ಪ್ರೇಮವು ಆತ್ಮವನ್ನು ಶುದ್ಧಗೊಳಿಸುತ್ತದೆ ~ ಸೂಫಿ ಇಮಾಮ್ ಅಲಿ

“ದೇಹವನ್ನು ನೀರು, ಸ್ವಯವನ್ನು ಕಂಬನಿ, ಬುದ್ಧಿಯನ್ನು ತಿಳಿವು ಮತ್ತು ಆತ್ಮವನ್ನು ಪ್ರೇಮ ಶುದ್ಧಗೊಳಿಸ್ತವೆ…” ಅನ್ನುತ್ತಾನೆ ಸೂಫಿ ಕವಿ ಇಮಾಮ್ ಅಲಿ.  ಹೇಗೆ ದೇಹವನ್ನು ನೀರು ಶುದ್ಧಗೊಳಿಸುತ್ತದೆಯೋ ಹಾಗೆಯೇ ಕಂಬನಿಯು ಮನಸ್ಸನ್ನು ಶುದ್ಧಗೊಳಿಸುತ್ತದೆ. ದಯೆ, ಸಹಾನುಭೂತಿ, ಪಶ್ಚಾತ್ತಾಪ, ಕರುಣೆಗಳು ಮನಸ್ಸನ್ನು ಶುದ್ಧಗೊಳಿಸುತ್ತವೆ. ಮನಸ್ಸಿನ ಕಶ್ಮಲವನ್ನು ಅವು ತೊಡೆದುಹಾಕುತ್ತವೆ. ಹಾಗೆಯೇ ಬುದ್ಧಿಯು ಮನಸ್ಸಿನೊಳಗಿನ ಮೌಢ್ಯವನ್ನೂ ಅಹಂಕಾರವನ್ನೂ, ಅಂಧಕಾರವನ್ನೂ ತೊಲಗಿಸಿ ಅದನ್ನು ಶುಚಿಗೊಳಿಸುತ್ತದೆ. ಮತ್ತು ಈ ಎಲ್ಲದರಂತೆ ಪ್ರೇಮವು ಆತ್ಮವನ್ನು ಶುದ್ಧಗೊಳಿಸುತ್ತದೆ. ಪ್ರೇಮದಿಂದಲ್ಲದೆ ಆತ್ಮದ ಶುದ್ಧಿ ಯಾವುದರಿಂದಲೂ ಸಾಧ್ಯವಿಲ್ಲ. ಏಕೆಂದರೆ ಪ್ರೇಮವು ದ್ವೇಷಕ್ಕೆ ಆಸ್ಪದ […]

ತಾವೋ ತಿಳಿವು #77 ~ ಶಾಶ್ವತವನ್ನು ಅನುಭವಿಸುವ ವಿಧಾನ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಬ್ರಹ್ಮಾಂಡದ ಹುಟ್ಟಿನಲ್ಲಿ ನಮ್ಮೆಲ್ಲರ ಗುಟ್ಟು. ತಾಯಿಯನ್ನು ಹುಡುಕಾಡುವುದೆಂದರೆ ಮಕ್ಕಳನ್ನು ಮಾತಾಡಿಸುವುದು. ಮಕ್ಕಳ ಹೆಗಲ ಮೇಲೆ ನಿಂತು ತಾಯಿಯನ್ನು ಅಪ್ಪಿಕೊಂಡಾಗ ಸಾವಿಗೂ ಭಯ. ಬಾಯಿ, ಬಾಗಿಲು ಮುಚ್ಚಿದಾಗ ಬದುಕು ತೆರೆದುಕೊಳ್ಳುವುದು. ಮಾತು ಗೆದ್ದಾಗ, ವ್ಯವಹಾರ ದ್ವಿಗುಣವಾದಾಗ ಬದುಕಿಗೆ ಬರೆ. ಸಂತನಿಗೆ ಸಣ್ಣದೂ ಸ್ಪಷ್ಟ ಯೋಧನಿಗೆ ಸೋಲೂ ಒಂದು ಶಕ್ತಿ ತಾವೋ ಬೆಳಕಲ್ಲಿ ಒಳಗಿನದನ್ನು ಕಾಣುವುದೇ ಶಾಶ್ವತವನ್ನು ಅನುಭವಿಸುವ ವಿಧಾನ.

ತಾವೋ ತಿಳಿವು #76 ~ ತಾವೋ ರುಚಿ ನಾಲಿಗೆಗೆ ಸಿಕ್ಕುವುದೇ ಇಲ್ಲ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಅಗೋಚರ ತಾವೋ ಕಣ್ಣಿಗೆ ಕಟ್ಚಿಕೊಂಡಾಗ ಜಗತ್ತು ಮೊಣಕಾಲೂರುವುದು. ಇಲ್ಲಿ ಭಯಕ್ಕೆ ಜಾಗವಿಲ್ಲ ಅಶಾಂತಿಗೆ ನೆಲೆ ಇಲ್ಲ ಆತಂಕಕ್ಕೆ ಕಾರಣವಿಲ್ಲ. ಹಾಯ್ದು ಹೋಗುವ ಪ್ರವಾಸಿಗರಿಗೆ ಏರಿಳಿತದ ಹಾಡು ಇಷ್ಟ ರುಚಿ ರುಚಿಯಾದ ಊಟ ಪಂಚಪ್ರಾಣ. ಆದರೆ ತಾವೋ, ಪಕ್ಕಾ ಮಂದ್ರ ಸ್ಥಾಯಿ ರುಚಿ ನಾಲಿಗೆಗೆ ಸಿಕ್ಕುವುದೇ ಇಲ್ಲ. ಕಣ್ಣಿಗೆ ಕಾಣಿಸದು, ಕಿವಿಗೆ ಕೇಳಿಸದು ಬಳಸಿದರೆ ಮಾತ್ರ, ತೀರದು ಉಕ್ಕಿ ಉಕ್ಕಿ ಹರಿಯುವುದು

ಚೇತನವಲ್ಲದೆ ಸಾಕ್ಷಿ ಎಂಬುದಿಲ್ಲ….

ರೂಪವು ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ. ಆಕಾರವೂ ಕೂಡಾ. ಯಾವುದು ಸತತವಾಗಿ ಬದಲಾಗುತ್ತಲೇ ಇರುತ್ತದೆಯೋ ಅದನ್ನು ನಾವು ಸತ್ಯವೆಂದು ಕರೆಯುವುದಿಲ್ಲ. ಯಾವುದು ಬದಲಾಗುವುದೇ ಇಲ್ಲವೋ, ಯಾವಾಗಲೂ ಒಂದೇ ರೀತಿಯಾಗಿ ಇರುತ್ತದೆಯೋ ಅದನ್ನು ಸತ್ಯವೆಂದು ಕರೆಯುತ್ತೇವೆ ~ Whosoever Ji ಎಲ್ಲಿ ಮತ್ತೊಂದು ಇರುವುದಿಲ್ಲವೋ ಅದು ಅದ್ವೈತ. ಎರಡಿಲ್ಲದ ಸ್ಥಿತಿಯೇ ಅದ್ವೈತ. ಈ ಎಲ್ಲ ದ್ವೈತದ ಹಿಂದೆ ಮೂಲತಃ ಅದ್ವೈತವೇ ಇದೆ. ಅದು ಈ ಎಲ್ಲದರ ಮುಖ್ಯ ಸ್ರೋತವಾಗಿದೆ. ಹೀಗಿರುವಾಗ ಅದನ್ನು ಶಬ್ದಗಳಲ್ಲಿ ವಿವರಿಸೋದು ಹೇಗೆ? ಯಾವುದಕ್ಕೆ ಒಂದು ರೂಪವಿದೆಯೋ, […]

ಮರಳು ಮತ್ತು ನೊರೆ ~ ಖಲೀಲ್ ಗಿಬ್ರಾನ್ : ಕಾವ್ಯ ವಿರಾಮ #4

ಖಲೀಲ್ ಗಿಬ್ರಾನ್’ರ ‘SAND AND FOAM’ ಕೃತಿಯಲ್ಲಿ ಗದ್ಯ – ಪದ್ಯಗಳ ಹದ ಬೆರಕೆಯ ರಚನೆಗಳಿವೆ. ಕಾವ್ಯ, ಅನುಭಾವ, ತಾತ್ತ್ವಿಕತೆಯೇ ಮೊದಲಾದ ಗುಣಗಳು ಮೆಳೈಸಿರುವ ಈ ರಚನೆಗಳನ್ನು ನಿರ್ದಿಷ್ಟವಾಗಿ ಯಾವ ಪ್ರಕಾರಕ್ಕೆ ಸೇರಿಸಬೇಕೆಂಬುದೇ ಗೊಂದಲ. ಈ ರಚನೆಗಳು ಎಲ್ಲ ಕಡೆಗೂ, ಎಲ್ಲ ಕಾಲಕ್ಕೂ ಸಲ್ಲುತ್ತವೆ ಅನ್ನುವುದು ಮಾತ್ರ ನಿರ್ವಿವಾದ. SAND AND FOAM ಕೃತಿಯ ಈ ರಚನೆಗಳನ್ನು ತಮ್ಮ ವಿಶಿಷ್ಟ ಶೈಲಿಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ, ‘ಅರಳಿ ಬಳಗ’ದ ಬರಹಗಾರ ಚಿದಂಬರ ನರೇಂದ್ರ.  1. ಅಪರಾಧ, ಅವಶ್ಯಕತೆಯ ಇನ್ನೊಂದು ಹೆಸರು ಅಥವಾ […]

ಸೂಫಿ ಅನುಭಾವಿ ಸನಾಯಿ : ಪದ್ಯ ಮತ್ತು ಪರಿಚಯ

ಲಾಯೇಖ್ವಾರನ ಮಾತುಗಳು ಸನಾಯಿಯ ಎದೆ ನಾಟಿದವು. ಆತ ನದಿಯಿಂದ ಮರಳಿ ದರ್ಬಾರಿಗೆ ಹೋಗಲೇ ಇಲ್ಲ. ಸೂಫೀ ಗುರುವೊಬ್ಬನ ಮಾರ್ಗದರ್ಶನದಲ್ಲಿ ತಾನೊಬ್ಬ ದರವೇಶಿಯಾದ. ಅಧ್ಯಾತ್ಮ ಕವಿಯಾಗಿ ಮನ್ನಣೆಯನ್ನೂ ಶಿಷ್ಯವರ್ಗವನ್ನೂ ಹೊಂದಿದ ~ ಅಲಾವಿಕಾ ಶಿಲೆಯಲ್ಲಿ ಅಗ್ನಿಯನ್ನು ಅಡಗಿಸಿಟ್ಟವರು ಯಾರು? ಕಪ್ಪು ಮಣ್ಣಿನಲ್ಲಿ ಕೆಂಪು ಹೂವನ್ನು ಬಿಡಿಸಿದವರು ಯಾರು? ನದಿಯಲ್ಲಿ ಮುತ್ತಿನ ಚಿಪ್ಪುಗಳನ್ನು, ಕಾಡಿನಲ್ಲಿ ಚಿಗರೆಗಳನ್ನು ಇಟ್ಟವರು ಯಾರು? ಅವೆಲ್ಲವನ್ನೂ ತಾವು ಇರುವಲ್ಲಿ ನೆಮ್ಮದಿಯಿಂದ ಇರುವಂತೆ ಮಾಡಿರುವುದು ಯಾರು? ~ ಎಂದು ಕೇಳುತ್ತಾನೆ ಸೂಫೀ ಕವಿ ಸನಾಯಿ. ಈತನ ಮೂಲ […]

ಸೂಫಿ ಶಮ್ಸ್ ಹೇಳಿದ್ದು : ಪ್ರೇಮದಿಂದಷ್ಟೆ ಮನೆಗೆ ಪ್ರವೇಶ ಸಾಧ್ಯ…

ಶಮ್ಸ್, ತಬ್ರೀಜ್’ನಲ್ಲಿ ಆಗಿಹೋದ ಶ್ರೇಷ್ಠ ಸೂಫಿ. 12ನೇ ಶತಮಾನ ಈತನ ಕಾಲಮಾನ. ಶಮ್ಸ್, ಜಲಾಲುದ್ದಿನ್ ರೂಮಿಯ ಗುರುವೂ ಆಗಿದ್ದನು.  “ಬುದ್ಧಿವಂತಿಕೆ ನಿಮ್ಮನ್ನು ಬಾಗಿಲವರೆಗೆ ಕರೆದೊಯ್ಯಬಹುದು; ಮನೆಯೊಳಗೆ ಪ್ರವೇಶ ದೊರಕಿಸಲು ಪ್ರೇಮದಿಂದಷ್ಟೆ ಸಾಧ್ಯ”  ~ ಇದು ಶಮ್ಸ್ ತಬ್ರೀಜಿ ಹೇಳಿದ ಮಾತು. ಬಹಳ ಬಾರಿ ನಮ್ಮ ಬುದ್ಧಿವಂತಿಕೆಯೇ ನಮಗೆ ತಡೆಯಾಗಿಬಿಡುತ್ತದೆ. ಬುದ್ಧಿವಂತಿಕೆಯು ತರ್ಕವನ್ನು ಮುಂದಿಡುತ್ತದೆ. ನಿಯಮ, ಸಿದ್ಧಾಂತಗಳ ಯೋಚನೆ ಮಾಡುತ್ತಾ ಹೊಸ್ತಿಲಲ್ಲೆ ಉಳಿಸಿಬಿಡುತ್ತದೆ. ಬುದ್ಧಿವಂತಿಕೆಯು ನಮಗೆ ಪ್ರೇಮಿಯ (ಭಗವಂತನ) ಮನೆಯನ್ನು ತಲುಪುವ ದಾರಿ ಹುಡುಕಿಕೊಳ್ಳಲು ಸಹಾಯ ಮಾಡುತ್ತದೆಯೇನೋ ನಿಜ. […]

ತಾವೋ ತಿಳಿವು #75 ~ ಸಮಸ್ತರೂ ಹುಲ್ಲಿನ ನಾಯಿಗಳು

ಸ್ವರ್ಗ ಮತ್ತು ಧರೆ ಮನುಷ್ಯತ್ವದಿಂದ ಮುಕ್ತವಾಗಿವೆ. ಅವುಗಳ ಕಣ್ಣಿನಲ್ಲಿ ಸಮಸ್ತರೂ ಹುಲ್ಲಿನ ನಾಯಿಗಳು* ಹಾಗೆಯೇ ಸಂತರಿಗೂ ಮನುಷ್ಯತ್ವ ಎಂಬುದಿಲ್ಲ. ಅವರಿಗೂ ಎಲ್ಲ ಹುಲ್ಲಿನ ನಾಯಿಗಳಂತಯೇ.* ತಾವೋ ಬಲೂನಿನಂತೆ ಖಾಲಿ ಹೌದು ಆದರೆ ಅನಂತ ಸಾಧ್ಯತೆಗಳು, ಏರಿದಂತೆಲ್ಲ ಹಿಗ್ಗುತ್ತದೆ, ಮಾತು ಚುಚ್ಚಿದಾಗಲೆಲ್ಲ ಅಪ್ಪಚ್ಚಿ. ಮಾತಿನ ಮನೆಯೆದುರು ಮಸಣದ ತೋಟ, ತಾವೋಗೆ ಶರಣಾಗಿ, ಶರಣು ಎನ್ನಿ. *ಬಲಿ ಕೊಡವುದಕ್ಕಾಗಿ ತಯಾರಿಸಲಾಗುವ ಹುಲ್ಲಿನ ಬೊಂಬೆಗಳು. ವಿಧಿ ಪೂರ್ಣವಾದ ನಂತರ ತುಳಿದಾಡುತ್ತಾರೆ, ಒಲೆಗೆ ಹಾಕುತ್ತಾರೆ.

ತಾವೋ ತಿಳಿವು #74 ~ ಇರದಿರುವುದೇ ಇರುವುದರ ಮಹಾಮಾಯಿ

ಮೂಲ : ಲಾವೋ ತ್ಸು | ಮರುನಿರೂಪಣೆ : ಚಿದಂಬರ ನರೇಂದ್ರ ಮರಳುವುದೇ ತಾವೋ ಅರಳುವ ರೀತಿ, ಬಿಟ್ಟುಕೊಡುವುದೇ ತಾವೋ ಆಕ್ರಮಣದ ನೀತಿ. ಇರುವುದು ಎಲ್ಲದರ ತಂದೆ ತಾಯಿ. ಇರದಿರುವುದೇ ಇರುವುದರ ಮಹಾಮಾಯಿ.

ತಾವೋ ತಿಳಿವು #73 ~ ಸಂತ ಸಮಾಧಾನ ನೆಲೆಯಾಗಲು…

ಮೂಲ : ಲಾವೋ ತ್ಸು | ಮರುನಿರೂಪಣೆ : ಚಿದಂಬರ ನರೇಂದ್ರ ತಾವೋ ಸ್ವತಃ ಏನನ್ನೂ ಮಾಡುವುದಿಲ್ಲವಾದರೂ ಎಲ್ಲ, ತಾವೋ ಮೂಲಕವೇ ಪೂರ್ಣವಾಗುತ್ತವೆ. ಅಧಿಕಾರದಲ್ಲಿರುವವರು ತಾವೋ ಒಪ್ಪಿಕೊಂಡಾಗ ಯಾರೂ ಇನ್ನೊಬ್ಬರ ಮೇಲೆ ಹೊರೆ ಹೊರೆಸುವುದಿಲ್ಲ ತಮ್ಮ ಕೆಲಸ ತಾವೇ ಮಾಡಿ ಮುಗಿಸುತ್ತಾರೆ. ಇನ್ನೂ ಆಸೆ ಉಳಿಸಿಕೊಂಡವರನ್ನು ಅನಾಮಧೇಯ ತಾವೋ ಸರಳತೆ ಕಟ್ಟಿ ಹಾಕುತ್ತದೆ. ಬಯಕೆಗಳು ನಿಂತ ಕ್ಷಣದಲ್ಲೇ ನೆಲೆಯಾಗುತ್ತದೆ ಸಂತ ಸಮಾಧಾನ.