ಸೂಪ್’ನಲ್ಲಿ ಹಾವಿನ ತಲೆ ! : ಒಂದು ಝೆನ್ ಕಥೆ ~ Tea time story

ಒಂದು ದಿನ ಝೆನ್ ಆಶ್ರಮಕ್ಕೆ ಝೆನ್ ಮಾಸ್ಟರ್ ಅನಿರೀಕ್ಷಿತವಾಗಿ ಭೇಟಿ ನೀಡಿದ. ಆಶ್ರಮದ ಅಡಿಗೆಯವ ಮಾಸ್ಟರ್ ಗಾಗಿ ವಿಶೇಷ ಸೂಪ್ ತಯಾರಿಸಲು ತರಾತುರಿಯಿಂದ ಸಿದ್ಧತೆ ಮಾಡಿಕೊಳ್ಳತೊಡಗಿದ. ಅವ ಆಶ್ರಮದ ತೋಟಕ್ಕೆ ಹೋಗಿ ಗಡಿಬಿಡಿಯಿಂದ ಒಂದಿಷ್ಟು ತರಕಾರಿ ಕತ್ತರಿಸಿಕೊಂಡು ಬಂದು ರುಚಿಕಟ್ಟಾದ ಸೂಪ್ ತಯಾರಿಸಿದ. ಮಾಸ್ಟರ್, ಅಡಿಗೆಯವ ತಯಾರಿಸಿದ ಸೂಪ್ ಖುಶಿಯಿಂದ ಸೇವಿಸತೊಡಗಿದ. ಅರ್ಧ ಸೂಪ್ ಸೇವಿಸಿದವನಿಗೆ ಅದರಲ್ಲೊಂದು ಹಾವಿನ ಕತ್ತರಿಸಿದ ತಲೆ ಕಾಣಿಸಿತು. ಮಾಸ್ಟರ್ ಸಿಟ್ಟಿನಿಂದ ಅಡಿಗೆಯವನನ್ನು ಕೂಗಿದ. ಅಡಿಗೆಯವ ಮಾಸ್ಟರ್ ಎದುರು ಬಂದು ನಿಂತ. “ […]

ವಾಕಿಂಗ್ ಮೆಡಿಟೇಶನ್ ಮತ್ತು ಹೊಗೆಸೊಪ್ಪು ಸೇದುವುದು : ಝೆನ್ ಕಥೆ

ಒಬ್ಬ ಝೆನ್ ಮಾಸ್ಟರ್ ಗೆ ಇಬ್ಬರು ಶಿಷ್ಯರಿದ್ದರು. ಪ್ರತಿದಿನ ಅವರಿಬ್ಬರೂ ಮಾಸ್ಟರ್ ಮನೆಯ ಮುಂದಿನ ಗಾರ್ಡನ್ ಲ್ಲಿ ‘ವಾಕಿಂಗ್ ಮೆಡಿಟೇಶನ್’ ಮಾಡುತ್ತಿದ್ದರು. ಝೆನ್ ಸಂಪ್ರದಾಯದಲ್ಲಿ ಪ್ರತಿ ಕ್ರಿಯೆಯೂ ಧ್ಯಾನವೇ. ಸದಾ 24 ಗಂಟೆ ಕುಳಿತು ಧ್ಯಾನ ಮಾಡುವುದು ಕಷ್ಟ. ಕಾಲುಗಳು ಮರಗಟ್ಟುತ್ತವೆ, ರಕ್ತದ ಚಲನೆಗೆ ತೊಂದರೆಯಾಗುತ್ತದೆ. ಆದ್ದರಿಂದ ಝೆನ್ ಸನ್ಯಾಸಿಗಳು ಸ್ವಲ್ಪ ಹೊತ್ತು ಕೂತು ಧ್ಯಾನ ಮಾಡುತ್ತಾರೆ ಆಮೇಲೆ ಸ್ವಲ್ಪ ಹೊತ್ತು ನಡೆದಾಡುತ್ತ ಧ್ಯಾನ ಮಾಡುತ್ತಾರೆ. ಮಾಸ್ಟರ್ ನ ಈ ಶಿಷ್ಯರಿಬ್ಬರಿಗೂ ಹೊಗೆಸೊಪ್ಪು ಸೇದುವ ಚಟ ಆದರೆ […]

ಆ ಹುಲಿ ಬೇರೆ ಅಲ್ಲ ನಾನು ಬೇರೆ ಅಲ್ಲ… : Tea time story

ಒಮ್ಮೆ ಒಬ್ಬ ಝೆನ್ ಸನ್ಯಾಸಿ ತನ್ನ ಶಿಷ್ಯನೊಂದಿಗೆ ಕಾಡಿನ ಮೂಲಕ ಹಾದು ಬೇರೆ ಊರಿಗೆ ಹೋಗುತ್ತಿದ್ದ. ಹೀಗೆ ಪ್ರಯಾಣ ಮಾಡುವಾಗ ಸನ್ಯಾಸಿ ತನ್ನ ಬದುಕಿನ ಅನುಭವಗಳನ್ನು , ಅವುಗಳ ನಡುವಿನ ಪರಸ್ಪರ ಸಂಬಂಧಗಳನ್ನೂ, ಮತ್ತು ಹೇಗೆ ಎಲ್ಲ ಬದುಕುಗಳೂ ಒಂದೇ ಎಂದೂ ತನ್ನ ಶಿಷ್ಯನಿಗೆ ತಿಳಿ ಹೇಳುತ್ತಿದ್ದ. ಶಿಷ್ಯ ಅತ್ಯಂತ ಶಿಸ್ತಿನಿಂದ ಸನ್ಯಾಸಿಯ ಮಾತುಗಳನ್ನು ಆಲಿಸುತ್ತಿದ್ದ. “ಮಾಸ್ಟರ್ ನಿಮ್ಮ ಮಾತಿನ ಅರ್ಥ ಈ ಬದುಕಿನಲ್ಲಿ ಎಲ್ಲವೂ ಒಂದೇ” ಎಂದು ಅಲ್ಲವೇ? ಶಿಷ್ಯ ಕೇಳಿದ. “ಹೌದು, ನೀನು ನನ್ನ […]

ಈ ದಿನದ ವಿಷಯ : ಝೆನ್ ಚುಟುಕು ಸಂಭಾಷಣೆ

ಮಾಸ್ಟರ್ ಹೊಸ ವಿದ್ಯಾರ್ಥಿಗಳಿಗೆ ಬೋಧನೆ ಶುರು ಮಾಡಿದರು. ಮಾಸ್ಟರ್ : ಎಲ್ಲರೂ ಗಮನವಿಟ್ಟು ಕೇಳಿಸಿಕೊಳ್ಳಿ. ಈ ದಿನದ ವಿಷಯ, ಧ್ಯಾನ. ಶಿಷ್ಯರು : ಆಗಲಿ ಮಾಸ್ಟರ್. ಮಾಸ್ಟರ್ : ಸರಿ ಹಾಗಾದರೆ. ಯಾರಾದರೂ ಉತ್ತರಿಸಿ. ಧ್ಯಾನ ಎಂದರೇನು? ಟುಬೊಕು : ಈ ದಿನದ ವಿಷಯ. ಉತ್ತರ ನೀಡಿದ ಶಿಷ್ಯನಿಗೆ ಆ ದಿನವೇ ‘ಸ್ನಾತಕ’ ಪದವಿ ನೀಡಲಾಯಿತು.