ಯಾವಾಗ ಏನು ಮಾಡಿದರೆ ಏನಾಗುತ್ತದೆ ಅನ್ನುವ ಪ್ರಜ್ಞೆ ಮುಖ್ಯ

ಯಾರದೋ ಮಾತು ನಿಮಗೆ ಸರಿಬರಲಿಲ್ಲ ಅಂದರೆ ನೀವು ತತ್ ಕ್ಷಣ ಪ್ರತಿಕ್ರಿಯಿಸಿಬಿಡುತ್ತೀರಿ. ಸ್ವಲ್ಪ ಸಮಯದ ಬಳಿಕ ನಿಮಗೆ ನಾನು ಯಾಕಾದರೂ ಹಾಗೆ ಮಾತಾಡಿದೆನೋ ಅನ್ನುವ ಯೋಚನೆ ಶುರುವಾಗುತ್ತದೆ. ನಾನು ಹಾಗೆ ಉತ್ತರಿಸಬಾರದಿತ್ತು ಅಂದುಕೊಳ್ಳತೊಡಗುತ್ತೀರಿ. ಅದರ ಬದಲು, ಪ್ರತಿಕ್ರಿಯಿಸುವ ಮೊದಲೇ ನೀವು ಸ್ವಲ್ಪ ತಾಳ್ಮೆ ತೆಗೆದುಕೊಂಡಿದ್ದರೆ ಈ ಪ್ರಮೇಯವೇ ಇರುತ್ತಿರಲಿಲ್ಲ ಅಲ್ಲವೆ? ಯಾಕೆ ಹಾಗಾಯಿತು? ~ ವಿದ್ಯಾಧರ ಯಾವ ಸಂದರ್ಭದಲ್ಲಿ ಹೇಗೆ ಇರಬೇಕು ಎಂದು ಗೊತ್ತಾದ ಕ್ಷಣದಿಂದಲೇ ನಿಮ್ಮ ಸಮಸ್ಯೆಗಳು ಬಗೆಹರಿಯುತ್ತವೆ. ಕೊಡುವವರು ಕೊಡುತ್ತಾ ಇರುತ್ತಾರೆ. ಅದನ್ನು ತೆಗೆದುಕೊಳ್ಳುವುದು […]

ಅಹಂಕಾರ ಮತ್ತು ಅಹೋಭಾವ…

ಅಹಂಕಾರಕ್ಕೆ ವಿರುದ್ಧವಾದುದು ಅಹೋಭಾವ. ಇಲ್ಲಿ ನಾನು ಅನ್ನುವ ಪ್ರಶ್ನೆಯೇ ಇರುವುದಿಲ್ಲ. ಮಹತ್ತು ಮಾತ್ರ ಇದೆ, ಅದು ಎಲ್ಲವನ್ನೂ ವ್ಯಾಪಿಸಿಕೊಂಡಿದೆ ಎನ್ನುವ ಚಿಂತನೆ. ~ ವಿದ್ಯಾಧರ ಅಹಂಕಾರ – ಅಹೋಭಾವಕ್ಕೆ ತದ್ವಿರುದ್ಧವಾದದ್ದು. ‘ಅದ್ವೈತವಳಿದು ಅಹಂಕಾರಿಯಾದೆ…’ ಯಾವಾಗ ನಮ್ಮಲ್ಲಿ ಭಗವಂತನೊಂದಿಗಿನ ತಾದಾತ್ಮ್ಯ, ಗುರುತು ಮರೆಯುತ್ತದೆಯೋ ಆಗ ನಾವು ಅಹಂಕಾರಿಯಾಗುತ್ತೇವೆ. ಅಹಂಕಾರಿ ಅಂದ್ರೆ ನಾವು ತಿಳಿದಿರುವ ಹಾಗೆ ಅರೋಗೆನ್ಸ್, ಕೊಬ್ಬು, ಇತ್ಯಾದಿಯಲ್ಲ. ಆಧ್ಯಾತ್ಮಿಕ ಅರ್ಥದಲ್ಲಿ ಅಹಂಕಾರ ಅಂದ್ರೆ ‘ಈ ದೇಹವೇ ನಾನು’ ಅನ್ನುವ ಭ್ರಮೆ. ನಾನು ಇಂಥವರ ಮಗ, ಇಂಥ ಹೆಸರುಳ್ಳ […]

ನಾವು’ಏನು ಅಲ್ಲವೋ’ ಅದನ್ನು ಬದುಕುವ ಪ್ರಯತ್ನವೇ ನಮ್ಮೆಲ್ಲ ತಪ್ಪುಗಳಿಗೆ ಕಾರಣ

ತಪ್ಪುಗಳನ್ನು ಮಾಡುವ ಸ್ವಾತಂತ್ರ್ಯ ಇರಬೇಕು ಜೊತೆಗೆ ಅವುಗಳಿಂದ ಪಾಠ ಕಲಿಯಲು ಅಗತ್ಯವಾದ ಪ್ರಜ್ಞಾಪೂರ್ಣ ಬದುಕೂ ಇರಬೇಕು.  ~ ವಿದ್ಯಾಧರ ತಪ್ಪು ಮಾಡದವರು ಯಾರಿದ್ದಾರೆ!? ತಪ್ಪುಗಳು ಕಲಿಕೆಯ ವಿಧಾನವೂ ಆಗಿದೆ. ಆದರೆ ಬಹಳ ಬಾರಿ ತಪ್ಪುಗಳು ನಮ್ಮನ್ನು ಅಪಾಯಕ್ಕೆ ನೂಕಿಬಿಡುತ್ತವೆ. ಅಂತಹ ತಪ್ಪನ್ನು ಮಾಡಿದ ಪರಿಣಾಮದಿಂದ ನರಳುವಾಗ, ಬಹುತೇಕ ಎಲ್ಲರೂ ”ಇದೊಂದು ಬಾರಿ ಪಾರಾದರೆ ಸಾಕು, ಇನ್ನೆಂದೂ ತಪ್ಪು ಮಾಡುವುದಿಲ್ಲ” ಎಂದು ಸಂಕಲ್ಪಿಸುತ್ತೇವೆ. ಈ ಸಂಕಲ್ಪ ಪ್ರಾಮಾಣಿಕವೂ ಆಗಿರುತ್ತದೆ. ಆದರೆ ಒಮ್ಮೆ ಅನಾಹುತವನ್ನು ತಪ್ಪಿಸಿಕೊಂಡ ನಂತರ ನಮ್ಮ ಸಂಕಲ್ಪ […]

ತೋರಲಿಲ್ಲಾಗಿ ಬೀರಲಿಲ್ಲ, ಅರಿಯದುದು ಬಗೆಹರಿಯಲು ಸಾಧ್ಯವೇ ಇಲ್ಲ!

ಕೆಟ್ಟ ಆಲೋಚನೆಯೇ ಬರದಂತೆ, ಒಳ್ಳೆಯ ಆಲೋಚನೆಗಳನ್ನು ರೂಢಿಸಿಕೊಳ್ಳುವಂತೆ ಮಾಡುವುದರಿಂದ ಏನಾಯಿತು?! ಒಳ್ಳೆಯ-ಕೆಟ್ಟ ಆಲೋಚನೆಗಳೆಂಬ ವರ್ಗೀಕರಣ ಆಯಿತು! ಒಳ್ಳೆಯ ಆಲೋಚನೆಗಳನ್ನು ಉಳಿಸಿ – ಬೆಳೆಸುವ ಮತ್ತು ಕೆಟ್ಟ ಆಲೋಚನೆಗಳನ್ನು ಬಿಡುವ ‘ಸದಾ ಕಾಲದ ಸಂಘರ್ಷ’ ಆರಂಭವಾಯಿತು. ಆದಾಗಲೇ ವಿಚಲಿತವಾಗಿರುವ ಮನಸ್ಸಿಗೆ ಸಂಘರ್ಷ ಸ್ಥಿತಿಯನ್ನು ಕೊಡಲಾಯಿತು! ~ ವಿದ್ಯಾಧರ ಯಾವುದೇ ಸಮಸ್ಯೆಯೊಂದರ ನಿವಾರಣೆಗೆ ಮೊದಲು, ಆ ನಿರ್ದಿಷ್ಟ ಸಮಸ್ಯೆಯನ್ನು ‘ಪೂರ್ಣವಾಗಿ’ ಅರಿತುಕೊಳ್ಳಬೇಕಾಗುತ್ತದೆ. ಅಂದರೆ ಸಮಸ್ಯೆಯನ್ನು ಅದು ಇದ್ದ ಹಾಗೆಯೇ ನೋಡಬೇಕು; ಅದರ ಬಗ್ಗೆ ಆಲೋಚಿಸುವುದಲ್ಲ. ಸಮಸ್ಯೆಯ ಮೇಲೆ ಯಾವುದೇ ಸಿದ್ಧಾಂತ, […]

ನಮ್ಮ ಬಹು ದೊಡ್ಡ ಶತ್ರು ಯಾರು?

ಯಾವುದು ನಮ್ಮನ್ನು ನರಳಿಸುತ್ತದೆಯೋ, ಬೇಸರ ಪಡಿಸುತ್ತದೆಯೋ ಅದನ್ನು ಕಾಪಾಡಿಟ್ಟುಕೊಳ್ಳುವುದರಿಂದ ಏನು ಪ್ರಯೋಜನ? ಆದರೆ ನಾವು ಅದೇ ತಪ್ಪನ್ನು ಮಾಡುತ್ತೇವೆ. ಯಾರದೋ ಟೀಕೆಯನ್ನು, ಗೇಲಿಯನ್ನು ಮನಸ್ಸಿನಲ್ಲಿ ನಿಧಿಯ ಹಾಗೆ ಕಾಪಾಡಿಕೊಂಡು ಹೋಗುತ್ತೇವೆ. ಅದರ ಜೊತೆಗೇ ನಮಗೆ ಅರಿವಿಲ್ಲದಂತೆ ನರಳಿಕೆಯನ್ನೂ ಕಾಪಾಡಿಕೊಂಡು ಹೋಗುತ್ತೇವೆ. ~ ವಿದ್ಯಾಧರ  ನಮ್ಮ ಬಹು ದೊಡ್ಡ ಶತ್ರು ಯಾರು? ಪ್ರತಿಯೊಬ್ಬರ ಬಹುದೊಡ್ಡ ಶತ್ರು ಆತನೇ / ಆಕೆಯೇ ಆಗಿರುತ್ತಾರೆ. ಅದು ಹೇಗೆ? ಯಾವುದೇ ಊಹೆಯಿಲ್ಲದೆ, ಪೂರ್ವಾಗ್ರಹವಿಲ್ಲದೆ ಅದನ್ನು ನಾವೇ ಕಂಡುಕೊಳ್ಳೋಣ. ಒಂದು ಅತ್ಯಂತ ಸರಳ ವಿಧಾನದ ಮೂಲಕ […]