ಅಜ್ಞಾನ ಸುಟ್ಟು ದುಃಖ ಬಿಟ್ಟು ಸುಖಿಯಾಗಿರು

ನಾನು ಕರ್ತನಲ್ಲ ಅನ್ನುವ ಭಾವನೆ ವ್ಯಕ್ತಿಯನ್ನು ಜನನ ಮರಣ ಚಕ್ರದಿಂದ ಮುಕ್ತಗೊಳಿಸುತ್ತದೆ. ಕರ್ತೃ ಭಾವನೆ ಮೃತ್ಯುವನ್ನು ತಂದೊಡ್ಡಿದರೆ, ತಾನು ಕರ್ತನಲ್ಲ ಎಂಬ ಭಾವನೆ ಮುಕ್ತಿಯನ್ನು ನೀಡುತ್ತದೆ  ~ ಸಾ.ಹಿರಣ್ಮಯಿ

ನೀನು ಭೋಕ್ತಾರನಲ್ಲ, ದ್ರಷ್ಟಾರ…

ಎಲ್ಲಿಯವರೆಗೆ ನಾವು ದ್ರಷ್ಟಾ ಆಗಿರುತ್ತೇವೆಯೋ, ನೋಡುವವರೇ ನಾವಾಗಿರುತ್ತೇವೆಯೋ, ಅಲ್ಲಿಯವರೆಗೆ ನಾವು ಸ್ವತಂತ್ರರು. ನೋಡುವವರು ಮತ್ತೊಬ್ಬರಿದ್ದಾರೆ ಎಂದು ಭಾವಿಸಿದ ಕ್ಷಣದಲ್ಲೆ ನಿಮ್ಮನ್ನು ಬಂಧನ ಆವರಿಸಿಬಿಡುತ್ತದೆ  ~ ಸಾ.ಹಿರಣ್ಮಯಿ

ನೀನು ಬೇರೇನೂ ಅಲ್ಲ, ನೀನು ವಿಶ್ವಸಾಕ್ಷಿ

ಭಗವಂತ ಸಂಪೂರ್ಣವಾಗಿ ಶ್ರೇಷ್ಠನಾಗಿರುವಾಗ, ಆ ಶ್ರೇಷ್ಠತೆಯಲ್ಲೂ ಈ ಭಾಗ ಉಚ್ಚ, ಈ ಭಾಗ ನೀಚ ಎನ್ನುವ ಭೇದದೊಂದಿಗೆ ಓದಿಕೊಳ್ಳುವುದು ಸರಿಯಾದ ಮಾರ್ಗವಲ್ಲ….  | ಭಾವಾರ್ಥ : ಸಾ.ಹಿರಣ್ಮಯೀ

ಸುಖದಿಂದ ಶಾಂತಿ, ಶಾಂತಿಯಿಂದ ಮುಕ್ತಿ…

“ಮುಕ್ತಿ ದೊರೆಯಬೇಕೆಂದರೆ ಮೊದಲು ನಮ್ಮಲ್ಲಿ ಶಾಂತಿ ನೆಲೆಸಬೇಕು. ಶಾಂತಿ ನೆಲೆಸಬೇಕೆಂದರೆ ಮೊದಲು ನಮ್ಮನ್ನು ನಾವು ಪಂಭೂತಗಳಿಂದ ನಿರ್ಮಾಣವಾಗಿರುವ ಈ ದೇಹದ ಗುರುತಿನಿಂದ ನಮ್ಮನ್ನು ಬಿಡಿಸಿಕೊಂಡು ಚಿದ್ರೂಪದಲ್ಲಿ ನೆಲೆಸಬೇಕು ” ಅನ್ನುತ್ತಾನೆ ಅಷ್ಟಾವಕ್ರ | ಭಾವಾರ್ಥ : ಸಾ.ಹಿರಣ್ಮಯೀ

ಪಂಚಭೂತಗಳ ಸಾಕ್ಷಿ ನೀನು, ಆ ಚಿದ್ರೂಪ ನೀನು….

“ನೀನು ಮುಕ್ತಿ ಪಡೆಯಬೇಕು ಎಂದಾದರೆ, ಮೊದಲು ನಿನ್ನನ್ನು ನೀನು ಅರಿಯಬೇಕು. ನಾನು ಮುಕ್ತಿ ಬಯಸುತ್ತೇನೆ ಎಂದಾದರೆ, ಮೊದಲು ನಾನು ಯಾರು ಎಂಬ ಅರಿವಿರಬೇಕು” ಎಂದು ಅಷ್ಟಾವಕ್ರನು ಜನಕ ಮಹಾರಾಜನಿಗೆ ವಿವರಿಸುತ್ತಾನೆ | ಭಾವಾರ್ಥ : ಸಾ.ಹಿರಣ್ಮಯಿ

ಬೆಣ್ಣೆ ಕದಿಯುವುದರಿಂದ ಬಾಣ ತಗಲುವವರೆಗೆ…. ಶ್ರೀಕೃಷ್ಣನ ಬದುಕೇ ಬೋಧನೆ!

ಕೃಷ್ಣ ಕಥೆಯನ್ನು ಹೃದಯದಿಂದ ಕೇಳಿದರೆ, ನಮಗೆ ಕೊನೆಗೂ ದಕ್ಕುವುದು ಒಂದು ಸಹಜವಾದ ಜೀವ. ತನ್ನೆಲ್ಲ ಶಕ್ತಿ , ಜಾಣತನಗಳನ್ನು ಮತ್ತೊಬ್ಬರಿಗಾಗಿ ವಿನಿಯೋಗಿಸುವ ಗೊಲ್ಲರ ಹುಡುಗ, ಅರಸೊತ್ತಿಗೆ ಪಡೆದ ಮೇಲೂ ಅಷ್ಟೇ ಸರಳ ಜೀವಿ. ಅವನಲ್ಲಿ ಅಧಿಕಾರದ ಹಂಬಲ ಯಾವ ಪುರಾಣಗಳ ಯಾವ ಪುಟದಲ್ಲೂ ಕಾಣಸಿಗುವುದಿಲ್ಲ ಅವನ ಯುದ್ಧ – ಕಾದಾಟಗಳೆಲ್ಲ ಲೋಕಹಿತಕ್ಕಾಗಿ ಹೊರತು ತಾನು ಏನನ್ನೋ ಪಡೆಯಲಿಕ್ಕಾಗಿ ಅಲ್ಲ. ಹಾಗಿದ್ದೂ ಅವನು ಪಡೆದೇ ತೀರುತ್ತಾನೆ. ಏನನ್ನು ಗೊತ್ತೇ? ಶಾಪಗಳನ್ನು!! ~ ಸಾ.ಹಿರಣ್ಮಯಿ ಕೃಷ್ಣ ಎಂದರೇನೇ ‘ಸರ್ವಾಕರ್ಷಕ’ ಎಂದು. […]