ಝೆನ್ ಕಥೆಗಳು

ಸ್ವರ್ಗ  ಮತ್ತು ನರಕದ ದಾರಿ ಶುರುವಾಗೋದು ಎಲ್ಲಿಂದ? : ಝೆನ್ ಕಥೆ

ಸಮುರಾಯ್ ಯೋಧ ನೊಬೊಶಿ,ಝೆನ್ ಗುರು ಹಕುಇನ್ ಬಳಿ ಬಂದ. ಅದೂ ಇದೂ ಮಾತಾಡುತ್ತ, “ಮಾಸ್ಟರ್…. ಸ್ವರ್ಗ ಮತ್ತು ನರಕದ ದಾರಿ ಶುರುವಾಗೋದು ಎಲ್ಲಿಂದ?” ಕೇಳಿದ. ಅವನನ್ನೆ ದಿಟ್ಟಿಸುತ್ತ ಹಕುಇನ್ ಕೇಳಿದ, “ಯಾರು ನೀನು?” “ನಾನು ನೊಬೊಶಿ. ನಾನೊಬ್ಬ ಸಮುರಾಯ್” ಉತ್ತರಿಸಿದ ನೊಬೊಶಿ. ಹಕುಇನ್ ಗೇಲಿ ಮಾಡಿದ, “ಸಮುರಾಯ್! ಸೈನಿಕ !! ನಿನ್ನನ್ನು ನೋಡಿದರೆ ಒಂದು ಹುಳವೂ ಹೆದರಲಾರದು. ನೀನು ರಾಜ್ಯವನ್ನು ಹೇಗೆ ತಾನೆ ರಕ್ಷಿಸಬಲ್ಲೆ!” ನೊಬೊಶಿಗೆ ಸಿಟ್ಟು ಬಂತು. ಒರೆಗೆ ಕೈ ಹಾಕಿ ಕತ್ತಿಯ ಸದ್ದು ಮಾಡಿದ. […]

More

ಧ್ಯಾನ ಕಲಿತ ಶಿಷ್ಯರು : ಝೆನ್ ಮುಂಚಿನ ಕಥೆ

ಝೆನ್, ಜಪಾನ್ ಪ್ರವೇಶಿಸುವುದಕ್ಕಿಂತ ಮುಂಚೆ ಅಲ್ಲಿನ ಅಧ್ಯಾತ್ಮಿಕ ಆಶ್ರಮವೊಂದರಲ್ಲಿ ಶಿಷ್ಯರು ಧ್ಯಾನ ಕಲಿಯುತ್ತಿದ್ದರು. ಆ ಶಿಷ್ಯರಲ್ಲಿ ನಾಲ್ವರು ಅತ್ಯಂತ ಆತ್ಮೀಯ ಗೆಳೆಯರಿದ್ದರು. ಒಮ್ಮೆ ಆ ನಾಲ್ವರು ಗೆಳೆಯರು ಏಳು ದಿನ ಮೌನ ಧ್ಯಾನ ಮಾಡಬೇಕೆಂದು ತೀರ್ಮಾನ ಮಾಡಿ, ಧ್ಯಾನಕ್ಕೆ ಮೊದಲಾದರು. ಮೊದಲ ದಿನ ಧ್ಯಾನ ಸುಸೂತ್ರವಾಗಿ ಸಂಪನ್ನವಾಯಿತು. ಎರಡನೇಯ ದಿನ ಸಂಜೆ ಕತ್ತಲಾಗುತ್ತಿದ್ದಂತೆ ಒಬ್ಬ ಶಿಷ್ಯ ಅಲ್ಲೆ ಹಚ್ಚಿಟ್ಟಿದ್ದ ದೀಪವನ್ನು ಗಮನಿಸಿದ. ದೀಪ ಕ್ಷೀಣಿಸತೊಡಗಿತ್ತು. ಅವನಿಗೆ ಆತಂಕವಾಗಿ “ಯಾರಾದರೂ ದೀಪ ಸರಿ ಮಾಡಿ “ ಎಂದು ಕೂಗಿ […]

More

ಚುವಾನ್ ಟೆಂಗ್ ಲು, ಝೆನ್’ನಿಂದ ಕಲಿತಿದ್ದೇನು?

ಚುವಾನ್ ಟೆಂಗ್ ಲು ಎಂಬ ಝೆನ್ ಗುರುವನ್ನು ಶಿಷ್ಯ ಕೇಳಿದ, “ಗುರುವೇ, ಝೆನ್’ನಿಂದ ನೀವು ಕಲಿತಿದ್ದೇನು?” ಗುರು ಉತ್ತರಿಸಿದ, “ಮೂವತ್ತು ವರ್ಷಗಳ ಹಿಂದೆ, ನಾನು ಝೆನ್ ಕಲಿಯುವ ಮೊದಲು ಬೆಟ್ಟಗಳನ್ನು ಬೆಟ್ಟಗಳ ಹಾಗೂ ನದಿಗಳನ್ನು ನದಿಗಳ ಹಾಗೂ ನೋಡುತ್ತಿದ್ದೆ. ಮೂವತ್ತು ವರ್ಷಗಳ ಕಾಲ ಝೆನ್ ಕಲಿತೆ. ಈ ಅವಧಿಯಲ್ಲಿ ನಾನು ಬೆಟ್ಟಗಳನ್ನು ಬೆಟ್ಟಗಳಲ್ಲ ಎಂದೂ ನದಿಗಳು ನದಿಗಳಲ್ಲ ಎಂದೂ ನೋಡಲು ಕಲಿತೆ. ಮೂವತ್ತು ವರ್ಷಗಳ ನಂತರ; ಝೆನ್ ಅಭ್ಯಾಸ ಪೂರ್ಣಗೊಂಡ ಮೇಲೆ ನಾನೀಗ ಮತ್ತೊಮ್ಮೆ ಬೆಟ್ಟಗಳನ್ನು ಬೆಟ್ಟಗಳಂತೆಯೂ, […]

More

ಬ್ಯಾಲೆನ್ಸ್ ಮಾಡುವುದು ಹೇಗೆ? : ಝೆನ್ ಕಥೆ

ಒಂದು ಊರಿನಲ್ಲಿ ಒಬ್ಬ ದೊಂಬರಾಟದವನಿದ್ದ. ಅವನ ಬಳಿ ಹೊಸತಾಗಿ ಒಬ್ಬ ಹುಡುಗಿ ಕೆಲಸಕ್ಕೆ ಸೇರಿಕೊಂಡಳು. ಪ್ರತಿದಿನ ರಸ್ತೆಯಲ್ಲಿ ವಿವಿಧ ಕಸರತ್ತುಗಳನ್ನು ಪ್ರದರ್ಶನ ಮಾಡುತ್ತ ತಮ್ಮ ಆ ದಿನದ ಊಟಕ್ಕೆ ಅವರು ಹಣ ಹೊಂಚುತ್ತಿದ್ದರು. ಆದರೆ ಅವರು ಗಳಿಸುತ್ತಿದ್ದ ಹಣ ಅವರ ಖರ್ಚಿಗೆ ಸಾಕಾಗುತ್ತಿರಲಿಲ್ಲ. ಅದಕ್ಕಾಗಿ ಅವರು ಒಂದು ಹೊಸ ಅಪಾಯಕಾರಿ ಆಟವನ್ನು ಪ್ರದರ್ಶನ ಮಾಡಬೇಕೆಂದು ನಿರ್ಧರಿಸಿದರು. ಈ ಆಟದಲ್ಲಿ, ದೊಂಬರಾಟದ ಯಜಮಾನ ಒಂದು ಉದ್ದ ಕೋಲನ್ನು ಅವನ ತಲೆಯ ಮೇಲೆ ಬ್ಯಾಲೆನ್ಸ್ ಮಾಡಬೇಕಿತ್ತು. ಆಮೇಲೆ ಹುಡುಗಿ, ಕೋಲಿನ […]

More

ಒಂದು ಝೆನ್ ಪ್ರಶ್ನೋತ್ತರ

ತನ್ನ ಶಿಷ್ಯರಿಗೆ ಮಾಸ್ಟರ್ ಪ್ರಶ್ನೆ ಮಾಡಿದ. “ರಾತ್ರಿ ಮುಗಿಯುವ ಮತ್ತು , ಹಗಲು ಶುರುವಾಗುವ ಕ್ಷಣವನ್ನು ನಿಖರವಾಗಿ ಗುರುತಿಸುವುದು ಹೇಗೆ? “ ಒಬ್ಬ ಶಿಷ್ಯ : ದೂರದಿಂದ ನಾವು , ಯಾವುದು ನರಿ ಯಾವುದು ನಾಯಿ ಎಂದು ಸರಿಯಾಗಿ ಗುರುತಿಸುತ್ತೇವೋ ಆವಾಗ. ಮಾಸ್ಟರ್ ಗೆ ಈ ಉತ್ತರ ಹಿಡಿಸಲಿಲ್ಲ. ಇನ್ನೊಬ್ಬ ಶಿಷ್ಯ : ದೂರದಿಂದ ನಾವು , ಯಾವುದು ಆಲದ ಮರ, ಯಾವುದು ಅರಳಿ ಮರ ಎಂದು ಸರಿಯಾಗಿ ಗುರುತಿಸುತ್ತೇವೋ ಆವಾಗ. ಮಾಸ್ಟರ್ ಗೆ ಈ ಉತ್ತರವೂ […]

More

ಫರ್ನಿಚರ್ ಎಲ್ಲಿ !? ~ ಝೆನ್ ಸಂಭಾಷಣೆ

ಒಮ್ಮೆ ಒಬ್ಬ ಪ್ರವಾಸಿ, ಝೆನ್ ಮಾಸ್ಟರ್’ ನ ಮನೆಗೆ ಬಂದ. ಅಲ್ಲಿ ಕೇವಲ ಒಂದು ಟೇಬಲ್ ಮತ್ತು ಒಂದು ಖುರ್ಚಿ ನೋಡಿದ ಪ್ರವಾಸಿಗೆ ಆಶ್ಚರ್ಯವಾಯಿತು. ಪ್ರವಾಸಿ : ಬೇರೆ ಫರ್ನೀಚರ್ ಎಲ್ಲ ಎಲ್ಲಿ ? ಮಾಸ್ಟರ್ : ಯಾಕೆ? ನಿನ್ನ ಫರ್ನೀಚರ್ ಎಲ್ಲಿ? ಪ್ರವಾಸಿ : ನನ್ನ ಫರ್ನೀಚರ್ ? ನಾನು ಪ್ರವಾಸಿ, ಸುಮ್ಮನೇ ಇಲ್ಲಿಂದ ಹಾಯ್ದು ಹೋಗುತ್ತಿದ್ದೆ. ಮಾಸ್ಟರ್ : ನಾನೂ ಅಷ್ಟೇ. (ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)

More

ಯುವತಿಯನ್ನು ಕೆಳಗಿಳಿಸದ ಎಕಿಡೊ : ಝೆನ್ ಕಥೆ

ಬೌದ್ಧ ಬಿಕ್ಖುಗಳಾದ ತಾನ್ ಜೆನ್ ಮತ್ತು ಎಕಿಡೋ ಒಟ್ಟಿಗೆ ಝೆನ್ ಕಲಿಯುತ್ತಿದ್ದರು. ಒಮ್ಮೆ ಅವರು ಎಲ್ಲಿಗೋ ಹೋಗುವುದಿತ್ತು. ಹಿಂದಿನ ರಾತ್ರಿ ಸಿಕ್ಕಾಪಟ್ಟೆ ಮಳೆ ಬಂದು ಚಿಕ್ಕ ಹಳ್ಳಗಳೆಲ್ಲ ತುಂಬಿ ರಸ್ತೆ ಮೇಲೆ ಹರಿದಿದ್ದವು. ಸಾಮಾನ್ಯದವರು ರಸ್ತೆ ದಾಟುವುದು ಕಷ್ಟ ಅನ್ನುವ ಪರಿಸ್ಥಿತಿ. ಹೀಗಿರುವಾಗ ತಾನ್ ಜೆನ್ ಮತ್ತು ಎಕಿಡೊ ಸಾಹಸಪಟ್ಟು ನಡೆದುಹೋಗುತ್ತಿದ್ದರು. ಅದೇ ವೇಳೆಗೆ ಹಳ್ಳ ಹರಿಯುತ್ತಿದ್ದ ರಸ್ತೆಯನ್ನು ದಾಟಲಾಗದೆ ಯುವತಿಯೊಬ್ಬಳು ಪರದಾಡುತ್ತಿದ್ದಳು. ಅವಳ ಕಷ್ಟವನ್ನು ನೋಡಲಾಗದೆ ತಾನ್ ಜೆನ್, “ಇರು ಹುಡುಗಿ, ನಾನು ಸಹಾಯ ಮಾಡ್ತೀನಿ” […]

More

ಮಾಸ್ಟರ್ ಬಾಂಕಿಯ ಪ್ರವಚನ : ಝೆನ್ ಕಥೆ

ಮಾಸ್ಟರ್ ಬಾಂಕಿಯ ಪ್ರವಚನಗಳಿಗೆ ಬರೀ ಅವನ ಶಿಷ್ಯರಷ್ಟೇ ಅಲ್ಲ ಸುತ್ತಮುತ್ತಲಿನ ಊರುಗಳ ಎಲ್ಲಾ ಸ್ತರದ ಜನರೂ ಸೇರುತ್ತಿದ್ದರು. ಬಾಂಕಿ, ತನ್ನ ಪ್ರವಚನದಲ್ಲಿ ಸಂಕೀರ್ಣ ಬೌದ್ಧ ಸೂತ್ರಗಳನ್ನು ಬಳಸುತ್ತಿರಲಿಲ್ಲ ಬದಲಾಗಿ ಸರಳವಾಗಿ ಝೆನ್ ಬಳಕೆಯನ್ನು ನೇರವಾಗಿ ಸಾಮಾನ್ಯ ಜನರಿಗೆ ಮುಟ್ಟುವಂತೆ ವಿವರಿಸುತ್ತಿದ್ದ. ಅವನ ಸಭೆಗಳಿಗೆ ಸೇರುತ್ತಿದ್ದ ಅಪಾರ ಜನಸಂಖ್ಯೆಯನ್ನು ಕಂಡು ಆ ಊರಿನ ದೇವಸ್ಥಾನದ ಮುಖ್ಯ ಅರ್ಚಕನಿಗೆ ತಂಬಾ ಸಿಟ್ಟು ಬರುತ್ತಿತ್ತು. ಅವನ ಹತ್ತಿರ ಬರುತ್ತಿದ್ದ ಸುಮಾರು ಜನ ಈಗ ಬಾಂಕಿಯ ಪ್ರವಚನ ಕೇಳಲು ಹೋಗುತ್ತಿದ್ದರು. ಒಂದು ದಿನ […]

More

ಬೈದರೂ ಬುದ್ಧನೇಕೆ ನಗುತ್ತಿದ್ದ?

ಬುದ್ಧ ತನ್ನ ಪರಿವಾರದೊಡನೆ ಕೂತಿದ್ದ. ಅಲ್ಲಿಗೆ ಬಂದ ಆಗಂತುಕನೊಬ್ಬ ಹಿಂದುಮುಂದಿಲ್ಲದೆ ಬುದ್ಧನನ್ನು ವಾಚಾಮಗೋಚರವಾಗಿ ಬಯ್ಯತೊಡಗಿದ. ಕಡೆಗೆ ಸಾಕಾಗಿ ಅಲ್ಲಿಂದ ಹೊರಟುಹೋದ. ಆತ ಅಲ್ಲಿಗೆ ಬರುವ ಮುನ್ನವೂ ಬಂದಾಗಲೂ ಬಯ್ಯುವಾಗಲೂ ಬೈದುಹೋದಮೇಲೂ ಮುಗುಳ್ನಗುತ್ತಲೇ ಇದ್ದ ಬುದ್ಧ. ಆ ನಗುವಿನಲ್ಲಿ ವ್ಯಂಗ್ಯವಾಗಲೀ ಉದಾಸೀನವಾಗಲೀ ಇರಲಿಲ್ಲ. ಅಲ್ಲಿ ವಿಷಾದದ ಲೇಪವೂ ಇರಲಿಲ್ಲ.  ಇದನ್ನು ಕಂಡ ಶಿಷ್ಯ ಆನಂದ ಕೇಳಿದ, “ಅವನು ಅಷ್ಟೆಲ್ಲ ಬೈದರೂ ನೀವ್ಯಾಕೆ ಸುಮ್ಮನಿದ್ದಿರಿ? ಸಾಲದ್ದಕ್ಕೆ ನಗುತ್ತಲೇ ಇದ್ದಿರಿ!” ಬುದ್ಧ ಕೇಳಿದ, “ಯಾರಾದರೂ ಬಂದು ನಿನ್ನ ಚೀಲಕ್ಕೆ ಏನಾದರೂ ಹಾಕುತ್ತಾರೆ […]

More

ಅನುಭಾವಿ ನಿಜವಾಗಿಯೂ ಸತ್ತಿದ್ದು ಯಾವಾಗ? ~ ಝೆನ್ ಕಥೆ

ಒಬ್ಬ ಝೆನ್ ಅನುಭಾವಿ ತನ್ನ ಕಟ್ಟ ಕಡೆಯ ನುಡಿಗಳನ್ನು ಲಿಪಿರೂಪಕ್ಕಿಳಿಸದೇ ತೀರಿಕೊಂಡ. ಅಗಲಿಕೆಯ ದುಃಖದಲ್ಲಿ ಮುಳುಗಿದ್ದ ಶಿಷ್ಯರಿಗೆ ಅದು ನೆನಪೇ ಆಗಲಿಲ್ಲ. ಆ ಶಿಷ್ಯರು ಕಳೇಬರವನ್ನು ಗುಡಿಸಲಿನಿಂದ ಹೊರಕ್ಕೆ ತಂದು ಚಿತೆಯನ್ನು ಸಿದ್ಧಪಡಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಆ ಗುರು ಕಣ್ತೆರೆದ. “ಅರೆ, ಮರೆತೇ ಬಿಟ್ಟಿರಲ್ಲ, ಹೋಗಿ ನನ್ನ ಪುಸ್ತಕ ತನ್ನಿ. ತನ್ನ ಕಡೆಯ ಸಂದೇಶವನ್ನು ಹೇಳದೇ ತೀರಿಕೊಂಡನೆಂದು ಮುಂಬರುವ ತಲೆಮಾರುಗಳು ನನ್ನನ್ನು ಆಕ್ಷೇಪಿಸಬಾರದು, ಹೋಗಿ ಕೂಡಲೆ ತನ್ನಿ” ಎಂದ. ಪುಸ್ತಕವನ್ನು ತಂದ ಮೇಲೆ ಅದರಲ್ಲಿ ಒಂದು ಪುಟ್ಟ ಸಾಲು […]

More