ಶ್ರೀಕೃಷ್ಣನನ್ನೇ ಬೆರಗುಗೊಳಿಸಿದ ಬರ್ಬರೀಕನ ಕಥೆ ಗೊತ್ತೇ? : ಭಾರತೀಯ ಪುರಾಣ ಕಥೆಗಳು

“ಈ ಆಲದ ಮರದಲ್ಲಿರುವ ಎಲ್ಲ ಎಲೆಗಳನ್ನು ನಿನ್ನ ಮೊದಲನೆಯ ಬಾಣದಿಂದ ಗುರುತಿಸಿ, ನಂತರದ ಬಾಣದಿಂದ ಅವುಗಳನ್ನು ಒಟ್ಟುಗೂಡಿಸಿ ನಾಶ ಮಾಡು ನೋಡೋಣ?” ಎಂದು ಶ್ರೀ ಕೃಷ್ಣ ಸವಾಲು ಹಾಕಿದ. ಆಗ ಬರ್ಬರೀಕ ಏನು ಮಾಡಿದ ಗೊತ್ತೆ? ~ ಗಾಯತ್ರಿ ಬರ್ಬರೀಕ, ಭೀಮಸೇನನ ಮೊಮ್ಮಗ. ಭೀಮಸೇನನ ಪುತ್ರ ಘಟೋತ್ಕಚನಿಗೆ ಅಹಿಲವತಿ ಎಂಬ ಪತ್ನಿಯಲ್ಲಿ ಹುಟ್ಟಿದ ಮಗ. ಇವನು ಅಪ್ರತಿಮ ಬಿಲ್ಗಾರ. ತಪಶ್ಚರ್ಯ ನಡೆಸಿ ಮಹಾದೇವನಿಂದ ವರಗಳನ್ನು ಪಡೆದಿದ್ದ ಕೂಡಾ. ಬಿಲ್ಗಾರಿಕೆಯಲ್ಲಿ ಕರ್ಣಾರ್ಜುನರೂ ಇವನನ್ನು ಸರಿಗಟ್ಟಲಾರರು ಅನ್ನುವಷ್ಟು ಹಬ್ಬಿತ್ತು ಬರ್ಬರೀಕನ […]

ಸ್ವರ್ಗದಿಂದ ಭೂಮಿಗೆ ಬೆಂಕಿಯನ್ನು ಕದ್ದು ತಂದಿದ್ದು ಯಾರು ಗೊತ್ತಾ!?

ಪ್ರೊಮಿಥ್ಯೂಸ್, ಆ ಬೆಂಕಿಯನ್ನು ಕದ್ದು ತಂದು ಮನುಷ್ಯರಿಗೆ ನೀಡಲು ನಿರ್ಧರಿಸಿದ. ಒಮ್ಮೆ ಅದು ಮನುಷ್ಯರಿಗೆ ಸಿಕ್ಕಿಬಿಟ್ಟರೆ ಯಾರೂ ಅದನ್ನು ಮರಳಿ ಪಡೆಯಲಾರರು, ಸ್ವತಃ ಸ್ಯೂಸ್ ಕೂಡ! ಆದ್ದರಿಂದ ದೃಢ ನಿರ್ಧಾರ ಮಾಡಿದ ಪ್ರೊಮಿಥ್ಯೂಸ್, ಸ್ವರ್ಗವನ್ನು ಹೊಕ್ಕು, ಅಡಗಿಸಿಟ್ಟಿದ್ದ ಬೆಂಕಿಯ ಜ್ವಾಲೆಯೊಂದನ್ನು ಕದ್ದು, ಅದನ್ನು ಬಳ್ಳಿಯಲ್ಲಿ ಬಚ್ಚಿಟ್ಟುಕೊಂಡು ಭೂಮಿಗೆ ತಂದು ಮನುಷ್ಯರಿಗೆ ಕೊಟ್ಟ ಅನ್ನುತ್ತದೆ ಗ್ರೀಕ್ ಪುರಾಣ.  ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಪ್ರೊಮಿಥ್ಯೂಸ್ ಗ್ರೀಕ್ ಪೌರಾಣಿಕ ವ್ಯಕ್ತಿಗಳಲ್ಲೇ ಅತ್ಯಂತ ಪ್ರಮುಖನಾದವನು. ದೂರದೃಷ್ಟಿಯುಳ್ಳ ಈತನ ಹೆಸರಿನ […]

ಭಾಗವತ ಪುರಾಣ ಹೇಳಿದ ಈ 7 ಭವಿಷ್ಯಗಳು ನಿಜವಾಗಿವೆ!

ಭಾಗವತ ಪುರಾಣದಲ್ಲಿ ಕಲಿಯುಗದ ಬಗ್ಗೆ ಹೇಳಿದ್ದರಲ್ಲಿ 7 ಭವಿಷ್ಯಗಳು ನಿಜವಾಗಿರುವುದನ್ನು ನಾವೇ ಸ್ಪಷ್ಟವಾಗಿ ಅನುಭವಿಸಿದ್ದೇವೆ. ಯಾವುದು ಈ  ಭವಿಷ್ಯಗಳು? ಮುಂದೆ ನೋಡಿ…. 1 ಧರ್ಮ, ಸತ್ಯಸಂಧತೆ, ಶುಚಿತ್ವ, ಸಹನೆ, ಮಾನವೀಯ ಅಂತಃಕರಣ, ಆಯುಷ್ಯ, ದೇಹದ ಶಕ್ತಿ, ನೆನಪಿನ ಶಕ್ತಿ ದಿನದಿಂದ ದಿನಕ್ಕೆ ಕುಸಿಯುತ್ತದೆ.   ಆಕರ : ಭಾಗವತ | 12.2.1 2 ಜನರ ಅದೃಷ್ಟ ಮತ್ತು ಯೋಗ್ಯತೆಗಳನ್ನು ಅವರ ಸಂಪತ್ತಿನಿಂದ ಅಳೆಯಲಾಗುತ್ತದೆ. ಶ್ರೀಮಂತರು ಮತ್ತು ಅಧಿಕಾರ ಹೊಂದಿದವರು ಮಾತ್ರ ಬಲಶಾಲಿಗಳೆಂದು ಪರಿಗಣಿಸಲ್ಪಟ್ಟು, ನ್ಯಾಯವೂ ಅಂಥವರಿಗೆ ಬೇಗ […]

ಅಸುರ ರಾಜನಿಂದ ದೇವರಾಜ ಇಂದ್ರ ಕಲಿತ ಪಾಠವೇನು ಗೊತ್ತಾ? : ಪುರಾಣ ಕಥೆ

ದೇವೇಂದ್ರನು ಶುಕ್ರಾಚಾರ್ಯರಲ್ಲಿಗೆ ಬಂದು ಮೋಕ್ಷ ಸಾಧನೆಯ ಜ್ಞಾನವನ್ನು ಪಡೆದುಕೊಂಡನು. ಅನಂತರ “ಗುರುವೆ, ಇದಕ್ಕಿಂತ ಮಿಗಿಲಾದ ಶ್ರೇಯಸ್ಸು ಉಂಟೆ?” ಎಂದು ಕೇಳಿದನು. ಅವರು “ಉಂಟು, ಅದನ್ನು ಯುದ್ಧದಲ್ಲಿ ನಿನ್ನನ್ನು ಜಯಿಸಿದ ಪ್ರಹ್ಲಾದ ಬಲ್ಲನು, ಹೋಗಿ ಆತನನ್ನು ಕೇಳು” ಎಂದರು. ಆಮೇಲೆ…. ಭಗವಂತನು ನರಸಿಂಹಾವತಾರ ತಾಳಿ ದೈತ್ಯ ಚಕ್ರವರ್ತಿ ಹಿರಣ್ಯಕಷಿಪುವನ್ನು ಸಂಹರಿಸಿದ ನಂತರ ಅವನ ಮಗ ಪ್ರಹ್ಲಾದ ಪಟ್ಟಕ್ಕೇರಿದನು. ಭಕ್ತಭಾಗವತನಾಗಿದ್ದ ಪ್ರಹ್ಲಾದ, ಮೂರು ಲೋಕಗಳನ್ನೂ ಉತ್ತಮವಾಗಿ ಆಳ್ವಿಕೆ ಮಾಡುತ್ತ ಮೆಚ್ಚುಗೆಗೆ ಪಾತ್ರನಾಗಿದ್ದನು. ಆವನ ಆಳ್ವಿಕೆಯಲ್ಲಿ ಎಲ್ಲರೂ  ನೆಮ್ಮದಿಯಿಂದ ಬಾಳುತ್ತಿದ್ದರು.  ಎಲ್ಲೆಲ್ಲಿಯೂ […]

ಮೈದಾಸನೆಂಬ ಗ್ರೀಕ್ ರಾಜನಿಗೆ ಕತ್ತೆ ಕಿವಿ ಮೂಡಿದ ಕಥೆ !

ನಿಮಗೆ ಮುಟ್ಟಿದ್ದೆಲ್ಲ ಚಿನ್ನವಾಗುವ ವರ ಪಡೆದಿದ್ದ ಮೈದಾಸನ ಕಥೆ ಗೊತ್ತಿದೆ. ಆದರೆ ಅದೇ ಮೈದಾಸ್ ಶಾಪ ಪಡೆದು, ಕತ್ತೆ ಕಿವಿ ಮೂಡಿ, ಅದೇ ಕಾರಣಕ್ಕೆ ಜೀವವನ್ನೇ ಕಳೆದುಕೊಂಡ ಕಥೆ ಗೊತ್ತಿದೆಯೇ? ಇಲ್ಲಿದೆ, ದೊರೆ ಮೈದಾಸನ ಕತ್ತೆ ಕಿವಿಯ ಪ್ರಸಂಗ…. ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಒಮ್ಮೆ ಮೈದಾಸ್ ಅಪೋಲೋ ದೇವತೆಗೂ ಭೂಮಿಯ ಸಂಗೀತಗಾರ ಮಾರ್ಸಿಯಸ್’ನಿಗೂ ನಡೆದ ವಾದ್ಯ ಸ್ಪರ್ಧೆಯಲ್ಲಿ ತೀರ್ಪುಗಾರನಾಗಿ ಹೋಗಿದ್ದ. ಉಳಿದವರೆಲ್ಲ ಅಪೋಲೋ ದೇವತೆ ಪರ ತೀರ್ಪು ಕೊಟ್ಟರೆ, ಮೈದಾಸ್ ಮಾರ್ಸಿಯಸ್ ಪರ […]

ಜನಮೇಜಯ ಸರ್ಪಗಳನ್ನು ಬಲಿಹಾಕುವ ಯಾಗ ನಡೆಸಿದ್ದೇಕೆ? ಅದನ್ನು ತಡೆದವರು ಯಾರು, ಮತ್ತು ಏಕೆ!?

ಸರ್ಪವನ್ನು ಕಂಡಾಗ ಹಿರಿಯರು ‘ಆಸ್ತಿಕ… ಆಸ್ತಿಕ…’ ಎಂದು ಪಠಿಸುತ್ತಾರೆ. ಅದೇಕೆ ಹಾಗೆ ಮಾಡುತ್ತಾರೆ? ಯಾರು ಈ ಆಸ್ತಿಕ? ಸರ್ಪಗಳಿಗೂ ಅವನಿಗೂ ಏನು ಸಂಬಂಧ?  ಜನಮೇಜಯ ಯಾಗ ನಡೆಸಿ ಸರ್ಪಸಂತತಿಯನ್ನೇ ನಾಶ ಮಾಡಲು ಹೊರಟಿದ್ದೇಕೆ….!? ತಿಳಿಯಲು ಈ ಕಥೆ ಓದಿ! ಕುರುಕ್ಷೇತ್ರ ಯುದ್ಧ ಮುಗಿದು ಕೆಲವು ವರ್ಷಗಳ ಕಾಲ ರಾಜ್ಯಾಡಳಿತ ನಡೆಸಿದ ಪಾಂಡವರು ಸಶರೀರ ಸ್ವರ್ಗಾರೋಹಣಕ್ಕೆ ತೆರಳಿದರು. ಅವರ ನಂತರ ಅಭಿಮನ್ಯು – ಉತ್ತರೆಯರ ಮಗ ಪರೀಕ್ಷಿತ ಹಸ್ತಿನಾವತಿಯ ಅರಸನಾದ. ಈ ಪರೀಕ್ಷಿತ ಒಮ್ಮೆ ಕಾಡಿಗೆ ಬೇಟೆಗೆಂದು ತೆರಳಿದ್ದವನು […]

ಗರುಡನಿಗೂ ಸರ್ಪಗಳಿಗೂ ವೈರವೇಕೆ? ಕದ್ರು ತನ್ನದೇ ಮಕ್ಕಳಿಗೆ ಶಾಪ ಕೊಟ್ಟಿದ್ದೇಕೆ!?

ಪ್ರಜಾಪತಿ ಕಶ್ಯಪನ ಅನೇಕಾನೇಕ ಪತ್ನಿಯರಲ್ಲಿ ಕದ್ರು ಮತ್ತು ವಿನತೆಯೂ ಇದ್ದರು. ಕದ್ರುವಿಗೆ ಸರ್ಪಗಳು ಮಕ್ಕಳಾಗಿ ಹುಟ್ಟಿದರು. ವಿನತೆಗೆ ಅರುಣ ಮತ್ತು ಗರುಡ ಮಕ್ಕಳಾದರು. ಮುಂದೆ ಅಂಗ ನ್ಯೂನತೆಯಿದ್ದ ಅರುಣನು ಸೂರ್ಯನ ಸಾರಥಿಯಾದನು. ಗರುಡನು ಮಹಾಶಕ್ತಿಶಾಲಿಯಾಗಿ ಬೆಳೆದನು. ಕಾಲಾಂತರದಲ್ಲಿ ದೇವಾಸುರರು ಸೇರಿ ಅಮೃತ ಪಡೆಯಲೆಂದು ಸಾಗರ ಮಥನ ನಡೆಸಿದರು. ಅಮೃತಕ್ಕೆ ಮೊದಲು ಹೊರಬಂದ ಅಮೂಲ್ಯ ಉಚ್ಚೈಶ್ರವಸ್ ಎಂಬ ಕುದುರೆಯೂ ಇತ್ತು. ಆ ಕುದುರೆ ಹಾಲಿನಂತೆ ಬೆಳ್ಳಗಿತ್ತು. ಅತ್ಯಾಕರ್ಷವಾಗಿತ್ತು. ಅದನ್ನು ನೋಡಲೆಂದೇ ಮೂರು ಲೋಕಗಳಿಂದ ದೇವ ದಾನವ ಮನುಷ್ಯರೂ ತಂಡೋತಂಡವಾಗಿ […]

ಚಕ್ರವ್ಯೂಹದಲ್ಲಿ ಅಭಿಮನ್ಯು : ಏಕಾಂಗಿವೀರನ ರೋಚಕ ಹೋರಾಟ ಹೇಗಿತ್ತು ಗೊತ್ತೆ?

ಹೋರಾಟ ಮತ್ತೆ ಭೀಕರವಾಯಿತು. ಸುತ್ತ ಘೀಳಿಡುತ್ತ ಮೇಲೆರಗುತ್ತಿರುವ ಮದಗಜಗಳೊಡನೆ ಮರಿಸಿಂಹವು ಹೋರಾಡುವಂತೆ ಅಭಿಮನ್ಯು ಕೌರವ ವೀರರನ್ನು ಎದುರಿಸಿದ. ಅವರ ಮೇಲೆ ಅಸ್ತ್ರಗಳನ್ನು ಬಳಸಿದ. ಗಾಳಿಯಲ್ಲಿ ಬಾಣ ಬಾಣ ತಗುಲಿ ಉರಿಯುತ್ತ ಕೆಳಕ್ಕೆ ಬಿದ್ದುವು. ಕುದುರೆಗಳು ನೋವನ್ನು ತಡೆಯಲಾರದೆ ದಿಕ್ಕೆಟ್ಟು ಓಡಿದುವು. ಕಡೆಗೆ ದುರ್ಯೋಧನನೇ ಅಭಿಮನ್ಯುವಿನ ಬಾಣಗಳು ಬೆಂಕಿಯಂತೆ ನೆಟ್ಟುದನ್ನು ತಡೆಯಲಾರದೆ ಓಡಿದ. ಆಮೇಲೆ…. ಮಹಾಭಾರತ ಯುದ್ಧದ ಹನ್ನೆರಡನೆಯ ದಿನ ದುರ್ಯೋಧನ ಚಿಂತಾಕ್ರಾಂತನಾಗಿದ್ದ. ಭೀಷ್ಮರು ಶರಶಯ್ಯೆಯಲ್ಲಿದ್ದರು. ಇನ್ನೇನು ನಾವು ಸೋಲುತ್ತೇವೆ ಎಂದು ದುರ್ಯೋಧನನಿಗೆ ಆತಂಕವಾಗಿಬಿಟ್ಟಿತ್ತು. ದ್ರೋಣರು ಐವರು ಸಂಶಪ್ತಕರನ್ನು […]

ಸೌಗಂಧಿಕಾ ಪುಷ್ಪ ತರಲು ಹೋದ ಭೀಮ, ದಾರಿಗೆ ಅಡ್ಡ ಬಂದ ಹನುಮ! : ಇದೇನು ಕಥೆ?

ದ್ರೌಪದಿ ಕೇಳಿದಳೆಂದು ಭೀಮೇನ ಸೌಗಂಧಿಕಾಪುಷ್ಟ ತರಲು ಹೊರಟ. ನಡುವೆ ಸಾಧಾರಣ ವಾನರನ ರೂಪದಲ್ಲಿ ಅಡ್ಡ ಬಂದ ಹನುಮ ಅವನಿಗೆ ದಾರಿ ಬಿಡದೆ ಸತಾಯಿಸಿದ! ಮಹಾಭಾರತದ ಈ ಕುತೂಹಲಕಾರಿ ಕಥೆ ಓದಿ… ಅದು ಪಾಂಡವರು ವನವಾಸದಲ್ಲಿದ್ದ ಕಾಲ. ಒಂದು ಸಂಜೆ ಭೀಮಸೇನ ದ್ರೌಪದಿಯೊಡನೆ ವಿಹರಿಸುತ್ತಿದ್ದ. ಅದೇವೇಳೆಗೆ ದಿವ್ಯ ಸುಗಂಧ ಸೂಸುತ್ತಾ ಹೂವೊಂದು ಗಾಳಿಯಲ್ಲಿ ತೇಲಿ ಬಂದು ದ್ರೌಪದಿಯ ಪಾದಗಳ ಬಳಿ ಬಿದ್ದಿತು. ಅದರ ಹೆಸರು ಸೌಂಗಧಿಕಾ ಪುಷ್ಟ. ಅದನ್ನು ನೋಡಿ ದ್ರೌಪದಿಗೆ ಬಹಳ ಸಂತೋಷವಾಯಿತು. ಇಂಥಾ ಮತ್ತಷ್ಟು ಹೂಗಳು […]

ರಾಮ ವಾಲಿಯನ್ನು ಕೊಂದಿದ್ದು ಮೋಸವೇ? ವಾಲ್ಮೀಕಿ ರಾಮಾಯಣದ ಈ ಕಥೆ ಓದಿ

ರಾಮಾಯಣದ, ರಾಮನ ವಿಷಯ ಬಂದಾಗ ಸಾಮಾನ್ಯವಾಗಿ ವಾಲಿವಧೆ ಪ್ರಸಂಗವೂ ಪ್ರಶ್ನೆಗೆ ಒಳಗಾಗುತ್ತದೆ. ಈ ಸಂದರ್ಭದಲ್ಲಿ ರಾಮನ ನಡೆ ಸರಿಯಾಗಿತ್ತೇ ತಪ್ಪಾಗಿತ್ತೇ ಎಂದು ವಿವರಿಸುವ ಪ್ರಯತ್ನ ಇಲ್ಲಿದೆ … ರಾವಣನಿಂದ ಅಪಹೃತಳಾದ ಸೀತೆಯನ್ನು ರಾಮ ಲಕ್ಷ್ಮಣರು ಹುಡುಕುತ್ತಾ ಹೊರಟರು. ಋಷ್ಯಮೂಕ ಪರ್ವತದಲ್ಲಿ ಹನುಂತ ಅವರನ್ನು ನೋಡಿ ವಿಚಾರಿಸಿದ. ಅದು ಬೇರಾರೂ ಅಲ್ಲ, ರಘುವಂಶದ ಸಾಕ್ಷಾತ್ ಶ್ರೀ ರಾಮ ಎಂದು ಹನುಮನಿಗೆ ತಿಳಿಯಿತು. ತನ್ನ ಆರಾಧ್ಯ ದೈವವನ್ನು ಕಂಡು ಕುಣಿದಾಡಿದ ಹನುಮಂತ ಸಾದರಪೂರ್ವಕವಾಗಿ ಅವರಿಬ್ಬರನ್ನು ವಾನರರ ಪದಚ್ಯುತ ರಾಜ ಸುಗ್ರೀವನ […]