ಚೇತನದ ಜ್ಞಾನ ಮತ್ತು ಅಜ್ಞಾನಾವಸ್ಥೆ

ವಸ್ತುತಃ ಚೇತನವು ಕನ್ನಡಿಯಂತೆ. ಚೇತನದ ಕನ್ನಡಿಯಲ್ಲಿ ಯಾವುದು ಪ್ರತಿಬಿಂಬಿತಗೊಳ್ಳುತ್ತದೆಯೋ, ಚೇತನದ ಕನ್ನಡಿಯಲ್ಲಿ ಯಾರು ಹಣಕುತ್ತಾರೋ, ಚೇತನವು ಅದರೊಂದಿಗೆ ತಾದಾತ್ಮ್ಯಗೊಳ್ಳುತ್ತದೆ. ಆ ಪ್ರತಿಬಿಂಬವನ್ನು ಸ್ವತಃ ತಾನೇ ಎಂಬಂತೆ ಭ್ರಮಿಸತೊಡಗುತ್ತದೆ. ಚೇತನವು ಆ ಪ್ರತಿಬಿಂಬದೊಡನೆ ಕಲೆತುಹೋಗುತ್ತದೆ ~ Whosoever Ji ಮೂಲ ಹಿಂದಿ: ಶಿವೋಹsಮ್ | ಕರ್ತೃ: ಹೂಸೋಎವರ್ ಜಿ | ಕನ್ನಡಕ್ಕೆ : ಚೇತನಾ ಚೇತನದ ಗೈರಿನಲ್ಲಿ ದೇಹಕ್ಕೆ ಯಾವ ಮೌಲ್ಯವೂ ಇರುವುದಿಲ್ಲ. ಈ ದೇಹದ ಸಂಪೂರ್ಣ ವ್ಯವಸ್ಥೆಯ ಚಾಲಕ ಶಕ್ತಿ ಏನಿದೆ, ಅದು ಚೇತನವೇ ಆಗಿದೆ. ದೇಹದಲ್ಲಿ […]

ಚೇತನ ಇರುವಲ್ಲಿ ಅಸ್ತಿತ್ವ, ಅಸ್ತಿತ್ವ ಇರುವಲ್ಲಿ ಅರಿವು

ಚೇತನಕ್ಕೆ ಯಾವುದೇ ರೂಪ ಇರುವುದಿಲ್ಲ. ಆದರೆ ಅದು ಸರ್ವವ್ಯಾಪಿ. ಯಾವುದಕ್ಕೆ ರೂಪಾಕಾರಗಳಿರುವುದಿಲ್ಲವೋ ಅದು ಮಾತ್ರ ಸರ್ವವ್ಯಾಪಿಯಾಗಿರಲು ಸಾಧ್ಯ. ಏಕೆಂದರೆ ರೂಪವು ಒಂದು ಸೀಮೆಯನ್ನು ಸೃಷ್ಟಿಸುತ್ತದೆ. ಯಾವುದು ಅರೂಪವೋ ಅದು ಮಾತ್ರ ಅಸೀಮವೂ ಅನಂತವೂ ಆಗಿರಲು ಸಾಧ್ಯ ~ Whosoever Ji ಮೂಲ ಹಿಂದಿ: ಶಿವೋಹsಮ್ | ಕರ್ತೃ: ಹೂಸೋಎವರ್ ಜಿ | ಕನ್ನಡಕ್ಕೆ : ಚೇತನಾ ದೇಹವು ನಾಲ್ಕು ಗೋಡೆಗಳಂತೆ ಇದೆ. ಚೇತನವು ನಡುವಣ ಆಕಾಶದಂತೆ. ನಾಲ್ಕು ಗೋಡೆಗಳ ನಡುವೆ ಬಂಧಿತವಾದ ಆಕಾಶಕ್ಕೆ ತಾನು ಕೋಣೆಯೇ ಎನ್ನಿಸುವಂತೆ, […]

ನಿರಾಕಾರವು ಮೌನವಾಗಿರುತ್ತದೆ, ಆಕಾರವು ಸೀಮೆಗಳನ್ನು ಸೃಷ್ಟಿಸುತ್ತದೆ !

ಯಾವುದು ವಾಸ್ತವವೋ, ವಸ್ತುತಃ ಇದೆಯೋ ಅದು ಮೌನವಾಗಿರುತ್ತದೆ. ನಿರಾಕಾರವು ಯಾವಾಗಲೂ ಇರುವುದು ಮೌನದಲ್ಲಿಯೇ. ಅದು ತನ್ನ ಅಸ್ತಿತ್ವವನ್ನು ಘೋಷಿಸುವುದಿಲ್ಲ. ಆದರೆ ಎಲ್ಲ ಸಾಕಾರವೂ ಕೂಗಿಕೂಗಿ ತನ್ನನ್ನು ತೋರಿಸಿಕೊಳ್ಳುತ್ತವೆ. ನಾನು ಇದ್ದೀನಿ ಎಂದು ಘೋಷಿಸಿಕೊಳ್ಳುತ್ತವೆ. ಆಕಾರವು ಸೀಮೆಗಳನ್ನು ಸೃಷ್ಟಿಸುತ್ತವೆ. ~ Whosoever Ji ಚೇತನವಿಲ್ಲದೆ ಹೋದರೆ ಯಾವುದಕ್ಕೂ ಅಸ್ತಿತ್ವವಿರದು. ‘ಇದ್ದೇನೆ’ ಅನ್ನುವ ಭಾವವೂ ಇಲ್ಲ, ‘ನಾನು ಇದ್ದೇನೆ’ ಎನ್ನುವ ಭಾವವೂ ಇಲ್ಲ…. ಜಗತ್ತು ಇಲ್ಲ, ಪರಮಾತ್ಮವೂ ಇಲ್ಲ, ಈಶ್ವರ – ಪರಮೇಶ್ವರರೂ ಇಲ್ಲ… ನೀವು ಭಗವಂತನ ಇರುವಿಕೆಯನ್ನು ನಂಬುತ್ತೀರಿ. ಮಂದಿರಗಳಿಗೆ […]

ನಾನೆಂಬ ಆಭಾಸವೇ ಮಾಯೆ : ಶಿವೋsಹಂ ಸರಣಿ

ಒಂದು ಕಡೆ ಅಸ್ತಿತ್ವವಿದೆ, ಇರುವಿಕೆಯಿದೆ; ಇನ್ನೊಂದೆಡೆ ಶರೀರವಿದೆ. ಇವುಗಳ ಮಿಲನದಿಂದ ‘ನಾನು ಇದ್ದೇನೆ’ ಎನ್ನುವ ಭಾವವು ಜನ್ಮ ತಳೆಯುತ್ತದೆ. ಈ ‘ನಾನು’ ಎನ್ನುವುದರ ಆಭಾಸವೇ ಮಾಯೆ ಅನ್ನಿಸಿಕೊಳ್ಳುವುದು. ಈ ‘ನಾನು’ ಭಾವವೇ ಮಾಯೆ ಅನ್ನಿಸಿಕೊಳ್ಳುವುದು ~ Whosoever Ji ಈ ದೇಹವನ್ನುಸೂಚಿಸಲು ಒಂದು ಆಧಾರ ಬೇಕಾಗುತ್ತದೆ. ಮತ್ತು ಆ ಆಧಾರವು ‘ನಾನು’ ಎಂಬುದಾಗಿರುತ್ತದೆ. ಈ ದೇಹವನ್ನು ಸೂಚಿಸಲು ನಾವು ‘ನಾನು’ ಎಂಬ ಪದವನ್ನು ಬಳಸುತ್ತೇವೆ. ಪ್ರತಿಯೊಂದು ರೂಪ, ಆಕಾರವನ್ನು ಸೂಚಿಸಲು ಒಮದು ಹೆಸರಿನ ಅವಶ್ಯಕತೆ ಇರುತ್ತದೆ. ಈ […]

ಅಸ್ತಿತ್ವದ ಅರಿವು ಶರೀರದಲ್ಲಷ್ಟೆ ಇರುವುದು

ಹಾಗೊಮ್ಮೆ ರಾತ್ರಿಯ ಗಾಢ ನಿದ್ದೆಯಲ್ಲಿ ನಾನು ಇಲ್ಲವಾದರೆ, ಮುಗಿದುಹೋದರೆ, ಮರುದಿನ ನಾನು ಮತ್ತೆ ಅಸ್ತಿತ್ವ ಪಡೆಯಲು ಸಾಧ್ಯವಾಗದು. ಯಾರು ಇಲ್ಲವಾಗುತ್ತಾರೋ ಅವರು ಮರಳಿ ಬರುವುದಾದರೂ ಹೇಗೆ? ಮರಳಿ ಬರುವುದಕ್ಕೆ ಮುನ್ನ `ಇರುವುದು’ ಅಗತ್ಯವಿರುತ್ತದೆ. ಯಾವುದು `ಇರು’ವುದೋ ಅದು ಮಾತ್ರ ಮರಳಿ ಬರಬಲ್ಲದು. ಯಾವುದು ಇಲ್ಲವಾಗುವುದೋ ಅದು ಮರಳಿ ಬರಲಾದರೂ ಹೇಗೆ ಸಾಧ್ಯ? ~ Whosoever JI ಪ್ರತಿ ಬೆಳಗ್ಗೆ ಗಾಢ ನಿದ್ರೆಯಿಂದ ಎಚ್ಚೆತ್ತ ಮೇಲೆ, ಎಲ್ಲಕ್ಕಿಂತ ಮೊದಲು ಅರಿವಿಗೆ ಬರುವುದೇ ಇದು – ನಾನು ಇದ್ದೀನಿ ಅನ್ನುವುದು. […]

ಮಾಡುವ ಕೆಲಸವನ್ನೇ ತಿಳಿದು ಮಾಡುವುದು ಒಳ್ಳೆಯದು : ಧ್ಯಾನಗೈಯುವರಾರು? #ಭಾಗ2

ಸರಿಯಾದ ಜ್ಞಾನ, ಸರಿಯಾದ ತಿಳುವಳಿಕೆಯಿಂದ ಬಹಳ ದೊಡ್ಡ ವ್ಯತ್ಯಾಸವೇ ಉಂಟಾಗುತ್ತದೆ. ಭರವಸೆ ಹೆಚ್ಚುತ್ತದೆ, ಸಾಧ್ಯತೆಗಳು ಹೆಚ್ಚುತ್ತವೆ, ಅನುಭವ ಅರಳಿಕೊಳ್ಳುತ್ತದೆ ~ Whosoever Ji ಪ್ರತಿ ವ್ಯಕ್ತಿಯ ನಡೆ ವೈಯಕ್ತಿಕವಾದದ್ದು. ಅದು ತಮ್ಮೊಳಗೇ ಇರುವಂಥದ್ದು. ಆದರೂ ನಾವು ಯಾವ ಹಾದಿಯಲ್ಲಿ ಸಾಗಬೇಕು, ಯಾವುದು ನಮಗೆ ಒಗ್ಗುವುದಿಲ್ಲ ಎನ್ನುವ ಮಾರ್ಗದರ್ಶನ ಮಾಡಲು ಗುರುವೊಬ್ಬರ ಅವಶ್ಯಕತೆ ಇರುತ್ತದೆ. ಗುರುವಾದವನು ಪ್ರತಿಯೊಬ್ಬರಿಗೂ ಅವರವರಿಗೆ ಹೊಂದುವಂತಹ ಮಾರ್ಗವನ್ನು ತೋರಿಸಿಕೊಡುತ್ತಾನೆ. ನಮ್ಮೊಳಗಿನ ಮಾರ್ಗ ಅಮೂರ್ತವೂ ಅವ್ಯಕ್ತವೂ ಆಗಿರುತ್ತದೆ. ಅದು ಅಗೋಚರವಾಗಿದ್ದು, ಬರಿಗಣ್ಣಿಗೆ ಕಾಣಿಸದು. ನೀವು ಬಹಳ […]

ಜ್ಞಾನವನ್ನು ಪಡೆದವರು ಅದನ್ನು ಹಂಚಬೇಕು : ಧ್ಯಾನಗೈಯುವರಾರು? #ಭಾಗ1

ನಮ್ಮ ದೇಶದಲ್ಲೇ ನೂರಿಪ್ಪತ್ತು ಜನರಿಗೆ ಜ್ಞಾನ ಪ್ರಾಪ್ತಿ ಆದಂತಾಯ್ತು! ಆದರೆ ಈ ನೂರಿಪ್ಪತ್ತರಲ್ಲಿ ಇಪ್ಪತ್ತು ಜನರಾದರೂ ಧ್ಯಾನದ ವಿಷಯ ಮಾತಾಡಲಾರರು ಎಂದಾದರೆ, ಅದರ ಬಗ್ಗೆ ತಿಳಿಹೇಳಲಾರರು ಎಂದಾದರೆ ಏನು ಪ್ರಯೋಜನ? ತಾವು ಏನನ್ನು ಅರಿತುಕೊಂಡಿದ್ದಾರೋ ಅದನ್ನು ಮತ್ತಷ್ಟು ಜನರು ಅನುಸರಿಸುವಂತೆ ಪ್ರೇರೇಪಣೆ ನೀಡದೆ ಉಳಿದರೆ ಏನುಪಯೋಗವಾದಂತಾಯ್ತು!? ~ Whosoever Ji  ಧ್ಯಾನ ಮಾಡುವುದೆಂದರೆ ನಮ್ಮ ಜೊತೆ ನಾವಿರುವುದು. ನಾವೇ ನಾವಾಗುವುದು. ಮಿಕ್ಕೆಲ್ಲವೂ ಅದರಲ್ಲೇ ಒಳಗೊಳ್ಳುತ್ತದೆ. ಈಗ ಮತ್ತೊಂದು ಪ್ರಶ್ನೆ ಹುಟ್ಟುತ್ತದೆ. ಧ್ಯಾನ ಯಾರು ಮಾಡುತ್ತಾರೆ? ಮತ್ತು ಧ್ಯಾನ ಯಾರನ್ನು […]

ಧ್ಯಾನವೆಂದರೆ ಸ್ವಯಂನ ಹುಡುಕಾಟದ ಪ್ರಕ್ರಿಯೆ….

ಏನು ಹುಡುಕಿದರೆ ತೃಪ್ತಿಯಾಗುವುದು, ಅಭಾವ ಕಳೆಯುವುದು, ಯಾವುದು ಸಿಕ್ಕರೆ ಶಾಂತಿ ಸಿಗುವುದು ಎಂದು ಹುಡುಕಾಡುತ್ತಿದ್ದೀರಿ. ಕೊನೆಯಲ್ಲಿ ನಿಮಗೆ ಗೊತ್ತಾಗುತ್ತದೆ, ಯಾವ ಮರೀಚಿಕೆಯ ಬೆನ್ನು ಹತ್ತಿ ನೀವು ಓಡುತ್ತಿದ್ದಿರೋ ಅದು ಯಾವಾಗಿಂದಲೂ ನಿಮ್ಮೊಳಗೆಯೇ ಇದೆಯೆಂದು… ನೀವು ತಪ್ಪು ಜಾಗದಲ್ಲಿ ಹುಡುಕುತ್ತಿದ್ದಿರೆಂದು. ನಿಮಗೆ ಏನಾದರೂ ಅಭಾವ ಉಂಟಾದಾಗ- ಅದು ಏನೇ ಆಗಿರಲಿ, ಆ ಅಭಾವವನ್ನು ತುಂಬಿಕೊಳ್ಳಲು ಹುಡುಕಾಟ ಆರಂಭವಾಗುತ್ತದೆ. ಧ್ಯಾನವು ಪರಿಪಕ್ವಗೊಂಡಾಗ ನಿಮಗೆ ನೀವು ಹುಡುಕುತ್ತಿದ್ದುದು ನಿಮ್ಮನ್ನೇ ಎನ್ನುವ ತಿಳಿವು ಉಂಟಾಗುತ್ತದೆ. ಅಷ್ಟೇ ಅಲ್ಲ, ನೀವು ಪರಿಪೂರ್ಣರೆಂದೂ ನಿಮ್ಮಲ್ಲಿ ಲವಲೇಷದಷ್ಟೂ […]

ನಿಮ್ಮ ನಿಜವಾದ ಪರಿಚಯವೇನು ತಿಳಿದಿದೆಯೇ?

ಜೀವನ ಪರ್ಯಂತ ನಿಮ್ಮ ಪರಿಚಯ ಬದಲಾಗುತ್ತಲೇ ಇರುತ್ತದೆ. ಅಷ್ಟೇ ಅಲ್ಲ, ದಿನವೊಂದರಲ್ಲೆ ಹಲವು ಬಾರಿ ನಿಮ್ಮ ಪರಿಚಯ ಬದಲಾಗುತ್ತದೆ. ನಿಮ್ಮ ಕೆಲಸ, ಹುದ್ದೆ, ಸಂಬಂಧಗಳಿಗೆ ತಕ್ಕಂತೆ ನಿಮ್ಮ ಪಾತ್ರಗಳು ಬದಲಾಗುತ್ತ ಇರುತ್ತವೆ, ಪರಿಚಯಗಳೂ. ಈ ಬದಲಾಗುತ್ತಿರುವ ಪರಿಚಯಗಳ ಕಂತೆಯೇ ನೀವಾಗಿದ್ದೀರೇನು? ವಾಸ್ತವದಲ್ಲಿ ನಿಮ್ಮ ಪರಿಚಯವೇನು ? ಈ ಎಲ್ಲ ಪರಿಚಯಗಳಿಂದ ಹೊರತಾಗಿ ನೀವೇನಾಗಿದ್ದೀರಿ? ಇವೆಲ್ಲ ಸನ್ನಿವೇಶಗಳಿಗೆ ತಕ್ಕಂತೆ ಬದಲಾಗುವಂಥವು. ಆದರೆ ಮೂಲದಲ್ಲಿ ನೀವು ಯಾರಾಗಿದ್ದೀರಿ? ಏನಾಗಿದ್ದೀರಿ? ~ Whosoever Ji ಸುಷುಪ್ತಿಯಲ್ಲಿರಲು ಯಾರೂ ಭಯಪಡುವುದಿಲ್ಲ. ಪ್ರತಿಯೊಬ್ಬರೂ ಗಾಢ […]

ಗುರುತು ಉದಿಸುವುದು ಅರಿವುಗೇಡಿತನದಿಂದ!

ಪ್ರತಿಯೊಬ್ಬ ವ್ಯಕ್ತಿಯೂ ಯುದ್ಧದಲ್ಲಿ ತೊಡಗಿಕೊಂಡಿದ್ದಾನೆ. ಪ್ರತಿ ಕ್ಷಣ ನೀವು ರಣಾಂಗಣದಲ್ಲಿದ್ದೀರಿ, ಸಂಘರ್ಷ ನಡೆಸುತ್ತಿದ್ದೀರಿ. ನಿಮ್ಮ ಚಿತ್ತವೇ ಆ ರಣಾಂಗಣವಾಗಿದೆ ಮತ್ತು ಉಭಯ ಪಕ್ಷದಲ್ಲೂ ನೀವೇ ಇದ್ದುಕೊಂಡು ನಿಮ್ಮ ಮೇಲೆಯೇ ಯುದ್ಧ ನಡೆಸುತ್ತಿದ್ದೀರಿ. ಕೃಷ್ಣನು ಅರ್ಜುನನಿಗೆ ಏನೇ ಹೇಳಿರಲಿ, ಆದರೆ ಅದು ನಿಮ್ಮ ಅನುಭವವೇನೂ ಅಲ್ಲ. ಮತ್ತು ಧ್ಯಾನ ಮಾಡುವುದರಿಂದ ಅನುಭವ ಹುಟ್ಟಿಕೊಳ್ಳುತ್ತೆಂದು ನೀವು ತಿಳಿದಿದ್ದೀರಿ! ಹಾಗಾಗುವುದಿಲ್ಲ… ಧ್ಯಾನದ ಜೊತೆಜೊತೆಯಲ್ಲಿ ಅರಿವೂ ಬೆಳೆಯದೆ ಹೋದರೆ, ಅದು ಸಾಧ್ಯವೆ ಆಗುವುದಿಲ್ಲ ~ Whosoever Ji ಈ ದೇಹದ ಮೂಲಕ ಯಾವುದೆಲ್ಲ […]