ಚಾಣಕ್ಯ ನೀತಿ : ಪ್ರಾಣಿಪಕ್ಷಿಗಳಿಂದ ಕಲಿಯಬಹುದಾದ 20 ಪಾಠಗಳು ~ Be Positive Video

ನಾವು ಪ್ರತಿಯೊಂದು ವಸ್ತುವಿನಿಂದಲೂ, ಜೀವಿಯಿಂದಲೂ ಪಾಠ ಕಲಿಯುವುದು ಇದ್ದೇ ಇರುತ್ತದೆ. ಎಚ್ಚರಿಕೆಯಿಂದ ಅವುಗಳ ಬದುಕನ್ನು ಗಮನಿಸಿ, ಅಭ್ಯಾಸ ಮಾಡಬೇಕಷ್ಟೆ. ಚಾಣಕ್ಯ ನಮ್ಮ ಸುತ್ತಮುತ್ತಲಿನ ಪ್ರಾಣಿಗಳ ಗುಣವಿಶೇಷಗಳನ್ನು ಗುರುತಿಸಿ, 20 ಪಾಠಗಳ ಪಟ್ಟಿ ನೀಡಿದ್ದಾನೆ. ಅವು ಯಾವುವು ಎಂಬುದನ್ನು ಈ ಕಿರು ವಿಡಿಯೋ ಚಿತ್ರಿಕೆಯಲ್ಲಿ ನೋಡಿ…   Advertisements

ಸೂರ್ಯನಮಸ್ಕಾರದ 12 ಆಸನ, ವಿಧಾನ & ಮಂತ್ರಗಳು : ರಥಸಪ್ತಮಿ ವಿಶೇಷ video

ರಥ ಸಪ್ತಮಿ, ಸೂರ್ಯಾರಾಧನೆಯ ಉತ್ಸವ. ಹಾಗೆಂದೇ ಈ ದಿನ ಸೂರ್ಯ ನಮಸ್ಕಾರಕ್ಕೆ ವೀಶೇಷ ಮಹತ್ವ. ಇದು 12 ಆಸನಗಳ ಒಂದು ಗುಚ್ಛ. ಪ್ರತಿ ದಿನ 108 ಸೂರ್ಯನಮಸ್ಕಾರಗಳನ್ನು ಮಾಡಿದರೆ ಒಳ್ಳೆಯದು. ಗರಡಿಮನೆಗಳಲ್ಲಿ 1008 ಸೂರ್ಯ ನಮಸ್ಕಾರಗಳನ್ನು ಮಾಡಿಸುವುದೂ ಉಂಟು! ವಾಸ್ತವದಲ್ಲಿ ಸೂರ್ಯ ನಮಸ್ಕಾರ ಪ್ರತಿನಿತ್ಯದ ಅಭ್ಯಾಸವಾಗಬೇಕು. ಇದನ್ನು ಸೂರ್ಯ ದೇವನೆಂಬ ಭಾವನೆ ಇಲ್ಲದ ನಾಸ್ತಿಕರು ವ್ಯಾಯಾಮ ಎಂದಾದರೂ ಮಾಡಲಿ. ಪ್ರಕೃತಿ ಆರಾಧಕರು ದಿನವೂ ಬೆಳಕು, ಶಾಖ ಮತ್ತೆಲ್ಲ ಜೀವ ಚೈತನ್ಯಕ್ಕೆ ಕಾರಣವಾದ ಮಹತ್ ತತ್ತ್ವ ಎಂಬ ಗೌರವ […]

ಪ್ರೀತಿ, ಬದುಕು, ಜಗತ್ತು…. ರೂಮಿಯ 10 ಹೊಳಹುಗಳು : Be Positive Video

ನಾವು ಪ್ರೀತಿಗಾಗಿ ಹಂಬಲಿಸಿದಷ್ಟು, ಅದನ್ನು ಹುಡುಕಿಕೊಂಡು ಅಲೆದಾಡುವಷ್ಟು, ಬದುಕನ್ನು ಅರ್ಥ ಮಾಡಿಕೊಳ್ಳಲು ಹೆಣಗಿದಷ್ಟು, ಜಗತ್ತಿನೊಡನೆ ನಾವೇನಾವಾಗಿ ಬೆರೆಯಲು ಪಾಡು ಪಡುವಷ್ಟು ಮತ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ.  ಪ್ರೀತಿ, ಬದುಕು ಮತ್ತು ಜಗತ್ತನ್ನು ಅರ್ಥ ಮಾಡಿಕೊಳ್ಳಲು ರೂಮಿ ಹೇಳುವ 10 ಹೊಳಹುಗಳು ಈ ಕಿರು ವಿಡಿಯೋ ಚಿತ್ರಿಕೆಯಲ್ಲಿದೆ…

ಚಕ್ರ ಧ್ಯಾನದ 8 ಹಂತಗಳು : ಅರಳಿಮರ Video

ಚಕ್ರಧ್ಯಾನ ದೇಹಕ್ಕೆ ಚೈತನ್ಯವನ್ನೂ ಉತ್ಸಾಹವನ್ನೂ ತುಂಬುವ ಧ್ಯಾನ ವಿಧಾನ. 30ರಿಂದ 35 ನಿಮಿಷಗಳವರೆಗೆ ಸಾಗುವ ಈ ಧ್ಯಾನ ನಡೆಸಲು ಬೆಳಗಿನ ಸಮಯ ಹೆಚ್ಚು ಸೂಕ್ತ. ಪ್ರತಿ ನಿತ್ಯ ಈ ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ನಿತ್ಯವೂ ಉಲ್ಲಸಿತ ಮತ್ತು ಚೈತನ್ಯಶೀಲ ಬದುಕು ನಿಮ್ಮದಾಗುವುದು.  ಚಕ್ರಧ್ಯಾನ ವಿಧಾನದ 8 ಹಂತಗಳನ್ನು ಈ ಕಿರು ವಿಡಿಯೋ ಚಿತ್ರಿಕೆ ಅತ್ಯಂತ ಸರಳವಾಗಿ ನಿರೂಪಿಸುತ್ತದೆ. ಸವಿವರ ಮಾಹಿತಿ ಬೇಕಿದ್ದಲ್ಲಿ ಪ್ರತಿಕ್ರಿಯಿಸಿ. 

ಯಶಸ್ವಿ ಬದುಕಿಗೆ 10 ತಾವೋ ಸೂತ್ರಗಳು : Be Positive Video

ಕಾವ್ಯ ಧಾಟಿಯಲ್ಲಿರುವ ತಾವೋ ತಿಳಿವು ನೆನಪಿಡಲು ಸುಲಭ. ಆದರೆ ಅನುಸರಿಸುವುದು ಬಹಳ ಕಷ್ಟ! ಕಷ್ಟಕರವಾಗಿರುವಂಥವೇ ನಮಗೆ ಸುಖ ತಂದುಕೊಡುವುದು ಎಂಬುದನ್ನು ನೆನಪಿಸಿಕೊಂಡು ಮುನ್ನಡೆಯಿರಿ. ಖಂಡಿತವಾಗಿಯೂ ಯಶಸ್ಸು ನಿಮ್ಮ ಭವಿಷ್ಯದ ಕದ ಬಡಿಯುವುದು.  ಈ ಕಿರುಚಿತ್ರಿಕೆಯಲ್ಲಿ ಯಶಸ್ವಿ ಬದುಕಿನ ಯಾನಕ್ಕೆ ದಿಕ್ಸೂಚಿಯಾಗುವಂಥ 10 ತಾವೋ ಹೇಳಿಕೆಗಳಿವೆ.   

ಸಮಗ್ರ ಬದುಕಿಗೆ ವಿದುರನೀತಿಯ 10 ಪಾಠಗಳು : Be Positive video

ವಿದುರ ನೀತಿಯು ಸಾಂಸಾರಿಕ ಬದುಕಿಗೆ, ಸಾಮಾಜಿಕ ಬದುಕಿಗೆ, ಸಮರ್ಥ ಆಡಳಿತ ನಡೆಸುವುದಕ್ಕೆ, ಆಧ್ಯಾತ್ಮಿಕ ಬದುಕಿಗೆ – ಹೀಗೆ ಎಲ್ಲರಿಗೂ, ಎಲ್ಲಕ್ಕೂ ಸಲ್ಲುವ ಪಾಠಗಳನ್ನು ಬೋಧಿಸುತ್ತದೆ. ಧರ್ಮಾತ್ಮನಾದ ವಿದುರನು ದೃತರಾಷ್ಟ್ರನಿಗೆ ಬೋಧಿಸಿದ ವಿದುರನೀತಿಯು ಸಾರ್ವಕಾಲಿಕ ಮೌಲ್ಯಗಳನ್ನು ಹೊಂದಿದ್ದು, ಇಂದಿಗೂ ಸಲ್ಲುವ ಉನ್ನತ ಬೋಧೆಯಾಗಿದೆ.  ಅರ್ಥಪೂರ್ಣ ಸಮಗ್ರ  ಬದುಕಿಗೆ ವಿದುರ ನೀತಿಯ 10 ಪಾಠಗಳು, ಈ ಬಾರಿಯ ಕಿರು ಚಿತ್ರಿಕೆಯಲ್ಲಿ….  

ಗಿಬ್ರಾನ್ ಹೇಳಿದ ಜೀವನದ 8 ಗುಟ್ಟುಗಳು : Be positive video

ಜೀವನದ ಗುಟ್ಟುಗಳು ದೂರದ ಗುಹೆಯಲ್ಲೆಲ್ಲೋ ಹುಗಿದುಕೊಂಡಿಲ್ಲ. ಎಚ್ಚರದಿಂದ ಗಮನಿಸಿದರೆ ನಮಗೇ ಹೊಳೆಯುವ ಸರಳ ಪಾಠಗಳಿವು. ಆದರೆ ನಾವು ಸದಾ ಒಂದಿಲ್ಲೊಂದು ಮೈಮರೆವಿನಲ್ಲಿ ಇರುವುದರಿಂದ ನಮಗೆ ಈ ಗುಟ್ಟುಗಳು ಹೊಳೆಯುವುದೇ ಇಲ್ಲ. ಅತ್ಯಂತ ಸರಳವಾಗಿರುವ ಈ ಸಂಗತಿಗಳನ್ನೂ ಮತ್ತೊಬ್ಬರು ಎತ್ತಿ ಹೇಳಬೇಕಾಗುತ್ತದೆ.  ಕವಿ, ತತ್ವಜ್ಞಾನಿ ಖಲೀಲ್ ಗಿಬ್ರಾನ್ ಇಂತಹ ಸರಳ ಸತ್ಯಗಳನ್ನು ಬಹಳ ಸುಂದರವಾಗಿ, ಕಾವ್ಯಾತ್ಮಕವಾಗಿ ತಮ್ಮ ಕೃತಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ. Sand and Foam (ಮರಳು ಮತ್ತು ನೊರೆ) ಅಂತಹ ಕೃತಿಗಳಲ್ಲೊಂದು. ಗಿಬ್ರಾನ್ ಹೇಳಿದ, ಬದುಕಿಗೆ ತಿಳಿವಿನ ಹೊಳಪು ನೀಡುವ […]

ನೈಜ ಧಾರ್ಮಿಕತೆಯ 10 ಲಕ್ಷಣಗಳಿವು… ನೀವೆಷ್ಟು ಧಾರ್ಮಿಕರು? ಪರೀಕ್ಷಿಸಿಕೊಳ್ಳಿ!

ಯಾವುದು ಆತ್ಮೋದ್ಧಾರಕ್ಕಾಗಿಯೂ ಪರಹಿತಕ್ಕಾಗಿಯೂ  ಆಚರಿಸಲ್ಪಡುತ್ತದೆಯೋ ಅದು ಧರ್ಮ. ಇದಕ್ಕೆ ಶಾಸ್ತ್ರಾಧಾರವಿಲ್ಲ. ನಿಯಮ – ನಿರ್ಬಂಧಗಳಿಲ್ಲ. ಧರ್ಮ ಎಂದರೆ ಮನುಷ್ಯರು ಅತ್ಯಗತ್ಯವಾಗಿ ಧರಿಸಬೇಕಾದ ಗುಣ. ಸಹಜವಾಗಿ ನಡೆಸಬೇಕಾದ, ಒಳಗೊಳಿಸಿಕೊಳ್ಳಬೇಕಾದ ಕರ್ತವ್ಯ. ಈ ಧರ್ಮ religion ಅರ್ಥದಲ್ಲಿ ಹೇಳಲಾಗುವ ಧರ್ಮವಲ್ಲ. ಈ ಸಹಜತೆಗೆ ಹೆಸರಿಲ್ಲ. ಇದು ಆಚರಣೆಯಲ್ಲಿ, ನಡವಳಿಕೆಯಲ್ಲಿ ವ್ಯಕ್ತವಾಗುವಂಥದ್ದು. ಇದನ್ನು ಗುರುತಿಸಲು ಈ ಕಿರುಚಿತ್ರಿಕೆಯಲ್ಲಿರುವ 10 ಲಕ್ಷಣಗಳು ಸಹಾಯ ಮಾಡಬಹುದು.  ನಿಮ್ಮಲ್ಲಿ ಈ 10 ಲಕ್ಷಣಗಳಿದ್ದರೆ ನೀವು ನಿಜವಾದ ಧಾರ್ಮಿಕರು. ಇವು ಅಲ್ಪ ಪ್ರಮಾಣದಲ್ಲಾದರೂ ಇದ್ದರೆ, ಧರ್ಮ ಮಾರ್ಗದಲ್ಲಿ […]

ನೆಮ್ಮದಿಯ ಬದುಕಿಗೆ 10 ದಾವ್ ಸೂತ್ರಗಳು : Be Positive Video

ನಾವು ಸಹಜವಾಗಿದ್ದರೆ ನಮ್ಮ ಬದುಕೂ ಅತ್ಯಂತ ಸರಳವಾಗಿರುತ್ತದೆ. ಆದರೆ ನಾವು ಹತ್ತು ಹಲವು ಸಂಕೀರ್ಣತೆಗಳನ್ನು ಹೇರಿಕೊಂಡು ಬದುಕನ್ನು ಸಿಕ್ಕುಸಿಕ್ಕಾಗಿಸಿಕೊಳ್ಳುತ್ತೇವೆ.  ದಾವ್, ವೈಯಕ್ತಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ನಮ್ಮ ಬದುಕನ್ನು ಹೇಗಿಟ್ಟುಕೊಳ್ಳಬೇಕೆಂದು ತಿಳಿಸುತ್ತದೆ. ಅವುಗಳಲ್ಲಿ 10 ಹೇಳಿಕೆಗಳನ್ನಾಯ್ದು ಈ ಕಿರು ವಿಡಿಯೋ ಚಿತ್ರಿಕೆಯಲ್ಲಿ ನೀಡಲಾಗಿದೆ.   

ಪ್ರೇಮಾನುಭೂತಿ ಸವಿಯಲು ಗಿಬ್ರಾನನ 8 ಸಲಹೆಗಳು : Be Positive Video

ಪ್ರೇಮಿಸುವುದು ಎಂದರೆ ನಮ್ಮ ವ್ಯಕ್ತಿತ್ವವನ್ನೆ ಇಲ್ಲವಾಗಿಸಿಕೊಳ್ಳುವ ಪ್ರಕ್ರಿಯೆಯಲ್ಲ. ಪ್ರೇಮವೆಂದರೆ ನಮ್ಮನ್ನು ಒಂದೆಡೆ ಬಂಧಿಸಿಕೊಳ್ಳುವುದಲ್ಲ. ಪ್ರೇಮ ಪಂಜರವಲ್ಲ, ರೆಕ್ಕೆ. ಇದು  ಖಲೀಲ್ ಗಿಬ್ರಾನ್ ಆಶಯ. ನಿಜ ಪ್ರೇಮದ ದಿವ್ಯಾನುಭೂತಿ ಸವಿಯಲು ಇಲ್ಲಿವೆ ಖಲೀಲ್ ಗಿಬ್ರಾನನ 8 ಸಲಹೆಗಳು: