ಪಾಂಡವರ ಮಾತುಗಳನ್ನು ಕೇಳುತ್ತಾ ಕೃಷ್ಣ ಒಳಗೊಳಗೆ ನಕ್ಕ. ಅವನ ತುಟಿಯ ಕೊಂಕು ಕಂಡ ಯುಧಿಷ್ಟಿರನಿಗೆ ಅಚ್ಚರಿ. ಇದರಲ್ಲೇನೋ ಮರ್ಮವಿದೆ ಎಂದು ಊಹಿಸಿದವನೇ, “ಕೃಷ್ಣಾ, ಯಾಕೆ ನಗುತ್ತಿದ್ದೀ? ನಮ್ಮಿಂದೇನಾದರೂ ತಪ್ಪಾಯಿತೇ?” ಎಂದು ಕೇಳಿದ. “ಅಡವಿಯೊಳಗಾಡುವ ಮೃಗ ಪಕ್ಷಿಗಳಿಗೆಲ್ಲ ಅಡಿಗಡಿಗೆ ಆಹಾರವಿತ್ತವರು ಯಾರೊ ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ ಬಿಡದೆ ರಕ್ಷಿಪನು ಇದಕೆ ಸಂಶಯವಿಲ್ಲ” ಎಂದು ಹಾಡಿದ್ದಾರೆ ಕನಕದಾಸರು. ಪಾಂಡವರ ಒಂದು ದೃಷ್ಟಾಂತದ ಮೂಲಕ ದಾಸರ ಈ ಪದಗಳ ಮರ್ಮವನ್ನು ಅರಿಯೋಣ. ಕುರುಕ್ಷೇತ್ರ ಯುದ್ಧ ಕಾಲದಲ್ಲಿ ಹೀಗಾಯ್ತು. ಕೌರವ […]
ಸತ್ಯವನ್ನು ಹುಡುಕಿ ತಂದ ಸಹೋದರರು : ಓಶೋ ಹೇಳಿದ ಕಥೆ
ಒಮ್ಮೆ ಒಬ್ಬ ತಂದೆ ತನ್ನ ಐವರು ಮಕ್ಕಳನ್ನು ಕರೆದು, “ಸತ್ಯವನ್ನು ಹುಡುಕಿಕೊಂಡು ಬನ್ನಿ” ಅನ್ನುತ್ತಾನೆ. ತಂದೆಯ ಆದೇಶವನ್ನು ಹೊತ್ತು ಐವರೂ ಸಹೋದರರು ವಿಭಿನ್ನ ದಿಕ್ಕುಗಳಿಗೆ ತೆರಳುತ್ತಾರೆ. ವರ್ಷಗಳ ನಂತರ ಮರಳಿ ಬರುತ್ತಾರೆ. ಆಗ ಮರಣಶಯ್ಯೆಯಲ್ಲಿರುವ ತಂದೆ ಅವರನ್ನು ಕುರಿತು, “ಸತ್ಯವು ದೊರೆಯಿತೆ?” ಎಂದು ಕೇಳುತ್ತಾನೆ. ಆಗ ಮೊದಲನೆಯವನು ವೇದಗಳೆಲ್ಲದರ ಸಾರಾಂಶವನ್ನು ಕಂಠಪಾಠವಾಗಿ ಒಪ್ಪಿಸುತ್ತಾನೆ. ಎರಡನೆಯವನು ಉಪನಿಷತ್ ಸೂತ್ರಗಳನ್ನೆಲ್ಲ ಹೇಳುತ್ತಾನೆ. ಮೂರನೆಯವನು ಪುರಾಣಗಳ ಸಾರಸರ್ವವನ್ನು ಹೇಳುತ್ತಾನೆ. ನಾಲ್ಕನೆಯವನು ಧರ್ಮಶಾಸ್ತ್ರಗಳೆಲ್ಲವನ್ನು ಅರುಹುತ್ತಾನೆ. ಐದನೆಯವನು ಮಾತ್ರ ತಂದೆ ಎದುರು ತಲೆ ಬಾಗಿ […]
ಶ್ರೀಮಂತ ತರುಣನಿಗೆ ಪಾಠ ಕಲಿಸಿದ ಚೆಲುವೆ
ಒಂದೂರಿನಲ್ಲಿ ಒಬ್ಬ ಚೆಲುವೆ. ಅವಳ ಚೆಲುವಿಗೆ ಮನಸೋತ ಶ್ರೀಮಂತ ತರುಣನೊಬ್ಬ ಮದುವೆಯಾಗೆಂದು ಅವಳನ್ನು ಪೀಡಿಸುತ್ತಾನೆ. ಪೆಟ್ಟಿಗೆ ತುಂಬಾ ಉಡುಗೊರೆ ತಂದು ಅವಳ ಮುಂದೆ ಸುರಿಯುತ್ತಾನೆ. “ನನ್ನದು ಆಗರ್ಭ ಶ್ರೀಮಂತ ಮನೆತನ. ಒಡವೆ – ವಸ್ತುಗಳಿಂದ ತುಂಬಿದ ಪೆಟ್ಟಿಗೆಗಳೇ ನಮ್ಮ ಮನೆಯಲ್ಲಿದೆ. ಆದರೆ ನಿನ್ನಂಥ ಚೆಲುವಿನ ಖನಿ ಇಲ್ಲದಿರುವುದೇ ಕೊರತೆ. ನನ್ನನ್ನು ಮದುವೆಯಾಗು” ಎಂದು ಬೇಡುತ್ತಾನೆ. ಚೆಲುವೆಗೆ ಆತನ ಬೇಡಿಕೆಯಲ್ಲೂ ಶ್ರೀಮಂತಿಕೆಯ ಗತ್ತು ತುಂಬಿರುವುದು ರುಚಿಸುವುದಿಲ್ಲ. ಆತನಿಗೆ ಒಂದು ತಿಂಗಳು ಬಿಟ್ಟು ತನ್ನ ಮನೆಗೆ ಬಂದು, ಪೋಷಕರಲ್ಲಿ ಪ್ರಸ್ತಾಪವಿಡುವಂತೆ […]
ಭಗವಂತನಿಗೆಷ್ಟು ಕೋಪ ಬಂದಿರಬೇಕು! : ಒಂದು ದೃಷ್ಟಾಂತ ಕಥೆ
ಒಂದು ಆಶ್ರಮದಲ್ಲಿ ಸಂನ್ಯಾಸಿಯೊಬ್ಬ ಬಹಳ ಕಟ್ಟುನಿಟ್ಟಿನಿಂದ ಜಪಾದಿಗಳನ್ನು ಮಾಡುತ್ತಿದ್ದ. ಪ್ರತಿ ದಿನವೂ ನಿರ್ದಿಷ್ಟ ಸಮಯದಲ್ಲಿ ಜಪಮಾಲೆ ತಿರುಗಿಸುತ್ತ ನಿರ್ದಿಷ್ಟ ಸಂಖ್ಯೆಯ ಜಪ ಮಾಡುತ್ತಿದ್ದ. ಹತ್ತು ವರ್ಷ ಇಷ್ಟು ನಿಷ್ಠೆಯಿಂದ ಸಾಧನೆ ಮಾಡಿದರೂ ಅವನಲ್ಲಿ ಯಾವ ಪರಿವರ್ತನೆಯೂ ಆಗಲಿಲ್ಲ. ಎಲ್ಲರೊಡನೆಯೂ ಜಗಳ ಕಾಯುತ್ತಿದ್ದ. ಕೊಟ್ಟ ಕೆಲಸ ಸರಿಯಾಗಿ ಮಾಡುತ್ತಿರಲಿಲ್ಲ. ವಿಪರೀತ ಸಿಡುಕು ಸ್ವಭಾವ. ಒಂದು ದಿನ ಅವನಿಗೆ ಬುದ್ಧಿ ಕಲಿಸಬೇಕೆಂದು ಇನ್ನೊಬ್ಬ ಸಂನ್ಯಾಸಿ ನಿರ್ಧರಿಸಿದ. ಈತ ಕೋಣೆಯ ಬಾಗಿಲು ಮುಚ್ಚಿ, ಚಿಲಕ ಹಾಕಿಕೊಂಡು ಜಪಕ್ಕೆ ಕುಳಿತ. ಅದೇ ವೇಳೆಗೆ ಆ […]
ಹಿಂಸೆ ಮತ್ತು ಆತ್ಮರಕ್ಷಣೆ : ಒಂದು ದೃಷ್ಟಾಂತ ಕಥೆ
ಒಂದು ಊರಿನಲ್ಲಿ ನಾಗರಹಾವೊಂದು ದೊಡ್ಡ ಹುತ್ತದಲ್ಲಿ ವಾಸವಿತ್ತು. ಅದು, ಒಮ್ಮೆ ನಾರದ ಮಹರ್ಷಿಗಳ ಪ್ರಭಾವಕ್ಕೆ ಒಳಗಾಗಿ ಅವರ ಶಿಷ್ಯನಾಯಿತು. ಹೀಗೆ ನಾರದರ ಶಿಷ್ಯತ್ವ ವಹಿಸಿದ ಕ್ಷಣದಿಂದಲೇ ಅದು ತನ್ನತನವನ್ನು ಬಿಟ್ಟುಕೊಟ್ಟು ಸಾಧುವಾಗಿಹೋಯಿತು. ಸರ್ಪ ಸಂನ್ಯಾಸ ತೆಗೆದುಕೊಂಡ ಸುದ್ದಿ ಆ ಊರಿನ ಹುಡುಗರಿಗೆ ಗೊತ್ತಾಯಿತು. ಸದಾ ನಾಲಿಗೆ ಹೊರಹಾಕುತ್ತ ಹೊಂಚು ಹಾಕುತ್ತಿದ್ದ ಸರ್ಪ, ಈಗ ಯಾವಾಗ ನೋಡಿದರೂ ತೆಪ್ಪಗೆ ಬಿದ್ದಿರುತ್ತಿತ್ತು. ಇದು ಹುಡುಗರ ಪಾಲಿಗೊಂದು ಮೋಜಿನಂತಾಯ್ತು. ಅವರು ಹೋಗುತ್ತ-ಬರುತ್ತ ಸರ್ಪದ ಬಾಲ ಹಿಡಿದೆಳೆಯುವುದು, ಕಾಲಿನಿಂದ ಝಾಡಿಸುವುದು, ಕಲ್ಲು […]
ನೊಣ ಮತ್ತು ಆನೆ : ಒಂದು ದೃಷ್ಟಾಂತ ಕಥೆ
ಒಂದೂರಿನಲ್ಲಿ ಒಂದು ಆನೆ ಸೇತುವೆ ಮೇಲಿಂದ ಕಾಡಿನ ಕಡೆ ಹೋಗುತ್ತಾ ಇತ್ತು. ಆ ಸೇತುವೆ ಬಹಳ ಹಳೆಯದು. ಆನೆ ಕಾಲಿಡುತ್ತಲೇ ಗಡಗಡ ಅಲ್ಲಾಡಲು ಶುರು ಮಾಡಿತು. ಆನೆ “ಇದೇನಿದು! ಸೇತುವೆ ಅಲ್ಲಾಡ್ತಿದೆಯಲ್ಲ… ದಾಟುವ ತನಕ ಬೀಳದಿದ್ದರೆ ಸಾಕು!” ಅಂತ ತನಗೆ ತಾನೆ ಹೇಳಿಕೊಂಡಿತು. ಆ ಆನೆಯ ತಲೆಮೇಲೊಂದು ನೊಣ ಕುಳಿತಿತ್ತು. ಆನೆಯ ಮಾತು ಕೇಳಿ, “ಹೌದು ಮಗನೇ. ಈ ಸೇತುವೆ ನಮ್ಮಿಬ್ಬರ ಭಾರ ತಡೆಯಲಾರದು. ಹೇಗೋ ದಾಟಿಕೊಂಡರೆ ಸಾಕು” ಅಂದಿತು. ಆನೆಗೆ ಅಚ್ಚರಿ. ತಲೆಮೇಲಿಂದ ಮಾತಾಡ್ತಿರೋದು ಯಾರು? […]
ಕತ್ತರಿಸುವ ಕಿವಿಗಳು, ಹೊಲೆಯುವ ಕಣ್ಣು : ದೃಷ್ಟಾಂತ ಕಥೆ
ಒಂದೂರಿನಲ್ಲಿ ಒಬ್ಬ ಒಕ್ಕಣ್ಣ ದರ್ಜಿಯಿದ್ದ. ಬಟ್ಟೆ ಹೊಲಿದು ಸುಖ ಜೀವನ ನಡೆಸುತ್ತಿದ್ದರೂ ಅವನಿಗೆ ತಾನು ಒಕ್ಕಣ್ಣನೆಂಬ ಕೊರಗು ಸದಾ ಕಾಡುತ್ತಿತ್ತು. ಹೀಗಿರುತ್ತ, ಒಬ್ಬ ಸಾಧು ಅವನ ಮಳಿಗೆಗೆ ಬಂದ. ಅವನಿಗೆ ಹಾಲು ಹಣ್ಣು ಕೊಟ್ಟ ಸತ್ಕರಿಸಿದ ದರ್ಜಿ, “ನನ್ನ ಆದಾಯ ಚೆನ್ನಾಗಿಯೇ ಇದೆ. ಆದರೂ ಮನಸ್ಸಿಗೆ ಸಮಾಧಾನವೇ ಇರುವುದಿಲ್ಲ. ಏನಾದರೂ ಉಪಾಯ ಹೇಳಿ” ಅಂದ. ಸಾಧು, “ಸರಿ. ಹೋಗಿ ಒಂದು ಕತ್ತರಿಯನ್ನೂ, ಸೂಜಿಯನ್ನೂ ತೆಗೆದುಕೊಂಡು ಬಾ” ಎಂದು ಹೇಳಿದ. ದರ್ಜಿಗೆ ಆಶ್ಚರ್ಯವಾಯಿತು. ಸಮಾಧಾನ ನೀಡಿ ಅಂದರೆ ಕತ್ತರಿ, […]
ನರಕಕ್ಕೆ ಹೋದ ಹಕ್ಸ್ಲೆ ಮತ್ತು ಡಾರ್ವಿನ್ ಮಾಡಿದ್ದೇನು ಗೊತ್ತಾ!?
ಇಂಗ್ಲೆಂಡಿನಲ್ಲಿ ಒಬ್ಬ ಪಾದ್ರಿ ಇದ್ದನು. ಅವನು ಯಾವಾಗಲೂ ಪಾಪ, ಪುಣ್ಯ; ಸ್ವರ್ಗ, ನರಕಗಳ ಬಗ್ಗೆಯೇ ಚಿಂತಿಸುತ್ತಿದ್ದನು. ಹೀಗಿರುತ್ತ, ಒಮ್ಮೆ ಅವನಿಗೆ ಮಹಾನ್ ವಿಜ್ಞಾನಿಗಳಾದ ಹಕ್ಸ್ಲೆ ಮತ್ತು ಡಾರ್ವಿನ್ ಸತ್ತ ಮೇಲೆ ನರಕಕ್ಕೆ ಹೋಗಿರುತ್ತಾರೋ ಸ್ವರ್ಗಕ್ಕೆ ಹೋಗಿರುತ್ತಾರೋ ಅನ್ನುವ ಜಿಜ್ಞಾಸೆ ಉಂಟಾಯಿತು. “ಹಕ್ಸ್ಲೆಯಾಗಲೀ, ಡಾರ್ವಿನ್ ಆಗಲೀ ಆಸ್ತಿಕರಾಗಿರಲಿಲ್ಲ. ಬೈಬಲ್ ಅನ್ನೂ ಕ್ರಿಸ್ತನನ್ನೂ ನಂಬುತ್ತಿರಲಿಲ್ಲ. ಆದ್ದರಿಂದ ಅವರು ನರಕಕ್ಕೇ ಹೋಗಿರಬೇಕು” ಎಂದು ಒಂದು ಸಲ ಅನ್ನಿಸಿದರೆ, ಮರುಕ್ಷಣ “ಛೆಛೆ… ಅವರಿಬ್ಬರೂ ನಾಸ್ತಿಕರಾಗಿದ್ದರೂ ಯಾವ ಅಪರಾಧವನ್ನೂ ಮಾಡಿದವರಲ್ಲ. ಜನೋಪಯೋಗಿಯಾಗಿ ಬಾಳಿದವರು. ಹಾಗಾದರೆ […]
ಹೊಂಡಕ್ಕೆ ಬಿದ್ದ ಕಪ್ಪೆಗಳು ಮತ್ತು ಅವುಗಳ ಸಂಗಡಿಗರು
ಏಳೆಂಟು ಕಪ್ಪೆಗಳದೊಂದು ಗುಂಪು ಕಾಡಿನಲ್ಲಿ ಕುಪ್ಪಳಿಸುತ್ತ ಹೋಗುತ್ತಿದ್ದವು. ಅವುಗಳಲ್ಲಿ ಎರಡು ಕಪ್ಪೆಗಳು ಗಮನ ತಪ್ಪಿ ಹೊಂಡದೊಳಗೆ ಜಿಗಿದುಬಿಟ್ಟವು. ಆ ಎರಡು ಕಪ್ಪೆಗಳು ಹೊಂಡದೊಳಗೆ ಬಿದ್ದದ್ದೇ, ಉಳಿದ ಕಪ್ಪೆಗಳು ವಟಗುಡುತ್ತಾ ಅದರ ಸುತ್ತ ನೆರೆದವು. ಹೊಂಡ ಸಾಕಷ್ಟು ಆಳವಾಗಿಯೇ ಇತ್ತು. ಅದರಿಂದ ಹೊರಗೆ ಬರುವುದು ಕಷ್ಟಸಾಧ್ಯವೆಂದು ಯಾರಿಗಾದರೂ ಅನ್ನಿಸುತ್ತಿತ್ತು. ಹೊಂಡದಲ್ಲಿ ಬಿದ್ದ ಕಪ್ಪೆಗಳು ಮೇಲಕ್ಕೆ ಜಿಗಿಯಲು ಶುರುಮಾಡಿದವು. ಹೇಗಾದರೂ ಮಾಡಿ ಹೊಂಡದ ಅಂಚು ತಲುಪಿದರೆ ಸಾಕು ಎಂದು ಶಕ್ತಿ ಮೀರಿ ಜಿಗಿಯತೊಡಗಿದವು. ಆದರೆ ಹೊಂಡದ ಸುತ್ತ ನಿಂತ ಕಪ್ಪೆಗಳು […]
ಪ್ರತಿಯೊಂದು ಜೀವಿಯಲ್ಲೂ ‘ನಾರಾಯಣ’ ಇರುವನು!
ಒಮ್ಮೆ ಒಬ್ಬ ಗುರು ತನ್ನ ಶಿಷ್ಯನಿಗೆ ಬೋಧನೆ ಮಾಡುತ್ತಾ, “ಪತ್ರಿಯೊಂದು ಜೀವಿಯಲ್ಲೂ ನಾರಾಯಣ ನೆಲೆಸಿದ್ದಾನೆ” ಎಂದು ಹೇಳಿದರು. ಗುರುವಿನ ಈ ಮಾತು ಶಿಷ್ಯನ ತಲೆಯಲ್ಲಿ ಅಚ್ಚೊತ್ತಿ ನಿಂತಿತು. ಮರುದಿನ ಆ ಶಿಷ್ಯ ಚಿಕ್ಕದೊಂದು ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಒಂದು ಆನೆ ಬರುತ್ತಿರುವುದು ಕಾಣಿಸಿತು. ಆನೆಯ ಮೇಲಿದ್ದ ಮಾವುತನು ದಾರಿಹೋಕರಿಗೆ “ಆನೆಗೆ ಮದವೇರಿದೆ, ನನ್ನ ಅಂಕುಶಕ್ಕೂ ಮಣಿಯುತ್ತಿಲ್ಲ, ರಸ್ತೆಯಿಂದ ದೂರ ಸರಿಯಿರಿ” ಎಂದು ಕೂಗಿ ಹೇಳುತ್ತಿದ್ದ. ಶಿಷ್ಯನಿಗೂ ಈ ಕೂಗು ಕೇಳಿಸಿತು. ಆದರೆ ಸಕಲ ಪ್ರಾಣಿಗಳಲ್ಲೂ ನಾರಾಯಣ ನೆಲೆಸಿರುತ್ತಾನೆ, […]