ಕೃಷ್ಣನೆಂಬ ಕೊಳಲು, ಪ್ರೇಮವೆಂಬ ಉಸಿರು….

ಇಡಿಯ ಭಾಗವತದಲ್ಲಿ ಕೃಷ್ಣ ರಾಧೆಯನ್ನು ನೆನೆದು ಕಣ್ಣೀರಿಡುವ ವಿವರವಿಲ್ಲ. ಆದರೆ, ಅವನ ಕಥನ ಓದುವ ಸಹೃದಯರು ತಾವೇ ಕೃಷ್ಣನಾಗಿ, ರಾಧೆಯನ್ನು ಭಾವಿಸಿ, ಅವಳಿಗಾಗಿ ಮಿಡಿಯುತ್ತಾರೆ. ಹೀಗೆ ರಾಧಾಪ್ರೇಮದಿಂದ ಕೃಷ್ಣ, ನಮ್ಮೆದೆಗಳಲ್ಲಿ ಮೊಳೆಯುತ್ತಾನೆ ~ ಚೇತನಾ ತೀರ್ಥಹಳ್ಳಿ ಯಾವ ಪ್ರೇಮ ವಿರಹದಲ್ಲಿ ದುಃಖ ತರುವುದಿಲ್ಲವೋ ಅದು ಅತ್ಯುನ್ನತವಾದದ್ದು. ಯಾವ ಪ್ರೇಮ, ಪ್ರೇಮಿಯನ್ನು ಹೊಂದುವ ಸ್ವಾರ್ಥವನ್ನಾಗಲೀ ಮೋಹವನ್ನಾಗಲೀ ಹುಟ್ಟಿಸುವುದಿಲ್ಲವೋ ಅದು ಅತ್ಯುತ್ಕೃಷ್ಟ ಪ್ರೇಮ. ಇಂಥ ಪ್ರೇಮಕ್ಕೆ ಪರಮೋನ್ನತ ಮಾದರಿ – ರಾಧಾ ಮಾಧವ ಜೋಡಿ. ಕೃಷ್ಣನಿಗೆ ಇಂಥದೊಂದು ಪ್ರೇಮಪಾಠವನ್ನು ಕಲಿಸಿದವಳು […]

ಮಹಾ ಪ್ರಳಯ ಮತ್ತು ಮಹಾನೌಕೆಯ ನಿರ್ಮಾಣ : ಭಾರತೀಯ ಪುರಾಣ ಸರಣಿ | ದಶಾವತಾರ

ಸೃಷ್ಟಿ ಕಥನಗಳಲ್ಲಿ ಸಾಮ್ಯತೆ ಇರುವಂತೆ ವಿವಿಧ ಜನಪದ – ನಾಗರಿಕತೆಗಳ ಪ್ರಳಯ ಕಥನಗಳಲ್ಲೂ ಸಾಮ್ಯತೆಯಿದೆ. ಒಂದೇ ಭಾವ – ಬೀಜದಲ್ಲಿ ಆಯಾ ನೆಲಮಣ್ಣಿನ ಸೊಗಡು, ಸಾಹಿತ್ಯ, ಸಂಸ್ಕೃತಿಗಳು ಹದಬೆರೆತು ಕಥನವೃಕ್ಷಗಳು ಬೆಳೆದು ನಿಂತಿವೆ. ~ ಅರಳಿಬಳಗ ಹಿಂದಿನ ಲೇಖನವನ್ನು ಇಲ್ಲಿ ಓದಿ : https://aralimara.com/2018/07/23/avatara1/ ಸೃಷ್ಟಿಯ ಕಲ್ಪನೆಯ ಜೊತೆಗೇ ಪ್ರಳಯದ ಪರಿಕಲ್ಪನೆಯೂ ಹುಟ್ಟಿಕೊಂಡಿತು. ಹಿರಣ್ಯ ಗರ್ಭದಿಂದ (ಚಿನ್ನದ ಮೊಟ್ಟೆ) ಸೃಷ್ಟಿ ಕ್ರಿಯೆ ಆರಂಭವಾಯಿತು ಅನ್ನುವ ಚಿಂತನೆ ನಮ್ಮಲ್ಲಿ ಇರುವಂತೆಯೇ, ಮೊಟ್ಟೆಯೊಡೆದು ಮೇಲ್ಭಾಗ ಆಕಾಶವೂ ಕೆಳಭಾಗ ಭೂಮಿಯೂ ಆಯಿತು ಅನ್ನುವ ತಿರುಳನ್ನುಳ್ಳ […]

ಭಾರತೀಯ ಪುರಾಣ ಸರಣಿ ~ ದಶಾವತಾರದ ಕಥನಗಳು

ಅವತಾರಗಳ ಪೌರಾಣಿಕ ಕಥನಗಳು ಬಹುಶಃ ಪ್ರಾಚೀನದಲ್ಲಿ ನಡೆದ ಘಟನೆಗಳ ಉತ್ಪ್ರೇಕ್ಷಿತ ಕಥನಗಳೂ ಇರಬಹುದು. ಅಥವಾ ನಿರ್ದಿಷ್ಟ ಮೌಲ್ಯ ಅಥವಾ ಜ್ಞಾನವನ್ನು ಸಾರುವ ಸಂಕೇತಗಳೂ ಇರಬಹುದು. ಧರ್ಮಭೀರುಗಳ ಪಾಲಿಗೆ ಯಥಾವತ್ತಾಗಿ ನಡೆದಿರಬಹುದಾದ ಘಟನೆಗಳು ಅನ್ನುವುದಂತೂ ಸರಿಯೇ. ಈ ಕಥನಗಳು ಬೇರೆ ಯಾವ ಉದ್ದೇಶಗಳೂ ಇಲ್ಲದ ಶುದ್ಧ ಸಾಹಿತ್ಯವೂ ಇರಬಹುದು, ಸಂಪೂರ್ಣವಾಗಿ ಕವಿಕಲ್ಪಿತ ಘಟನೆಗಳಾಗಿಯೂ ಇರಬಹುದು. ಅದೇನೇ ಇದ್ದರೂ, ಯಾವುದೇ ಕಥನದ ಅರ್ಥ ಘಟಿಸುವುದು ನಮ್ಮೊಳಗೆ…. ~ ಅರಳಿಬಳಗ ಭಗವಂತ ಯಾವಾಗ ಯಾವ ರೂಪ ಧರಿಸಿ ಬರುತ್ತಾನೋ ಗೊತ್ತಿಲ್ಲ. ಅಥವಾ ಹೀಗೂ […]

ಪ್ರೇಮವು ಎಲ್ಲ ದಾರಿಗಳನ್ನೂ ಮುಕ್ತಗೊಳಿಸಿತು! ~ ಮಾಹ್ ಸತಿ

“ಪ್ರೇಮವೆಂದರೆ ಅದು ಹಾಗೇ. ಎಲ್ಲ ಅಡೆತಡೆಗಳನ್ನು ನಿವಾರಿಸುವ ಮಾಂತ್ರಿಕತೆ ಪ್ರೇಮಕ್ಕಿದೆ” ಅನ್ನುತ್ತಾಳೆ ಸೂಫಿ ಕವಿ ಮಾಹ್’ಸತಿ ಗಂಜವಿ  ~ ಚೇತನಾ ನನ್ನ ಹೃದಯ ಸಾಮ್ರಾಜ್ಯವನ್ನು ಪ್ರೇಮವೇ ಆಳತೊಡಗಿದಾಗ ಅದು ನಂಬಿಕೆ, ಅಪನಂಬಿಕೆ ಎರಡರಿಂದಲೂ ಮುಕ್ತಗೊಂಡಿತು. ನನ್ನ ಪ್ರಯಾಣಕ್ಕೆ ನಾನೇ ಅಡ್ಡಿಯಾಗಿದ್ದೆ, ನನ್ನ ಇರುವನ್ನೇ ತೆರವುಗೊಳಿಸಿದ ಪ್ರೇಮ ಎಲ್ಲ ದಾರಿಗಳನ್ನೂ ಮುಕ್ತಗೊಳಿಸಿತು  ~ ಅನ್ನುತ್ತಾಳೆ ಮಾಹ್’ಸತಿ.  ಈ ಪದ್ಯ ಎಷ್ಟು ಸುಂದರವಾಗಿದೆ ನೋಡಿ! ನಮ್ಮ ನಮ್ಮ ಪ್ರಯಾಣಕ್ಕೆ ನಾವೇ ಅಡ್ಡಿಯಾಗಿರುತ್ತೇವೆ. ಅದನ್ನು ಅರ್ಥ ಮಾಡಿಕೊಳ್ಳದೆ ಯಾರುಯಾರನ್ನೋ ಬೆಟ್ಟು ಮಾಡಿ ತೋರಿಸುತ್ತಾ […]

ಬಿಕ್ಖುಣಿಯರ ಅನುಭಾವ ಕಾವ್ಯ: 5 ಅನುವಾದಗಳು

ಬೌದ್ಧ ಬಿಕ್ಖುಣಿಯರು ಅತ್ಯಂತ ಪ್ರಾಮಾಣಿಕತೆಯಿಂದ, ಅಷ್ಟೇ ಸರಳವಾಗಿ ಹಾಡಿಕೊಂಡ ಆತ್ಮಕಥನಗಳಿವು. ಆದ್ದರಿಂದಲೇ ಈ ಗೀತೆಗಳನ್ನು’ಗಾಥಾ’ (ಕಥೆ) ಎಂದು ಕರೆಯಲಾಗಿದೆ. ಥೇರೀಗಾಥಾದ ಈ ಗೀತೆಗಳು ಸರಳವಾಗಿ ತೋರಿದರೂ ಅದ್ಭುತ ಹೊಳಹುಗಳಿಂದ ಕೂಡಿರುವಂಥವು. ಬುದ್ಧನ ಬೋಧನಾ ಸಾರವನ್ನೆ ತಮ್ಮ ಮುಗ್ಧ ತಿಳಿವಿನಲ್ಲಿ ಹಿಡಿದಿಟ್ಟುಕೊಂಡಂಥವು. ತಮ್ಮ ಕಾಣ್ಕೆಯಲ್ಲೇ ಅಧ್ಯಾತ್ಮ ಲೋಕವನ್ನು ನೋಡಲೊಂದು ಕಿಟಕಿ ತೆರೆದಿಟ್ಟಿದ್ದಾರೆ ಈ ಬಿಕ್ಖುಣಿಯರು. ಅವುಗಳಲ್ಲಿ ಆಯ್ದ 5 ಪದ್ಯಗಳ ಅನುವಾದ ಇಲ್ಲಿದೆ ~ ಚೇತನಾ ನನ್ನ ಕಾವಿಯುಡುಗೆ ಬಿಸುಟು, ಭಿಕ್ಷಾಪಾತ್ರೆಯನ್ನು ಬೋರಲು ಹಾಕಿ, ಹೆಬ್ಬಂಡೆಗೆ ಮುಖ ಮಾಡಿ […]

ಕ್ಷಮೆ ಅಂದರೇನು, ಹೇಳು ಸೂಫಿ…

ಕ್ಷಮಿಸುವುದು ಧೀರತನ. ಧೈರ್ಯವಂತರಷ್ಟೆ ಕ್ಷಮಿಸಬಲ್ಲರು, ಹೇಡಿಗಳಿಂದ ಅದು ಸಾಧ್ಯವಿಲ್ಲ…. ಮನುಷ್ಯರನ್ನು ಮನುಷ್ಯರನ್ನಾಗಿಸುವುದು ಯಾವುದು ಎಂದು ಕೇಳಲಾಯ್ತು. ಮೂಡಿಬಂದ ಒಕ್ಕೊರಲಿನ ಉತ್ತರ “ಕ್ಷಮೆ” ಎಂಬುದೇ ಆಗಿತ್ತು. ಮಿಕ್ಕೆಲ್ಲ ಪ್ರಾಣಿಗಳು ಕ್ರಿಯೆಗೆ ಪ್ರತಿಕ್ರಿಯೆ ತೋರಲು ಸಿದ್ಧವಾಗಿಯೇ ಇರ್ತವೆ. ಇನ್ನು ಕೆಲವು ಯಾರಿಂದಲಾದರೂ ಸಮಸ್ಯೆ ಒದಗುವ ಮೊದಲೇ ತನ್ನ ರಕ್ಷಣೆಗೆ ಸನ್ನದ್ಧವಾಗಿರ್ತವೆ. ಪ್ರಾಣಿಗಳಿಗೆ ತಮ್ಮ ಜೀವ ಮುಖ್ಯ. ತಮ್ಮ ಆಹಾರ ಮುಖ್ಯ. ತಮ್ಮ ನೆಲೆ ಮುಖ್ಯ. ಅವುಗಳ ಸೃಷ್ಟಿಯೇ ಹಾಗಿದೆ. ನಾಯಿಯ ಎದುರಿಟ್ಟ ಮೂಳೆ ತುಂಡನ್ನು ಮುಟ್ಟಿದರೆ ಅದು ಸುಮ್ಮನೆ ಬಿಡುವುದೇ? […]

ಲಿಂಜಿ ಹೇಳಿದ್ದು : ಬುದ್ಧನೆಂಬುದಿಲ್ಲ, ಧರ್ಮವೆಂಬುದಿಲ್ಲ…

ಲಿಂಜಿ ಯಿಕ್ಸುಆನ್ | ಅನುವಾದ : ಚೇತನಾ ತೀರ್ಥಹಳ್ಳಿ ನನ್ನಲ್ಲಿ ಕೊಡಲು ಧರ್ಮದಂಥದೇನು ಇಲ್ಲ ಕಾಯಿಲೆ ಗುಣಪಡಿಸುವೆ, ಗಂಟು ಬಿಡಿಸುವೆನಷ್ಟೆ. ದಶ ದಿಕ್ಕುಗಳ ದಾರಿಯನುಗರೇ, ಅವಲಂಬಿಸಬೇಡಿ ಯಾವುದರ ಮೇಲೂ. ಬುದ್ಧನೆಂಬುವನಿಲ್ಲ, ಧರ್ಮವೆಂಬುದಿಲ್ಲ, ತರಬೇತಿ ಏನಿಲ್ಲ, ಮತ್ತು ಜ್ಞಾನೋದಯವೂ ಇಲ್ಲ. ಯಾತರ ಬೆನ್ನತ್ತಿದ್ದೀರಿ ಬಿರುಸಾಗಿ? ತಲೆ ಮೇಲೆ ತಲೆ ಹೊತ್ತುಕೊಂಡು, ಕುರುಡು ಕಡು ಮೂರ್ಖರೇ! ನಿಮ್ಮ ತಲೆ ಇರಬೇಕಾದಲ್ಲೇ ಸರಿಯಾಗಿದೆ. ~ ಲಿಂಜಿ ಯಿಕ್ಸುಆನ್‌ 9ನೇ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಬೌದ್ಧ ಸಂತ. ಚಾನ್ ಬುದ್ಧಿಸಮ್’ನ ಲಿಂಜಿ ಶಾಖೆಯ […]

ಬಾಬಾ ಫರೀದ್ ~ ಸೂಫಿ ಕಾವ್ಯ ಮತ್ತು ಕಿರುಪರಿಚಯ

ಬಾಬಾ ಫರೀದ್ ಉರ್ಫ್ ಬಾಬಾ ಶೇಖ್ ಫರೀದ್ ಉರ್ಫ್ ಖ್ವಾಜಿ ಫರೀದುದ್ದೀನ್ ಮಸೂದ್ ಗಂಜ್’ಶಕರ್. ಇವರು12ನೇ ಶತಮಾನದಲ್ಲಿ, ಪಂಜಾಬ್ ಪ್ರಾಂತ್ಯದಲ್ಲಿ ಜೀವಿಸಿದ್ದ ಸೂಫಿ ಸಂತ. ಪಂಜಾಬಿ ಸಾಹಿತ್ಯದ ಮೊದಲ ಕವಿ ಅನ್ನುವ ಮನ್ನಣೆಯೂ ಫರೀದ್’ಗೆ ಇದೆ.  ಸೂಫೀ ಚಿಂತನೆಗಳ ಪ್ರಚಾರಕ್ಕಾಗಿಯೇ ಫರೀದ್ ಪಾಕ್ ಪಟ್ಟಣವೆಂಬ ಊರು ಕಟ್ಟಿದ್ದ. ಅದೊಂದು ಸೂಫಿಸಮ್’ನ ವಿಶ್ವವಿದ್ಯಾನಿಲಯದಂತೆ ರೂಪುಗೊಂಡಿತ್ತು. ಬಾಬಾ ಫರೀದನ ಅನುಯಾಯಿಗಳು ಮುಂದೆ ‘ಚಿಶ್ತಿ’ಗಳೆಂದು ಹೆಸರಾದರು. ಸೂಫೀ ಪರಂಪರೆಯಲ್ಲಿ ಚಿಶ್ತಿಗಳದು ಬಹು ಮಹತ್ವದ ಹೆಸರು. ಬಾಬಾ ಫರೀದರ ಒಂದು ರಚನೆ  ಸತ್ತಂತಿರಬೇಡ, ಮೈಮರೆಯಬೇಡ. […]

ನೆರೆಯೊಂದಿಗೆ ಹರಿದ ಶರ್ಮಿಷ್ಟೆಯ ಮಾದರಿ

ಬಂಡಾಯ ಏಳುವುದೆಂದರೆ ಸತ್ಯವನ್ನು ನಿರಾಕರಿಸುವುದಲ್ಲ. ಪ್ರವಾಹದ ವಿರುದ್ಧ ಈಜಬೇಕಿರುವುದು, ವಿರುದ್ಧ ದಿಕ್ಕಿನಲ್ಲಿ ಗುರಿ ಇದೆಯೆಂದಾಗ ಮಾತ್ರವೇ ಹೊರತು ಕೈಗಳಲ್ಲಿ ಕಸುವಿದೆ ಎಂದಲ್ಲ. ಅನಗತ್ಯವಾಗಿ ವಿರುದ್ಧ ದಿಕ್ಕಿನ ದಾರಿಯಲ್ಲಿ – ಯಾವುದು ನಮಗಾಗಿ ಇಲ್ಲವೋ, ಯಾವುದು ಸುಳ್ಳೊ ಆ ದಾರಿಯಲ್ಲಿ ನಡೆಯುವ ರಿಸ್ಕ್ ಮೂರ್ಖತನ ಎನ್ನಿಸಿಕೊಳ್ಳುತ್ತದೆ. ~ ಚೇತನಾ ತೀರ್ಥಹಳ್ಳಿ ನಿಯತಿಯ ಆಟಕ್ಕೆ ನಿದರ್ಶನವಾಗಿ ಹಲವಾರು ಚಿತ್ರಣಗಳು ನಮ್ಮೆದುರಿಗಿವೆ. ಪಟ್ಟಾಭಿಷೇಕಕ್ಕೆ ಸಿದ್ಧನಾಗಿ ಮಂಗಳ ಸ್ನಾನದಲ್ಲಿದ್ದ ರಾಮ, ನಾರುಮಡಿಯುಟ್ಟಿದ್ದು; ಪಣ ಗೆದ್ದ ಅರ್ಜುನನಿಗೆ ಮಾಲೆ ಹಾಕಿದ ದ್ರೌಪದಿ ಉಳಿದ ನಾಲ್ವರನ್ನೂ […]