ತಾವೋ ತಿಳಿವು #62 ~ ಸಮಾಧಾನ ಇರುವ ಜಾಗದಲ್ಲಿ ಅಪಮಾನಕ್ಕೆ ಜಾಗವಿಲ್ಲ

ಮೂಲ : ಲಾವೋ ತ್ಸು | ಮರು ನಿರೂಪಣೆ : ಚಿದಂಬರ ನರೇಂದ್ರ ಯಾವುದು ನಿಮಗೆ ಹತ್ತಿರ ? ನೀವೋ ? ನಿಮ್ಮ ಹೆಸರೋ ? ಯಾವುದು ನಿಮಗೆ ಆಪ್ತ ? ನೀವೋ ? ನಿಮ್ಮ ಆಸ್ತಿಯೋ ? ಯಾವುದರಿಂದ ನಿಮಗೆ ಹೆಚ್ಚು ಸಂಕಟ? ಲಾಭವೋ ? ಹಾನಿಯೋ ? ಅತಿ ಮೋಹ, ಅತಿ ಖರ್ಚಿಗೆ ದಾರಿ ಕೂಡಿಟ್ಟಿದ್ದೆಲ್ಲ ಕಳೆದುಕೊಳ್ಳಲಿಕ್ಕೇ ಲಾಯಕ್ಕು. ಆದ್ದರಿಂದಲೇ ಸಮಾಧಾನ ಇರುವ ಜಾಗದಲ್ಲಿ ಅಪಮಾನಕ್ಕೆ ಜಾಗವಿಲ್ಲ ಸಂಯಮದ ಹತ್ತಿರ ಗಂಡಾಂತರ ಸುಳಿಯುವುದಿಲ್ಲ. ಇಂಥ […]

ಅಧ್ಯಾತ್ಮ ಡೈರಿ : ಮುಕ್ತವಾಗಿ ಇರುವುದೆಂದರೆ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದು ಎಂದಲ್ಲ

ನಮ್ಮ ಹೊಣೆಯನ್ನೇ ಹೊರದೆ ಮುಕ್ತವಾಗಿರಲು ಬಯಸುತ್ತೇವೆ. ನಾವು ನಿಜವಾಗಿಯೂ ಮುಕ್ತವಾಗಿ ಇರಬೇಕೆಂದರೆ, ಮೊದಲು ನಮ್ಮ ಹೊಣೆಗಾರಿಕೆಗಳನ್ನು ಸಮರ್ಥವಾಗಿ ನಿಭಾಯಿಸಬೇಕು ~ ಅಲಾವಿಕಾ ನಮಗೆ ಬಹುತೇಕರಿಗೆ ಇದೊಂದು ಬಯಕೆ ಇರುತ್ತದೆ. “ಫ್ರೀ ಆಗಿರಬೇಕು. ಯಾವ ಜಂಜಡವೂ ಇಲ್ಲದೆ ಮುಕ್ತವಾಗಿರಬೇಕು” ಎಂದು ನಾವು ಹಂಬಲಿಸುತ್ತಲೇ ಇರುತ್ತೇವೆ. ನಮ್ಮ ಹಂಬಲ ಹೇಗೆಂದರೆ, ರೆಂಬೆ ಕೊಂಬೆಗಳನ್ನು ಪೊರೆಯಲು ಬೇರುಗಳೂ ಬೇಕು, ಆಕಾಶದಲ್ಲಿ ಹಾರಲು ರೆಕ್ಕೆಗಳೂ ಬೇಕು! ನಮ್ಮ ವ್ಯಾಖ್ಯಾನದ ಪ್ರಕಾರ ‘ಫ್ರೀ ಆಗಿರುವುದು’ ಅಂದರೇನು? ಇದನ್ನು ಮೊದಲು ಕಂಡುಕೊಳ್ಳೋಣ. ಆಮೇಲೆ ನಮ್ಮ ಈ […]

ನಿನಗೆ ನೀನೇ ತೊಡರಾಗಿರುವೆ; ನಿನ್ನ ನೀನು ದಾಟು ~ ಹಫೀಜ್

ಬುದ್ಧ ಹೇಳುತ್ತಾನೆ ‘ನಿನಗೆ ನೀನೇ ಬೆಳಕು’ ಎಂದು. ಒಂದರ್ಥದಲ್ಲಿ ಹಫೀಜ್ ಹೇಳುವುದು ಆ ಬೆಳಕನ್ನು ಕಾಣಲು ‘ನಿನಗೆ ನೀನೇ ತೊಡರು; ನಿನ್ನ ನೀನು ದಾಟು’ ಎಂದು  ~ ಸಾಕಿ ಸಾಮಾನ್ಯವಾಗಿ ನಾವು ನಮ್ಮ ಕುಂದು ಕೊರತೆಗಳನ್ನು ಮುಚ್ಚಿಟ್ಟುಕೊಳ್ಳುವುದು ಜಾಸ್ತಿ. ಪರಿಪೂರ್ಣ ಮನುಷ್ಯರು ಅಂತ ಯಾರೂ ಇರುವುದಿಲ್ಲ. ಅದರೂ ನಮ್ಮ ಊನಗಳ ಬಗ್ಗೆ ಮಾತಾಡಲು ಧೈರ್ಯ ಸಾಲುವುದಿಲ್ಲ. ಯಾಕೆ ಹೀಗೆ? ಇದಕ್ಕೆ ಮುಖ್ಯ ಕಾರಣ ನಮ್ಮ ಕೀಳರಿಮೆ ಅರ್ಥಾತ್ ನಮ್ಮನ್ನು ನಾವು ಲೋಕದ ದೃಷ್ಟಿಯಲ್ಲಿ ನೋಡಿಕೊಳ್ಳುವ ಅಭ್ಯಾಸ. ಉಳಿದವರು […]

ತಾವೋ ತಿಳಿವು #61 ~ ಉಗ್ರನಿಗೆ ಸಹಜ ಸಾವಿಲ್ಲ

ಮೂಲ : ಲಾವೋ ತ್ಸು | ಮರು ನಿರೂಪಣೆ : ಚಿದಂಬರ ನರೇಂದ್ರ ತಾವೋ ಧರಿಸಿದ್ದು ಒಂದನ್ನ, ಆ ಒಂದು, ಇನ್ನೆರಡನ್ನ, ಇನ್ನೆರಡು, ಮತ್ತೆ ಮೂರನ್ನ, ಮೂರು, ಸಾವಿರ ಸಾವಿರಗಳನ್ನ. ಸಾವಿರದ ಹೆಗಲ ಮೇಲೆ ಪ್ರಕೃತಿ, ತೋಳಲ್ಲಿ ಪುರುಷ. ಪ್ರಕೃತಿ – ಪುರುಷರ ಸಮ್ಮಿಲನದಲ್ಲಿ ಸಾಮರಸ್ಯ. ಅನಾಥರನ್ನ, ಕಳೆದುಕೊಂಡವರನ್ನ, ಬಹಿಷ್ಕೃತರನ್ನ ಕಂಡರೆ ಹೇಸಿಗೆ ಜನರಿಗೆ; ಆದರೂ, ರಾಜರೂ, ಒಡೆಯರೂ ತಮ್ಮನ್ನು ತಾವು, ಹಾಗೆಂದು ಕರೆದುಕೊಳ್ಳುತ್ತಾರೆ. ಆದ್ದರಿಂದಲೇ ಕೂಡುವುದು ಎಂದರೆ, ಕಳೆಯುವುದು ಕಳೆಯುವುದು ಎಂದರೆ, ಕೂಡುವುದು. ಹಿಂದಿನ ಋಷಿಗಳ […]

ಅಧ್ಯಾತ್ಮ ಡೈರಿ : ಎಷ್ಟು ಬೆರೆತರೂ ಒಂದಾಗಲು ಸಾಧ್ಯವಾಗದು

ನಮ್ಮ ಬದುಕನ್ನು ನಾವೇ ಬದುಕಬೇಕು. ನಾವು ಯಾರೊಂದಿಗೆ ಎಷ್ಟೇ ಬೆರೆತರೂ ನಮ್ಮ ದೇಹ ಮತ್ತು ಆತ್ಮಗಳು ಪ್ರತ್ಯೇಕವಾಗಿಯೇ ಇರುತ್ತವೆ ಹೊರತು ಎರಡಳಿದು ಒಂದಾಗುವುದಿಲ್ಲ. ನಮ್ಮ ಆಲೋಚನೆಗಳು, ಭಾವನೆಗಳು ಒಂದಾಗಬಹುದು. ಒಂದೇ ರೀತಿ ನಾವು ಯೋಚಿಸಲು, ಪರಸ್ಪರ ಕಾಳಜಿ ತೋರಲು ಸಾಧ್ಯವಾಗಬಹುದು. ಆದರೆ ನಾವು ಎರಡು ದೇಹಗಳಾಗಿರುತ್ತೇವೆ. ನಮ್ಮನಮ್ಮ ದೇಹಗಳ ಒಳಗೆ ನಮ್ಮ ನಮ್ಮ ಆತ್ಮವಿರುತ್ತದೆ ~ ಅಲಾವಿಕಾ “ಉಸಿರೇ ಒಂದು ದಿನ ನಮ್ಮನ್ನು ಬಿಟ್ಟು ಹೋಗುತ್ತದೆ. ಇನ್ನು, ಪ್ರೀತಿಪಾತ್ರರು ತೊರೆದು ಹೋಗುವುದೇನು ಮಹಾ?” ಎಂದು ಕೇಳುತ್ತದೆ ಒಂದು […]

ತಾಳ್ಮೆಯು ಸಂತೋಷದ ಕೀಲಿಕೈ : ರೂಮಿ

ಒಬ್ಬರ ಮಾತನ್ನು ಪೂರ್ತಿಯಾಗಿ ಕೇಳಿಸಿಕೊಳ್ಳದೆ ಅರ್ಧದಲ್ಲೇ ಮಾತು ಮುಗಿಸಿ ಕೇಳಿಸಿಕೊಂಡಷ್ಟನ್ನು ಅಪಾರ್ಥ ಮಾಡಿಕೊಂಡರೆ ಮತ್ತೆ ಕೆಡುವುದು ನಮ್ಮದೇ ನೆಮ್ಮದಿ. ಅದಕ್ಕೇ ರೂಮಿ ಹೇಳುವುದು “ತಾಳ್ಮೆಯೇ ಸಂತೋಷದ ಕೀಲಿ ಕೈ” ಎಂದು. ತಾಳ್ಮೆ ನಮ್ಮೆಲ್ಲರ ಬಾಳಿನ ನಿತ್ಯ ನಿಯಮವಾಗಲಿ ~ ಸಾಕಿ ವೇಗಭರಿತ ಆಧುನಿಕ ಜೀವನಶೈಲಿಗೆ ಒಗ್ಗಿಕೊಂಡಿರುವ 21ನೇ ಶತಮಾನದಲ್ಲಿ ಬದುಕುತ್ತಿರುವ ನಾವು ತಾಳಿದವನು ಬಾಳಿಯಾನು ಎಂಬ ಗಾದೆ ಮಾತನ್ನು ಮರೆತೇ ಬಿಟ್ಟಿದ್ದೇವೆ. ಈ ವೇಗದ ಬದುಕು ಒಂದು ವಿಧದಲ್ಲಿ ಯಾಂತ್ರಿಕವೂ ಹೌದು. ಎಲ್ಲ ಕೆಲಸಗಳನ್ನೂ ತರಾತುರಿಯಲ್ಲಿ ಮುಗಿಸುವ […]

ಚೇತನ ಇರುವಲ್ಲಿ ಅಸ್ತಿತ್ವ, ಅಸ್ತಿತ್ವ ಇರುವಲ್ಲಿ ಅರಿವು

ಚೇತನಕ್ಕೆ ಯಾವುದೇ ರೂಪ ಇರುವುದಿಲ್ಲ. ಆದರೆ ಅದು ಸರ್ವವ್ಯಾಪಿ. ಯಾವುದಕ್ಕೆ ರೂಪಾಕಾರಗಳಿರುವುದಿಲ್ಲವೋ ಅದು ಮಾತ್ರ ಸರ್ವವ್ಯಾಪಿಯಾಗಿರಲು ಸಾಧ್ಯ. ಏಕೆಂದರೆ ರೂಪವು ಒಂದು ಸೀಮೆಯನ್ನು ಸೃಷ್ಟಿಸುತ್ತದೆ. ಯಾವುದು ಅರೂಪವೋ ಅದು ಮಾತ್ರ ಅಸೀಮವೂ ಅನಂತವೂ ಆಗಿರಲು ಸಾಧ್ಯ ~ Whosoever Ji ಮೂಲ ಹಿಂದಿ: ಶಿವೋಹsಮ್ | ಕರ್ತೃ: ಹೂಸೋಎವರ್ ಜಿ | ಕನ್ನಡಕ್ಕೆ : ಚೇತನಾ ದೇಹವು ನಾಲ್ಕು ಗೋಡೆಗಳಂತೆ ಇದೆ. ಚೇತನವು ನಡುವಣ ಆಕಾಶದಂತೆ. ನಾಲ್ಕು ಗೋಡೆಗಳ ನಡುವೆ ಬಂಧಿತವಾದ ಆಕಾಶಕ್ಕೆ ತಾನು ಕೋಣೆಯೇ ಎನ್ನಿಸುವಂತೆ, […]

ನೂರು ಕೈಗಳಿಂದ ದುಡಿದು ಸಾವಿರ ಕೈಗಳಿಂದ ಹಂಚಿ : ಅಥರ್ವ ವೇದ

“ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ” – ನೂರು ಕೈಗಳಿಂದ ದುಡಿಯಿರಿ, ಸಾವಿರ ಕೈಗಳಿಂದ ಹಂಚಿರಿ ಅನ್ನುತ್ತದೆ ಅಥರ್ವ ವೇದ.  ನಮ್ಮಲ್ಲಿ ಎಷ್ಟು ಸಾಮರ್ಥ್ಯವಿದೆಯೋ ಅಷ್ಟನ್ನೂ ದುಡಿಮೆಯಲ್ಲಿ ವಿನಿಯೋಗಿಸಬೇಕು. ಶಕ್ತಿಯನ್ನು ಪೋಲು ಮಾಡಬಾರದು. ಹೀಗೆ ದುಡಿದು ಗಳಿಸಿದ್ದನ್ನು ಸಹಜೀವಿಗಳೊಡನೆ ಹಂಚಿಕೊಳ್ಳಬೇಕು.  ನಮ್ಮ ಬುದ್ಧಿಶಕ್ತಿ, ನಮ್ಮ ತೋಳ್ಬಲಗಳೆಲ್ಲವೂ ಹೀಗೆ ಸ್ವಹಿತ ಮತ್ತು ಜನಹಿತಕ್ಕೆ ವಿನಿಯೋಗವಾಗಬೇಕು.  ಇದನ್ನೇ ಅಥರ್ವ ವೇದ ಹೇಳುತ್ತಿರುವುದು; “ನೂರು ಕೈಗಳಿಂದ ದುಡಿಯಿರಿ, ಸಾವಿರ ಕೈಗಳಿಂದ ಹಂಚಿರಿ” – “ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ” (3:24:5) ಎಂದು.  “ಆದ್ದರಿಂದ, […]

ತಾವೋ ತಿಳಿವು #60 ~ ದೂರ ಹೋದಂತೆಲ್ಲ ದಾರಿ ಕುರುಡಾಗುವುದು

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಜಗತ್ತಿನ ರಹಸ್ಯವನ್ನು ಭೇದಿಸಲು ಬಾಗಿಲು ತೆರೆಯಬೇಕಾಗಿಲ್ಲ. ಕಿಟಕಿ ತೆರೆಯದೆ ಆನಂದದ ಹಾದಿ ಹುಡುಕಬಹುದು. ದೂರ ಹೋದಂತೆಲ್ಲ ದಾರಿ ಕುರುಡಾಗುವುದು. ಅಂತೆಯೇ ಸಂತರು ಹೋಗದೆಯೇ ಬರುತ್ತಾರೆ ನೋಡದೇ ಕಾಣುತ್ತಾರೆ ದುಡಿಯದೇ ಪಡೆಯುತ್ತಾರೆ.

ನಿರಾಕಾರವು ಮೌನವಾಗಿರುತ್ತದೆ, ಆಕಾರವು ಸೀಮೆಗಳನ್ನು ಸೃಷ್ಟಿಸುತ್ತದೆ !

ಯಾವುದು ವಾಸ್ತವವೋ, ವಸ್ತುತಃ ಇದೆಯೋ ಅದು ಮೌನವಾಗಿರುತ್ತದೆ. ನಿರಾಕಾರವು ಯಾವಾಗಲೂ ಇರುವುದು ಮೌನದಲ್ಲಿಯೇ. ಅದು ತನ್ನ ಅಸ್ತಿತ್ವವನ್ನು ಘೋಷಿಸುವುದಿಲ್ಲ. ಆದರೆ ಎಲ್ಲ ಸಾಕಾರವೂ ಕೂಗಿಕೂಗಿ ತನ್ನನ್ನು ತೋರಿಸಿಕೊಳ್ಳುತ್ತವೆ. ನಾನು ಇದ್ದೀನಿ ಎಂದು ಘೋಷಿಸಿಕೊಳ್ಳುತ್ತವೆ. ಆಕಾರವು ಸೀಮೆಗಳನ್ನು ಸೃಷ್ಟಿಸುತ್ತವೆ. ~ Whosoever Ji ಚೇತನವಿಲ್ಲದೆ ಹೋದರೆ ಯಾವುದಕ್ಕೂ ಅಸ್ತಿತ್ವವಿರದು. ‘ಇದ್ದೇನೆ’ ಅನ್ನುವ ಭಾವವೂ ಇಲ್ಲ, ‘ನಾನು ಇದ್ದೇನೆ’ ಎನ್ನುವ ಭಾವವೂ ಇಲ್ಲ…. ಜಗತ್ತು ಇಲ್ಲ, ಪರಮಾತ್ಮವೂ ಇಲ್ಲ, ಈಶ್ವರ – ಪರಮೇಶ್ವರರೂ ಇಲ್ಲ… ನೀವು ಭಗವಂತನ ಇರುವಿಕೆಯನ್ನು ನಂಬುತ್ತೀರಿ. ಮಂದಿರಗಳಿಗೆ […]