ ಕೂಡಲೇ ಪ್ರತಿಯೊಬ್ಬರೂ ತಮ್ಮ ತಮ್ಮ ರೂಢಿಗೆ ಅನುಸಾರವಾಗಿ ಮೊದಲ ಕ್ರಿಯೆ ನಡೆಸುತ್ತೀರಲ್ಲವೆ? ಕೆಲವರು ಅಂಗೈ ಉಜ್ಜಿ ಕಣ್ಣಿನ ಮೇಲಿರಿಸಿಕೊಳ್ಳುತ್ತಾರೆ. ಆಯಾ ಧರ್ಮಗಳ ಧಾರ್ಮಿಕ ಪ್ರವೃತ್ತಿಯವರು ತಮ್ಮ ತಮ್ಮ ರಿವಾಜುಗಳಂತೆ ಪ್ರಾರ್ಥಿಸುತ್ತಾರೆ. ಹೊಸ ತಲೆಮಾರಿನ ಜನ ಮೊಬೈಲ್ ನೋಡುತ್ತಾರೆ… ಹೀಗೆ. ಈ ಮೊದಲ ಕ್ರಿಯೆ ಮುಗಿದ ಮೇಲೆ, ಮುಂದಿನ ಕೆಲಸಕ್ಕೆ ಅಣಿಯಾಗುವ […]

ಬೃಹದ್ದೇವತೆಯಲ್ಲಿ ಉಲ್ಲೇಖಗೊಂಡಿರುವ 28 ಋಷಿಕೆಯರ ಹೆಸರು ಗೊತ್ತೇ? ~ ಸನಾತನ ಸಾಹಿತ್ಯ ಮೂಲ ಪಾಠಗಳು #49

ಪೂರ್ವದ ಋಷಿಗಳಲ್ಲಿ ನಮಗೆ ಒಂದಷ್ಟು ಪುರುಷ ಋಷಿಗಳ ಹೆಸರು ಗೊತ್ತೇ ಇದೆ. ಆದರೆ ಸ್ತ್ರೀ ಋಷಿಯರ ಹೆಸರು ತಿಳಿದಿದೆಯೆ? ಮಂತ್ರದ್ರಷ್ಟಾರರೂ ಆದ  ಬ್ರಹ್ಮವಾದಿನಿಯರಲ್ಲಿ ಕೆಲವರ  ಹೆಸರನ್ನು, ಅವರು ರಚಿಸಿದ ಮಂತ್ರ / ಸೂಕ್ತಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ  ~ ಗಾಯತ್ರಿ ಶೌನಕ ಮಹರ್ಷಿಗಳು ರಚಿಸಿದ ಬೃಹದ್ದೇವತಾ ಮಹತ್ಕೃತಿಯಲ್ಲಿ ಹಲವು ಬ್ರಹ್ಮವಾದಿನಿಯರ ಉಲ್ಲೇಖವಿದ್ದು, ಅದು ಹೀಗಿದೆ: ಘೋಷಾ ಗೋಧಾ, ವಿಶ್ವವಾರಾ, ಅಪಾಲೋಪನಿಷನ್ನಿಷತ್ | ಬ್ರಹ್ಮಜಾಯಾ ಜುಹೂರ್ನಾಮ ಅಗಸ್ತ್ಯಸ್ಯ ಸ್ವಸಾದಿತಿಃ || ಇಂದ್ರಾಣೀ ಚೇಂದ್ರಮಾತಾ ಚ ಸರಮಾ ರೋಮಶೋರ್ವಶೀ | […]

ಶಬ್ದಬ್ರಹ್ಮ : ಭಾಷೆ ಅರ್ಥ ಪಡೆಯುವುದು ನಮ್ಮ ಗ್ರಹಿಕೆಯಲ್ಲಿ

ಭಾಷೆ ಎಷ್ಟೇ ಉಪಯುಕ್ತವಾದುದಾದರೂ ಅದನ್ನು ಬಲ್ಲವರಿಗಷ್ಟೆ ಪ್ರಯೋಜನ. ಮತ್ಯಾವುದೋ ಪ್ರಾಂತ್ಯದಲ್ಲಿ ನಮ್ಮ ಭಾಷೆಯ ಮೂಲಕ ಸಂವಹನ ನಡೆಸಲು ಸಾಧ್ಯವಿಲ್ಲ. ನಮ್ಮ ಇರುವಿಕೆ, ಅಗತ್ಯ ಹಾಗೂ ಸಂಪನ್ಮೂಲಗಳೇ ಅಲ್ಲಿ ಸಂವಹನದ ಆಕರಗಳಾಗಿ ಒದಗುತ್ತವೆ ~ ಗಾಯತ್ರಿ ನಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ಅರ್ಥ ಇರಬೇಕೆಂದು ಬಯಸುವಂಥವರು. ಆಡುವ ಪ್ರತಿ ಮಾತಿಗೂ ಅರ್ಥ ಇರಬೇಕೆಂದು ಅಪೇಕ್ಷೆ ಪಡುವವರು. ಅರ್ಥವಿಲ್ಲದ ಮಾತು, ನಿರುದ್ದಿಶ್ಯ ಕೆಲಸಗಳು ನಮಗೆ ಸಮಯದ ಅಪವ್ಯಯದಂತೆ ತೋರುವುದು. ಆದರೆ ನಾವು ಕಾರಣಸಹಿತ ಕೆಲಸಗಳನ್ನಾಗಲೀ ಅರ್ಥಸಹಿತ ಮಾತುಗಳನ್ನಾಗಲೀ ಪ್ರಜ್ಞಾ ಪೂರ್ವಕವಾಗಿ […]

ರೈತನ ಕಾಳು, ದೇವರ ಕಾಳು : ನಾನಕರ ಬಾಲ್ಯದ ಒಂದು ಕಥೆ

ಬಾಲಕ ಸಂತೋಷದಿಂದಲೇ ಅದಕ್ಕೆ ಒಪ್ಪಿಕೊಂಡ. ಹೊಲದ ದಿಬ್ಬದ ಮೇಲೆ ಕುಳಿತು ಕಾಯತೊಡಗಿದ. ಹೊಲದಲ್ಲಿ ಸಾಕಷ್ಟು ಗೋಧಿಯ ತೆನೆಗಳು ಬಂದಿದ್ದವು. ಬಾಲಕ ನೋಡುತ್ತಿದ್ದಂತೆಯೇ ಹಕ್ಕಿಗಳು ಗುಂಪು ಗುಂಪಾಗಿ ಅಲ್ಲಿ ಬಂದವು. ತೆನೆಯಿಂದ ಗೋಧಿಯ ಕಾಳುಗಳನ್ನು ತಿನ್ನತೊಡಗಿದವು….  ಒಂದೂರಿನಲ್ಲಿ ಒಬ್ಬ ಬಾಲಕ. ಅವನು ವ್ಯವಹಾರ ಜ್ಞಾನ ಕಲಿಯಲೆಂದು ತಂದೆ ಶಾಲೆಗೆ ಸೇರಿಸಿದರು. ಅವನು ತಪ್ಪಿಸಿಕೊಂಡು ಕಾಡು ಸೇರುತ್ತಿದ್ದ, ಭಗವಂತನನ್ನು ಧ್ಯಾನಿಸುತ್ತಾ ಕುಳಿತುಬಿಡುತ್ತಿದ್ದ. ಒಮ್ಮೆ ಅದೇ ಊರಿನ ವೃದ್ಧನೊಬ್ಬ ತೀರ್ಥಯಾತ್ರೆ ಹೊರಟ. ತನ್ನ ಗದ್ದೆ ನೊಡಿಕೊಳ್ಳಲು ಒಂದು ಜನ ಬೇಕಾಗಿತ್ತು. ಆ ಬಾಲಕ ಬಹಳ ಒಳ್ಳೆಯ, […]

ಅಧ್ಯಾತ್ಮವೇ ಭಾರತದ ಆತ್ಮ : ಸ್ವಾತಂತ್ರ್ಯ ದಿನವಿಶೇಷ

ಭಾರತ ರಾಜಕೀಯವಾಗಿ ಒಂದು ರಾಷ್ಟ್ರದ ಗುರುತು ಪಡೆಯುವ ಮೊದಲೂ ಒಂದು ಎಳೆಯಲ್ಲಿ ಬೆಸೆದುಕೊಂಡಿತ್ತು. ನಿರ್ದಿಷ್ಟ ಗಡಿಯ ಭೂಪಟ ಭಾರತವಾಗುವ ಮೊದಲೂ ಈ ಭೂಭಾಗದ ವಿವಿಧ ಸಮುದಾಯಗಳು ತಮ್ಮ ನೆಲೆಯನ್ನು ಭರತ ಖಂಡ ಎಂದೇ ಕರೆದಿದ್ದರು. ಇದಕ್ಕೆ ಕಾರಣ, ಈ ಮಣ್ಣಿನ ಜೊತೆ ಹೆಣೆದುಕೊಂಡ ಮನುಷ್ಯರ ಭಾವತಂತು. ದೇಶವೆಂದರೆ ಗಡಿ ಗುರುತಲ್ಲ, ದೇಶವೆಂದರೆ ಮನುಷ್ಯರು…. ~ ಚೇತನಾ ತೀರ್ಥಹಳ್ಳಿ ಜಗತ್ತಿನಲ್ಲಿ ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ಕೇಂದ್ರವಿದೆ, ಆತ್ಮವಿದೆ. ರಾಜಕಾರಣ ಯುರೋಪಿನ ಆತ್ಮವಿದ್ದಂತೆ ಭಾರತಕ್ಕೆ ಆಧ್ಯಾತ್ಮಿಕತೆಯೇ ಆತ್ಮ. ಧರ್ಮ […]

ಋಷಿ ಪರಂಪರೆ: ಸತ್ಯದ ಬೆಳಕುಂಡು ಬೆಳಗಿದ ಸಾಧಕರು

ವೇದಮಂತ್ರಗಳಲ್ಲಿ ಮಂತ್ರ ರಚಯಿತರಾಗಿ ಉಲ್ಲೇಖಗೊಂಡಿರುವ ಈ ಋಷಿಗಳೆಂದರೆ ಯಾರು? ಋಷಿ ಶಬ್ದದ ಅರ್ಥವೇನು? ಅರಿಯುವ ಕಿರು ಪ್ರಯತ್ನ ಇಲ್ಲಿದೆ… ~ ಗಾಯತ್ರಿ  ಋಗ್ವೇದದಲ್ಲಿ  ಋಷಿಗಳನ್ನು ಕುರಿತು ವ್ಯಾಖ್ಯಾನಿಸುತ್ತಾ, ‘ಜಗದ ಪರಿವೆಯೇ ಇಲ್ಲದೇ, ಜಗದೀಶನನ್ನು ಧ್ಯಾನಿಸಿ ಅಂತಃ ಪ್ರಕಾಶವನ್ನು ಬೆಳಗಿಸಿದವನು, ಸಾಮಾನ್ಯವಾಗಿ ಮನುಷ್ಯನಿಗೆ ನಿಲುಕದ ಅದಮ್ಯವಾದ ದಿವ್ಯಾನುಭೂತಿಯನ್ನು ಸಾಕ್ಷಾತ್ಕರಿಸಿಕೊಂಡವನು, ಜಗತ್ತಿನ ಸತ್ಯ ವಸ್ತುವನ್ನು ತನ್ನ ಸ್ವಂತ ಅರಿವಿಗೆ ತರಿಸಿಕೊಂಡವನು (ಸ್ವತಃ ಪ್ರಮಾಣ), ಅಂತಹ ಸತ್ಯದ ಸಾಕ್ಷಾತ್ಕಾರವನ್ನು ಭಗವಂತನಿಂದ ನೇರವಾಗಿ ಪಡೆದುಕೊಂಡವನು ಋಷಿ ಎನ್ನಿಸಿಕೊಳ್ಳುತ್ತಾನೆ’ ಎಂದು ವಿವರಿಸಲಾಗಿದೆ. ಯಜುರ್ವೇದದಲ್ಲಿ ‘ಹಿಂದಿನ ಕಾಲದಲ್ಲಿ ಯಾರು ಗುರುಕುಲದಲ್ಲಿ […]