ಶ್ರದ್ಧೆಯ ಕುರಿತು ಶ್ರೀರಾಮಕೃಷ್ಣ ಪರಮಹಂಸರು ಹೇಳಿದ ದೃಷ್ಟಾಂತ ಕಥೆ…
ಎಲ್ಲರೊಳಗಿನ ನಾರಾಯಣ : ರಾಮಕೃಷ್ಣರು ಹೇಳಿದ ದೃಷ್ಟಾಂತ ಕಥೆ
ಒಮ್ಮೆ ಒಬ್ಬ ಗುರು ತನ್ನ ಶಿಷ್ಯನಿಗೆ ಬೋಧನೆ ಮಾಡುತ್ತಾ, “ಪತ್ರಿಯೊಂದು ಜೀವಿಯಲ್ಲೂ ನಾರಾಯಣ ನೆಲೆಸಿದ್ದಾನೆ” ಎಂದು ಹೇಳಿದರು. ಗುರುವಿನ ಈ ಮಾತು ಶಿಷ್ಯನ ತಲೆಯಲ್ಲಿ ಅಚ್ಚೊತ್ತಿ ನಿಂತಿತು. ಮರುದಿನ ಆ ಶಿಷ್ಯ ಚಿಕ್ಕದೊಂದು ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಒಂದು ಆನೆ ಬರುತ್ತಿರುವುದು ಕಾಣಿಸಿತು. ಆನೆಯ ಮೇಲಿದ್ದ ಮಾವುತನು ದಾರಿಹೋಕರಿಗೆ “ಆನೆಗೆ ಮದವೇರಿದೆ, ನನ್ನ ಅಂಕುಶಕ್ಕೂ ಮಣಿಯುತ್ತಿಲ್ಲ, ರಸ್ತೆಯಿಂದ ದೂರ ಸರಿಯಿರಿ” ಎಂದು ಕೂಗಿ ಹೇಳುತ್ತಿದ್ದ. ಶಿಷ್ಯನಿಗೂ ಈ ಕೂಗು ಕೇಳಿಸಿತು. ಆದರೆ ಸಕಲ ಪ್ರಾಣಿಗಳಲ್ಲೂ ನಾರಾಯಣ ನೆಲೆಸಿರುತ್ತಾನೆ, […]
ಇಂದ್ರನಿಗೆ ಇರುವೆ ಸಾಲು ಕಲಿಸಿದ ಪಾಠ : Stories retold
ಹೊಸ ಅರಮನೆಯಂತೂ ತಯಾರಾಗಿದೆ, ಎಲ್ಲರನ್ನೂ ಕರೆಸಿ ಶೋ ಆಫ್ ಮಾಡುವಾ ಅನಿಸಿತು ಇಂದ್ರನಿಗೆ. ಕರೆಸೇ ಕರಿಸಿದ. ಡಿಜೆಗಳು ಭೂಮಿವರೆಗೂ ಕೇಳುವಂತೆ ಸಂಗೀತ ಬಾರಿಸಿದರು. ಡ್ಯಾನ್ಸ್ ಫ್ಲೋರಿನಲ್ಲಿ ಕಂಪನವಾಗುವಷ್ಟು ಎಲ್ಲರೂ ಕುಣಿದರು. ಇಂದ್ರ ತನ್ನನ್ನು ಬಿಟ್ಟರಿಲ್ಲ ಅನ್ನುವಂತೆ ಬೀಗುತ್ತಿದ್ದಾಗ, ನಟ್ಟನಡೂ ಹಾಲ್`ನಲ್ಲಿ ಏಳೆಂಟು ಇರುವೆಗಳು ಸಾಲು ಹೊರಟಿದ್ದು ಕಣ್ಣಿಗೆ ಬಿತ್ತು. ಆಮೇಲೆ… । ನಿರೂಪಣೆ: ಅಲಾವಿಕಾ
ಸೇವೆಯ ಸಾರ್ಥಕತೆ: ಎರಡು ದೃಷ್ಟಾಂತ ಕಥೆಗಳು
ಒಂದು ಫಾರ್ಸಿ ದೃಷ್ಟಾಂತ ಕಥೆ : Tea time story
ಒಬ್ಬ ಕುರುಡ ಮತ್ತು ವ್ಯಾಪಾರಿಯ ಕಥೆ | ಸಂಗ್ರಹ ಮತ್ತು ಅನುವಾದ: ಅಲಾವಿಕಾ
ಕೊಲ್ಲಬಲ್ಲವನೂ ನೀನೇ, ಕಾಯಬಲ್ಲವನೂ ನೀನೇ : ಪಾಂಡವರು ಪಾಠ ಕಲಿತ ಕಥೆ
ತಂದೆ ‘ಶವಪೆಟ್ಟಿಗೆ ಜೋಪಾನವಾಗಿಡು’ ಅಂದಿದ್ದೇಕೆ? : ನೀತಿ ಕಥೆ
ಒಬ್ಬ ರೈತನಿಗೆ ಬಹಳ ವಯಸ್ಸಾಗಿತ್ತು. ಅವನಿಗೆ ಹೊಲದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಸದಾ ವರಾಂಡದಲ್ಲೇ ಕುಳಿತುಕೊಂಡು ದಿನ ಕಳೆಯುತ್ತಿದ್ದನು. ಅವನ ಮಗ ಯಾವಾಗಲೂ ಹೊಲದಲ್ಲಿ ಕೆಲಸ ಮಾಡುತ್ತಿದ್ದನು. ಮಗನು ಯಾವ ಸಮಯದಲ್ಲಿ ನೋಡಿದರೂ ಅವರ ತಂದೆ ಅಲ್ಲಿಯೇ ಕುಳಿತಿರುವುದು ಕಾಣುತ್ತಿತ್ತು. “ಇವರು ಇನ್ನು ಮುಂದೆ ಯಾವುದೇ ಕೆಲಸಕ್ಕೂ ಉಪಯೋಗಕ್ಕೆ ಬರುವುದಿಲ್ಲ” ಎಂದು ಮಗನು ಭಾವಿಸಿದನು. “ಇನ್ನು ಮುಂದೆ ಇವರಿಂದ ಏನೂ ಮಾಡಲು ಸಾಧ್ಯವಿಲ್ಲ” ಎಂದು ತಿಳಿಯಿತು. ಇದರಿಂದ ಮಗನಿಗೆ ತುಂಬಾ ನಿರಾಸೆಯಾಯಿತು. ಒಂದು ದಿನ ಮಗನು […]
ಅಹಂಕಾರಿ ಯುವಕನ ಕಣ್ಣು ತೆರೆಸಿದ ನೇಕಾರ
ನೇಕಾರನ ಮಾತು ಕೇಳುತ್ತಲೆ ಆ ಯುವಕನ ಅಹಂಗೆ ಪೆಟ್ಟು ಬಿದ್ದಿತು “ನಾನು ಶ್ರೀಮಂತನ ಮಗ, ಹಣ ಕೊಟ್ಟರೆ ನನಗೇನೂ ಅಂತಹ ವ್ಯತ್ಯಾಸವಾಗುವುದಿಲ್ಲ ಆದರೆ ನೀನು ಬಡವ ಈ ನಷ್ಟವನ್ನು ಹೇಗೆ ಭರಿಸುತ್ತೀಯ? ನಿನ್ನ ನಷ್ಟಕ್ಕೆ ನಾನು ಕಾರಣನಾಗಿದ್ದೇನೆ ಆದ್ದರಿಂದ ಅದರ ಹೊಣೆಯೂ ನನ್ನದೇ” ಎಂದ. ಒಂದು ಊರಿನಲ್ಲಿ ಒಬ್ಬ ನೇಕಾರನಿದ್ದ. ಶಾಂತ ಸ್ವಭಾವದ ಮನುಷ್ಯ, ನಿಗರ್ವಿ, ತುಂಬ ಪ್ರಾಮಾಣಿಕ. ಆತ ಸಿಟ್ಟಾಗಿದ್ದನ್ನು ಆ ಊರಿನಲ್ಲಿ ಯಾರೂ ನೋಡೇ ಇರಲಿಲ್ಲ. ಆ ಊರಿನ ಕೆಲ ಯುವಕರಿಗೆ ಒಂದು ತರಲೆ […]
ನಮ್ಮದಲ್ಲದ ಕೆಲಸವನ್ನು ಮಾಡಿದರೆ ಇದೇ ಗತಿ! ~ Tea time story
ಅದೊಂದು ಅಗಸನ ಮನೆ. ಅಲ್ಲೊಂದು ಕತ್ತೆ, ಮತ್ತೆ ಮತ್ತೊಂದು ನಾಯಿ. ಒಂದು ರಾತ್ರಿ ಆ ಮನೆಗೆ ಕಳ್ಳ ಬರ್ತಾನೆ. ಕತ್ತೆಗೆ ಎಚ್ಚರ ಆಗತ್ತೆ. ನಾಯಿಯನ್ನ ತಿವಿದು, “ಏಯ್! ಕಳ್ಳ ಬಂದಿದಾನೆ, ಕೂಗು. ಅಗಸನ್ನ ಎಬ್ಬಿಸು…” ನಾಯಿ ಗೊಣಗುತ್ತೆ. “ಉಹು… ಅಂವ ಸರಿಯಾಗಿ ಅನ್ನ ಹಾಕೋದೇ ಇಲ್ಲ. ನಿನಗಂತೂ ಅಷ್ಟು ದುಡಿದು ಪೆಟ್ಟು ತಿನ್ನೋದೇ ಕೆಲ್ಸ. ತೆಪ್ಪಗೆ ಬಿದ್ದುಕೋಬಾರದಾ?” ಪಾಪ ಕತ್ತೆ, ನಾನೇ ಎಬ್ಬಿಸ್ತೀನಿ ಅಂದುಕೊಂಡು ಜೋರಾಗಿ ಕೂಗಿಕೊಳ್ಳುತ್ತೆ. ಕತ್ತೆಯ ಕಿರುಚಾಟಕ್ಕೆ ಹೆದರಿ ಕಳ್ಳ ಓಡಿಹೋಗ್ತಾನೆ. ಅಗಸಂಗೆ ಎಚ್ಚರವಾಗಿಬಿಡತ್ತೆ. […]
ಹಾವಿನ ತಲೆ ಮತ್ತು ಬಾಲ : Tea time story
ಹಾವಿನ ಬಾಲದ ಮೂರ್ಖತನದ ಪರಿಣಾಮವೇನಾಯ್ತು ಗೊತ್ತಾ? | ಸಂಗ್ರಹ ಮತ್ತು ಅನುವಾದ: ಅಲಾವಿಕಾ ಒಂದು ದಿನ ಹಾವಿನ ಬಾಲಕ್ಕೆ ಇದ್ದಕ್ಕಿದ್ದ ಹಾಗೆ ತಲೆಯ ಮೇಲೆ ಮುನಿಸಾಯಿತು. ಯಾವಾಗಲೂ ಅದು ನಿರ್ಧರಿಸುವ ದಿಕ್ಕಿಗೇ ನಾನು ಚಲಿಸಬೇಕಲ್ಲ ಅನ್ನೋದು ಅದರ ದುಮ್ಮಾನ. ಹೇಳಿತು, “ಇನ್ಮೇಲೆ ನಾನೇ ಚಲನೆಯ ದಿಕ್ಕು ನಿರ್ಧರಿಸ್ತೀನಿ. ನೀನು ನನ್ನನ್ನು ಹಿಂಬಾಲಿಸು” ಹಾವಿನ ತಲೆ ನಕ್ಕುಬಿಟ್ಟಿತು. “ಅವೆಲ್ಲ ಆಗೋದಿಲ್ಲ. ಯಾವ ಹಾವಿನ ತಲೆಯೂ ಬಾಲ ಕೊಡೊಯ್ದಲ್ಲಿ ಹೋಗೋದಿಲ್ಲ. ಸುಮ್ಮನೆ ಬಾ” ಅಂದಿತು. ಹಾವಿನ ಬಾಲಕ್ಕೆ ಸಿಟ್ಟು ಬಂದು. […]