ಹೇಗಿದೆ ದುಃಖ, ರುಚಿಯಾಗಿದೆಯಾ? : ಒಂದು ರೂಮಿ ಪದ್ಯ

ದುಃಖವನ್ನು ಬಟ್ಟಲಲ್ಲಿ ಸುರಿದುಕೊಂಡು ಚಪ್ಪರಿಸುತ್ತ ಕುಳಿತಿದ್ದ ಸಂಕಟವನ್ನು ಅಂತಃಕರಣದಿಂದ ಮಾತಿಗೆಳೆದೆ ; ” ಹೇಗಿದೆ ದುಃಖ? ರುಚಿಯಾಗಿದೆಯಾ?” “ಓಹ್ ! ಸಿಕ್ಕಿಹಾಕಿಕೊಂಡೆ ” ಕಿರುಚಿತು ಸಂಕಟ. “ನನ್ನ ವ್ಯಾಪಾರಕ್ಕೆ ಕಲ್ಲು ಹಾಕಿದೆ ನೀನು, ಮಾರಬೇಕೆಂದುಕೊಂಡಿದ್ದೆ ನಿನ್ನ ದಯೆಯೆಂದು ಗೂತ್ತಾದ ಮೇಲೆ ಹೇಗೆ ತಾನೆ ಮಾರಲಿ? ” ~ ರೂಮಿ | ಕನ್ನಡಕ್ಕೆ : ಚಿದಂಬರ ನರೇಂದ್ರ Advertisements

“ಅಸ್ತಿತ್ವದಲ್ಲಿ ವೈರುಧ್ಯಗಳಿಲ್ಲ…” : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 4.2

ನೀವು ವೈರುಧ್ಯವನ್ನು ಬಳಸಿದಾಗ ಮಾತ್ರ ಅಸ್ತಿತ್ವವನ್ನು ಗುರುತಿಸಬಲ್ಲಿರಾದರೆ ಅದು ಅಸ್ತಿತ್ವವನ್ನು ಮಿಥ್ಯೀಕರಿಸಿದಂತೆ. ಏಕೆಂದರೆ, ಅಸ್ತಿತ್ವದಲ್ಲಿ ವೈರುಧ್ಯಗಳಿಲ್ಲ… ! | ಓಶೋ ರಜನೀಶ್ ; ಕನ್ನಡಕ್ಕೆ : ಚಿದಂಬರ ನರೇಂದ್ರ ಅಧ್ಯಾಯ 4 : Return to the root (ಭಾಗ 2) ಮನಸ್ಸಿನ ಸ್ವಭಾವವೇ ವೈರುಧ್ಯಗಳನ್ನು ಸಮೀಕರಿಸುವುದು. ಈ ವೈರುಧ್ಯಗಳ ಸಹಾಯವಿಲ್ಲದೇ ಹೋದರೆ ಮನಸ್ಸಿಗೆ ಏನೂ ಅರ್ಥವಾಗುವುದಿಲ್ಲ. ‘ಬೆಳಕು’ ಎಂದರೇನು ಎಂಬ ಪ್ರಶ್ನೆಗೆ ಮನಸ್ಸು ಏನು ಉತ್ತರ ಹೇಳಬಲ್ಲದು ? ಕೂಡಲೇ ಕತ್ತಲೆಯನ್ನು ಸಹಾಯಕ್ಕಾಗಿ ಕರೆಯಲಾಗುತ್ತದೆ, ಯಾವುದು ಕತ್ತಲೆಯಲ್ಲವೋ ಅದನ್ನು ಬೆಳಕು ಎಂದು […]

ಗೆಳೆತನದ ಕುರಿತು….. : ಖಲೀಲ್ ಗಿಬ್ರಾನನ ‘ಪ್ರವಾದಿ’

ಚೇತನವನ್ನು ಆಳವಾಗಿಸುವುದರ ಹೊರತಾಗಿ ಬೇರೆ ಯಾವ ಉದ್ದೇಶವೂ ಇರದಿರಲಿ ಗೆಳೆತನಕ್ಕೆ ~ ಖಲೀಲ್ ಗಿಬ್ರಾನ್ | ಕನ್ನಡಕ್ಕೆ : ಚಿದಂಬರ ನರೇಂದ್ರ ನಿಮ್ಮ ಗೆಳೆಯ, ನಿಮ್ಮ ಸಂತೃಪ್ತಿಯ ಕಾರಣ. ನೀವು ಪ್ರೀತಿಯಿಂದ ಬಿತ್ತುವ, ಕೃತಜ್ಞತೆಯಿಂದ ಕಟಾವು ಮಾಡುವ ನಿಮ್ಮದೇ ಸ್ವಂತ ಹೊಲ ಅವನು. ಹಸಿವಾದಾಗ ಅವನ ಬಳಿಯೇ ಧಾವಿಸುತ್ತೀರಿ ಸಮಾಧಾನಕ್ಕಾಗಿ ಅವನನ್ನೇ ಹುಡುಕುತ್ತೀರಿ ಆದ್ದರಿಂದ ಅವನೇ ನಿಮ್ಮ ಅಡುಗೆ ಒಲೆ, ಅವನೇ ನಿಮ್ಮ ಬೆಂಕಿಗೂಡು. ನಿಮ್ಮ ಗೆಳೆಯ, ನಿಮ್ಮೆದುರು ಮನ ಬಿಚ್ಚಿ ಮಾತಾಡುವಾಗ ನೀವು ಉಹೂಂ ಎನ್ನಲೂ ಹೆದರುವುದಿಲ್ಲ […]

ಖುಷಿ, ಖುಷಿಯಲ್ಲ… ಮುಖವಾಡ ಕಳಚಿದ ನಿಮ್ಮ ದುಃಖ! ~ ಖಲೀಲ್ ಗಿಬ್ರಾನ್

ದುಃಖ ನಿಮ್ಮನ್ನು ಎಷ್ಟು ಆಳವಾಗಿ ಕೊರೆಯುತ್ತದೋ ಅಷ್ಟೇ ಅಗಾಧವಾಗಿ ಆನಂದ ನಿಮ್ಮನ್ನು ತುಂಬಿಕೊಳ್ಳುವುದು ~ ಪ್ರವಾದಿ, ಖಲೀಲ್ ಗಿಬ್ರಾನ್ | ಕನ್ನಡಕ್ಕೆ : ಚಿದಂಬರ ನರೇಂದ್ರ ನಂತರ ಹೆಣ್ಣು ಮಗಳೊಬ್ಬಳು ಖುಶಿಯ ಬಗ್ಗೆ, ದುಃಖದ ಬಗ್ಗೆ ತನ್ನ ಅನುಮಾನಗಳನ್ನು ಹಂಚಿಕೊಂಡಳು. ಖುಶಿ ಮತ್ತು ದುಃಖದ ಕುರಿತು ಅವನು ಮಾತನಾಡತೊಡಗಿದ. ಖುಶಿ, ಖುಶಿಯಲ್ಲ. ಮುಖವಾಡ ಕಳಚಿದ ನಿಮ್ಮ ದುಃಖ. ಮತ್ತು ತನ್ನಿಂದ ತಾನೇ ತುಂಬಿಕೊಳ್ಳುವ ಬಾವಿ. ನಿಮ್ಮ ನಗು ಚಿಮ್ಮುವ ಈ ಬಾವಿ ಬಹುತೇಕ ತುಂಬಿಕೊಂಡಿರುವುದು ಕಣ್ಣೀರಿನಿಂದಲೇ. ಹೀಗಲ್ಲದೆ ಬೇರೆ ಹೇಗೆ ಸಾಧ್ಯ […]

“ಮೂಲಕ್ಕೆ ಮರಳುವುದೆಂದರೆ….” : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 4.1

ಮನಸ್ಸು ಇರುವುದೇ ಭಾಗಗಳಾಗಿ. ಅವು ಒಂದಾಗುವುದು ಸಾಧ್ಯವೇ ಇಲ್ಲ. ಮನಸ್ಸಿನ ಸ್ವಭಾವ ತಿಳಿದುಕೊಳ್ಳಿ, ಆಗ ಸೊಸಾನ್ ನ ಸೂತ್ರಗಳು ಸ್ಪಷ್ಟವಾಗಿ ಅರ್ಥವಾಗುತ್ತವೆ  | ಓಶೋ ರಜನೀಶ್ ; ಕನ್ನಡಕ್ಕೆ : ಚಿದಂಬರ ನರೇಂದ್ರ Return to the root (ಭಾಗ 4.1) ಮೂಲಕ್ಕೆ ಮರಳುವುದೆಂದರೆ, ಅರ್ಥಕ್ಕೆ ಲಗ್ಗೆ ಹಾಕಿದಂತೆ ಆದರೆ ರೂಪವನ್ನು ಬಯಸುವುದೆಂದರೆ, ಮೂಲದ ವಿಳಾಸ ಮರೆತಂತೆ  | ಸೊಸಾನ್ **** ಪ್ರಜ್ಞೆಯ ಸ್ವಭಾವ ಕನ್ನಡಿಯಂತೆ ಆಯ್ಕೆಗಳಿಲ್ಲ, ಆದ್ಯತೆಗಳಿಲ್ಲ, ಆದರ್ಶಗಳಿಲ್ಲ. ಒಳ್ಳೆಯದು-ಕೆಟ್ಟದ್ದು, ಸುಂದರ-ಕುರೂಪ ಎನ್ನುವ ಭೇದಭಾವಗಳಿಲ್ಲ. ಸುಮ್ಮನೇ ಪ್ರತಿಫಲಿಸುತ್ತದೆ. ಪ್ರಜ್ಞೆಯ ಮೂಲ ಸ್ವಭಾವ […]

ವಿವೇಕ ಮತ್ತು ತಪಸ್ಸು : ಖಲೀಲ್ ಗಿಬ್ರಾನ್

ಮೂಲ : ಖಲೀಲ್ ಗಿಬ್ರಾನ್ | ಕನ್ನಡಕ್ಕೆ : ಚಿದಂಬರ ನರೇಂದ್ರ ನಿಮ್ಮ ಆತ್ಮವೊಂದು ರಣರಂಗ. ಅಲ್ಲಿ ಬಹುತೇಕ  ನಿಮ್ಮ ವಿವೇಕ ಮತ್ತು ನ್ಯಾಯ, ನಿಮ್ಮ ತಪಸ್ಸು ಮತ್ತು ಬಯಕೆಗಳ ಮೇಲೆ ಯುದ್ಧ ಸಾರಿರುತ್ತವೆ. ಈ ಅಂಶಗಳ ನಡುವಿನ ಅಪಸ್ವರ ಮತ್ತು ವೈರತ್ವಗಳನ್ನು ತೊಡೆದುಹಾಕಿ ಏಕತೆ ಮತ್ತು ಸೌಹಾರ್ದ ಮೂಡಿಸಲು ನಾನು ನಿಮ್ಮ ಆತ್ಮದೊಳಗೆ ಶಾಂತಿ ದೂತನ ಕೆಲಸ ಮಾಡಬೇಕು. ಈ ಅಂಶಗಳನ್ನು, ನೀವೇ ಪ್ರೀತಿಸದಿದ್ದರೆ ಸೌಹಾರ್ದ ಮೂಡಿಸುವ ಕೆಲಸದಲ್ಲಿ ನೀವೇ ಕೈಜೋಡಿಸದಿದ್ದರೆ ನಾನು ತಾನೇ ಏನು […]

ಹಫೀಜ್ ಮಾಡಿದ ಒಂದೇ ಒಂದು ಪಾಪ….! : ಸೂಫಿ ಪದ್ಯ

ಮೂಲ : ಹಫೀಜ್, ಸೂಫಿ ಸಂತಕವಿ | ಕನ್ನಡಕ್ಕೆ : ಚಿದಂಬರ ನರೇಂದ್ರ ಯಾರೋ ಬಂದು ನನ್ನ ಹತ್ತಿರ ಕುಳಿತರು. ಭಗವಂತನ ಬಗ್ಗೆ  ಅದು ಇದು ಮಾತನಾಡಿ ಉದ್ವೇಗಗೊಂಡರು. ಅವರ ಮನಸ್ಸಿನ ತಳಮಳಕ್ಕೆ ನಾನು ಸಮಾಧಾನ ಹೇಳದೇ ಹೋದರೆ, ಈ ಜಗತ್ತಿನ ಬಗ್ಗೆ  ಮತ್ತು  ಸ್ವತಃ ಅವರ ಬಗ್ಗೆಯೇ  ಭರವಸೆ ಮೂಡಿಸದೇ ಹೋದರೆ ? ಹಫಿಜ್, ಬೇಗ ಓಡು ಮಸೀದಿಗೆ ಹೋಗು ದೇವರ ಮುಂದೆ ಪ್ರಾರ್ಥನೆ ಮಾಡು ನೀನು ಇದೀಗ ನನಗೆ ಗೊತ್ತಿರುವ ಒಂದೇ ಒಂದು ಪಾಪ […]

ದಾಂಪತ್ಯವೊಂದು ದಿವ್ಯ ಅವಕಾಶ : ಖಲೀಲ್ ಗಿಬ್ರಾನ್ | ‘ದ ಪ್ರಾಫೆಟ್’

ಮೂಲ : ದ ಪ್ರಾಫೆಟ್, ಖಲೀಲ್ ಗಿಬ್ರಾನ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಅಲ್’ಮಿತ್ರ ಮತ್ತೆ ಮಾತಾಡಿದಳು; ದಾಂಪತ್ಯದ ಬಗ್ಗೆ ವಿವರಣೆ ಕೇಳಿದಳು. ಅವ ಸ್ಪಷ್ಟ ದನಿಯಲ್ಲಿ ಮಾತನಾಡತೊಡಗಿದ ; ಕೂಡಿ ಹುಟ್ಟಿದವರು ನೀವು, ಕೂಡಿಯೇ ಬಾಳುವಿರಿ ಕೊನೆಯ ತನಕ. ಬಿಳೀ ರೆಕ್ಕೆಯ ಸಾವಿನ ಹಕ್ಕಿ ನಿಮ್ಮ ಕಾಲವ ಕುಕ್ಕಿ ಚೂರು ಚೂರು ಮಾಡುವಾಗಲೂ ಕೈ ಹಿಡಿದುಕೊಂಡೇ ಇರುವಿರಿ ಕೊನೆಯ ತನಕ. ಹೌದು, ಭಗವಂತ ನೆನಪಿಸಿಕೊಳ್ಳಲೂ ನಿರಾಕರಿಸುವ ನೆನಪುಗಳಲ್ಲಿ ನೀವು ಹತ್ತಿರ, ಒಬ್ಬರಿಗೊಬ್ಬರು. ಆದರೆ ಈ […]

ಗುರುವಿನ ಕರುಣೆ ಅದೆಷ್ಟೆಂದರೆ….. ಒಂದು ‘ಹಫೀಜ್’ ಪದ್ಯ

ಸೂಫಿ ಕವಿ ಹಫೀಜ್ ಪದ್ಯ | ಕನ್ನಡಕ್ಕೆ : ಚಿದಂಬರ ನರೇಂದ್ರ ಪ್ರೇಮ ಪಾಠಗಳ ಆರಂಭದ ದಿನಗಳಲ್ಲಿ ನಾನಿದ್ದಾಗ ನನ್ನ ಗುರುಗಳು, ಒಂದೇ ಮಹಡಿಯ ಮನೆಯಲ್ಲಿ ವಾಸವಾಗಿದ್ದರು. ಅದು ನನ್ನ ಅದೃಷ್ಟ. ಗುರುಗಳು, ಸೃಷ್ಟಿಯ ಸೌಂದರ್ಯವನ್ನೂ, ಭಗವಂತನ ಅಪರಿಮಿತ, ಅದ್ಭುತ ಸಾಧ್ಯತೆಗಳನ್ನು ಬಣ್ಣಿಸತೊಡಗುತ್ತಿದ್ದಂತೆಯೇ ನಾನು ಹುಚ್ಚೆದ್ದು, ಜೋರಾಗಿ ಹಾಡುತ್ತ  ಕುಣಿಯಲು ಶುರು ಮಾಡುತ್ತಿದ್ದೆ. ಈ ಆನಂದ, ಸಹಿಸಲಸಾಧ್ಯವಾಗಿ ಕಿಟಕಿ ಹಾರಿಕೊಳ್ಳುತ್ತಿದ್ದೆ, ಅದೂ ತಲೆ ಕೆಳಗಾಗಿ. ನನ್ನಂಥ  ಹುಂಬರ ಸಲುವಾಗಿಯೇ ಗುರುಗಳು ಒಂದೇ ಮಹಡಿಯ ಮನೆಯಲ್ಲಿ ವಾಸವಾಗಿದ್ದುದು. ಅವರ […]

“ಸತ್ಯ ತತ್ವಶಾಸ್ತ್ರದ ಕಾಣ್ಕೆ ಅಲ್ಲ ಅದು ಇರುವಿಕೆಯ ಅರಿವು” : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 3.2

ನೋಡುವುದು ನೇರ, ಮುಟ್ಟುವುದು ನೇರ, ಅನುಭವಿಸುವುದು ನೇರ. ಆದರೆ ಚಿಂತನೆ ಮಾತ್ರ ಪರೋಕ್ಷ. ಆದ್ದರಿಂದಲೇ,  ಪ್ರೇಮಿಗೆ, ನೃತ್ಯಪಟುವಿಗೆ, ಸಂಗೀತಗಾರನಿಗೆ, ರೈತನಿಗೆ ಸಾಧ್ಯವಾಗಬಹುದಾದ ದರ್ಶನ ಆಲೋಚಕನಿಗೆ ಸಾಧ್ಯವಾಗುವುದಿಲ್ಲ ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ Truth can not be sought : Part 2 ಹಿಂದಿನ ಭಾಗ ಇಲ್ಲಿ ಓದಿ : https://aralimara.com/2019/06/09/osho-21/ ಹೌದು; ತತ್ವಜ್ಞಾನಕ್ಕೆ ಕಪಟದ ಸಾಧ್ಯತೆ ಅಪಾರ ಇದು ಮನಸ್ಸನ್ನು ಮೋಸಗೊಳಿಸುವ ತಂತ್ರ. ಯಾರಿಗೆ ಏನು ಪ್ರಯೋಜನ ? ಏನಿಲ್ಲ, ಅಜ್ಞಾನವೇ ಕಾರಣ. ಜ್ಞಾನಕ್ಕೆ, ಒಪ್ಪಿಸುವ, ಸಾಬೀತು ಮಾಡುವ ವಾಗ್ವಾದಕ್ಕಿಳಿಯುವ ಹುಕಿ ಇಲ್ಲ. ಜ್ಞಾನಕ್ಕೆ ಪರ್ಯಾಯ ಎಂಬಂತೆ ಈ ತತ್ವಜ್ಞಾನದ ನಾಟಕ. ತತ್ವಜ್ಞಾನದ ನೆರಳನ್ನೇ ಜ್ಞಾನದ ಬೆಳಕು ಎಂದು ಸಾಧಿಸುತ್ತದೆ ಅಜ್ಞಾನ. ವಿಷಯದ ನಿಜಸ್ಥಿತಿಯನ್ನು ನಿರಾಕರಿಸುವುದೆಂದರೆ  ನಿಜವನ್ನು ಕಳೆದುಕೊಂಡಂತೆ….. (ಸೊಸಾನ್) ಇಲ್ಲೊಂದು ಮರ ಇದೆ  ಇದು ವಸ್ತು ಸ್ಥಿತಿ. ಮರದ ವಸ್ತು ಸ್ಥಿತಿಯನ್ನು ನಿರಾಕರಿಸುವುದೆಂದರೆ ಮರದೊಳಗಿನ ಸತ್ಯವನ್ನು ಕಳೆದುಕೊಂಡಂತೆ. ಮರ ಕೇವಲ ವಸ್ತು ಸ್ಥಿತಿ, ಒಳಗಿನ ಸತ್ಯದ ಕವಚ. ಹಾಗೆಯೇ, ಹಕ್ಕಿ ಒಂದು ವಸ್ತು ಸ್ಥಿತಿ,  ಆದರೆ ಸತ್ಯ ಮಾತ್ರ ಅದೇ. ಒಮ್ಮೆ ಸತ್ಯ , ಮರದ ಹಾಗೆ ಕಂಡರೆ ಇನ್ನೊಮ್ಮೆ ಹಕ್ಕಿಯ ಹಾಗೆ, ಮತ್ತೊಮ್ಮೆ ಬಂಡೆಯ ಹಾಗೆ, ಮನುಷ್ಯನ ಹಾಗೆ. ಆದರೆ ನೀವು ಆಳದಲ್ಲಿಳಿದು ಕಂಡಾಗ ಸತ್ಯ ಮಾತ್ರ ಒಂದೇ. ನೀವು ಎಲ್ಲ ಆಕಾರಗಳನ್ನು ನಿರಾಕರಿಸಿದರೆ ಒಳಗಿನ ನಿರಾಕಾರವನ್ನು ನಿರಾಕರಿಸಿದಂತೆ. ಆಗ ಯಾವ ಭಗವಂತ? ಎಲ್ಲಿಯ ಸತ್ಯ? ವಿಷಯದ ಖಾಲೀತನವನ್ನು ಒತ್ತಿಹೇಳುವುದೆಂದರೆ,  […]