ಸನಾತನ ಸಾಹಿತ್ಯ ಹೇಳುವ ಧೀರರ 10 ಲಕ್ಷಣಗಳು ಯಾವುವು ಗೊತ್ತೆ? : be Positive video

ಧೈರ್ಯವುಳ್ಳವರೇ ಧೀರರು. ತಾಳ್ಮೆಯೇ ಧೈರ್ಯದ ಮೂಲ ಲಕ್ಷಣ. ಧೀರರು ಧೀ ಶಕ್ತಿಯನ್ನೂ ಉಳ್ಳವರು. ಹಾಗಾದರೆ ಧೀರರೆಂದು ಕರೆಯುವುದು ಯಾರನ್ನು? ಈ ಕಿರು ವಿಡಿಯೋ ಚಿತ್ರಿಕೆ ನೋಡಿ : 

‘ಯುದ್ಧ ಕಲೆ’ ~ ಆಯ್ದ 10 ಬೋಧನೆಗಳು : Be Positive Video

ಕ್ರಿಸ್ತ ಪೂರ್ವ 6ನೇ ಶತಮಾನದಲ್ಲಿ ಜೀವಿಸಿದ್ದ ಸಮರ ತಂತ್ರ ನಿಪುಣ ಸನ್ ತ್ಸು ಬೋಧನೆಗಳು ಈ ಕಾಲಕ್ಕೂ ಸಲ್ಲುವಂಥವು. ಸನ್ ತ್ಸು ಕಂಡುಕೊಂಡ ಯುದ್ಧ, ಗೆಲುವು ಮತ್ತು ಸಮರ ತಂತ್ರ ಕಾಣ್ಕೆಗಳು ‘ಯುದ್ಧ ಕಲೆ’ ಎಂಬ ಹೆಸರಲ್ಲಿ ಸಂಕಲನಗೊಂಡು ವಿಶ್ವದ ಹಲವಾರು ಭಾಷೆಗಳಿಗೆ ಅನುವಾದಗೊಂಡಿವೆ. ಸನ್ ತ್ಸು ಕಾಣ್ಕೆಗಳಲ್ಲಿ 10 ನೀತಿಗಳನ್ನು ಆಯ್ದು, ಅನುವಾದಿಸಿ ಈ ವಿಡಿಯೋದಲ್ಲಿ ನೀಡಲಾಗಿದೆ. 

ಶೀತಲಿ ಪ್ರಾಣಾಯಾಮ : 5 ಹಂತ, ಲಾಭ ಮತ್ತು ಎಚ್ಚರಿಕೆಗಳು

ಬೇಸಿಗೆ ಸಮೀಪಿಸುತ್ತಿದೆ. ಹೊರಗಿನ ಉಷ್ಣದೊಂದಿಗೆ ದೇಹದ ಉಷ್ಣತೆಯೂ ಏರುವ ದಿನಗಳಿವು. ಇದು ನಮ್ಮ ದೇಹವನ್ನೂ ಮನಸ್ಸನ್ನೂ ಸುಸ್ತಾಗಿಸುತ್ತದೆ. ಲವಲವಿಕೆ ಬತ್ತಿಸುತ್ತದೆ. ಉರಿಬಿಸಿಲಿನ ದಿನಗಳಲ್ಲಿ ದೇಹವನ್ನು ಶೀತಲಗೊಳಿಸಲು, ಹುಮ್ಮಸ್ಸು ತುಂಬಿಕೊಳ್ಳಲು ‘ಶೀತಲಿ ಪ್ರಾಣಾಯಾಮ’ ಸಹಕಾರಿ. ಈ ಪ್ರಾಣಾಯಾಮ ಅಭ್ಯಾಸ ಮಾಡುವ ಹಂತಗಳನ್ನು ಮತ್ತು ಅದರ ಲಾಭಗಳನ್ನು ಈ ವಿಡಿಯೋದಲ್ಲಿ ನೋಡಿ.  

ಭಗ್ನಪ್ರೇಮಿಗಳಿಗೆ 10 ಕಿವಿಮಾತು : Be Positive Video

Love is in air… ಎಲ್ಲೆಂದರಲ್ಲಿ ಪ್ರೇಮದ್ದೇ ಮಾತುಕತೆ ಕೇಳಿಬರುತ್ತಿದೆ. ಈ ದಿನವಂತೂ ಇದು ಹತ್ತು ಪಟ್ಟು ಹೆಚ್ಚು. ಹೀಗಿರುವಾಗ ಪ್ರೇಮಿಸಿದಾತ/ಪ್ರೇಮಿಸಿದಾಕೆ ದೊರೆಯಲಿಲ್ಲವೆಂದು ಎದೆ ಬಿರಿದುಕೊಂಡು ಮುಖ ಬಾಡಿಸಿ ಕುಳಿತವರು ಇಂದು ತುಸು ಹೆಚ್ಚೇ ಕಂಡುಬರುತ್ತಾರೆ. ಈ ಭಗ್ನಪ್ರೇಮಿಗಳಲ್ಲಿ ಕೊಂಚ ನೆಮ್ಮದಿ ಮೂಡಿಸಬಹುದಾದ 10 ಕಿವಿಮಾತುಗಳು ಈ ಕಿರು ವಿಡಿಯೋ ಚಿತ್ರಿಕೆಯಲ್ಲಿವೆ. 

ಚಾಣಕ್ಯ ನೀತಿ : ಪ್ರಾಣಿಪಕ್ಷಿಗಳಿಂದ ಕಲಿಯಬಹುದಾದ 20 ಪಾಠಗಳು ~ Be Positive Video

ನಾವು ಪ್ರತಿಯೊಂದು ವಸ್ತುವಿನಿಂದಲೂ, ಜೀವಿಯಿಂದಲೂ ಪಾಠ ಕಲಿಯುವುದು ಇದ್ದೇ ಇರುತ್ತದೆ. ಎಚ್ಚರಿಕೆಯಿಂದ ಅವುಗಳ ಬದುಕನ್ನು ಗಮನಿಸಿ, ಅಭ್ಯಾಸ ಮಾಡಬೇಕಷ್ಟೆ. ಚಾಣಕ್ಯ ನಮ್ಮ ಸುತ್ತಮುತ್ತಲಿನ ಪ್ರಾಣಿಗಳ ಗುಣವಿಶೇಷಗಳನ್ನು ಗುರುತಿಸಿ, 20 ಪಾಠಗಳ ಪಟ್ಟಿ ನೀಡಿದ್ದಾನೆ. ಅವು ಯಾವುವು ಎಂಬುದನ್ನು ಈ ಕಿರು ವಿಡಿಯೋ ಚಿತ್ರಿಕೆಯಲ್ಲಿ ನೋಡಿ…  

ಪ್ರೀತಿ, ಬದುಕು, ಜಗತ್ತು…. ರೂಮಿಯ 10 ಹೊಳಹುಗಳು : Be Positive Video

ನಾವು ಪ್ರೀತಿಗಾಗಿ ಹಂಬಲಿಸಿದಷ್ಟು, ಅದನ್ನು ಹುಡುಕಿಕೊಂಡು ಅಲೆದಾಡುವಷ್ಟು, ಬದುಕನ್ನು ಅರ್ಥ ಮಾಡಿಕೊಳ್ಳಲು ಹೆಣಗಿದಷ್ಟು, ಜಗತ್ತಿನೊಡನೆ ನಾವೇನಾವಾಗಿ ಬೆರೆಯಲು ಪಾಡು ಪಡುವಷ್ಟು ಮತ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ.  ಪ್ರೀತಿ, ಬದುಕು ಮತ್ತು ಜಗತ್ತನ್ನು ಅರ್ಥ ಮಾಡಿಕೊಳ್ಳಲು ರೂಮಿ ಹೇಳುವ 10 ಹೊಳಹುಗಳು ಈ ಕಿರು ವಿಡಿಯೋ ಚಿತ್ರಿಕೆಯಲ್ಲಿದೆ…

ಚಕ್ರ ಧ್ಯಾನದ 8 ಹಂತಗಳು : ಅರಳಿಮರ Video

ಚಕ್ರಧ್ಯಾನ ದೇಹಕ್ಕೆ ಚೈತನ್ಯವನ್ನೂ ಉತ್ಸಾಹವನ್ನೂ ತುಂಬುವ ಧ್ಯಾನ ವಿಧಾನ. 30ರಿಂದ 35 ನಿಮಿಷಗಳವರೆಗೆ ಸಾಗುವ ಈ ಧ್ಯಾನ ನಡೆಸಲು ಬೆಳಗಿನ ಸಮಯ ಹೆಚ್ಚು ಸೂಕ್ತ. ಪ್ರತಿ ನಿತ್ಯ ಈ ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ನಿತ್ಯವೂ ಉಲ್ಲಸಿತ ಮತ್ತು ಚೈತನ್ಯಶೀಲ ಬದುಕು ನಿಮ್ಮದಾಗುವುದು.  ಚಕ್ರಧ್ಯಾನ ವಿಧಾನದ 8 ಹಂತಗಳನ್ನು ಈ ಕಿರು ವಿಡಿಯೋ ಚಿತ್ರಿಕೆ ಅತ್ಯಂತ ಸರಳವಾಗಿ ನಿರೂಪಿಸುತ್ತದೆ. ಸವಿವರ ಮಾಹಿತಿ ಬೇಕಿದ್ದಲ್ಲಿ ಪ್ರತಿಕ್ರಿಯಿಸಿ. 

ಗಿಬ್ರಾನ್ ಹೇಳಿದ ಜೀವನದ 8 ಗುಟ್ಟುಗಳು : Be positive video

ಜೀವನದ ಗುಟ್ಟುಗಳು ದೂರದ ಗುಹೆಯಲ್ಲೆಲ್ಲೋ ಹುಗಿದುಕೊಂಡಿಲ್ಲ. ಎಚ್ಚರದಿಂದ ಗಮನಿಸಿದರೆ ನಮಗೇ ಹೊಳೆಯುವ ಸರಳ ಪಾಠಗಳಿವು. ಆದರೆ ನಾವು ಸದಾ ಒಂದಿಲ್ಲೊಂದು ಮೈಮರೆವಿನಲ್ಲಿ ಇರುವುದರಿಂದ ನಮಗೆ ಈ ಗುಟ್ಟುಗಳು ಹೊಳೆಯುವುದೇ ಇಲ್ಲ. ಅತ್ಯಂತ ಸರಳವಾಗಿರುವ ಈ ಸಂಗತಿಗಳನ್ನೂ ಮತ್ತೊಬ್ಬರು ಎತ್ತಿ ಹೇಳಬೇಕಾಗುತ್ತದೆ.  ಕವಿ, ತತ್ವಜ್ಞಾನಿ ಖಲೀಲ್ ಗಿಬ್ರಾನ್ ಇಂತಹ ಸರಳ ಸತ್ಯಗಳನ್ನು ಬಹಳ ಸುಂದರವಾಗಿ, ಕಾವ್ಯಾತ್ಮಕವಾಗಿ ತಮ್ಮ ಕೃತಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ. Sand and Foam (ಮರಳು ಮತ್ತು ನೊರೆ) ಅಂತಹ ಕೃತಿಗಳಲ್ಲೊಂದು. ಗಿಬ್ರಾನ್ ಹೇಳಿದ, ಬದುಕಿಗೆ ತಿಳಿವಿನ ಹೊಳಪು ನೀಡುವ […]

ನೈಜ ಧಾರ್ಮಿಕತೆಯ 10 ಲಕ್ಷಣಗಳಿವು… ನೀವೆಷ್ಟು ಧಾರ್ಮಿಕರು? ಪರೀಕ್ಷಿಸಿಕೊಳ್ಳಿ!

ಯಾವುದು ಆತ್ಮೋದ್ಧಾರಕ್ಕಾಗಿಯೂ ಪರಹಿತಕ್ಕಾಗಿಯೂ  ಆಚರಿಸಲ್ಪಡುತ್ತದೆಯೋ ಅದು ಧರ್ಮ. ಇದಕ್ಕೆ ಶಾಸ್ತ್ರಾಧಾರವಿಲ್ಲ. ನಿಯಮ – ನಿರ್ಬಂಧಗಳಿಲ್ಲ. ಧರ್ಮ ಎಂದರೆ ಮನುಷ್ಯರು ಅತ್ಯಗತ್ಯವಾಗಿ ಧರಿಸಬೇಕಾದ ಗುಣ. ಸಹಜವಾಗಿ ನಡೆಸಬೇಕಾದ, ಒಳಗೊಳಿಸಿಕೊಳ್ಳಬೇಕಾದ ಕರ್ತವ್ಯ. ಈ ಧರ್ಮ religion ಅರ್ಥದಲ್ಲಿ ಹೇಳಲಾಗುವ ಧರ್ಮವಲ್ಲ. ಈ ಸಹಜತೆಗೆ ಹೆಸರಿಲ್ಲ. ಇದು ಆಚರಣೆಯಲ್ಲಿ, ನಡವಳಿಕೆಯಲ್ಲಿ ವ್ಯಕ್ತವಾಗುವಂಥದ್ದು. ಇದನ್ನು ಗುರುತಿಸಲು ಈ ಕಿರುಚಿತ್ರಿಕೆಯಲ್ಲಿರುವ 10 ಲಕ್ಷಣಗಳು ಸಹಾಯ ಮಾಡಬಹುದು.  ನಿಮ್ಮಲ್ಲಿ ಈ 10 ಲಕ್ಷಣಗಳಿದ್ದರೆ ನೀವು ನಿಜವಾದ ಧಾರ್ಮಿಕರು. ಇವು ಅಲ್ಪ ಪ್ರಮಾಣದಲ್ಲಾದರೂ ಇದ್ದರೆ, ಧರ್ಮ ಮಾರ್ಗದಲ್ಲಿ […]

ಪ್ರೇಮಾನುಭೂತಿ ಸವಿಯಲು ಗಿಬ್ರಾನನ 8 ಸಲಹೆಗಳು : Be Positive Video

ಪ್ರೇಮಿಸುವುದು ಎಂದರೆ ನಮ್ಮ ವ್ಯಕ್ತಿತ್ವವನ್ನೆ ಇಲ್ಲವಾಗಿಸಿಕೊಳ್ಳುವ ಪ್ರಕ್ರಿಯೆಯಲ್ಲ. ಪ್ರೇಮವೆಂದರೆ ನಮ್ಮನ್ನು ಒಂದೆಡೆ ಬಂಧಿಸಿಕೊಳ್ಳುವುದಲ್ಲ. ಪ್ರೇಮ ಪಂಜರವಲ್ಲ, ರೆಕ್ಕೆ. ಇದು  ಖಲೀಲ್ ಗಿಬ್ರಾನ್ ಆಶಯ. ನಿಜ ಪ್ರೇಮದ ದಿವ್ಯಾನುಭೂತಿ ಸವಿಯಲು ಇಲ್ಲಿವೆ ಖಲೀಲ್ ಗಿಬ್ರಾನನ 8 ಸಲಹೆಗಳು: