ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ

ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ ಇಂದು 125 ವರ್ಷಗಳು ತುಂಬಿದವು. ಈ ಭಾಷಣ ಅಂದಿನ ಅತ್ಯಂತ ಪ್ರಭಾವೀ ಭಾಷಣವೆಂದು ಪರಿಗಣಿಸಲ್ಪಟ್ಟಿತ್ತು. ಎಲ್ಲ ದೇಶ-ಧರ್ಮಗಳ ಸಭಿಕರು- ಶ್ರೋತೃಗಳು ಸ್ವಾಮೀಜಿಯವರ ತೇಜಸ್ಸಿಗೆ, ವಾಗ್ವೈಖರಿಗೆ, ಪಾಂಡಿತ್ಯಕ್ಕೆ ಮಾರುಹೋದರು. ಎಲ್ಲಕ್ಕಿಂತ ಹೆಚ್ಚಾಗಿ ಭಾಷಣದ ಆರಂಭದಲ್ಲಿನ ಅವರ ಸಂಬೋಧನೆ ಅವರೆಲ್ಲರನ್ನೂ ಭಾವೋನ್ನತಿಗೆ ಏರಿಸಿಬಿಟ್ಟಿತ್ತು. “ಅಮೆರಿಕದ ಸೋದರಿಯರೇ ಮತ್ತು ಸೋದರರೇ! ನೀವು ನಮಗೆ ನೀಡಿದ ಉತ್ಸಾಹಯುತ ಆದರದ ಸ್ವಾಗತಕ್ಕೆ ಪ್ರತಿಕ್ರಿಯಿಸಲು ಹೊರಟಾಗ ಅನಿರ್ವಚನೀಯ ಆನಂದವೊಂದು ನನ್ನ ಹೃದಯವನ್ನು ತುಂಬುತ್ತದೆ. ಪ್ರಪಂಚದ ಅತ್ಯಂತ ಪ್ರಾಚೀನವಾದ ಸಂನ್ಯಾಸಿಗಳ ಸಂಘದ […]

ಒಲವೇ ಜೀವನ ಸಾಕ್ಷಾತ್ಕಾರ….

ಅಂಗಸಂಗಕ್ಕೆ ಒದಗುವ ಭಿನ್ನ ಲಿಂಗದ ಮನುಷ್ಯ ಮಾತ್ರವೇ ಪ್ರೇಮಿ ಎಂಬ ಭಾವನೆ ಅಳಿದು, ಪ್ರತಿಯೊಂದು ಜೀವವೂ ಪ್ರೇಮಿಸಲು ಅರ್ಹವೆಂದು ತಿಳಿಯುವುದು ಅತಿ ಮುಖ್ಯ. ಆ ತಿಳಿವಿನ ನಂತರ ಪರಿಪೂರ್ಣ ಪ್ರೇಮ ಬೆಳೆಸಿಕೊಳ್ಳುತ್ತೇವಲ್ಲ, ಅದು ನಮ್ಮನ್ನು ಸಾಮಾನ್ಯ ಮಾನವರಿಂದ ಸಂತರ ಎತ್ತರಕ್ಕೆ ಏರಿಸುತ್ತದೆ. ಆದರೆ ಈ ಆರೋಹಣ ಸುಲಭವೇನಲ್ಲ…. ಫೋತಿ ಪಢ್ ಪಢ್ ಜಗ್ ಮುವಾ ಪಂಡಿತ್ ಭಾಯಾ ನ ಕೋಯ್ | ಧಾಯಿ ಅಕ್ಷರ್ ಪ್ರೇಮ್ ಕೆ ಜೋ ಪಢೇ ಸೋ ಪಂಡಿತ್ ಹೋಯ್ || ಎನ್ನುತ್ತದೆ ಸಂತ […]

ಅದ್ವೈತವೆಂದು ಉಚ್ಚರಿಸುವುದೆಂದರೆ, ನಮ್ಮ ಸ್ವಾರ್ಥದ ಮೇಲೆ ಕೆಂಡವಿಟ್ಟಂತೆ : ಸಾನೆ ಗುರೂಜಿ #2

ಪ್ರಾಣವನ್ನೇ ಕಿತ್ತೊಗೆಯಲು ಸಿದ್ಧರಿದ್ದರೆ ಮಾತ್ರ ವೇದಾಂತದ ಮಾತನ್ನು ಆಡಬೇಕೆಂದು ಸಂತ ತುಕಾರಾಮರು ಹೇಳಿದ್ದಾರೆ. ಎರಡನೆಯವರಿಗೆ ನಮ್ಮ ಸರ್ವಸ್ವವನ್ನು ಕೊಡಲು ಉದ್ಯುಕ್ತರಾಗುವುದು ಎಂದರೆ ಅದ್ವೈತದ ದೀಕ್ಷೆಯನ್ನು ಹೊಂದಿದಂತೆ. ಆದರೆ,  ಬಾಯಿಯಿಂದ ಆಡಲಾದ ಈ ಅದ್ವೈತವು ಅಲ್ಪಸ್ವಲ್ಪವಾದರೂ ಕೃತಿಗೆ ಇಳಿದಿದ್ದರೆ ನಮ್ಮ ಸಮಾಜವು ಅಧೋಗತಿಯನ್ನು ತಲುಪುತ್ತಿರಲಿಲ್ಲ ~ ಸಾನೆ ಗುರೂಜಿ ಅದ್ವೈತದ ಉನ್ನತ ಆದರ್ಶವನ್ನು ಸಾರಿದ ಋಷಿಗಳು ಸಹಜೀವಿಗಾಗಿ ಎಲ್ಲ ಬಗೆಯ ಸುಖ ಸವಲತ್ತುಗಳನ್ನೂ ಬೇಡಿದರು. ಸಮರ್ಥ ರಾಮದಾಸರು ಇದೇ ರೀತಿಯಲ್ಲಿ ವಿದ್ಯೆ, ಗಾಯನ, ಸಂಗೀತ, ಎಲ್ಲ ಹೃದ್ಯ ಮತ್ತು […]

ಬುದ್ಧ ಬೋಧೆ : ಕಾಲಾಮ ಸುತ್ತದ ಹತ್ತು ಮುತ್ತುಗಳು

ಆದರೋಪಚಾರವೆಲ್ಲ ಮುಗಿದ ಮೇಲೆ ಕಾಲಾಮರ ಮುಖ್ಯಸ್ಥ ಬುದ್ಧನ ಬಳಿ ಬಂದು, “ನಾವು ಗೊಂದಲಗೊಂಡಿದ್ದೇವೆ. ಸತ್ಯವಾದ ಧರ್ಮ ಯಾವುದು? ನಮಗೆ ತಿಳಿಹೇಳಿ” ಎಂದು ಕೇಳಿಕೊಂಡನು. ಅದಕ್ಕೆ ಉತ್ತರವಾಗಿ ಬುದ್ಧನು ನೀಡಿದ ಹತ್ತು ಬೋಧನೆಗಳು ‘ಕಾಲಾಮ ಸುತ್ತ’ ಎಂದೇ ಪ್ರಸಿದ್ಧವಾದವು. ಬುದ್ಧನಿಂದ ಹೊಮ್ಮಿದ ಆ ಹತ್ತು ಮುತ್ತುಗಳು ಇಲ್ಲಿವೆ …. ಒಮ್ಮೆ ಭಗವಾನ್ ಬುದ್ಧನು ತನ್ನ ಬಿಕ್ಖುಗಣದೊಡನೆ ಕೋಸಲದ ಕೇಸಪುತ್ತ ಎಂಬ ಹಳ್ಳಿಗೆ ಬರುತ್ತಾನೆ. ಕೇಸಪುತ್ತದ ಕಾಲಾಮ ಜನಾಂಗೀಯರು ಅವರನ್ನು ಆದರದಿಂದ ಬರ ಮಾಡಿಕೊಳ್ಳುತ್ತಾರೆ. ಕಾಲಾಮರಿಗೆ ಆಧ್ಯಾತ್ಮಿಕ ವಿಚಾರಗಳಲ್ಲಿ, ಧಾರ್ಮಿಕ […]

ವಿನಯವಂತಿಕೆ ಇದ್ದರೆ ಎಲ್ಲವೂ ದಕ್ಕುವುದು : ಸುಭಾಷಿತ

ದಕ್ಷಃ ಶ್ರಿಯಮಧಿಗಚ್ಛತಿ ಪಥ್ಯಾಶೀ ಕಲ್ಯತಾಂ ಸುಖಮರೋಗೀ | ಉದ್ಯುಕ್ತೋ ವಿದ್ಯಾಂತಂ ಧರ್ಮಾರ್ಥಯಶಾಂಸಿ ಚ ವಿನೀತಃ || “ದಕ್ಷತೆಯನ್ನು ಹೊಂದಿರುವವರು ಐಶ್ವರ್ಯವನ್ನು ಹೊಂದುವರು. ಪಥ್ಯಾಹಾರವನ್ನು ಉಣ್ಣುವವರು ಆರೋಗ್ಯವನ್ನು ಹೊಂದುವರು. ಪರಿಶ್ರಮದಿಂದ ಅಭ್ಯಾಸ ಮಾಡುವವರು ವಿದ್ಯೆಯನ್ನು ಹೊಂದುವರು. ವಿನಯಶೀಲರಾದವರು ಧರ್ಮ, ಅರ್ಥ (ಸಂಪತ್ತು), ಯಶಸ್ಸುಗಳೆಲ್ಲವನ್ನೂ ಹೊಂದುವರು” ಎನ್ನುತ್ತದೆ ಸುಭಾಷಿತ ಭಾಂಡಾಗಾರ. ಈ ಸುಭಾಷಿತದ ರಚನೆಕಾರ ರವಿಗುಪ್ತನೆಂಬ ಸಂಸ್ಕೃತ ಕವಿ. ಐಶ್ವರ್ಯ ಸುಮ್ಮನೆ ಒಲಿದುಬರುವುದಿಲ್ಲ. ಶಿಸ್ತು, ಸಾಮರ್ಥ್ಯಗಳಿಂದ ದುಡಿಮೆ ಮಾಡಿದರಷ್ಟೆ ಅದು ಒಲಿಯುವುದು. ದಕ್ಷತೆಯಿಂದ ಕೆಲಸ ಮಾಡಿದರಷ್ಟೆ ನಮ್ಮಲ್ಲಿ ಹಣ ಬಂದು […]

ನಿಮ್ಮ ದಾರಿಯನ್ನು ನೀವೇ ರೂಪಿಸಿಕೊಳ್ಳಿ : ವೇದ ಬೋಧೆ

ಪ್ರತಿಯೊಂದು ಜೀವಿಯ ಬದುಕು ಒಂದು ಪ್ರಯಾಣವೇ ಆಗಿರುತ್ತದೆ. ಜನನ ಮರಣ ಚಕ್ರದ ನಿರಂತರ ಪ್ರಯಾಣದಲ್ಲಿ ನಮ್ಮ ದಾರಿಯನ್ನು ನಾವೇ ರೂಪಿಸಿಕೊಳ್ಳಬೇಕಾಗುತ್ತದೆ ~ ಸಾ.ಹಿರಣ್ಮಯೀ   ಬಹುತೇಕವಾಗಿ ನಾವು ಒಂದು ತಪ್ಪು ಮಾಡುತ್ತೇವೆ. ಬದುಕು ನಮ್ಮದೇ ಆಗಿದ್ದರೂ ಅದರ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿಬಿಡುತ್ತೇವೆ, ವಾಸ್ತವವಾಗಿ ನಮ್ಮ ನಮ್ಮ ಬದುಕಿನ ಪ್ರಯಾಣವನ್ನು ನಾವೇ ಮಾಡಬೇಕಾಗಿರುತ್ತದೆ. ಏಕೆಂದರೆ ಜನನಮರಣದ ನಿರಂತರ ಚಕ್ರದಲ್ಲಿ ನಾವು ಸಿಲುಕಿಕೊಂಡಿರುತ್ತೇವೆ. ನಮ್ಮ ಚಕ್ರದ ಪ್ರಯಾಣದ ಸುತ್ತಿನಿಂದ ತಪ್ಪಿಸಿಕೊಂಡರೆ, ಅದೇ ಮುಕ್ತಿ. ಹೀಗೆ ಮುಕ್ತಿ ಪಡೆಯಲು ಚಕ್ರದ ಸುತ್ತಿನಿಂದ […]

ಸತ್ಯವಂತರ ಹಾದಿ, ಸ್ವಯಂ ಮೋಕ್ಷದ ಹಾದಿ….

ಸತ್ಯವು ಒಂದೇ ಆದರೂ ಋಗ್ವೇದದ ಮಾತಿನಂತೆ, ಅದನ್ನು ನಡೆಯುವ ದಾರಿಗಳು ಹಲವು. ಕೊಟ್ಟ ಮಾತಿಗೆ ಬದ್ಧನಾಗಿರುವುದು ಹರಿಶ್ಚಂದ್ರನಿಗೆ ಸತ್ಯ ಮಾರ್ಗವಾಯಿತು. ಪ್ರಜಾರಂಜಕನಾಗಿ ಉಳಿಯುವುದು ಶ್ರೀ ರಾಮನಿಗೆ ಸತ್ಯವಾಯಿತು. ದಾನಮಾಡುವುದೇ ಕರ್ಣನಿಗೆ ಸತ್ಯದೆಡೆಗೆ ಹಾದಿಯಾಯಿತು; ಸೀತೆಯಂಥ ಸತಿಯರಿಗೆ ಪಾತಿವ್ರತ್ಯವೇ ಸತ್ಯದ ಸಾಧನೆಯಾಯಿತು. ಹೀಗೆ ಮಹಾ ವ್ಯಕ್ತಿಗಳ ಒಬ್ಬೊಬ್ಬರ ಜೀವನವೂ ಪರಮಸತ್ಯದ ವ್ಯಾಖ್ಯಾನದಂತಿದೆ ~ ಸಾ.ಹಿರಣ್ಮಯೀ ಸತ್ಯವಂತರ ಹಾದಿ ಸ್ವಯಂ ಮೋಕ್ಷದ ಹಾದಿ. ಸವಾಲುಗಳ ಹಾದಿ. ಸತ್ಯ ಸಾಧಕರ ಯಾತ್ರೆ ಮೊದಲಾಗುವುದು ತ್ಯಾಗದಿಂದ. ಈ ಹೆಬ್ಬಾಗಿಲಿನ ಮೂಲಕವೇ ಅವರು ಸತ್ಯದ ಗುರಿ ತಲುಪುತ್ತಾರೆ. ಹಿಂದೂ ಧರ್ಮದ ಪ್ರಪ್ರಾಚೀನ ಜ್ಞಾನ […]

ಗೃಹಸ್ಥರಿಗೆ ಸಾಧನಾಸೂತ್ರ : ಶಾರದಾ ದೇವೀ ವಾತ್ಸಲ್ಯ ತೀರ್ಥ

ರಾಮಕೃಷ್ಣ ಪರಮಹಂಸರ ಸಂಪರ್ಕಕ್ಕೆ ಬಂದ ಕೆಲವು ತರುಣರು ಸನ್ಯಾಸ ಸ್ವೀಕರಿಸಿ ಅಧ್ಯಾತ್ಮ ಸಾಧನೆಯಲ್ಲಿ ತೊಡಗಿದರು. ಅದೇ ವೇಳೆಗೆ ಕೆಲವು ಶಿಷ್ಯರು ಅಧ್ಯಾತ್ಮ ಸಾಧನೆಗೆ ಹಂಬಲಿಸುತ್ತಿದ್ದರಾದರೂ ಸನ್ಯಾಸ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಕೆಲವರು ಅದಾಗಲೇ ಸಂಸಾರದಲ್ಲಿದ್ದರೆ, ಕೆಲವರಿಗೆ ಮದುವೆ ಅನಿವಾರ್ಯವಾಗಿತ್ತು. ಅಂಥವರು ಶಾರದಾ ದೇವಿಯ ಬಳಿ ಬಂದ ತಮ್ಮ ಬೇಸರ ತೋಡಿಕೊಳ್ಳುತ್ತಿದ್ದರು. ಆಗ ಶಾರದಾ ದೇವಿಯವರು ನೀಡುತ್ತಿದ್ದ ಉತ್ತರಗಳ ಸಂಗ್ರಹ ಇಲ್ಲಿದೆ:  * ಕಾವಿಬಟ್ಟೆ ಹಾಕಿಕೊಂಡ ಮಾತ್ರಕ್ಕೆ ಎಲ್ಲವೂ ಆದಹಾಗೆ ಆಯಿತೇ? ಅದಿಲ್ಲದೆಯೂ ಭಗವಂತನನ್ನು ಕಾಣಬಹುದು. ಕಾವಿ ಬಟ್ಟೆಯ ಅಗತ್ಯ […]

ಬಿಡುಗಡೆಗೆ ತುಡಿಯುವ ಕಾಳಜಿ : ಜಿಡ್ಡು ಚಿಂತನೆ

ಮನುಷ್ಯರು ಎಲ್ಲಾ ಬ೦ಧನಗಳಿ೦ದ, ಎಲ್ಲಾ ಪ೦ಜರಗಳಿ೦ದ, ಎಲ್ಲಾ ಭಯಗಳಿ೦ದ ಮುಕ್ತರಾಗಿರಬೇಕು. ಅದು ಧರ್ಮದ ಭಯವಾಗಿರಲಿ, ಮೋಕ್ಷದ ಭಯವಾಗಿರಲಿ, ಪ್ರೇಮದ ಭಯವಾಗಿರಲಿ, ಸಾವಿನ ಭಯವಾಗಿರಲಿ, ಕೊನೆಗೆ ಬದುಕಿನ ಭಯವೇ ಆಗಿರಲಿ; ಅದರಿಂದ ಅವರನ್ನು ಮುಕ್ತಗೊಳಿಸಲು ಬಯಸುತ್ತೇನೆ ಅಷ್ಟೇ. ಸತ್ಯಕ್ಕೆ ಯಾವುದೇ ದಾರಿಗಳಿಲ್ಲ. ಧರ್ಮವಾಗಿರಲಿ, ಪ೦ಥವಾಗಿರಲಿ, ಸಿದ್ಧಾ೦ತವಾಗಿರಲಿ, ಆ ಸತ್ಯದ ನೆಲೆಯನ್ನು ತಲುಪಲಾಗುವುದಿಲ್ಲ. ಯಾವ ಸಂಘಟನೆಯೂ ಯಾವ ಸಂಸ್ಥೆಯೂ ನಿಮ್ಮನ್ನು ಸತ್ಯದ ದಾರಿಯಲ್ಲಿ ಕೊಂಡೊಯ್ಯಲಾರವು. ಯಾವುದೋ ಒ೦ದು ದಾರಿಯ ಮೂಲಕ ಮಾತ್ರ ಸತ್ಯವನ್ನು ಅರಸುವ೦ತೆ ಮಾಡಲು ಸಾಧ್ಯವೇ ಇಲ್ಲ. ಅಕಸ್ಮಾತ್ ಹಾಗೆ ಮಾಡಿದ್ದೇ […]

ಸಂತೋಷ ಘಟಿಸುವುದು ವರ್ತಮಾನದಲ್ಲಿ ~ ಜಿಡ್ಡು ಕೃಷ್ಣಮೂರ್ತಿ

ನಾವು ಏನನ್ನು ಯೋಚಿಸುತ್ತೇವೋ ಅದೇ ಆಗಿರುತ್ತೇವೆ. ನಮ್ಮ ಅಲೋಚನೆಗಳೇ ನಮ್ಮ ಮನಸ್ಸು. ನಮ್ಮ ಮನಸ್ಸು ನಮ್ಮ ಭೂತಕಾಲದ ಸ್ಮರಣೆಯ ಫಲ. ಭೂತಕಾಲದ ಸ್ಮರಣೆಯಿಂದ ಆಲೋಚನೆಗಳೂ ಉತ್ಪನ್ನವಾಗುತ್ತವೆ. ನಾವು ಭವಿಷ್ಯದ ಬಗ್ಗೆ ಆಲೋಚಿಸುವುದೂ ಕೂಡಾ ಭೂತದ ಆಲೋಚನೆಗಳ ಆಧಾರದ ಮೇಲೆಯೇ. ಗತಿಸಿಹೋದುದರ ನೆನಪುಗಳನ್ನು ಮರೆತರೆ ಅಲ್ಲಿ ಆಲೋಚನೆ ಎಂಬುದೇ ಇರುವುದಿಲ್ಲ. ನೆನಪು ಎ೦ಬುದು ಕಾಲಕ್ಕೆ ಸಂಬಂಧಿಸಿದ್ದು. ಆದರೆ ಸ೦ತೋಷ ಹಾಗಲ್ಲ. ಅದು ಕಾಲದ ಉತ್ಪನ್ನವಲ್ಲ. ಸ೦ತೋಷ ಘಟಿಸುವುದು ವರ್ತಮಾನದಲ್ಲಿ. ವರ್ತಮಾನ ಒ೦ದು ಕಾಲರಹಿತ ಸ್ಥಿತಿ. ಆದ್ದರಿಂದಲೇ ಕ್ರಾ೦ತಿ ಸಾಧ್ಯವಾಗುವುದು […]