ತನಗೆ ತಾನೆ ಕನ್ನಡಿಯಾಯಿತು ಪರಬ್ರಹ್ಮ! ~ ಯೋಗ ವಾಸಿಷ್ಠ #1

ಆತ್ಯಂತಿಕ ಸತ್ಯ ಅಥವಾ ಪರಮೋನ್ನತ ಅಸ್ತಿತ್ವವಾದ ಬ್ರಹ್ಮವು ತನ್ನನ್ನು ನೋಡಿಕೊಳ್ಳಬೇಕೆಂಬ ಬಯಕೆಯಾದಾಗ ಏನು ಮಾಡಿತು ಗೊತ್ತೆ? “ತಾನೇ ಒಂದು ಶುಭ್ರವಾದ ಕನ್ನಡಿಯಾಗಿ ವಿಸ್ತರಣೆಗೊಂಡಿತು. ಮತ್ತು ಅದರಲ್ಲಿ ತನ್ನ ಪ್ರತಿಬಿಂಬವನ್ನು ಕಂಡಿತು.” ಎನ್ನುತ್ತದೆ ಯೋಗ ವಾಸಿಷ್ಠ. ಈ ಪ್ರತಿಬಿಂಬವೇ ಸೃಷ್ಟಿ ~ ಗಾಯತ್ರಿ ಏಷ ಸ್ವಪ್ರತಿಬಿಂಬಸ್ಯ ಸ್ವಯಮಾಲೋಕನೇಚ್ಛಾಯ | ಅತ್ಯಂತನಿರ್ಮಲಾಕಾರಃ ಸ್ವಯಂ ಮುಕುರತಾಂ ಗತಃ ||ಯೋಗ ವಾಸಿಷ್ಠ || ಅರ್ಥ :  ಈ ಬ್ರಹ್ಮವು ತನ್ನ ಪ್ರತಿ ಬಿಂಬವನ್ನು ತಾನೇ ನೋಡಿಕೊಳ್ಳಬೇಕೆಂಬ ಇಚ್ಛೆಯಿಂದ ತಾನೇ ಅತ್ಯಂತ ನಿರ್ಮಲಾಕಾರವಾದ ಕನ್ನಡಿಯಾಯಿತು. { […]

ಭೂಮಿಯೇ, ನಮ್ಮ ಅಪಚಾರಗಳನ್ನು ಮನ್ನಿಸು! : ವಿಶ್ವ ಭೂಮಿ ದಿನಕ್ಕೆ ಭೂಸೂಕ್ತ

ಭೂಸೂಕ್ತವನ್ನು ಹಾಡಿದ ಋಷಿಯು, “ನಾನು ಮಣ್ಣನ್ನು ಬಗೆಯುವಾಗ ನಿನಗೆ ನೋವಾಗದಿರಲಿ, ನಾನು ತೆಗೆಯುವ ಕುಳಿಯು ಹಾಗೆಯೇ ಮತ್ತೆ ಮುಚ್ಚಿಕೊಳ್ಳಲಿ. ನನ್ನಿಂದಾಗುವ ಅಪಚಾರಗಳನ್ನು ಕ್ಷಮಿಸು” ಎಂದು ಕೇಳಿಕೊಳ್ಳುತ್ತಾನೆ  ~ ಗಾಯತ್ರಿ ಭೂಮಿ, ಸದ್ಯದ ತಿಳಿವಳಿಕೆಯಂತೆ ಜೀವರಾಶಿಗಳ ಏಕೈಕ ಆವಾಸ ಸ್ಥಾನ. ಜೀವಿಯ ಆವಾಸ ಸ್ಥಾನವೆಂದರೆ ಕೇವಲ ಕಾಲೂರುವ ನೆಲೆಯಲ್ಲ. ಜೀವಿ ಅಂದರೆ ಕೇವಲ ಮನುಷ್ಯನೂ ಅಲ್ಲ. ನೆಲ, ಗಾಳಿ, ನೀರು, ಮರ ಗಿಡ, ಪ್ರಾಣಿ, ಪಕ್ಷಿ, ಕ್ರಿಮಿ ಕೀಟಗಳೆಲ್ಲ ಸೇರಿ  ಜೀವರಾಶಿಯ ನಿರ್ಮಾಣವಾಗುತ್ತದೆ. ಈ ಎಲ್ಲವೂ ಪ್ರತ್ಯಕ್ಷ – […]

ಬುಧನ ತಂದೆ ಯಾರು? ಬೃಹಸ್ಪತಿಯೋ, ಚಂದ್ರನೋ!? ~ ಪುರಾಣ ಕಥೆಗಳು

ಬುಧನು ತನ್ನ ತಾಯಿಯ ಬಳಿ ಬಂದು, ಗಂಭೀರವಾಗಿ “ಅಮ್ಮಾ, ಮಗನಿಗೆ ತನ್ನ ತಂದೆ ಯಾರೆಂದು ತಿಳಿಯುವ ಹಕ್ಕು ಇರುತ್ತದೆ, ತಾಯಿಯಾಗಿ ನಿನ್ನ ಕರ್ತವ್ಯವನ್ನು ನಡೆಸು. ನನ್ನ ತಂದೆ ಯಾರೆಂದು ತಿಳಿಸು” ಅನ್ನುತ್ತಾನೆ. ಆಗ ತಾರೆ ಯಾರ ಹೆಸರು ಹೇಳುತ್ತಾಳೆ ಗೊತ್ತೇ? ~ ಗಾಯತ್ರಿ  ತಾರಾ, ದೇವಗುರು ಬೃಹಸ್ಪತಿಯ ಹೆಂಡತಿ. ಬೃಹಸ್ಪತಿಯಲ್ಲಿ ಶಿಷ್ಯನಾಗಿದ್ದ ಚಂದ್ರನು ಗುರುಪತ್ನಿಯ ಮೇಲೆಯೇ ಮೋಹಗೊಳ್ಳುತ್ತಾನೆ. ತಾರೆಯೂ ಸುರಸುಂದರನಾದ ಚಂದ್ರನ ಮೇಲೆ ಮೋಹಿತಳಾಗುತ್ತಾಳೆ. ಅವರಿಬ್ಬರೂ ಆಶ್ರಮ ತೊರೆದು ಪ್ರತ್ಯೇಕವಾಗಿ ಸಂಸಾರ ಹೂಡುತ್ತಾರೆ. ಈ ಬೆಳವಣಿಗೆಗಳಿಂದ ಕಂಗೆಟ್ಟ […]

‘ತ್ರಿಶಂಕು’ ಯಾರು? ‘ತ್ರಿಶಂಕು ಸ್ವರ್ಗ’ ಎಂದರೇನು?

ಆಚೆಗೂ ಸಲ್ಲದೆ, ಈಚೆಗೂ ಸಲ್ಲದೆ ನಡುವೆ ಸಿಲುಕಿಕೊಂಡವರ ಪಾಡು ನೋಡಿ ‘ತ್ರಿಶಂಕು ಸ್ವರ್ಗ’ ‘ತ್ರಿಶಂಕುವಿನ ಸ್ಥಿತಿ’ ಎಂದು ಹೇಳುವುದು ರೂಢಿಯಲ್ಲಿದೆ. ಈ ನುಡಿಗಟ್ಟು ಚಾಲ್ತಿಗೆ ಬಂದುದರ ಹಿಂದಿನ ಸ್ವಾರಸ್ಯಕರ ಕಥೆ ಇಲ್ಲಿದೆ ~ ಗಾಯತ್ರಿ ಇಕ್ಷ್ವಾಕು ವಂಶದಲ್ಲಿ ತ್ರಿಶಂಕು ಎಂಬ ರಾಜನಿದ್ದ. ಅವನಿಗೆ ಶರೀರದ ಮೇಲಿನ ವ್ಯಾಮೋಹದಿಂದ ಸಶರೀರವಾಗಿ ಸ್ವರ್ಗ ಪ್ರವೇಶ ಮಾಡಬೇಕೆಂಬ ಬಯಕೆಯಾಯಿತು. ತಕ್ಷಣವೇ ತನ್ನ ಕುಲಗುರುಗಳಾದ ವಸಿಷ್ಠರಿಗೆ ತನ್ನ ಆಸೆಯನ್ನು ತಿಳಿಸಿದ. ಆಗ ವಸಿಷ್ಠರು, “ನೀನು ಎಷ್ಟೇ ಶ್ರೇಷ್ಠ ರಾಜನಾದರೂ, ಎಷ್ಟೇ ಶ್ರೇಷ್ಠ ಯಾಗಗಳನ್ನುಮಾಡಿದ್ದರೂ, ಸಶರೀರವಾಗಿ ಸ್ವರ್ಗಕ್ಕೆ ಹೋಗುವುದು ಧರ್ಮಶಾಸ್ತ್ರದಲ್ಲಿ ಹೇಳಿಲ್ಲ.ಯಾರಾದರೂ ಸರಿ, ಶರೀರವನ್ನು ತ್ಯಜಿಸುವುದು ಅನಿವಾರ್ಯ, ಅದರ ನಂತರವೇಸ್ವರ್ಗ ಲೋಕದ ಪ್ರವೇಶ ಸಿಗುತ್ತದೆ. ಹಾಗಾಗಿ ಸಶರೀರವಾಗಿ ಸ್ವರ್ಗಕ್ಕೆ ಹೋಗುವುದು ಅಸಾಧ್ಯ” ಎಂದು ಅವನ ಕೋರಿಕೆಯನ್ನು ನಿರಾಕರಿಸಿದರು. ಆಗ ತ್ರಿಶಂಕು ವಸಿಷ್ಠರ ಮಕ್ಕಳ ಬಳಿ ಹೋಗಿ ತನ್ನ ಮನದ ಇಂಗಿತವನ್ನು ವ್ಯಕ್ತಪಡಿಸಿದ. ಅವರು, “ನಮ್ಮ ತಂದೆಯವರು ಸಾಧ್ಯವಿಲ್ಲ ಎಂದ ಮೇಲೆ ಅದು ಸಾಧ್ಯವಿಲ್ಲ, ಯಾರೂ ಸಶರೀರವಾಗಿ ಸ್ವರ್ಗ ಸೇರಲು ಆಗುವುದಿಲ್ಲ” ಎಂದು ಹೇಳಿಬಿಟ್ಟರು. ಅಸಮಾಧಾನಗೊಂಡ ತ್ರಿಶಂಕು ತಾನು ಬೇರೆ ಗುರುಗಳನ್ನು ಹುಡುಕಿ ತನ್ನ ಕೋರಿಕೆಯನ್ನು ಈಡೇರಿಸಿಕೊಳ್ಳುತ್ತೇನೆ ಎಂದು ಹೇಳಿ ಹೋರಟುಹೋದ. ಆಗ ಅವರು, “ನೀನು ನಮ್ಮ ತಂದೆಯಾದ, ನಿನ್ನ ಗುರುಗಳೂ ಆದ ವಸಿಷ್ಠರ ಮಾತನ್ನು ಧಿಕ್ಕರಿಸಿ ಮತ್ತೊಬ್ಬ ಗುರುವನ್ನು ಹುಡುಕಲು ಹೊರಟಿರುವೆ. ನಿನ್ನಿಂದ ಗುರುವಾಕ್ಯ ಉಲ್ಲಂಘನೆ ಮತ್ತು ಅವಮಾನ ನಡೆದಿದೆ. ಅದಕ್ಕೆ […]

ಆಧ್ಯಾತ್ಮಿಕ ಅರಿವು ಅಥವಾ ಸ್ಪಿರಿಚುವಲ್ ಕೋಶೆಂಟ್‍ (SQ) ಏಕೆ ಮುಖ್ಯ?

ಹೆಚ್ಚು SQ ಹೊಂದಿರುವವರು ಸುಖ, ಶಾಂತ ಜೀವನ ನಡೆಸುತ್ತಾರೆ. ಇವರು ಧರ್ಮಭೀರುಗಳಾಗಿರಲೇಬೇಕೆಂದಿಲ್ಲ. ಇಂಥವರು ನಾಸ್ತಿಕರಾಗಿರಲೂಬಹುದು. ಆದರೆ ಹೆಚ್ಚು SQ ಹೊಂದಿದವರು ಅಧರ್ಮಿಗಳಾಗಿರುವುದಿಲ್ಲ. ಇಂದು ನಮ್ಮ ಸಮಾಜಕ್ಕೆ ಅಧರ್ಮಿಗಳಲ್ಲದವರ ಅಗತ್ಯ ಹೆಚ್ಚಿದೆ ~ ಗಾಯತ್ರಿ ಸ್ಪಿರಿಚುವಲ್ ಕೋಶೆಂಟ್ ಅಂದರೆ ಆಧ್ಯಾತ್ಮಿಕ ಅರಿವು. ಯಾವ ಅರಿವು ವ್ಯಕ್ತಿಯನ್ನು ಪ್ರಜ್ಞಾಪೂರ್ವಕವಾಗಿ ಮನುಷ್ಯರನ್ನಾಗಿರಿಸುತ್ತದೆಯೋ, ಯಾವ ಅರಿವು ಸಜ್ಜನಿಕೆಯನ್ನು ನೀಡುತ್ತದೆಯೋ, ಯಾವ ಅರಿವು ಸಹಜೀವಿಗಳೊಡನೆ ಬೆರೆತು ಬಾಳುವ ಪ್ರೇರಣೆ ನೀಡುತ್ತದೆಯೋ ಆ ಅರಿವು ಯಾವ ಮಟ್ಟದಲ್ಲಿದೆ, ಯಾರಲ್ಲಿ ಎಷ್ಟಿದೆ ಎಂದು ಅಳೆಯುವ ಮಾಪನವೇ ಸ್ಪಿರಿಚುವಲ್ […]

ಸವತಿಯನ್ನು ಸುಟ್ಟಳು ಮಾಗಂಡಿಯಾ; ಸಕದಾಗಾಮಿಯಾದಳು ಸಾಮಾವತಿ

ಬುದ್ಧ ಪ್ರೇಮದಿಂದ ಸಾಮಾವತಿ ಮತ್ತವರ ಸಖಿಯರು ಮೈತ್ರೀಭಾವ ಹೊಂದಿದವರಾಗಿ ಸದ್ಗತಿ ಪಡೆದರು. ಬುದ್ಧ ದ್ವೇಷದಿಂದ ಮಾಗಂಡಿಯಾ ಮತ್ತವಳ ಸೇವಕರು ಮತ್ಸರ ತುಂಬಿಕೊಂಡು ದುರ್ಗತಿ ಪಡೆದರು. ಮುಂದೆ ಈ ಪ್ರಕರಣ ನಾಡಿನ ಜನರಿಗೊಂದು ಪಾಠವಾಯಿತು ~ ಗಾಯತ್ರಿ  ಮಹಾಸತಿ ಸಾಮಾವತಿಯ ಕಥೆ ಬಹಳ ಸಂಕೀರ್ಣ. ವದ್ದವತಿ ಸಾಮ್ರಾಜ್ಯದ ಅರಸನ ಮಗಳೀಕೆ. ತನ್ನ ರಾಜ್ಯದಲ್ಲಿ ಕ್ಷಾಮ ಡಾಮರಗಳುಂಟಾದಾಗ ಕೌಶಾಂಬಿ ರಾಜ್ಯದ ಸಿರಿವಂತ ಘೋಷಿತನಿಗೆ ದತ್ತು ನೀಡಲ್ಪಟ್ಟಳು. ಅಪೂರ್ವ ಲಾವಣ್ಯವತಿಯಾದ ಈಕೆ ವಿನಯವಂತಳೂ ಗುಣವಂತಳೂ ಆಗಿದ್ದಳು. ಅವಂತಿಯ ಅರಸ ಉದಯನ, ಈಕೆಯನ್ನು ನೋಡುತ್ತಲೇ […]

ಅಡುಗೆ ಎಂಬ ವಿಜ್ಞಾನ, ಅಡುಗೆ ಎಂಬ ಶಾಸ್ತ್ರ…

ಅಡುಗೆ ಮಾಡುವ ಪ್ರಕ್ರಿಯೆ ವಿಜ್ಞಾನವೂ ಹೌದು ಅದೊಂದು ಕಲೆಯೂ ಹೌದು. ಆರೋಗ್ಯ ರಕ್ಷಣೆಗೆ ದಿವ್ಯೌಷಧವೂ ಹೌದು. ಹಾಗೆಂದೇ ನಮ್ಮ ಪೂರ್ವಜರು ಈ ಬಹುಆಯಾಮಗಳ ಪ್ರಕ್ರಿಯೆಗೊಂದು ಶಾಸ್ತ್ರವನ್ನೇ ರೂಪಿಸಿದ್ದರು ~ ಗಾಯತ್ರಿ ನವ ಕವೀಶ್ವರ ವಿಕಸಿತಾನನ ಘಟಂಗಳೊಳು ನವರಸವನಿಟ್ಟು ಪರಿಣತೆ ಪ್ರೇಕ್ಷೆ ಮೊದಲಾದ ವಿವಿಧ ಪರಿಕರಮನೊಡಗಲೆಸಿ ಬಳಿಕವರ ನಾಲಗೆಯೆಂಬ ದರ್ವಿವಿಡಿದು ತವೆ ಪಾಕಮಂ ಮಾಡಿ ರಸಿಕಜನಸಂತತಿಯ ಕಿವಿಗೆ ತೀವುವ ಭಾರತೀದೇವಿಯಂ ನೆನೆದು ಸವಿವಡೆದ ಷಡ್ರಸವಿಪಾಕಭೇದಮನೆನ್ನ ಬಲ್ಲಂದದಿಂ ಪೇಳ್ವೆನು – ಇದು ಸೂಪಶಾಸ್ತ್ರದ ಆರಂಭದಲ್ಲಿ ಮೂರನೆಯ ಮಂಗರಸನು ದೇವಿ ಸರಸ್ವತಿಯನ್ನು ಸ್ತುತಿಸಿರುವ […]

ನಂಬಿ ಕೆಟ್ಟವರಿಲ್ಲ… ಮೂಢನಂಬಿಕೆಯಲ್ಲಿ ಉದ್ಧಾರವಾದವರಿಲ್ಲ!

ಸ್ವಾಮಿ ವಿವೇಕಾನಂದರಂತೂ ತಮ್ಮ ಜನರು ಮೌಢ್ಯದಿಂದ ರೂಢಿಸಿಕೊಂಡ ನಂಬಿಕೆಗಳನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ದೇಶ ಹಿಂದುಳಿದಿರುವುದಕ್ಕೆ ಜನರಲ್ಲಿನ ಮೂಢನಂಬಿಕೆ ಮತ್ತು ಕಂದಾಚಾರಗಳೇ ಕಾರಣ ಎನ್ನುತಿದ್ದ ವಿವೇಕಾನಂದರು, ತಮ್ಮ ಬಹುತೇಕ ಉಪನ್ಯಾಸಗಳಲ್ಲಿ ಈ ಕುರಿತು ಎಚ್ಚರಿಸಿದ್ದಾರೆ ~ ಗಾಯತ್ರಿ ನಂಬಿಕೆ ಇದ್ದಲ್ಲಿ ಶ್ರದ್ಧೆ ಮೂಡುತ್ತದೆ. ತಾನು ಉತ್ತಮ ಕೆಲಸ ಮಾಡುತ್ತಿದ್ದೇನೆ ಎನ್ನುವ ನಂಬಿಕೆ, ಒಂದು ಕೆಲಸವನ್ನು ಮಾಡುವುದರಿಂದ ತನಗೆ ಒಳಿತಾಗುತ್ತದೆ ಎನ್ನುವ ನಂಬಿಕೆಯೇ ಶ್ರದ್ಧೆಯ ಹುಟ್ಟು – ಬೆಳವಣಿಗೆಗೆ ಇಂಬಾಗುತ್ತದೆ. ರಾಮಾಯಣದಲ್ಲಿ ಹನುಮಂತ ಸಾಗರೋಲ್ಲಂಘನ ಮಾಡಿದ ಪ್ರಸಂಗ ಇದಕ್ಕೆ ಅತ್ಯುತ್ತಮ […]

ನಾಮ ಮತ್ತು ಪ್ರೇಮಗಳನ್ನು ಸಾರಿದ ಮಹಾಸಂತ ರೈದಾಸ

ರೈದಾಸರು ಪಾದರಕ್ಷೆ ಹೊಲಿದು ಜೀವನ ನಡೆಸುತ್ತಲೇ ಸಂತ ರಮಾನಂದರಲ್ಲಿ ಆಧ್ಯಾತ್ಮಿಕ ದೀಕ್ಷೆ ಪಡೆದರು. ಸತತ ಸಾಧನೆಯಿಂದ ಬೋಧೆಯನ್ನೂ ಪಡೆದರು. ಅವರ ನುಡಿ-ನಡೆಗಳಲ್ಲಿ ವ್ಯತ್ಯಾಸವಿರಲಿಲ್ಲ. ಅವರು ಭಿನ್ನ ಭಿನ್ನ ಮತಗಳ ತತ್ವ ಮತ್ತು ಸಂಪ್ರದಾಯಗಳನ್ನು ಒಟ್ಟುಗೂಡಿಸಿ ಧರ್ಮಪ್ರಚಾರ ಮಾಡಿದರು. ಅವರದ್ದು ವಿಶ್ವಧರ್ಮ…. ~ ಗಾಯತ್ರಿ ಪ್ರಭೂ, ಗಂಧ ನೀನು, ನೀರು ನಾನು, ಅಂಗ ಅಂಗದಲಿಹುದು ಪರಿಮಳ ನೀನು ದೀಪದ ಮೊಗ್ಗು, ನಾನು ತೀರುವ ಬತ್ತಿ, ಕತ್ತಲಿಗಿಲ್ಲಿ ಕಳವಳ ನೀನು ಮೋಡದ ತುಣುಕು, ನನಗೆ ನವಿಲಿನ ಹುರುಪು, ಮಿಲನ  ಚಕೋರ […]

ನಿಮ್ಮ SQ (spiritual quotient) ಯಾವ ಮಟ್ಟದಲ್ಲಿದೆ?

ಸ್ಪಿರಿಚುವಲ್ ಕೋಶೆಂಟ್ ಅಥವಾ ಎಸ್‍ಕ್ಯೂ, ಐಕ್ಯೂ ಮತ್ತು ಇಕ್ಯೂಗಳಿಗಿಂತ ಬಹಳ ಮೇಲ್ಮಟ್ಟದ್ದು. `ಒಂದು ಕಂಪ್ಯೂಟರಿಗೆ ಐಕ್ಯೂ ಇರುತ್ತದೆ. ಒಂದು ಪ್ರಾಣಿ ಇಕ್ಯೂ ಹೊಂದಿರಬಹುದು. ಹಾಗಿದ್ದ ಮೇಲೆ ಈ ಎರಡಕಿಂತ ಮೇಲ್‍ಮಟ್ಟದವನಾದ ಮನುಷ್ಯನಲ್ಲಿ ಎಸ್‍ಕ್ಯೂ ಇದ್ದಿರಲೇಬೇಕು. ಅದಿಲ್ಲವಾದರೆ ಆತ ಇನ್ನೂ ಆಂತರಿಕವಾಗಿ ಮನುಷ್ಯನಾಗಿ ವಿಕಾಸಗೊಂಡಿಲ್ಲ ಎಂದೇ ಅರ್ಥ’  ಅನ್ನುತ್ತಾನೆ ಮಾರ್ಷಲ್. ಆತನ ಈ ವಿವರಣೆ ನಾವು ಎಸ್‍ಕ್ಯೂ ಬೆಳೆಸಿಕೊಳ್ಳಬೇಕಾದ ಅಗತ್ಯತೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ  ~  ಗಾಯತ್ರಿ ಮನುಷ್ಯನನ್ನು ವೈಚಾರಿಕವಾಗಿ ಚಿಂತಿಸಬಲ್ಲ ಪ್ರಾಣಿ ಎಂದು ಕರೆದ ಅರಿಸ್ಟಾಟಲ್. ಆತನ ಈ […]