ಪ್ರೇಮ ವೈಫಲ್ಯದ ಗಾಯವನ್ನು ಮಾಯಿಸುವ ‘ಸಾಂತ್ವನ ಧ್ಯಾನ’ ನಡೆಸುವ ವಿಧಾನ ಇಲ್ಲಿದೆ. ~ ಚಿತ್ಕಲಾ ಪ್ರೇಮ, ಯಾವುದೇ ವ್ಯಕ್ತಿಯ ಬದುಕಿನಲ್ಲಿ ಘಟಿಸುವ ಅತ್ಯಂತ ಮಧುರವಾದ ಸಂಗತಿ. ಆದ್ದರಿಂದ ಪ್ರೇಮ ವೈಫಲ್ಯ ಭಾವುಕವಾಗಿ ಆಳವಾದ ಗಾಯವನ್ನು ಉಂಟು ಮಾಡಿಬಿಡುತ್ತದೆ. ಪ್ರೇಮದ ಭಾವನೆ ನಮಗೆ ಅದೆಷ್ಟು ಪ್ರಿಯವೆಂದರೆ, ನಾವು ಅದರಿಂದ ಉಂಟಾಗುವ ಗಾಯವನ್ನೂ ಸುಖಿಸುತ್ತೇವೆ. ಅದನ್ನು ಮರೆಯದಂತೆ ಕಾಪಾಡಿಕೊಳ್ಳುತ್ತೇವೆ. ಎಲ್ಲಿಯವೆರೆಗೆ ಗಾಯದ ನೆನಪು ಅಳಿಯುವುದಿಲ್ಲವೋ ಅಲ್ಲಿಯವರೆಗೆ ಅದು ಮಾಯುವುದೂ ಇಲ್ಲ. ಅದನ್ನು ಹಾಗೇ ಉಳಿಸಿಕೊಂಡು, ಅದರಿಂದ ಉಂಟಾಗುವ ನೋವನ್ನು ಮತ್ತೆ […]
ಧ್ಯಾನ ಮಾಡಲು ಕಲಿಯಿರಿ : ಲವ್ ಹೀಲಿಂಗ್ ಮೆಡಿಟೇಶನ್ #1 ~ ಅನಾಹತ ಧ್ಯಾನ
ಈ ಸಂಚಿಕೆಯಲ್ಲಿ ಭಗ್ನ ಪ್ರೇಮಿಗಳಿಗಾಗಿ ಧ್ಯಾನ ವಿಧಾನವನ್ನು ನೋಡೋಣ. ಈ ದಿನಗಳಲ್ಲಿ, ವಿಶೇಷವಾಗಿ ಯುವಜನರು ಹಾಗೂ ಮಧ್ಯ ವಯಸ್ಕರು ಅನುಭವಿಸುತ್ತಿರುವ ತುಮುಲವಿದು. ಪ್ರೇಮ ವೈಫಲ್ಯದಿಂದ ಹೊರಗೆ ಬರಲಾಗದೆ ಖಿನ್ನತೆ, ಉದ್ವೇಗ ಮೊದಲಾದ ಮಾನಸಿಕ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡು ಒದ್ದಾಡುವ ಜನರನ್ನು ನಾವು ನೋಡುತ್ತಲೇ ಇದ್ದೇವೆ. ಆದ್ದರಿಂದ ಮೊದಲನೆಯದಾಗಿ ಇದನ್ನು ಆಯ್ಕೆ ಮಾಡಿಕೊಂಡಿದ್ದೇವೆ. ನಾವಿದನ್ನು ಲವ್ ಹೀಲಿಂಗ್ ಮೆಡಿಟೇಶನ್ ಎಂದು ಕರೆದಿದ್ದೇವೆ. ಈ ಲವ್ ಹೀಲಿಂಗ್ ಮೆಡಿಟೇಶನ್’ನಲ್ಲೂ ಹಲವು ಬಗೆಗಳಿದ್ದು, ಈ ಬಾರಿ ‘ಅನಾಹತ ಧ್ಯಾನ’ದ ಬಗೆಯನ್ನು ನೋಡೋಣ […]
ಧ್ಯಾನ ಮಾಡಲು ಕಲಿಯಿರಿ : 1ರಿಂದ4ರವರೆಗಿನ ಹಂತಗಳು
ಧ್ಯಾನದ ಮೂಲ ಪಾಠಗಳ ಕುರಿತು ಸರಳ ವಿವರಣೆಗಳಿಂದ ಕೂಡಿದ ನಾಲ್ಕೂ ಕಂತುಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ನಡುವಿನ ಕೊಂಡಿ ತಪ್ಪಿಸಿಕೊಂಡು, ಹುಡುಕಲಾಗದ ತುರ್ತಿನಲ್ಲಿರುವ ಕೆಲವರು ಎಲ್ಲ ಲೇಖನಗಳನ್ನೂ ಒಟ್ಟಿಗೆ ಹಾಕುವಂತೆ ಕೇಳಿದ್ದಾರೆ. ಆದ್ದರಿಂದ ಒಂದರಿಂದ ನಾಲ್ಕರವರೆಗಿನ ಎಲ್ಲ ಹಂತಗಳನ್ನೂ ಈ ಲೇಖನದಲ್ಲಿ ಒಟ್ಟಿಗೆ ನೀಡಲಾಗಿದೆ. ಮುಂದಿನ ಕಂತುಗಳಲ್ಲಿ ವಿವಿಧ ಬಗೆಯ ಧ್ಯಾನ ವಿಧಾನಗಳು ಮತ್ತು ಅವುಗಳ ಲೌಕಿಕ ಪ್ರಯೋಜನಗಳ ಕುರಿತು ಲೇಖನಗಳು ಬರಲಿವೆ. ದೇಹವನ್ನು ಅಣಿಗೊಳಿಸುವುದು ಸರಿಯಾಗಿ, ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದೆ ಹೋದರೆ ಧ್ಯಾನದಲ್ಲಿ ಮನಸ್ಸನ್ನು ಕೇಂದ್ರೀಕರಿಸಲು […]
ಧ್ಯಾನ ಮಾಡಲು ಕಲಿಯಿರಿ #4 : ಶರೀರವನ್ನು ಸಡಿಲಗೊಳಿಸಿ
ಧ್ಯಾನದ ಮೂಲಭೂತ ಅಂಶಗಳನ್ನು ನಾಲ್ಕು ಹಂತಗಳಲ್ಲಿ ಸರಳವಾಗಿ ವಿವರಿಸುವ ಪ್ರಯತ್ನವಿದು. ಚಕ್ರಗಳನ್ನು ಸಡಿಲಗೊಳಿಸುವ ಮೂಲಕ ದೇಹವನ್ನು ನಿಶ್ಚೇಷ್ಟಗೊಳಿಸಿ ಉನ್ನತ ವಿಶ್ರಾಂತಿಯನ್ನು ಅನುಭವಿಸುವುದು ಈ ನಿಟ್ಟಿನಲ್ಲಿ ಕೊನೆಯ ಹಂತ. ಈ ಹಂತವನ್ನು ಸಾಧಿಸುವ ಬಗೆ ಹೇಗೆಂದು ನೋಡೋಣ. (ಹಿಂದಿನ ಲೇಖನದ ಕೊಂಡಿ ಇಲ್ಲಿದೆ) ಈಗ ನೀವು ಉಸಿರಾಟವನ್ನು ಕ್ರಮಬದ್ಧಗೊಳಿಸಿಕೊಂಡಿದ್ದೀರಿ. ಮುಂದಿನ ಹಂತ ದೇಹವನ್ನು ಸಡಿಲಗೊಳಿಸಿಕೊಳ್ಳುವುದು. ಹಾಗೆಂದರೆ ನೀವು ಕುಳಿತಿರುವ ಭಂಗಿಯನ್ನು ಸಡಿಲ ಮಾಡಿಕೊಳ್ಳುವುದು ಎಂದಲ್ಲ. ನಿಮ್ಮ ದೇಹದ ಒಳಗೆ ನೀವಿನ್ನೂ ಕಾಯ್ದುಕೊಂಡಿರುವ ಬಿಗುವನ್ನು ಸಡಿಲ ಮಾಡಿಕೊಳ್ಳುವುದು ಎಂದು. ಅದಕ್ಕಾಗಿ […]
ಧ್ಯಾನ ಮಾಡಲು ಕಲಿಯಿರಿ #3 : ಪೂರಕ ರೇಚಕ ಕುಂಭಕ ಮತ್ತು ಉಸಿರಾಟ
ದೇಹವನ್ನು ಆರಾಮದಾಯಕ ರೀತಿಯಲ್ಲಿ ಅಣಿಗೊಳಿಸಿಕೊಳ್ಳುವ, ಸಂಕಲ್ಪ ತೊಡುವ ಎರಡು ಹಂತಗಳನ್ನು ಈ ಹಿಂದಿನ ಲೇಖನಗಳಲ್ಲಿ ನೋಡಿರುವಿರಿ. ಈಗ ಉಸಿರಾಟದ ಹಂತವನ್ನು ತಿಳಿಯೋಣ. ದೇಹವನ್ನು ಆರಾಮದಾಯಕ ಸ್ಥಿತಿಯಲ್ಲಿ ಇರಿಸಿಕೊಂಡು, ಸಂಕಲ್ಪವನ್ನು ದೃಢಪಡಿಸಿಕೊಂಡ ನಂತರದ ಹಂತ ಪೂರಕ ರೇಚಕ ಮತ್ತು ಕುಂಭಕ. “ನಾನು ಇನ್ನು ಧ್ಯಾನದಲ್ಲಿ ನೆಲೆ ನಿಲ್ಲುತ್ತೇನೆ” ಎಂದುಕೊಳ್ಳುತ್ತಾ ಉಸಿರನ್ನು ಎಷ್ಟು ಸಾಧ್ಯವೋ ಅಷ್ಟು ಒಳಗೆ ಎಳೆದುಕೊಳ್ಳಬೇಕು. ಬಳಿಕ ಒಳಗೆ ಎಳೆದುಕೊಂಡ ಉಸಿರನ್ನು ಒಂದೆರಡು ಸೆಕೆಂಡ್’ಗಳ ಕಾಲವಾದರೂ ಹಿಡಿದಿಟ್ಟುಕೊಳ್ಳಬೇಕು. ಅನಂತರ ನಿಧಾನವಾಗಿ ಹೊರಬಿಡಬೇಕು. ಹಾಗೆ ಹೊರಬಿಟ್ಟ ಮೇಲೆ, ಕೂಡಲೇ […]
ಧ್ಯಾನ ಮಾಡಲು ಕಲಿಯಿರಿ #2 : ದೃಢ ಸಂಕಲ್ಪ
ಸಂಕಲ್ಪ ಮಾಡುವ ಮುನ್ನ ಒಂದು ವಿಷಯ ಗಮನದಲ್ಲಿರಲಿ. ಯಾವ ಕಾರಣಕ್ಕೂ ನೀವು ನಿಮ್ಮ ಮೇಲೆ ಮೇಲೆ ಧ್ಯಾನವನ್ನು ಹೇರಿಕೊಳ್ಳುತ್ತಿಲ್ಲ, ನೀವು ಧ್ಯಾನ ಮಾಡಲು ಬಯಸುತ್ತಿದ್ದೀರಿ, ಆದಕ್ಕಾಗಿ ಸಿದ್ಧತೆ ನಡೆಸಿದ್ದೀರಿ ಅನ್ನುವುದು ನಿಮಗೆ ಖಾತ್ರಿ ಇರಬೇಕು. ದೇಹವನ್ನು ಆರಾಮದಾಯಕ ರೀತಿಯಲ್ಲಿ ಅಣಿಗೊಳಿಸಿಕೊಂಡು ಕುಳಿತುಕೊಳ್ಳುವುದು ಹೇಗೆಂದು ಕಳೆದ ಲೇಖನದಲ್ಲಿ ನೋಡಿದಿರಿ. ಈಗ ಧ್ಯಾನ ಪ್ರಕ್ರಿಯೆಯ ಎರಡನೆ ಹಂತಕ್ಕೆ ಹೋಗೋಣ. ಈ ಪ್ರಕ್ರಿಯೆಯ ಎರಡನೆ ಹಂತ, ಧ್ಯಾನ ಮಾಡುವ ಸಂಕಲ್ಪ ತೊಡುವುದು. ಧ್ಯಾನ ಮಾಡುವುದು ಎಂದರೆ ಎಲ್ಲ ಆಲೋಚನೆಗಳಿಂದ ಮುಕ್ತರಾಗಿ ಮನಸ್ಸನ್ನು ಏಕಾಗ್ರಗೊಳಿಸಿಕೊಳ್ಳುವ […]
ಧ್ಯಾನ ಮಾಡಲು ಕಲಿಯಿರಿ #1 : ದೇಹವನ್ನು ಅಣಿಗೊಳಿಸುವುದು
ದೇಹದ ಭಂಗಿಯ ಅಡಚಣೆಗಳೇ ಏಕಾಗ್ರತೆಗೆ ಭಂಗ ತರುವ ಸಾಧ್ಯತೆಗಳೂ ಇರುತ್ತವೆ. ಆದ್ದರಿಂದ ಧ್ಯಾನಕ್ಕೆ ಕುಳಿತುಕೊಂಡಾಗ, ಕಣ್ಣುಮುಚ್ಚುವ ಮೊದಲು ನಿಮ್ಮ ದೇಹವನ್ನು ಸರಿಯಾದ ಭಂಗಿಯಲ್ಲಿ ಸ್ಥಾಪಿಸಿಕೊಳ್ಳಿ. ಧ್ಯಾನಕ್ಕೆ ಮನಸ್ಸನ್ನು ಅಣಿಗೊಳಿಸುವ ಬಗ್ಗೆ ಹಿಂದಿನ ಲೇಖನಗಳಲ್ಲಿ ನೋಡಿದ್ದೀರಿ. ಈಗ ದೇಹವನ್ನು ಅಣಿಗೊಳಿಸಲು ಕೆಲವು ಮೂಲ ಪಾಠಗಳನ್ನು ನೋಡೋಣ. ಪ್ರಾಯೋಗಿಕವಾಗಿ, ಧ್ಯಾನಕ್ಕೆ ಅತಿ ಮುಖ್ಯವಾಗಿ ಬೇಕಾಗಿರುವುದು ಪೀಠ ಸಿದ್ಧಿ. ಅಂದರೆ ಕುಳಿತುಕೊಳ್ಳುವಿಕೆಯ ಆರಾಮ. ನೀವು ಸರಿಯಾಗಿ, ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದೆ ಹೋದರೆ ಧ್ಯಾನದಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ದೇಹದ ಭಂಗಿಯ […]