ಸೋಲುವುದು ಸುಲಭವಲ್ಲ, ಮೊದಲು ಅದನ್ನು ಕಲಿಯೋಣ : ಅಧ್ಯಾತ್ಮ ಡೈರಿ

ಕೆಲವೆಡೆ ನಾವು ಸೋಲುವುದೇ ಹೆಚ್ಚು ಲಾಭಾದಯಕವಾಗಿರುತ್ತದೆ. ಕೆಲವು ಸೋಲುಗಳು ಜಾಣತನವೆನಿಸುತ್ತವೆ ಕೂಡಾ. ಸೋಲು ನಮಗೆ ಗೆಲುವಿನ ಅವಕಾಶಗಳನ್ನು ನಿಚ್ಚಳಗೊಳಿಸುವ ಸಂಗತಿ ~ ಅಲಾವಿಕಾ ನಾವು ಓಡುತ್ತಲೇ ಇದ್ದೇವೆ. ಎಂಥಾ ಧಾವಂತ! ನಮ್ಮ ಬದುಕು ಒಂದು ಓಟದ ಸ್ಪರ್ಧೆಯೇನೋ ಅನ್ನುವಂತೆ, ಸೋತರೆ ಸತ್ತೇಹೋಗುವೆವು ಅನ್ನುವಂತೆ. ನಾವು ಗೆಲುವಿನ ಹಪಾಹಪಿಗೆ ಅದೆಷ್ಟು ಒಗ್ಗಿಕೊಂಡಿದ್ದೇವೆ ಅಂದರೆ, ಚಿಕ್ಕ ಸೋಲು ಕೂಡ ನಮ್ಮನ್ನು ಹಿಂಡಿಹಾಕಿಬಿಡುತ್ತದೆ. ಅದರಿಂದ ಪಾಠ ಕಲಿತು ಬದುಕನ್ನು ಅರ್ಥಪೂರ್ಣವಾಗಿಸಿಕೊಳ್ಳುವ ಬದಲು ನಾವು ಆತ್ಮವಿಶ್ವಾಸ ಕಳೆದುಕೊಳ್ಳುವುದೇ ಹೆಚ್ಚು. ಅಲ್ಲಿಂದ ಮುಂದೆ, ಸೋಲಿನ […]

ಪುಟ್ಟ ಕೃಷ್ಣನಿಗೆ ಚಪ್ಪಲಿ ತೊಡಿಸಿದ ಸಂತ ರಶ್ ಖಾನ್ ಕಾಬೂಲಿ

ರಶ್ ಖಾನ್ ದೇಗುಲಗಳನ್ನೆಲ್ಲ ಎಡತಾಕಿದ. ಎಲ್ಲಿಯೂ ಅವನಿಗೆ ಒಳಬಿಡಲಿಲ್ಲ. ಅನ್ನ, ನೀರು ಸೇವಿಸದೆ ಊರಿಂದೂರಿಗೆ ಅಲೆದ ರಶ್ ಖಾನ್, ಮಗುವಿನ ಪಾದಕ್ಕೆ ಚಪ್ಪಲಿ ತೊಡಿಸುವ ಆಸೆ ನೆರವೇರದೆ ಹೋದುದಕ್ಕೆ ಕಣ್ಣೀರು ಸುರಿಸುತ್ತಾ ಕುಳಿತುಬಿಟ್ಟ. ಅವನ ಹೃದಯದಲ್ಲಿ ಪ್ರೇಮ ಪ್ರವಾಹವಾಗಿ ಹರಿಯುತ್ತಿತ್ತು. ಅಸಹಾಯಕನಾಗಿ, ದೀನನಾಗಿ, ಮಗುವಿನ ಚಿತ್ರವನ್ನೆ ನೋಡುತ್ತ ಕುಳಿತುಬಿಟ್ಟ… ~ ಅಲಾವಿಕಾ ಕಾಬೂಲ್ ನಗರದಲ್ಲಿ ರಶ್ ಖಾನ್ (ರಸ್ ಖಾನ್) ಹೆಸರಿನ ಒಬ್ಬ ಸಮಗಾರನಿದ್ದ. ಒಮ್ಮೆ ಜಾತ್ರೆಯಲ್ಲಿ ಭಾರತದ ವ್ಯಾಪಾರಿಗಳು ಹಾಕಿದ್ದ ಮಳಿಗೆಯಲ್ಲಿ ಬೆಣ್ಣೆ ಕದಿಯುತ್ತಿದ್ದ ಪುಟಾಣಿ […]

ನಮಗೆ ನಾವೆ ಹೇಳಿಕೊಳ್ಳುವ 12 ಸುಳ್ಳುಗಳು! : ಮೊದಲ ಕಂತು ~ 1ರಿಂದ 3

ನಮಗೆ ನಾವೆ ಹೇಳಿಕೊಳ್ಳುವ ಸುಳ್ಳುಗಳು ಯಾವತ್ತೂ ಯಾವ ಕಾರಣಕ್ಕೂ ಒಳಿತನ್ನುಂಟು ಮಾಡುವುದಿಲ್ಲ. ಅವುಗಳಿಂದ ಕೆಡುಕು ಕಟ್ಟಿಟ್ಟ ಬುತ್ತಿ. ನಮಗೆ ನಾವೆ ಹೇಳಿಕೊಳ್ಳುವ ಸುಳ್ಳು ನಮ್ಮ ಬೆಳವಣಿಗೆಯ ಸಾಧ್ಯತೆಗಳನ್ನು ಕತ್ತರಿಸಿ  ಹಾಕುವ ಚಿನ್ನದ ಕತ್ತರಿ ~ ಅಲಾವಿಕಾ ಸುಳ್ಳು ಒಂದು ಥರದ ವ್ಯಸನ. ಅದೊಂಥರಾ ಆಯಾ ಕ್ಷಣವನ್ನು ತಳ್ಳಿ ಹಾಕುವ ನಶೆ. ಹೇಗೋ ಆ ಘಳಿಗೆ, ಆ ಘಟನೆಯನ್ನು ದಾಟಿಬಿಟ್ಟರೆ ಸಾಕೆಂದು ನಾವು ಧರಿಸುವ ಭ್ರಮೆಯ ರೆಕ್ಕೆ. ಇತರರಿಗೆ ಸುಳ್ಳು ಹೇಳುವುದು ಒಂದು ಥರವಾದರೆ, ನಮಗೆ ನಾವೇ ಹೇಳಿಕೊಳ್ಳು […]

ಮೂರ್ಖರಾಗಿರಿ, ಯಾತನೆ ಪಡಿ!: ಅಧ್ಯಾತ್ಮ ಡೈರಿ

ಮನಸ್ಸಿಗೆ ಬೀಗ ಹಾಕಿಕೊಂಡು ಗಪ್ಪನೆ ಕುಳಿತರೆ ಯಾವ ಸಂತೋಷವೂ ಬೀಗ ಮುರಿದು ನಿಮ್ಮೊಳಗೆ ಪ್ರವೇಶಿಸಲು ಸಾಧ್ಯವಿಲ್ಲ. ನೀವು ನಿಮ್ಮ ಬೀಗ ತೆರೆಯುವುದನ್ನು ಬಿಟ್ಟು, ಕೀಲಿ ಹುಡುಕಿಕೊಳ್ಳುವುದನ್ನು ಬಿಟ್ಟು, ಸಂತೋಷ ನನ್ನನ್ನು ಪ್ರವೇಶಿಸುತ್ತಿಲ್ಲ, ನಾನು ನತದೃಷ್ಟೆ/ನತದೃಷ್ಟ ಎಂದು ಗೋಳಾಡಿದರೆ ಏನು ಬಂತು? ~ ಅಲಾವಿಕಾ ನಮ್ಮನ್ನು ಯಾತನೆಗೆ ಒಳಪಡಿಸುವ ಸಂಗತಿಗಳು ಯಾವುವು? – ಈ ಪ್ರಶ್ನೆಗೆ ಸಾಮಾನ್ಯ ಉತ್ತರ “ಸಂಪತ್ತು ಮತ್ತು ಪ್ರೇಮ”. ಇದು ಪೂರ್ಣ ನಿಜವಲ್ಲ. ಇದನ್ನು ನಾವು ಹೇಳಬೇಕಾದ್ದು ಹೀಗೆ; “ನಾವು ಸಂಪತ್ತು ಮತ್ತು ಪ್ರೇಮದ […]

ಬಿಟ್ಟಿರಬೇಕಾದ ಭಯ ಮತ್ತು ಬಿಟ್ಟಿರಬೇಕೆಂಬ ಹಂಬಲ : ಅಧ್ಯಾತ್ಮ ಡೈರಿ

ಸಂಗಾತಿಗೆ ‘ನಿನ್ನ ಬಿಟ್ಟಿರಲಾರೆ…’ ಅನ್ನುವಾಗಿನ ಆರ್ತತೆಯಲ್ಲಿ ಬಿಟ್ಟಿರಬೇಕಾದ ಭಯ ಮತ್ತು ಬಿಟ್ಟಿರಬೇಕೆಂಬ ಹಂಬಲಗಳೆರಡೂ ಹುದುಗಿರುತ್ತವೇನೋ! ಅಂಥದ್ದೊಂದು ಹಂಬಲ ಹುಟ್ಟದ ಹೊರತು, ಅ ಭಯ ಬರೋದಾದರೂ ಎಲ್ಲಿಂದ!? ~ ಅಲಾವಿಕಾ ‘ಆಹ್! ಚೆಂದವಿದೆ!’ ಅಂದುಕೊಂಡ ಹೊತ್ತಲ್ಲೆ ಕುರೂಪವೂ ಹುಟ್ಟಿಕೊಂಡಿರುತ್ತೆ. – ಹಾಗನ್ನುತ್ತೆ ತಾವೋ. ‘ನಾ ನಿನ್ನ ಪ್ರೀತಿಸ್ತೀನಿ’ ಅಂದುಕೊಳ್ಳುವಾಗಲೇ ಯಾವತ್ತಾದರೂ ಚಿಗುರಬಹುದಾದ ದ್ವೇಷದ ಬೀಜ ಬಿತ್ತಿರುತ್ತೀವಾ?- ಅಂದುಕೊಳ್ತೀನಿ ನಾನು. ~ ಎಷ್ಟು ನಿಜ ನೋಡಿ… ಯಾರೋ ದಾರಿಹೊಕನ ಮೇಲೆ ನಮಗ್ಯಾಕೆ ಪ್ರೀತಿ? ಆ ಕಾರಣಕ್ಕೇ ಅಲ್ಲಿ ದ್ವೇಷವೂ ಇರೋದಿಲ್ಲ. ಬಹುಶಃ […]

ನಿಂದಕರಿಗೊಂದು ಕುಟಿಯನು ಕಟ್ಟಿ, ಮನೆ ಮುಂದಿರಗೊಡಿರಿ… : ಅಧ್ಯಾತ್ಮ ಡೈರಿ

ನಿಮ್ಮನ್ನು ನಿಂದಿಸುವವರು, ತಾವು ಕೆಸರಾಗುತ್ತ ನಿಮ್ಮನ್ನು ಶುಚಿಗೊಳಿಸುತ್ತಿದ್ದಾರೆ. ನಿಮ್ಮ ತಪ್ಪು ನಿಮಗೆ ತೋರಿಸಿಕೊಡಲಿಕ್ಕಾಗಿ ಖುದ್ದು ತಾವೇ  ಹೊಲಸಾಗುತ್ತಿದ್ದಾರೆ. ನೀವು ಅವರಿಗೆ ಕೃತಜ್ಞರಾಗಿರಬೇಕು. ಹಂದಿ ಎಷ್ಟಾದರೂ ಮಲ ತಿನ್ನಲಿ, ಶುಚಿಯಾಗುವುದು ನಿಮ್ಮ ಮನೆಯ ಹಿತ್ತಿಲು. ಅವರು ಎಷ್ಟಾದರೂ ಅಶ್ಲೀಲ – ಅಸಭ್ಯವಾಗಿ ನಿಂದಿಸಲಿ, ಆರೋಪಿಸಲಿ, ಶುಚಿಯಾಗುವುದು ನಿಮ್ಮ ಅಂತರಂಗ! ~ ಅಲಾವಿಕಾ ನಿಂದಕರಿಗೊಂದು ಗುಡಿಯನು ಕಟ್ಟಿ ಮನೆಮುಂದಿರಗೊಡಿರಿ… ನೀರು ಸಾಬೂನುಗಳಿಲ್ಲದೆಯೆ ನಿರ್ಮಲಗೊಳಿಸುವರು | ಕಬೀರಾ ನಿರ್ಮಲಗೊಳಿಸುವರು…. ‘ಕಬೀರ ಬೀರಿದ ಬೆಳಕು’ ಕ್ಯಾಸೆಟ್ಟಿನಲ್ಲಿ ಪುರುಷೋತ್ತಮಾನಂದ ಜಿ ಕಂಠ. ಸೀದಾ ಎದೆಯಾಳಕ್ಕಿಳಿದು […]

ನಷ್ಟಕ್ಕಿಂತ ಅಹಮಿಕೆಯ ಪೆಟ್ಟೇ ಹೆಚ್ಚು ನೋವು ಕೊಡುವುದು!

ಪ್ರಾಮಾಣಿಕವಾಗಿ ಹೇಳಿ. ನಿಮ್ಮ ಯಾತನೆಗೆ ಕಾರಣ, ಸಾಂಗತ್ಯ ತಪ್ಪಿಹೋದ ದುಃಖವೋ; ಬಿಡಲ್ಪಟ್ಟ ಅವಮಾನದ ನೋವೋ? ನಿಮ್ಮನ್ನು ಕಾಡುತ್ತಿರುವುದು ಯಾವುದು? ಭಗ್ನಗೊಂಡ ಹೃದಯವೋ, ಘಾಸಿಗೊಂಡ ಅಹಂಕಾರವೋ!? ~ ಅಲಾವಿಕಾ ಬಹುತೇಕವಾಗಿ ನಾವು ಇದನ್ನು ಅನುಭವಿಸಿರುತ್ತೇವೆ. ಆಟೋದವ ಐದೋ ಹತ್ತೋ ರುಪಾಯಿ ಜಾಸ್ತಿ ಕೇಳಿದರೆ, ಐದು ರುಪಾಯಿಗಿಂತ ಹೆಚ್ಚಿನ ಚಿಲ್ಲರೆ ಇಲ್ಲ ಅಂದುಬಿಟ್ಟರೆ ತೀರಾ ಸಿಡಿಮಿಡಿಗೊಳ್ಳುತ್ತೇವೆ. “ಬೇಕಂತ ಮಾಡ್ತಾರೆ” ಅಂತ ಗೊಣಗೋದರಿಂದ ಹಿಡಿದು, “ಎಷ್ಟು ಆಟ ಆಡಿಸ್ತಾರೆ! “ ಅಂತ ಬೈದುಕೊಳ್ಳೋವರೆಗೆ ನಮ್ಮ ಅಸಹನೆ ಕುದಿಯುತ್ತದೆ. ಅದೇ ನಾವು ಯಾವಾಗಲಾದರೂ […]

ಪ್ರೇಮವೊಂದು ಹಣತೆ; ಚಿಟ್ಟೆಯಾಗಿ ದೂರಬೇಡಿ, ಬತ್ತಿಯಾಗಿ ತೀರಬೇಡಿ!

ಇದು ಬಹಳ ಸರಳ…. ಹಣತೆಯಿದೆ. ನೀವು ಅದರ ಬೆಂಕಿಯ ಮೊಗ್ಗನ್ನು ಮುತ್ತಿಕ್ಕಿದರೆ ಸುಟ್ಟುಹೋಗುತ್ತೀರಿ. ಅದನ್ನು ನಾಜೂಕಾಗಿ ನೇವರಿಸಿದರೆ, ಅದರ ಬೆಳಕನ್ನು ನಿಮ್ಮಲ್ಲೂ ಹೊತ್ತುಕೊಳ್ಳುತ್ತೀರಿ. ನಿಮ್ಮ ಪ್ರೇಮಿಯನ್ನು ನೀವು ಅರಿಯಬೇಕೆಂದರೆ, ನೀವೂ ಹಣತೆಯಾಗಬೇಕು. ಬೆಳಗುತ್ತಿರುವ ಹಣತೆಯನ್ನು ನಾಜೂಕಿನಿಂದ ಸೋಕಬೇಕು ~ ಅಲಾವಿಕಾ ಅನ್ನಬಟ್ಟೆಯಾಚೆಗೂ, ಭದ್ರತೆಯಾಚೆಗೂ, ಬಹುತೇಕ ಬದುಕಿನಾಚೆಗೂ ಮನುಷ್ಯರನ್ನು ಕಂಗೆಡಿಸುವ ಸಂಗತಿ ಏನಾದರೂ ಇದ್ದರೆ ಅದು ಪ್ರೇಮ. ಪ್ರೇಮ ಪುರುಸೊತ್ತಿನ ವಿಲಾಸವಲ್ಲ. ವಿಕ್ಷಿಪ್ತರ ಪ್ರಲಾಪವೂ ಅಲ್ಲ. ಅದು ಅತ್ಯಂತ ಸಹಜ ಅನುಭೂತಿ. ಲೌಕಿಕದಲ್ಲಿ, ಸಾಮಾನ್ಯ ಜೀವನದಲ್ಲಿ ಪ್ರೇಮ ಎರಡು […]

ಇಳಿ ವಯಸ್ಸನ್ನು ನಗುನಗುತ್ತ ಸ್ವಾಗತಿಸೋಣ…

ಅದು ಗಂಡಾಗಿರಲಿ ಅಥವಾ ಹೆಣ್ಣು… ವಯಸ್ಸಾದ ಮೇಲೆ ಇಂಥವರ ಸೊಂಟದ ಸುತ್ತಳತೆಯಲ್ಲಿ ಸಾಕಷ್ಟು ಬದಲಾವಣೆ ಆಗಿರಬಹುದು, ಹಾಗಿದ್ದೂ ಸದಾ ಲವಲವಿಕೆಯಿಂದ ಇರುತ್ತಾ ಆಕರ್ಷಣೆಯ ಕೇಂದ್ರವಾಗಿರುತ್ತಾರೆ. ಇದಕ್ಕೆ ಕಾರಣ ಇಷ್ಟೇ, ಹೊಸತನಕ್ಕೆ ತೆರೆದುಕೊಳ್ಳುತ್ತಲೇ ಇರುವಂಥವರು ಯಾವತ್ತೂ ಲವಲವಿಕೆಯಿಂದ ಇರುತ್ತಾರೆ ~ ಅಲಾವಿಕಾ ಮುಖದ ಮೇಲೆ ಸುಕ್ಕು. ಕಣ್ಣ ಕೆಳಗೆ ಕಪ್ಪು. ಕೂದಲಲ್ಲಿ ಬೆಳ್ಳಿದಾರ, ಹೊಟ್ಟೆ ಸುತ್ತ ನಿರಿಗೆ. ಅಷ್ಟೇ  ಅಲ್ಲ, ಮನೆ ಮಂದಿ ಮಾತಿಗೆ ಜೊತೆ ಕೂರೋದಿಲ್ಲ. `ಬರೀ ಕಿರಿಪಿರಿ’ ಅಂತ ದೂರ ಓಡ್ತಾರೆ. ನನಗಿಂತ ಚಿಕ್ಕವರಿಗೆ ಇಷ್ಟಕ್ಕೂ ನನಗೆ […]

ಸಂಬಂಧವೆಂಬ ನದಿಯ ಬಿಂಬ : ಅಧ್ಯಾತ್ಮ ಡೈರಿ

ಯಾವುದೇ ಸಂಬಂಧ ಅದೆಷ್ಟು ಆಪ್ತವಾಗಿದ್ದರೂ; ಅದು ನೆನೆಯದ, ಮುಳುಗದ, ಜೊತೆ ಹರಿಯದ ಬಿಂಬ ಮಾತ್ರ ಅನ್ನುವುದನ್ನು ಒಪ್ಪಿಕೊಳ್ಳಬೇಕು ~ ಅಲಾವಿಕಾ ನದಿಯೊಳಗೆ ತೇಲುವ ಬಿಂಬ ಹರಿಯುವುದಿಲ್ಲ ಜೊತೆಗೆ. ಸಂಬಂಧಗಳು ಬಿಂಬದ ಹಾಗೆ. ಒಂದು ವ್ಯಕ್ತಿ ನದಿಯಾದರೆ, ಮತ್ತೊಂದು ವ್ಯಕ್ತಿ ದಡ ಅಥವಾ ಆಕಾಶದಲ್ಲಿರುವ ವಸ್ತು. ಒಮ್ಮೆ ಒಬ್ಬರ ಪಾಲಿಗೆ ನದಿಯಾದವರು ಮತ್ತೊಮ್ಮೆ ಮತ್ತೊಬ್ಬರ ಪಾಲಿಗೆ ವಸ್ತುವಾಗಬಹುದು. ಹೀಗೆ ಪ್ರತಿಯೊಬ್ಬರೂ ನದಿಯೂ ವಸ್ತುವೂ ಆಗುತ್ತ ಬಿಂಬ ಬೆಸೆಯುವರು. ಅಂದರೆ, ಸಂಬಂಧ ಹೊಸೆಯುವರು. ನದಿಯ ಹರಿವಿನೆದೆ ಮೇಲೆ ಬಿಂಬ ಮೂಡುತ್ತದೆ. […]