ಝೆನ್ ಗುರುವಿನ ಪೆನ್ ಮತ್ತು ವೈನ್ : Tea time story

ಝೆನ್ ಗುರು ತನ್ನ ಪೆನ್ ಮತ್ತು ವೈನ್ ಬಾಟಲಿಗಳೆರಡನ್ನೂ ಬಹಳ ಜೋಪಾನವಾಗಿಟ್ಟುಕೊಂಡಿದ್ದ. ಶಿಷ್ಯರಿಗೆ ಮುಟ್ಟಲು ಕೊಡುತ್ತಿರಲಿಲ್ಲ. ಆದರೆ ಒಂದು ದಿನ ಶಿಷ್ಯನೊಬ್ಬ ಏನು ಮಾಡಿದ ಗೊತ್ತೇ…!? ಒಬ್ಬ ಝೆನ್ ಗುರುವಿನ ಬಳಿ ಎರಡು ಅಮೂಲ್ಯ ವಸ್ತುಗಳಿದ್ದವು. ಒಂದು ಪೆನ್ನು, ಇನ್ನೊಂದು ವೈನ್‌ ಬಾಟಲು. ಎರಡೂ ಬಹಳ ಬೆಲೆಯುಳ್ಳವು. ಆದರೆ, ಗುರು ಎಂಥಾ ಜಿಪುಣನಾಗಿದ್ದನೆಂದರೆ, ಆ ಪೆನ್ನನ್ನು ಆತ ಯಾರಿಗೂ ಬಳಸಲು ಕೊಟ್ಟಿರಲಿಲ್ಲ. ಸ್ವತಃ ತಾನೂ ಅದರಲ್ಲೊಮ್ಮೆಯೂ ಬರೆಯಲಿಲ್ಲ. ಹಾಗೆಯೇ ಆ ವೈನ್‌ ಬಾಟಲು ಕೂಡ. ಅದರ ಒಂದೇ […]

ಅವರು ಕೊಂದೇಬಿಟ್ಟರೆ ಏನನ್ನಿಸುತ್ತದೆ? : Tea time story

“ಅವರು ಕೊಂದೇಬಿಟ್ಟರೆ ಏನನ್ನಿಸುತ್ತದೆ?” ಬುದ್ಧ ಕೇಳಿದ. ಅದಕ್ಕೆ ಪೂರ್ಣ ಕೊಟ್ಟ ಉತ್ತರವೇನು ಗೊತ್ತೇ? | ಸಂಗ್ರಹ ಮತ್ತು ಅನುವಾದ : ಅಲಾವಿಕಾ ಬುದ್ಧನಿಗೆ ಪೂರ್ಣ ಎಂಬ ಶಿಷ್ಯನಿದ್ದ. ತನ್ನ ಸಾಧನೆ ಪೂರ್ಣವಾಯಿತು ಅನ್ನಿಸಿದಾಗ ಬುದ್ಧನ ಬಳಿ ಬಂದು, “ನಿಮ್ಮ ಸಂದೇಶವನ್ನು ವಿತರಿಸಲು ಸೂಖಾದ ಕಡೆ ಹೊರಡುತ್ತೇನೆ. ಅನುಮತಿ ಕೊಡಿ” ಎಂದು ಕೇಳಿದ. ಬಿಹಾರದಲ್ಲಿರುವ ಚಿಕ್ಕ ಊರು ‘ಸೂಖಾ’, ಬರೀ ದುಷ್ಟಜನರಿಂದ ತುಂಬಿದ್ದು, ಕುಖ್ಯಾತಿಗೆ ಒಳಗಾಗಿತ್ತು. ಪೂರ್ಣನಿಗೆ ಮೊದಲು ಯಾವ ಭಿಕ್ಷುವೂ ಅಲ್ಲಿಗೆ ಹೋಗಿರಲಿಲ್ಲ. ಅದನ್ನು ನೆನೆದು ಬುದ್ಧ […]

ಕೆಸರು ನೀರು ತಿಳಿಯಾಗಲು ಏನು ಮಾಡಬೇಕು? : ಬುದ್ಧ ಬೋಧನೆ

ಗೌತಮ ಬುದ್ಧ ತನ್ನ ಶಿಷ್ಯರೊಂದಿಗೆ ದೇಶ ಸಂಚಾರಕ್ಕೆ ಹೊರಟಿದ್ದ. ಶಿಷ್ಯನೊಬ್ಬ ಯಾವುದೋ ಚಿಂತೆಯಲ್ಲಿದ್ದಂತೆ ಕಾಣಿಸುತ್ತಿತ್ತು. ಬುದ್ಧ ಬಾಯಿಬಿಟ್ಟು ಏನನ್ನೂ ಕೇಳಲಿಲ್ಲ. ಹಾಗೆಯೇ ದಾರಿಮಧ್ಯೆ ಕೆರೆಯೊಂದು ಕಾಣಿಸಿತು. ಆಗ ಬುದ್ಧ ‘ನನಗೆ ಬಹಳ ನೀರಡಿಕೆಯಾಗುತ್ತಿದೆ. ಆ ಕೆರೆಯಿಂದ ನೀರು ತಂದುಕೊಡಿ’ ಎಂದು ಆ ಶಿಷ್ಯನಿಗೆ ಹೇಳಿದ. ಆತ ಕೆರೆಯ ಬಳಿಗೆ ಹೋದ. ಅಷ್ಟರಲ್ಲಿ ಎತ್ತಿನಗಾಡಿಯೊಂದು ಕೆರೆಯನ್ನು ಹಾದು ಹೋಯಿತು. ಅದರ ಪರಿಣಾಮ ಕೆರೆಯ ನೀರು ಕೆಸರಾಯಿತು. ಇಷ್ಟು ಕೊಳಕು ನೀರನ್ನು ಕುಡಿಯಲಾಗುತ್ತದೆಯೇ ಎಂದು ಯೋಚಿಸಿದ ಆ ಶಿಷ್ಯ ವಾಪಸಾಗಿ […]

ಸನ್ಯಾಸಿಗೆ ಪ್ರೇಮದ ಬಗ್ಗೆ ಹೇಗೆ ಗೊತ್ತು !? : Tea time story

ತುಂಬು ಬದುಕನ್ನು ಬಾಳಿದ ಒಬ್ಬ ವಯಸ್ಸಾದ ಸನ್ಯಾಸಿಯನ್ನು ಯುವತಿಯರ ವಿದ್ಯಾಸಂಸ್ಥೆಯೊಂದರಲ್ಲಿ ಅಧ್ಯಾತ್ಮದ ಶಿಕ್ಷಕನನ್ನಾಗಿ ನೇಮಿಸಲಾಯಿತು. ಯುವತಿಯರು ಮೇಲಿಂದ ಮೇಲೆ ಪ್ರೇಮದ ಬಗ್ಗೆ ತಮ್ಮೊಳಗೆ ಮಾತನಾಡಿಕೊಳ್ಳುವುದನ್ನು ಗಮನಸಿದ ಸನ್ಯಾಸಿ, ಒಂದು ದಿನ ಆ ಯುವತಿಯರನ್ನು ಎಚ್ಚರಿಸಿದ. “ ಏನೇ ಅತಿಯಾದರೂ ಬದುಕಿನಲ್ಲಿ ಅದರಿಂದಾಗುವ ಅಪಾಯವನ್ನು ಮೊದಲು ತಿಳಿದುಕೊಳ್ಳಿ. ಕಾದಾಟದಲ್ಲಿ ಅತಿಯಾದ ಕೋಪ, ಅಜಾಗರೂಕತೆಗೆ ಕೊನೆಗೆ ಸಾವಿಗೆ ಕಾರಣವಾಗುತ್ತದೆ. ಧಾರ್ಮಿಕ ನಂಬಿಕೆಗಳ ಬಗ್ಗೆ ಅತಿ ಉತ್ಸಾಹ, ಸಂಕುಚಿತ ಸ್ವಭಾವಕ್ಕೆ, ಹಿಂಸೆಗೆ ದಾರಿಯಾಗುವುದು. ಪ್ರೇಮದಲ್ಲಿ ಅತಿ ಉತ್ಕಟತೆ, ಮನಸ್ಸಿನಲ್ಲಿ ಪ್ರೇಮಿಯ ಬಗ್ಗೆ […]

ಬಹಿರಂಗವಾಗಿದ್ದು ಯಾರ ಮೂರ್ಖತನ!? : Tea time story

ಒಬ್ಬ ಝೆನ್ ಮಾಸ್ಟರ್ ನ ಆಶ್ರಮಕ್ಕೆ ಬೇರೆ ಆಶ್ರಮದ ಇಬ್ಬರು ಝೆನ್ ಸನ್ಯಾಸಿಗಳು ಅತಿಥಿಗಳಾಗಿ ಬಂದಿದ್ದರು. “ ಈ ಆಶ್ರಮದಲ್ಲಿ ಝೆನ್ ಬಗ್ಗೆ ತಿಳುವಳಿಕೆ ಇರುವ ಒಬ್ಬರೂ ಇಲ್ಲ” ಎಂದು ಅವರಿಬ್ಬರೂ ಮಾತನಾಡಿಕೊಳ್ಳುವುದನ್ನ ಆ ಆಶ್ರಮದ ಹಿರಿಯ ಶಿಷ್ಯ ಕೇಳಿಸಿಕೊಂಡ. ಕೆಲ ಹೊತ್ತಿನ ನಂತರ ಆಶ್ರಮದ ಎಲ್ಲರೂ ಕಟ್ಟಿಗೆ ಸಂಗ್ರಹಿಸುವ ಕೆಲಸದಲ್ಲಿ ನಿರತರಾಗಿದ್ದಾಗ ಈ ಇಬ್ಬರೂ ಅತಿಥಿ ಸನ್ಯಾಸಿಗಳು ವಿಶ್ರಾಂತಿ ತೆಗೆದುಕೊಳ್ಳುತ್ತಿರುವುದನ್ನು ಆಶ್ರಮದ ಹಿರಿಯ ಶಿಷ್ಯ ಗಮನಿಸಿದ. ಅವ ತಕ್ಷಣವೇ ಕಟ್ಟಿಗೆಯೊಂದನ್ನು ಹಿಡಿದುಕೊಂಡು ಆ ಇಬ್ಬರು ಅತಿಥಿಗಳು […]

ನೀನು ಐದನೆಯವನು! : Tea time Story Poster

ಮೀನು ಹಿಡಿಯಲು ಹೊಸ ಪರಿಕರ ಕಂಡುಕೊಂಡಿದ್ದ ಬೆಸ್ತನೊಬ್ಬ, ಅದನ್ನು ದಾರಿಹೋಕನಿಗೆ ಮಾರಿದ. ಅದು ನಿಜಕ್ಕೂ ಪ್ರಯೋಜನಕಾರಿಯಾಗಿತ್ತೇ? ಈ ಝೆನ್ ಕಥೆ ಓದಿ!