ತಾವೋ ತಿಳಿವು #69 ~ ಅನಂತ ಸಾಧ್ಯತೆಗಳ ಬಯಲು, ತಾವೋ

ಮೂಲ : ಲಾವೋ ತ್ಸು | ಮರುನಿರೂಪಣೆ : ಚಿದಂಬರ ನರೇಂದ್ರ ತಾವೋ ಒಂದು ಬಾವಿ ಸೇದಿದಷ್ಟೂ ತುಂಬಿಕೊಳ್ಳುವ ಬಾವಿ ಅನಂತ ಸಾಧ್ಯತೆಗಳ ಮಹಾ ಬಯಲು. ಇರುವುದಂತೂ ಹೌದು, ಆದರೆ ಯಾರಿಗೂ ಕಾಣಿಸುವುದಿಲ್ಲ ಯಾರು ಕಟ್ಟಿಸಿದರೋ? ದೇವರಿಗಿಂತ ಹಳೆಯದು ಮಾತ್ರ ನಿಜ.

ತಾವೋ ತಿಳಿವು #68 ~ ತಾವೋ ಕೊಂಚವೂ ಹರಿದು ಹೋಗಿಲ್ಲ

ಮೂಲ : ಲಾವೋ ತ್ಸು | ಮರುನಿರೂಪಣೆ : ಚಿದಂಬರ ನರೇಂದ್ರ ತಾವೋ ನೆಲದಲ್ಲಿ ಬೇರು ಬಿಟ್ಟಿದ್ದನ್ನ ಕೀಳಲಾಗುವುದಿಲ್ಲ. ತಾವೋ ಅಪ್ಪಿಕೊಂಡವರು ಜಾರಿಕೊಳ್ಳುವುದಿಲ್ಲ. ತಲತಲಾಂತರದಿಂದ ಹರಿದು ಬಂದಿದ್ದರೂ ತಾವೋ ಕೊಂಚವೂ ಹರಿದು ಹೋಗಿಲ್ಲ. ಬದುಕಿನಲ್ಲಿ ಮನೆ ಮಾಡಿದಾಗ ತಾವೋ ಗುಣ, ಸಾಚಾ ಕುಟುಂಬದಲ್ಲಿ ಬೇರೂರಿದಾಗ, ಅಪಾರ. ಸಮಾಜದಲ್ಲಿ ಗಟ್ಚಿಯಾದಾಗ, ಶಾಶ್ವತ. ದೇಶದಲ್ಲಿ ನೆಲೆಯಾದಾಗ, ಏಳಿಗೆ. ಜಗತ್ತಿನಲ್ಲಿ ಒಂದಾದಾಗ, ಸಾರ್ವತ್ರಿಕ. ಆದ್ದರಿಂದ, ನಿನ್ನ ಕಣ್ಣಿಂದ ಇತರರನ್ನು ನೋಡುವಂತೆ ಕುಟುಂಬಗಳನ್ನ, ಕುಟುಂಬದ ಕಣ್ಣಿಂದ ಕಾಣು. ಸಮಾಜಗಳನ್ನ, ಸಮಾಜದ ಕಣ್ಣಿಂದ ಕಾಣು. […]

ನಾಳೆ ಬರುವುದು ನಾಳೆಯೇ, ಈ ದಿನವನ್ನು ಸಂತಸದಿಂದ ಕಳೆಯಿರಿ : ಬೆಳಗಿನ ಹನಿ

ದೂರದೃಷ್ಟಿ ಇರಬೇಕು ನಿಜ. ನಾಳೆಯ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು ಅನ್ನುವುದೂ ನಿಜ. ಹಾಗೆಂದು ನಾಳೆಯ ಆಲೋಚನೆಗಳಲ್ಲೇ ಇಂದು ಮಾಡಬೇಕಾದ ಕೆಲಸಗಳಿಂದ ವಿಮುಖರಾಗುವುದು ಸರಿಯಲ್ಲ. ಇಂದು ಅನುಭವಿಸಬೇಕಾದ ಆನಂದದಿಂದ ನಮ್ಮನ್ನು ವಂಚಿಸಿಕೊಳ್ಳುವುದೂ ಸರಿಯಲ್ಲ. ಇಂದಿನ ದುಡಿಮೆಯನ್ನು ನಾಳೆಗಾಗಿಯೂ ಕೊಂಚ ಎತ್ತಿಡುವುದು ಜಾಣ ನಡೆ. ಇತರ ಪ್ರಾಣಿಗಳಂತಲ್ಲದೆ ಮನುಷ್ಯನ ಬದುಕಿನಲ್ಲಿ ಮನೆ, ಮಕ್ಕಳು (ಕುಟುಂಬ) ಮತ್ತು ಸ್ವಾಭಿಮಾನಗಳು ಹೆಚ್ಚುವರಿಯಾಗಿರುತ್ತವೆ. ಅವುಗಳನ್ನು ಕಾಯ್ದುಕೊಳ್ಳುವುದು ಕೂಡ ಮನುಷ್ಯನ ಕರ್ತವ್ಯಗಳ ಸಾಲಿಗೆ ಸೇರುತ್ತದೆ. ಆದ್ದರಿಂದ ಉಳಿತಾಯ ಯಾವುದೇ ಮನುಷ್ಯನ ಮೂಲಭೂತ ಕರ್ತವ್ಯವಾಗಿದೆ.  ಆದರೆ ಉಳಿತಾಯವನ್ನು ಒಂದು […]

ಕ್ಷಮೆ ಅಂದರೇನು, ಹೇಳು ಸೂಫಿ…

ಕ್ಷಮಿಸುವುದು ಧೀರತನ. ಧೈರ್ಯವಂತರಷ್ಟೆ ಕ್ಷಮಿಸಬಲ್ಲರು, ಹೇಡಿಗಳಿಂದ ಅದು ಸಾಧ್ಯವಿಲ್ಲ…. ಮನುಷ್ಯರನ್ನು ಮನುಷ್ಯರನ್ನಾಗಿಸುವುದು ಯಾವುದು ಎಂದು ಕೇಳಲಾಯ್ತು. ಮೂಡಿಬಂದ ಒಕ್ಕೊರಲಿನ ಉತ್ತರ “ಕ್ಷಮೆ” ಎಂಬುದೇ ಆಗಿತ್ತು. ಮಿಕ್ಕೆಲ್ಲ ಪ್ರಾಣಿಗಳು ಕ್ರಿಯೆಗೆ ಪ್ರತಿಕ್ರಿಯೆ ತೋರಲು ಸಿದ್ಧವಾಗಿಯೇ ಇರ್ತವೆ. ಇನ್ನು ಕೆಲವು ಯಾರಿಂದಲಾದರೂ ಸಮಸ್ಯೆ ಒದಗುವ ಮೊದಲೇ ತನ್ನ ರಕ್ಷಣೆಗೆ ಸನ್ನದ್ಧವಾಗಿರ್ತವೆ. ಪ್ರಾಣಿಗಳಿಗೆ ತಮ್ಮ ಜೀವ ಮುಖ್ಯ. ತಮ್ಮ ಆಹಾರ ಮುಖ್ಯ. ತಮ್ಮ ನೆಲೆ ಮುಖ್ಯ. ಅವುಗಳ ಸೃಷ್ಟಿಯೇ ಹಾಗಿದೆ. ನಾಯಿಯ ಎದುರಿಟ್ಟ ಮೂಳೆ ತುಂಡನ್ನು ಮುಟ್ಟಿದರೆ ಅದು ಸುಮ್ಮನೆ ಬಿಡುವುದೇ? […]

ತಾವೋ ತಿಳಿವು #67 ~ ಬಾಗುವವು, ಹಸಿರಾದವು ಬಹುಕಾಲ ಬಾಳುತ್ತವೆ…

ಮೂಲ : ಲಾವೋ ತ್ಸು | ಮರುನಿರೂಪಣೆ : ಚಿದಂಬರ ನರೇಂದ್ರ ಮನುಷ್ಯ ಹುಟ್ಟಾ ಮೃದು ಸತ್ತಾಗ ಮಾತ್ರ, ಬಿರುಸು, ಗಡಸು. ಗಿಡ ಮರ, ಹೂ ಬಳ್ಳಿಗಳೂ ಹಾಗೇ; ಕೋಮಲ, ನಮ್ರ ಬಾಡಿದಾಗ, ಬರಡಾದಾಗ ಮಾತ್ರ ಒರಟು, ಪೆಡಸು. ಅಂತೆಯೇ ಸೆಟೆದವರು, ಬಾಗದವರು ಸಾವಿನ ಹರಿಕಾರರು. ನಮ್ರರು, ಒಗ್ಗಿಕೊಳ್ಳುವವರು ಬದುಕಿನ ವಾರಸುದಾರರು. ಸೆಟೆದವು, ಒಣಗಿದವನ್ನ ಮುರಿಯುವುದು ಸುಲಭ ಬಾಗುವವು, ಹಸಿರಾದವು ಬಹುಕಾಲ ಬಾಳುತ್ತವೆ.  

ನಿಮಗಾಗಿ ನೀವು ಓಡಿ, ಸ್ಪರ್ಧೆಗಾಗಿ ಅಲ್ಲ : ಬೆಳಗಿನ ಹನಿ

  ನಿಮಗಾಗಿ ನೀವು ಗುರಿ ನಿಕ್ಕಿ ಮಾಡಿಕೊಳ್ಳಿ, ನಿಮ್ಮ ಓಟ ನೀವು ಓಡಿ. ನೀವು ನಿಗದಿಪಡಿಸಿಕೊಂಡ ಅವಧಿಯಲ್ಲಿ ಗುರಿ ತಲುಪುವಿರೋ ಇಲ್ಲವೋ ಗಮನಿಸಿ. ಸಾಧ್ಯವಾಗದೆ ಹೋದರೆ, ಗುರಿಯ ವ್ಯಾಪ್ತಿಯನ್ನೆ ಒಂದಷ್ಟು ಚಿಕ್ಕದಾಗಿಸಿಕೊಳ್ಳಿ. ಇದರಿಂದ ನಷ್ಟವೇನಾಗದು. ನೀವು ಯಾರಿಗೂ ಏನನ್ನೂ ಪ್ರೂವ್ ಮಾಡಬೇಕಿಲ್ಲ. ನೀವು ಖುಷಿಯಿಂದ ಇರುವುದಷ್ಟೆ ಮುಖ್ಯ ~ ಚೈತನ್ಯ ಬಹುತೇಕವಾಗಿ ನಾವೆಲ್ಲರೂ ನಮ್ಮ ವೈಫಲ್ಯಗಳನ್ನು ಯಾರ ಮೇಲಾದರೂ ಹೊರಿಸಿ ಪಾರಾಗುವ ಯೋಚನೆಯನ್ನು ಮಾಡುತ್ತಿರುತ್ತೇವೆ. ಹೀಗೆ ನಮ್ಮ ಸೋಲಿನ ಹೊಣೆ ಹೊರಲಿಕ್ಕೆ ಸುಲಭವಾಗಿ ಸಿಗುವ ಹೆಗಲು ‘ವಿಧಿ’ಯದ್ದು. […]

ತಾವೋ ತಿಳಿವು #66 ~ ಮಹಾವೃಕ್ಷ ಕೂಡ, ಮೊಳಕೆಯೊಡೆಯುವುದು ಪುಟ್ಚ ಬೀಜದಿಂದಲೇ…

ಮೂಲ : ಲಾವೋ ತ್ಸು | ಮರುನಿರೂಪಣೆ : ಚಿದಂಬರ ನರೇಂದ್ರ ಬೇರು ಬಿಟ್ಟಿರುವುದನ್ನ, ಸಲಹುವುದು ಸುಲಭ. ಹೊಸ ತಪ್ಪುಗಳನ್ನ, ತಿದ್ದುವುದು ಸುಲಭ. ಗಡುಸಾಗಿರುವುದನ್ನ, ಮುರಿಯುವುದು ಸುಲಭ. ಧೂಳಾದರೆ, ಗಾಳಿಯಲ್ಲಿ ಹರಿಬಿಡುವುದು ಸುಲಭ. ಅವತಾರಕ್ಕಿಂತ ಮುಂಚೆಯೇ ಅನಾಹುತ ಗುರುತಿಸು. ಹುಟ್ಟುವುದಕ್ಕಿಂತ ಮೊದಲೇ ತೊಟ್ಚಿಲು ಕಟ್ಚಿಸು. ಮಹಾವೃಕ್ಷ ಕೂಡ, ಮೊಳಕೆಯೊಡೆಯುವುದು ಪುಟ್ಚ ಬೀಜದಿಂದಲೇ. ಸಣ್ಣ ಹೆಜ್ಜೆ ಎತ್ತಿಟ್ಟಾಗಲೇ ಜೈತ್ರಯಾತ್ರೆಯ ಶುರುವಾತು. ದುಡುಕಿದವ ಎಡವುತ್ತಾನೆ. ಕೈಚಾಚಿದವ ಕಳೆದುಕೊಳ್ಳುತ್ತಾನೆ. ಅಂತೆಯೇ ಸಂತ ಮಾಗುವ ತನಕ ಕಾಯುತ್ತಾನೆ. ಶುರುವಿನಲ್ಲಿ ಇದ್ದ ಸಮಾಧಾನ ಕೊನೆಯವರೆಗೂ […]

ಲಿಂಜಿ ಹೇಳಿದ್ದು : ಬುದ್ಧನೆಂಬುದಿಲ್ಲ, ಧರ್ಮವೆಂಬುದಿಲ್ಲ…

ಲಿಂಜಿ ಯಿಕ್ಸುಆನ್ | ಅನುವಾದ : ಚೇತನಾ ತೀರ್ಥಹಳ್ಳಿ ನನ್ನಲ್ಲಿ ಕೊಡಲು ಧರ್ಮದಂಥದೇನು ಇಲ್ಲ ಕಾಯಿಲೆ ಗುಣಪಡಿಸುವೆ, ಗಂಟು ಬಿಡಿಸುವೆನಷ್ಟೆ. ದಶ ದಿಕ್ಕುಗಳ ದಾರಿಯನುಗರೇ, ಅವಲಂಬಿಸಬೇಡಿ ಯಾವುದರ ಮೇಲೂ. ಬುದ್ಧನೆಂಬುವನಿಲ್ಲ, ಧರ್ಮವೆಂಬುದಿಲ್ಲ, ತರಬೇತಿ ಏನಿಲ್ಲ, ಮತ್ತು ಜ್ಞಾನೋದಯವೂ ಇಲ್ಲ. ಯಾತರ ಬೆನ್ನತ್ತಿದ್ದೀರಿ ಬಿರುಸಾಗಿ? ತಲೆ ಮೇಲೆ ತಲೆ ಹೊತ್ತುಕೊಂಡು, ಕುರುಡು ಕಡು ಮೂರ್ಖರೇ! ನಿಮ್ಮ ತಲೆ ಇರಬೇಕಾದಲ್ಲೇ ಸರಿಯಾಗಿದೆ. ~ ಲಿಂಜಿ ಯಿಕ್ಸುಆನ್‌ 9ನೇ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಬೌದ್ಧ ಸಂತ. ಚಾನ್ ಬುದ್ಧಿಸಮ್’ನ ಲಿಂಜಿ ಶಾಖೆಯ […]

ಮರಳು ಮತ್ತು ನೊರೆ ~ ಖಲೀಲ್ ಗಿಬ್ರಾನ್ : ಕಾವ್ಯ ವಿರಾಮ #2

ಖಲೀಲ್ ಗಿಬ್ರಾನ್’ರ ‘SAND AND FOAM’ ಕೃತಿಯಲ್ಲಿ ಗದ್ಯ – ಪದ್ಯಗಳ ಹದ ಬೆರಕೆಯ ರಚನೆಗಳಿವೆ. ಕಾವ್ಯ, ಅನುಭಾವ, ತಾತ್ತ್ವಿಕತೆಯೇ ಮೊದಲಾದ ಗುಣಗಳು ಮೆಳೈಸಿರುವ ಈ ರಚನೆಗಳನ್ನು ನಿರ್ದಿಷ್ಟವಾಗಿ ಯಾವ ಪ್ರಕಾರಕ್ಕೆ ಸೇರಿಸಬೇಕೆಂಬುದೇ ಗೊಂದಲ. ಈ ರಚನೆಗಳು ಎಲ್ಲ ಕಡೆಗೂ, ಎಲ್ಲ ಕಾಲಕ್ಕೂ ಸಲ್ಲುತ್ತವೆ ಅನ್ನುವುದು ಮಾತ್ರ ನಿರ್ವಿವಾದ. SAND AND FOAM ಕೃತಿಯ ಈ ರಚನೆಗಳನ್ನು ತಮ್ಮ ವಿಶಿಷ್ಟ ಶೈಲಿಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ, ‘ಅರಳಿ ಬಳಗ’ದ ಬರಹಗಾರ ಚಿದಂಬರ ನರೇಂದ್ರ.  ತಾಯಿಯ ಎದೆಯಲ್ಲಿ ಮೌನವಾಗಿರುವ ಹಾಡು, ಮಗುವಿನ […]

ಎಲ್ಲರಲ್ಲೂ ತನ್ನನ್ನು ಕಾಣುವವನೇ ಜ್ಞಾನಿ : ಈಶಾವಾಸ್ಯ ಉಪನಿಷತ್

“ಯಾರ ಬಗ್ಗೆಯೂ ಬೇಸರವನ್ನಾಗಲೀ ಮತ್ಸರವನ್ನಾಗಲೀ ಇಟ್ಟುಕೊಳ್ಳದವರು ಸಹಜವಾಗಿ ಶುದ್ಧಪ್ರೇಮ ಭಾವವನ್ನು ಹೊಂದಿರುತ್ತಾರೆ. ಇಂತಹ ಸಹಜ ಪ್ರೇಮಿಗಳೇ ನಿಜವಾದ ಜ್ಞಾನಿಗಳು” ಎನ್ನುವುದು ಈಶಾವಾಸ್ಯದ ಈ ಶ್ಲೋಕದ ಅಂತರಾರ್ಥ.  ಯಸ್ಮಿನ್ ಸರ್ವಾಣಿ ಭೂತಾನಿ, ಆತ್ಮೈ ವಾ ಭೂದ್ವಿಜಾನತಃ | ತತ್ರ ಕೋ ಮೋಹ ಕಃ ಶೋಕ ಏಕತ್ವಮನುಪಶ್ಯತಃ || “ಯಾರು ಎಲ್ಲ ಜೀವಿಗಳಲ್ಲೂ ತಮ್ಮ ಆತ್ಮವನ್ನೆ ಕಾಣುತ್ತಾರೋ ಅವರಿಗೆಂಥ ಮೋಹ? ಅವರಿಗೆಂಥ ಶೋಕ? ಅವರು ಎಲ್ಲರನ್ನೂ ಸಮಾನವಾಗಿಯೇ ಕಾಣುತ್ತಾರೆ” ಎಂಬುದು ನೇರ ಅರ್ಥ. ಈ ಶ್ಲೋಕದ ಮೂಲಕ ಈಶಾವಾಸ್ಯವು ಎಲ್ಲರನ್ನೂ […]