ಭಯವನ್ನು ಬಿಸಾಡಿದ ಶಿಷ್ಯ

ಒಮ್ಮೆ ಗುರು ಶಿಷ್ಯರಿಬ್ಬರು ಕಾಡಿನಲ್ಲಿ ನಡೆದು ಹೋಗುತ್ತಿದ್ದರು. ಸಂಜೆಗತ್ತಲಾದ ಹಾಗೆಲ್ಲಾ ಕಾಡಿನ ದಾರಿ ಕೂಡಾ ದಟ್ಟವಾಗತೊಡಗಿತು. ಗುರು ಒಂದು ಚೀಲವನ್ನುಹಿಡಿದುಕೊಂಡಿದ್ದ. ಅದು ಭಾರವಾಗಿತ್ತು. ಅವರು ಕಾಡಿಗೆ ತೆರಳುವ ಮುಂಚೆ ಸತ್ಸಂಗ ಏರ್ಪಡಿಸಿದ್ದ ಗೃಹಸ್ಥನೊಬ್ಬ ಅವರಿಗೆ ಅದನ್ನು ಕಾಣಿಕೆಯಾಗಿ ನೀಡಿದ್ದ. ಕಾಡಿನಲ್ಲಿ ಮುಂದುವರಿದಂತೆಲ್ಲ ಗುರು ಮತ್ತೆಮತ್ತೆ ತನ್ನ ಶಿಷ್ಯನಿಗೆ “ನಾವು ಭಯಪಡುವ  ಅಗತ್ಯವಿಲ್ಲವಷ್ಟೆ?” ಎಂದು ಕೇಳುತ್ತಿದ್ದ. ಶಿಷ್ಯನಿಗೆ ಗುರುವಿನ ವರ್ತನೆ ವಿಚಿತ್ರ ಅನ್ನಿಸುತ್ತಿತ್ತು. ಹಾಗೇ ನಡೆಯುತ್ತಾ ಅವರೊಂದು ಕೊಳವನ್ನು ತಲುಪಿದರು. ಅಲ್ಲಿ ಗುರು ಶೌಚಕ್ಕೆ ಇಳಿದಾಗ ಶಿಷ್ಯ, ಗುರುವಿನ […]

ತರುಣನನ್ನು ಬೇಸ್ತು ಬೀಳಿಸಿದ ಮಿಲರೇಪ

ಒಮ್ಮೆ ತರುಣ ವಿದ್ಯಾರ್ಥಿಯೊಬ್ಬ ಹಿಮ ಬೆಟ್ಟದ ಮೇಲೆ ಕುಳಿತಿದ್ದ ಮಿಲರೇಪರನ್ನು ಹುಡುಕಿಕೊಂಡು ಬಂದ. ಅವನು ಮಿಲರೇಪರ ಕುರಿತಾಗಿ ಸಾಕಷ್ಟು ಸಂಗತಿಗಳನ್ನು ಕೇಳಿದ್ದ. ಅವರೊಬ್ಬ ಮಹಾತಾಂತ್ರಿಕರೆಂದು ಬೆಟ್ಟದ ಕೆಳಗಿನ ಕಣಿವೆಯಲ್ಲಿ ಮನೆಮಾತಾಗಿದ್ದರು. ಆ ತರುಣ ತಾನು ಅವರಿಂದ ಒಂದಾದರೂ ಮಂತ್ರ ಪಡೆಯಲೇಬೇಕು ಎಂದು ನಿಶ್ಚಯಿಸಿ ಬಂದಿದ್ದ. ತರುಣನ ಕೋರಿಕೆಗೆ ಮಿಲರೇಪ ನಕ್ಕುಬಿಟ್ಟರು. ತಾನು ಅಂಥದ್ದೇನೂ ಮಂತ್ರ ತಂತ್ರ ಇಲ್ಲವೆಂದು ಹೇಳಿಬಿಟ್ಟರು. ತರುಣನಿಗೆ ಅವರು ಸುಳ್ಳು ಹೆಳುತ್ತಿದ್ದಾರೆ ಅನ್ನಿಸಿತು. ಅಥವಾ ಅವರು ತನ್ನ ಛಲವನ್ನು ಪರೀಕ್ಷಿಸುತ್ತಿರಬಹುದು ಎಂದೂ ಅವನು ಯೋಚಿಸಿದನು. […]

ಜ್ಞಾನೋದಯ ಹೊಂದಿದ ಚಿತ್ರದ ಮುದುಕ

ಒಮ್ಮೆ ಶಿಷ್ಯ , ಒಂದು ಮೆಥೊಡಿಸ್ಟ್ ಚರ್ಚ್ ದಾಟಿ ಮನೆಗೆ ವಾಪಸ್ಸಾಗುತ್ತಿದ್ದಾಗ, ಚರ್ಚ್’ನ ಅಂಗಳದಲ್ಲಿ ಝೆನ್ ಮಾಸ್ಟರ್ ಚಿತ್ರಕ್ಕೆ ಬಣ್ಣ ತುಂಬುತ್ತಾ ಕುಳಿತದ್ದನ್ನು ಕಂಡ. ಹತ್ತಿರ ಹೋಗಿ ನೋಡಿ ಆಶ್ಚರ್ಯಚಕಿತನಾದ. ಮಾಸ್ಟರ್, ಚರ್ಚ್’ನ ಚಿತ್ರ ಬಿಡಿಸುತ್ತಿರಲಿಲ್ಲ, ಬದಲಾಗಿ ಚೀನಾ ದೇಶದ ಪ್ರಕೃತಿ ಚಿತ್ರ ಬಿಡಿಸುತ್ತಿದ್ದ. ಆ ಚಿತ್ರದಲ್ಲಿ ದೊಡ್ಡ ಪರ್ವತ ಶ್ರೇಣಿ, ನದಿ, ಸುಂದರ ಜಲಪಾತ ಮತ್ತು ತನ್ನ ಪುಟ್ಟ ಗುಡಿಸಲಿನ ಮುಂದೆ ಕಸ ಗುಡಿಸುತ್ತಿದ್ದ ಗೂನು ಬೆನ್ನಿನ ಹಸನ್ಮುಖಿ ಮುದುಕ. ಶಿಷ್ಯ : ಏನು ಚಿತ್ರ […]

ಆತ ತನ್ನ ಹೆಸರನ್ನು ‘ನೀರಿನ ಹನಿ’ ಎಂದಿರಿಸಿಕೊಂಡಿದ್ದು ಏಕೆ ಗೊತ್ತೆ?

ಗೀಸನ್ ಎಂಬ ಝೆನ್ ಗುರು ಸ್ನಾನಕ್ಕೆ ಇಳಿದಿದ್ದ. ನೀರು ಬಹಳ ಬಿಸಿ ಇತ್ತು. ತಣ್ಣೀರು ತರುವಂತೆ ಶಿಷ್ಯನಿಗೆ ಹೇಳಿದ. ಶಿಷ್ಯ ತಣ್ಣೀರು ತಂದ. ಕೊಳಗಕ್ಕೆ ಹಾಕಿದ. ನೀರು ತಣ್ಣಗಾಯಿತು. ತಾನು ತಂದ ತಪ್ಪಲೆಯಲ್ಲಿ ಇನ್ನೂ ಉಳಿದಿದ್ದ ನೀರನ್ನು ಶಿಷ್ಯ ಬಚ್ಚಲಿನಲ್ಲೇ ಚೆಲ್ಲಿ ಬಿಟ್ಟ. “ಮೂರ್ಖ. ಉಳಿದ ನೀರನ್ನು ಗಿಡಗಳಿಗೆ ಹಾಕಬಾರದಿತ್ತೆ? ದೇವಸ್ಥಾನದ ನೀರನ್ನು ವ್ಯರ್ಥಮಾಡುವುದಕ್ಕೆ ನಿನಗೇನು ಅಧಿಕಾರವಿದೆ?” ಎಂದು ಗೀಸನ್ ಶಿಷ್ಯನನ್ನು ತರಾಟೆಗೆ ತೆಗೆದುಕೊಂಡ. ಆ ಕ್ಷಣದಲ್ಲಿ ಶಿಷ್ಯನಿಗೆ ಝೆನ್ ಸಾಕ್ಷಾತ್ಕಾರವಾಯಿತು. ತನ್ನ ಹೆಸರನ್ನು ‘ಟೆಕಿಸುಇ’ ಎಂದು […]

ಉತ್ತರ ನಿನ್ನ ಕೈಯಲ್ಲೇ ಇದೆ

ಒಮ್ಮೆ ಒಬ್ಬ ಯುವಕ ಬೆಟ್ಟದ ಮೇಲೆ ಇರುತ್ತಿದ್ದ ಝೆನ್ ಗುರುವನ್ನು ಪರೀಕ್ಷಿಸಬೇಕೆಂದು ನಿರ್ಧರಿಸಿದನು. ಅದಕ್ಕಾಗಿ ಒಂದು ಪುಟ್ಟ ಹಕ್ಕಿಯನ್ನು ಮುಷ್ಟಿಯಲ್ಲಿ ಮುಚ್ಚಿಟ್ಟುಕೊಂಡು, ಬೆನ್ನ ಹಿಂದೆ ಕೈ ಕಟ್ಟಿಕೊಂಡು ಗುರುವಿನ ಬಳಿಗೆ ಹೋದನು.    ಗುರು ಒಂದು ವೇಳೆ ಹಕ್ಕಿ ಬದುಕಿದೆ ಅಂದರೆ ಹಾಗೇ ಹಕ್ಕಿಯ ಕತ್ತು ಹಿಸುಕಿ ಕೊಂದುಬಿಡುವುದಾಗಿಯೂ, ಸತ್ತಿದೆ ಅಂದರೆ ಹಕ್ಕಿಯನ್ನು ಮುಷ್ಟಿ ತೆರೆದು ಹಾರಿಬಿಡುವುದಾಗಿಯೂ ಅವನು ಆಲೋಚಿಸಿ, “ಗುರುವೇ! ನನ್ನ ಕೈಯೊಳಗೆ ಇರುವ ಹಕ್ಕಿ ಬದುಕಿದೆಯೋ, ಸತ್ತಿದೆಯೋ?” ಎಂದು ಕೇಳಿದನು.  ಯುವಕನ ಮುಖವನ್ನು ಶಾಂತವಾಗಿ […]

ದಕ್ಷಿಣ ಜಪಾನಿನ ವಿದ್ಯಾರ್ಥಿಗೆ ಜ್ಞಾನೋದಯ ಮಾಡಿಸಿದ ಸುಯಿವೊ

ಸುಯಿವೊ ಒಬ್ಬ ಝೆನ್ ಬೋಧಕ. ಅವನೊಂದು ಗುರುಕುಲವನ್ನು ನಡೆಸುತ್ತಿದ್ದ. ಝೆನ್ ಕಲಿಯಲು ಅಲ್ಲಿಗೆ ದೂರದೂರದಿಂದ ವಿದ್ಯಾರ್ಥಿಗಳು ಬಂದರು. ಹೀಗೊಂದು ಬೇಸಿಗೆ ದಿನದಂದು ದಕ್ಷಿಣ ಜಪಾನಿನಿಂದ ಒಬ್ಬ ವಿದ್ಯಾರ್ಥಿ ಬಂದ. ಸುಯಿವೊ ಎಲ್ಲರಿಗೂ ನೀಡುವಂತೆ ಅವನಿಗೂ ಒಂದು ಒಗಟು ನೀಡಿ ಬಿಡಿಸುವಂತೆ ಹೇಳಿದ. “ಒಂದು ಕೈ ಚಪ್ಪಾಳೆ ಸದ್ದು ಹೇಗಿರುತ್ತೆ?” ಇದೇ ಆ ಒಗಟು. ದಕ್ಷಿಣ ಜಪಾನಿನ ಆ ವಿದ್ಯಾರ್ಥಿಗೆ ಹರಸಾಹಸ ಪಟ್ಟರೂ ಆ ಒಗಟನ್ನು  ಅರ್ಥ ಮಾಡಿಕೊಳ್ಳಲೂ ಸಾಧ್ಯವಾಗಲಿಲ್ಲ. ಒಂದು ವರ್ಷ ಕಳೆಯಿತು. ಎರಡನೇ ವರ್ಷ ಉರುಳಿತು. […]

ಶೋಹಿಚಿ ತೀರಿಕೊಂಡಿದ್ದು ಗೊತ್ತಾಗಿದ್ದು ಹೇಗೆ?

ಶೋಹಿಚಿ ಒಬ್ಬ ಒಕ್ಕಣ್ಣ ಝೆನ್ ಗುರು. ಅವನು ತೊಫುಕು ದೇವಾಲಯದಲ್ಲಿ ಶಿಕ್ಷಣ ನೀಡುತ್ತಿದ್ದ. ಅಪಾರ ಜ್ಞಾನವನ್ನು ಹೊಂದಿದ್ದ ಶೋಹಿಚಿ ವ್ಯರ್ಥವಾಗಿ ಮಾತಾಡುವುದನ್ನಾಗಲೀ ಸಂಕೇತಗಳನ್ನಾಗಲೀ ಇಷ್ಟಪಡುತ್ತಿರಲಿಲ್ಲ. ಅವನ ಶಿಕ್ಷಣ ವಿಧಾನವೆಂದರೆ ಮೌನದ ಸಾಧನೆ. ಶೋಹಿಚಿಯ ಕಾರಣದಿಂದ ತೊಫುಕು ದೇವಾಲಯದಲ್ಲಿ ಯಾವ ಸದ್ದೂ ಇರುತ್ತಿರಲಿಲ್ಲ. ಸಂಪೂರ್ಣ ನಿಶ್ಶಬ್ದ. ಅಲ್ಲಿ ಅವನು ಧರ್ಮ ಸೂತ್ರಗಳನ್ನು ಪಠಿಸುವುದಕ್ಕೂ ಅನುಮತಿ ನೀಡುತ್ತಿರಲಿಲ್ಲ. ಅವನ ಶಿಷ್ಯರು ಮೌನ ಧ್ಯಾನವನ್ನು ಬಿಟ್ಟು ಬೇರೆ ಯಾವ ಸಾಧನೆಯನ್ನು ಮಾಡಬೇಕಾಗಿಯೂ ಇರಲಿಲ್ಲ. ವರ್ಷಗಳು ಉರುಳಿದವು. ಒಂದು ದಿನ ತೊಫುಕು ದೇವಾಲಯದ ಸಮೀಪದಲ್ಲಿ […]