ಗೋಡೆಗಳನ್ನು ಕೆಡವಿದರೆ ನಿಂತ ಜಾಗ ವಿಸ್ತಾರವಾಗುವುದಿಲ್ಲವೇ? ಬಯಲು ವಿಶಾಲವಲ್ಲವೇ? ಹಾಗೆಯೇ ಹೆಸರು, ಮನೆತನ, ಜಾತಿ, ಸಮಾಜ ಎಂಬೆಲ್ಲ ಗೋಡೆಗಳನ್ನು ಕೆಡವುತ್ತಾ ಕೆಡವುತ್ತಾ ಸಮಷ್ಟಿಯ ಬಯಲಲ್ಲಿ ನಿಲ್ಲಲು ಪ್ರಯತ್ನಿಸಬೇಕು. ಆಗಷ್ಟೇ ಬಯಲಲ್ಲೂ ಸರಿಯಾದ ದಿಕ್ಕಿನ ನಡಿಗೆ ಸಾಧ್ಯವಾಗುವುದು… | ಅಲಾವಿಕಾ
ಇರುವಂತೆಯೇ ನೋಡುವ ಬಗೆ : ಅಧ್ಯಾತ್ಮ ಡೈರಿ
ಎಲ್ಲಕ್ಕಿಂತ ಮುಖ್ಯವಾಗಿ ನಾವು ರೂಢಿಸಿಕೊಳ್ಳಬೇಕಾದ ಸಂಗತಿಯೊಂದಿದೆ. ಯಾವುದೇ ವಸ್ತು ಅಥವಾ ವಿಷಯವನ್ನು ಅದು ಇರುವ ಹಾಗೇ ಗ್ರಹಿಸುವುದು. ಯಾವುದೇ ವ್ಯಾಖ್ಯಾನಗಳಿಲ್ಲದೆ ಗ್ರಹಿಸುವುದು… । ಅಲಾವಿಕಾ
ಬಂಡೆಯಾಗುವುದೇ ಅರಿವಿನ ದಾರಿಯಾಗಿರಲೂ ಸಾಕು! : New Zen
ಬಂಡೆಗಲ್ಲಿಗೆ ತಿಳಿವು ಮೂಡಿಲ್ಲವೆಂದು ಹೇಳಿದವರು ಯಾರು! ಮನುಷ್ಯ ಜನ್ಮವೇ ದೊಡ್ಡದೆಂದು ಹೇಳಿದವರು ಯಾರು? । ಅಲಾವಿಕಾ
ದಿನಾರಂಭಕ್ಕೆ ಸದ್ವಿಚಾರಗಳು : ಅರಳಿಮರ video
ದಿನದ ಆರಂಭ ಸದ್ವಿಚಾರಗಳೊಡನೆ ಆರಂಭವಾದರೆ ಇಡೀ ದಿನ ಸಕಾರಾತ್ಮಕ ಚಿಂತನೆಗಳಿಂದ ತುಂಬಿಕೊಳ್ಳುತ್ತದೆ. ಆದ್ದರಿಂದ 10 ಸೂಕ್ತಿಗಳನ್ನು ‘ಅರಳಿಮರ’ ಇಲ್ಲಿ ನೀಡುತ್ತಿದೆ. ಆದರೆ, ಇವನ್ನು ಬರಿದೇ ಓದುವುದಲ್ಲ, ಮನದಟ್ಟು ಮಾಡಿಕೊಳ್ಳುವುದು ಮಾತ್ರ ನಮ್ಮದೇ ಜವಾಬ್ದಾರಿ. । ಸಂಗ್ರಹ ಮತ್ತು ಪ್ರಸ್ತುತಿ: ಅಲಾವಿಕಾ
ಕಿವಿಗೊಟ್ಟು ಅಲ್ಲ, ಮನಸಿಟ್ಟು ಕೇಳಿ! : ಅರಳಿಮರ Video
ಜಗತ್ತಿನ ಜಂಜಡಗಳು ಬಹುತೇಕ ಶುರುವಾಗೋದೇ ಮಾತು ಮತ್ತು ಕೇಳಿಸಿಕೊಳ್ಳುವುದರಲ್ಲಿನ ದೋಷದಿಂದ. ಇಂಥಾ ಪ್ರಭಾವಶಾಲಿ ಮಾತು – ಆಲೈಕೆಯ ಬಗ್ಗೆ ಚಿಕ್ಕದೊಂದು ವಿಡಿಯೋ ಇಲ್ಲಿದೆ… । ಬರಹ – ನಿರೂಪಣೆ : ಅಲಾವಿಕಾ
ಸೂಫಿ ಬಯಾಜಿದ ಪಾಠ ಕಲಿತ ಕಥೆ : tea time story
ಬದಲಾವಣೆಯನ್ನು ಪ್ರತಿಯೊಬ್ಬರೂ ಬಯಸುತ್ತಾರೆ. ಕೆಲವರು ಜಗತ್ತು ಬದಲಾಗಬೇಕೆಂದು ಹಪಹಪಿಸುತ್ತಾರೆ, ಮತ್ತೆ ಕೆಲವರು ನಾನು ಜಗತ್ತನ್ನು ಬದಲಾಯಿಸಿಬಿಡುತ್ತೇನೆ ಎಂದು ಭ್ರಮಿಸುತ್ತಾರೆ. ತಾನು ಕೂಡಾ ಇಂಥ ಭ್ರಮೆಯಲ್ಲಿ ಇದ್ದೆನೆಂದು ಸೂಫಿ ಸಂತ ಬಯಾಜಿದ್ ಬಸ್ತಮಿ ತನ್ನ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾನೆ
ವೃತ್ರಾಸುರನ ಪ್ರಾಣ ತೆಗೆದ ಪಂಕ್ಚುಯೇಶನ್ ಮಾರ್ಕ್ ! : Stories retold
ಸರಸ್ವತಿ, “ಸದ್ಯಕ್ಕೆ ನಾನೊಂದು ವ್ಯವಸ್ಥೆ ಮಾಡಿರ್ತೀನಿ, ವಿಶ್ವರೂಪನ್ನ ಕೊಂದು ಇಷ್ಟು ಫಜೀತಿ ಮಾಡಿಕೊಂಡ ಇಂದ್ರನ್ನ ಆಮೇಲೆ ವಿಚಾರಿಸೋಣ” ಅಂತ ಹೋಮಕುಂಡಕ್ಕೆ ಹವಿಸ್ಸು ಸುರೀತಿದ್ದ ಋಷಿಗಳ ನಾಲಿಗೆ ಮೇಲೆ ಪ್ರಭಾವ ಬೀರ್ತಾಳೆ. ವಾಗ್ದೇವಿಯ ಅಣತಿಯಂತೆ ಆ ಋಷಿಗಳ ನಾಲಗೆಗಳು, “ಇಂದ್ರಶತ್ರೋ ವಿವರ್ಧಸ್ವ” ಅನ್ನುವ ಬದಲಾಗಿ, “ಇಂದ್ರ, ಶತ್ರೋ ವಿವರ್ಧಸ್ವ” ಅನ್ನಲು ಶುರು ಮಾಡ್ತವೆ! ಆಮೇಲೆ… । ಅಲಾವಿಕಾ
ನಮಗೆ ಬೇಕಿದ್ದನ್ನು ಮತ್ತೊಬ್ಬರ ಬಾಯಲ್ಲಿ ಹೇಳಿಸುವ ಕಲೆ! : ಅಧ್ಯಾತ್ಮ ಡೈರಿ
ಅಡ್ಡಿಯಿಲ್ಲ, ನಿಮ್ಮ ಅಭಿಪ್ರಾಯ ಮತ್ತೊಬ್ಬರ ಬಾಯಲ್ಲಿ ಹೇಳಿಸಿ. ಹಾಗೆ ಸುತ್ತಿಸೀ ಸುತ್ತಿಸೀ ಅವರು ನಮಗೇನು ಬೇಕೋ ಅದನ್ನೇ ಹೇಳುವಂತೆ ಮಾಡೋದೂ ಒಂದು ಕಲೆ. ಅದೊಂದು ಮಜಾ. ಆದರೆ, ನಿಮ್ಮ ಈ ಕಳ್ಳತನ ನಿಮಗೆ ಗೊತ್ತಿರಲಿ… । ಅಲಾವಿಕಾ
ಗುರುವಿನ ಕ್ರೌರ್ಯದಷ್ಟು ಉದಾತ್ತವಾದುದು ಮತ್ತೊಂದಿಲ್ಲ! : ಅಧ್ಯಾತ್ಮ ಡೈರಿ
ನಮ್ಮ ಅಹಂಕಾರಕ್ಕೆ ಯಾವಾಗಲೂ ಪ್ರಬಲ ಸವಾಲುಗಳೇ ಬೇಕು. ಗುದ್ದಿಕೊಳ್ಳುವ ಗೋಡೆ ಗಟ್ಟಿಯಾಗಿದ್ದಷ್ಟೂ ಗುದ್ದುವ ಮುಷ್ಟಿ ಬೀಗುತ್ತದೆ. ತನ್ನ ಬಲದ ಬಗ್ಗೆ ಹೆಮ್ಮೆ ಪಡುತ್ತದೆ. ದುರ್ಬಲರು ಕ್ಷಮೆ ಕೇಳಿದರೆ ಅವರನ್ನು ಕ್ಷಮಿಸುವುದರಲ್ಲಿ ನಮಗೆ ಮಜಾ ಬರುವುದಿಲ್ಲ. ಆದ್ದರಿಂದಲೇ ಎಷ್ಟೋ ಸಲ ನಾವು ದುರ್ಬಲರನ್ನು ಕ್ಷಮಿಸುವುದೇ ಇಲ್ಲ! ~ ಅಲಾವಿಕಾ
‘ಏಳನೇ ಕೊಪ್ಪರಿಗೆ’ ಯಾವತ್ತೂ ತುಂಬೋದಿಲ್ಲ, ಯಾಕೆಂದರೆ ಅದರಲ್ಲಿ ಕೊರೆಯೇ ಇಲ್ಲ! : ಅಧ್ಯಾತ್ಮ ಡೈರಿ
“ಕಪ್ ಅರ್ಧ ತುಂಬಿದೆಯೋ ಅರ್ಧ ಖಾಲಿ ಇದೆಯೋ” ಅನ್ನುವ ಜಿಜ್ಞಾಸೆ ಬೇಡ. ಕಪ್`ನಲ್ಲಿ ಇರುವಷ್ಟು ನಮಗೆ ಸಾಕು ಅನ್ನುವ ತೃಪ್ತಿ ಇರಲಿ. ಅದರಲ್ಲಿ ಇರುವುದನ್ನು ಸವಿಯುವ ಆನಂದ ಸಿಗಲಿ. ಯಾರಾದರೂ ಕಪ್ ಅರ್ಧ ತುಂಬಿದೆಯೋ ಖಾಲಿ ಇದೆಯೋ ಅಂತ ಕೇಳಿದರೆ ನೀವು ಮರುಮಾತಿಲ್ಲದೆ ಅದನ್ನೆತ್ತಿ ಗಟಗಟ ಕುಡಿದುಬಿಡಿ! । ಅಲಾವಿಕಾ