ಬುಧನ ತಂದೆ ಯಾರು? ಬೃಹಸ್ಪತಿಯೋ, ಚಂದ್ರನೋ!? ~ ಪುರಾಣ ಕಥೆಗಳು

ಬುಧನು ತನ್ನ ತಾಯಿಯ ಬಳಿ ಬಂದು, ಗಂಭೀರವಾಗಿ “ಅಮ್ಮಾ, ಮಗನಿಗೆ ತನ್ನ ತಂದೆ ಯಾರೆಂದು ತಿಳಿಯುವ ಹಕ್ಕು ಇರುತ್ತದೆ, ತಾಯಿಯಾಗಿ ನಿನ್ನ ಕರ್ತವ್ಯವನ್ನು ನಡೆಸು. ನನ್ನ ತಂದೆ ಯಾರೆಂದು ತಿಳಿಸು” ಅನ್ನುತ್ತಾನೆ. ಆಗ ತಾರೆ ಯಾರ ಹೆಸರು ಹೇಳುತ್ತಾಳೆ ಗೊತ್ತೇ? ~ ಗಾಯತ್ರಿ  ತಾರಾ, ದೇವಗುರು ಬೃಹಸ್ಪತಿಯ ಹೆಂಡತಿ. ಬೃಹಸ್ಪತಿಯಲ್ಲಿ ಶಿಷ್ಯನಾಗಿದ್ದ ಚಂದ್ರನು ಗುರುಪತ್ನಿಯ ಮೇಲೆಯೇ ಮೋಹಗೊಳ್ಳುತ್ತಾನೆ. ತಾರೆಯೂ ಸುರಸುಂದರನಾದ ಚಂದ್ರನ ಮೇಲೆ ಮೋಹಿತಳಾಗುತ್ತಾಳೆ. ಅವರಿಬ್ಬರೂ ಆಶ್ರಮ ತೊರೆದು ಪ್ರತ್ಯೇಕವಾಗಿ ಸಂಸಾರ ಹೂಡುತ್ತಾರೆ. ಈ ಬೆಳವಣಿಗೆಗಳಿಂದ ಕಂಗೆಟ್ಟ […]

ಬದುಕುವ ಇಚ್ಛೆ ಎಂದರೇನು? : ಭೀಷ್ಮ ಪಿತಾಮಹ ಬೋಧಿಸಿದ ‘ರಾಜನೀತಿ’

ಪಂಚದಲ್ಲಿ ಪ್ರತಿ ಜೀವಿಗೆ ಪ್ರಾಣದ ಮೇಲೆ ಮಮಕಾರವಿರುತ್ತದೆ. ಕೇವಲ ಪ್ರಾಣಿ ಪಕ್ಷಿಗಳಿಗಷ್ಟೇ ಅಲ್ಲ, ಮರ ಗಿಡಗಳಿಗೂ ಇರುತ್ತದೆ. ಸುಖದುಃಖ ಭಾವನೆ ಎನ್ನುವುದು ಸಕಲ ಜೀವಿಗಳಿಗೂ ಸಮಾನವಾದುದು. ಹಾಗಿರುವಾಗ ಸರ್ವಭೂತ ದಯೆ ಎನ್ನುವುದು ಪ್ರತಿ ವ್ಯಕ್ತಿಯೂ ತಪ್ಪದೇ ಆಚರಿಸಬೇಕಾದ ಧರ್ಮ ~ ಭೀಷ್ಮನ ಬೋಧನೆ ಶರಶಯ್ಯೆಯ ಮೇಲೆ ಮಲಗಿದ್ದ ಭೀಷ್ಮನು ಯುಧಿಷ್ಠಿರನಿಗೆ ರಾಜನೀತಿಯನ್ನು ಬೋಧಿಸಿದನು. ಈ ಸಂದರ್ಭ ‘ಬದುಕುವ ಇಚ್ಛೆ’ಯ ಕುರಿತು ಯುಧಿಷ್ಠಿರ ತಿಳಿಯಬಯಸಿದನು. ಪ್ರತಿಯೊಂದು ಜೀವಿಗೂ ತನ್ನದೇ ಬದುಕಿದೆ ಮತ್ತು ಬದುಕಿನ ಇಚ್ಛೆಯಿದೆ ಎಂದು ಹೇಳುತ್ತಾ ವ್ಯಾಸ […]

‘ತ್ರಿಶಂಕು’ ಯಾರು? ‘ತ್ರಿಶಂಕು ಸ್ವರ್ಗ’ ಎಂದರೇನು?

ಆಚೆಗೂ ಸಲ್ಲದೆ, ಈಚೆಗೂ ಸಲ್ಲದೆ ನಡುವೆ ಸಿಲುಕಿಕೊಂಡವರ ಪಾಡು ನೋಡಿ ‘ತ್ರಿಶಂಕು ಸ್ವರ್ಗ’ ‘ತ್ರಿಶಂಕುವಿನ ಸ್ಥಿತಿ’ ಎಂದು ಹೇಳುವುದು ರೂಢಿಯಲ್ಲಿದೆ. ಈ ನುಡಿಗಟ್ಟು ಚಾಲ್ತಿಗೆ ಬಂದುದರ ಹಿಂದಿನ ಸ್ವಾರಸ್ಯಕರ ಕಥೆ ಇಲ್ಲಿದೆ ~ ಗಾಯತ್ರಿ ಇಕ್ಷ್ವಾಕು ವಂಶದಲ್ಲಿ ತ್ರಿಶಂಕು ಎಂಬ ರಾಜನಿದ್ದ. ಅವನಿಗೆ ಶರೀರದ ಮೇಲಿನ ವ್ಯಾಮೋಹದಿಂದ ಸಶರೀರವಾಗಿ ಸ್ವರ್ಗ ಪ್ರವೇಶ ಮಾಡಬೇಕೆಂಬ ಬಯಕೆಯಾಯಿತು. ತಕ್ಷಣವೇ ತನ್ನ ಕುಲಗುರುಗಳಾದ ವಸಿಷ್ಠರಿಗೆ ತನ್ನ ಆಸೆಯನ್ನು ತಿಳಿಸಿದ. ಆಗ ವಸಿಷ್ಠರು, “ನೀನು ಎಷ್ಟೇ ಶ್ರೇಷ್ಠ ರಾಜನಾದರೂ, ಎಷ್ಟೇ ಶ್ರೇಷ್ಠ ಯಾಗಗಳನ್ನುಮಾಡಿದ್ದರೂ, ಸಶರೀರವಾಗಿ ಸ್ವರ್ಗಕ್ಕೆ ಹೋಗುವುದು ಧರ್ಮಶಾಸ್ತ್ರದಲ್ಲಿ ಹೇಳಿಲ್ಲ.ಯಾರಾದರೂ ಸರಿ, ಶರೀರವನ್ನು ತ್ಯಜಿಸುವುದು ಅನಿವಾರ್ಯ, ಅದರ ನಂತರವೇಸ್ವರ್ಗ ಲೋಕದ ಪ್ರವೇಶ ಸಿಗುತ್ತದೆ. ಹಾಗಾಗಿ ಸಶರೀರವಾಗಿ ಸ್ವರ್ಗಕ್ಕೆ ಹೋಗುವುದು ಅಸಾಧ್ಯ” ಎಂದು ಅವನ ಕೋರಿಕೆಯನ್ನು ನಿರಾಕರಿಸಿದರು. ಆಗ ತ್ರಿಶಂಕು ವಸಿಷ್ಠರ ಮಕ್ಕಳ ಬಳಿ ಹೋಗಿ ತನ್ನ ಮನದ ಇಂಗಿತವನ್ನು ವ್ಯಕ್ತಪಡಿಸಿದ. ಅವರು, “ನಮ್ಮ ತಂದೆಯವರು ಸಾಧ್ಯವಿಲ್ಲ ಎಂದ ಮೇಲೆ ಅದು ಸಾಧ್ಯವಿಲ್ಲ, ಯಾರೂ ಸಶರೀರವಾಗಿ ಸ್ವರ್ಗ ಸೇರಲು ಆಗುವುದಿಲ್ಲ” ಎಂದು ಹೇಳಿಬಿಟ್ಟರು. ಅಸಮಾಧಾನಗೊಂಡ ತ್ರಿಶಂಕು ತಾನು ಬೇರೆ ಗುರುಗಳನ್ನು ಹುಡುಕಿ ತನ್ನ ಕೋರಿಕೆಯನ್ನು ಈಡೇರಿಸಿಕೊಳ್ಳುತ್ತೇನೆ ಎಂದು ಹೇಳಿ ಹೋರಟುಹೋದ. ಆಗ ಅವರು, “ನೀನು ನಮ್ಮ ತಂದೆಯಾದ, ನಿನ್ನ ಗುರುಗಳೂ ಆದ ವಸಿಷ್ಠರ ಮಾತನ್ನು ಧಿಕ್ಕರಿಸಿ ಮತ್ತೊಬ್ಬ ಗುರುವನ್ನು ಹುಡುಕಲು ಹೊರಟಿರುವೆ. ನಿನ್ನಿಂದ ಗುರುವಾಕ್ಯ ಉಲ್ಲಂಘನೆ ಮತ್ತು ಅವಮಾನ ನಡೆದಿದೆ. ಅದಕ್ಕೆ […]

ವಾತಾಪಿ ಜೀರ್ಣೋಭವ : ಅಗಸ್ತ್ಯ ಋಷಿಗಳು ವಾತಾಪಿಯನ್ನು ತಿಂದು ಜೀರ್ಣಿಸಿಕೊಂಡ ಕಥೆ!

ಮಿತಿಮೀರಿ ಊಟ ಮಾಡಿದಾಗ, ಭೂರೀ ಭೋಜನ ನಡೆಸಿದಾಗ ಕೆಲವರು ಹೊಟ್ಟೆ ಸವರಿಕೊಳ್ಳುತ್ತಾ ‘ವಾತಾಪಿ ಜೀರ್ಣೋಭವ’ ಎನ್ನುವುದುಂಟು. ಏನು ತಿಂದರೂ ಜೀರ್ಣವಾಗುತ್ತದೆ ಅನ್ನುವ ಆಶಯ ವ್ಯಕ್ತಪಡಿಸಲೂ ಇದನ್ನೊಂದು ನುಡಿಗಟ್ಟಾಗಿ ಬಳಸುವುದುಂಟು. ಇದಕ್ಕೆ ಹಿನ್ನೆಲೆಯಾಗಿ ಒಂದು ಸ್ವಾರಸ್ಯಕರ ಕಥೆಯಿದೆ. ಅದೇನು ಗೊತ್ತೇ?    ಅಸುರ ಸಹೋದರರಾದ ಇಲ್ವಲ, ವಾತಾಪಿಯರಿಗೆ  ಅಗಸ್ತ್ಯ ಋಷಿಗಳ ಮೇಲೆ ವಿಪರೀತ ಕೋಪ. ಅಸುರರ ಅಟ್ಟಹಾಸಕ್ಕೆ ಅಗಸ್ತ್ಯರು ದೊಡ್ಡ ತಡೆಯಾಗಿ ನಿಂತಿದ್ದರು. ಏನಾದರೂ ಮಾಡಿ ಅವರನ್ನು ಮಟ್ಟಹಾಕಬೇಕೆಂದು ಈ ಸಹೋದರರು ಯೋಚಿಸುತ್ತಿದ್ದರು.  ಮಾಯಾವಿಗಳಾಗಿದ್ದ ಆ ಸಹೋದರರು ಸುತ್ತಮುತ್ತಲಿನ […]

 ತಂದೆಯನ್ನು ಕೊಂದು ತಾಯಿಯನ್ನು ಮದುವೆಯಾದ ಈಡಿಪಸ್: ಗ್ರೀಕ್ ಪುರಾಣ ಕಥೆಗಳು ~ 1

ಈಡಿಪಸ್’ನಿಂದ ಕೊಲ್ಲಲ್ಪಟ್ಟವನು ಥೀಬ್ಸ್ ರಾಜ ಲೇಯಿಯಿಸನೇ ಆಗಿದ್ದ! ಈಡಿಪಸ್’ನ ತಂದೆ ಲೇಯಿಯಸ್!! ಅಲ್ಲಿಗೆ, ದೈವವಾಣಿಯ ಮೊದಲರ್ಧ ನಿಜವಾಗಿತ್ತು. ಜೊಕಾಸ್ಟಳನ್ನು ಮದುವೆಯಾದಾಗ ದೈವವಾಣಿಯ ಉತ್ತರಾರ್ಧವೂ ನಿಜವಾಯಿತು…. ಸಂಗ್ರಹ ಮತ್ತು ಪುನರ್ ನಿರೂಪಣೆ: ಚೇತನಾ ತೀರ್ಥಹಳ್ಳಿ ಥೀಬ್ಸ್ ದೊರೆ ಲೇಯಿಯಸ್’ಗೆ ಮದುವೆಯಾಗಿ ಬಹಳ ಕಾಲವಾದರೂ ಮಕ್ಕಳಾಗಲಿಲ್ಲ. ಅವನ ಹೆಂಡತಿ ಜೊಕಾಸ್ಟಳಿಗೂ ಅದೇ ಚಿಂತೆಯಾಗಿತ್ತು. ತಾನು ಸತ್ತಮೇಲೆ ತನ್ನ ರಾಜ್ಯಕ್ಕೆ ಉತ್ತರಾಧಿಕಾರಿ ಯಾರು ಎಂದು ಲೇಯಿಯಸ್ ಕೂಡಾ ಚಿಂತಿತನಾದ. ಇದಕ್ಕೇನು ಪರಿಹಾರವೆಂದು ಡೆಲ್ಫಿಯಲ್ಲಿದ್ದ ದೇವ ಮಂದಿರಕ್ಕೆ ಒಬ್ಬನೇ ಹೋದ.  ದೇವವಾಣಿಯು ಅವನಿಗೆ […]

ಸಂಜೀವಿನಿ ವಿದ್ಯೆ ಕಲಿತ ಕಚ ಮತ್ತು ದೇವಯಾನಿಯ ದುಃಖ

ದೇವ ಗುರು ಬೃಹಸ್ಪತಿಯ ಮಗ ಕಚ, ರಾಕ್ಷಸರ ಗುರು ಶುಕ್ರಾಚಾರ್ಯರಿಂದ ಮೃತ ಸಂಜೀವಿನಿ ವಿದ್ಯೆ ಕಲಿತಿದ್ದು ಹೇಗೆ ಗೊತ್ತೆ? ಶುಕ್ರರ ಮಗಳು ದೇವಯಾನಿ ಅವನಿಗೆ ಮನಸೋತಿದ್ದು ಗೊತ್ತೇ…? ~ಚೇತನಾ ತೀರ್ಥಹಳ್ಳಿ ಸಾಗರ ಮಥನದಲ್ಲಿ ಅಸುರಾದಿ ರಾಕ್ಷಸರಿಗೆ ಅಮೃತ ಸಿಗಲಿಲ್ಲ. ಹಾಗೆಂದೇ ಮಹಾದೇವ ಅವರಿಗೆ ಮೃತಸಂಜೀವಿನಿ ವಿದ್ಯೆಯನ್ನು ಕೊಟ್ಟ. ಶುಕ್ರಾಚಾರ್ಯರಿಗೆ ಅದನ್ನು ಬೋಧಿಸಿ, ನಿಮ್ಮವರನ್ನು ಬದುಕಿಸಿಕೋ ಅಂದ. ಕಾಲಾನಂತರದಲ್ಲಿ ದೇವಬಣಕ್ಕೆ ತಮ್ಮಲ್ಲೂ ಯಾರಾದರೊಬ್ಬರು ಮೃತಸಂಜೀವಿನಿ ಕಲಿಯುವುದು ಒಳ್ಳೆಯದು ಅನ್ನಿಸಿತು. ಆದರೆ ಮಹಾದೇವ ಅದನ್ನು ಬೋಧಿಸಲೊಲ್ಲ. ಅದನ್ನವರು ಅಸುರ ಗುರು […]

‘ದ’ ‘ದ’ ‘ದ’ ಎಂದು ಗುಡುಗಿದ ಮೋಡ ಹೇಳಿದ್ದೇನು? : ಒಂದು ಉಪನಿಷತ್ ಪಾಠ

ಯಾವುದೇ ಮಾತು ಅರ್ಥ ಪಡೆಯುವುದು ನಮ್ಮ ಮನಸ್ಸಿನಲ್ಲಿ. ಮಾತಿಗೆ ಅರ್ಥವಿರುವುದಿಲ್ಲ. ಅರ್ಥ ಹೊಮ್ಮುವುದು ನಮ್ಮ ಅಂತಃಸತ್ವದಲ್ಲಿ ಎಂದು ಸಾರುವ ಶುಕ್ಲಯಜುರ್ವೇದದ ಬೃಹದಾರಣ್ಯಕ ಉಪನಿಷತ್ತಿನ ಒಂದು ಕಥೆ | ಚೇತನಾ ತೀರ್ಥಹಳ್ಳಿ ದೇವತೆಗಳು, ಮನುಷ್ಯರು, ಅಸುರರು ಮೂವರೂ ಪ್ರಜಾಪತಿಯ ಮಕ್ಕಳು. ಅವರು ತಮ್ಮ ತಂದೆಯಿಂದ ಏನಾದರೊಂದು ಉಪದೇಶ ಬೇಕೆಂದು ಬಯಸಿದರು. ಅದರಂತೆ ಪ್ರಜಾಪತಿಯು ಮೋಡದ ರೂಪ ತಾಳಿ ‘ದ….ದ….ದ…’ ಎಂದು ಗುಡುಗಿದನು. ದೇವತೆಗಳು ‘ದ’ ಎಂದರೆ ‘ದಮ್ಯತ’ ಎಂಬುದಾಗಿ ಅರ್ಥಮಾಡಿಕೊಂಡರು. ಅವರು ಸದಾ ಸುಖಭೋಗಗಳೊಂದಿಗೆ ಸ್ವರ್ಗದಲ್ಲಿರುತ್ತಿದ್ದರು. ನಾವು ದಮನ […]

ಮಾರಿಷೆ ಮತ್ತು ಹತ್ತು ಮಂದಿ ಪ್ರಚೇತರು : ಪುರಾಣ ಕಥಾ ಸರಣಿ

ಭೂಮಿಯಲ್ಲಿ ಋಷಿಗಳು ತಪಸ್ಸಿಗೆ ಕುಳಿತರೆ ಸಾಕು, ಇಂದ್ರ ಸಿಂಹಾಸನಕ್ಕೆ ನಡುಕ! ಪ್ರತಿ ಬಾರಿಯೂ ಇಂಥದನ್ನು ತಡೆಯಲು ಆತ ತನ್ನ ಅಪ್ಸರೆಯರನ್ನು ಅವರತ್ತ ಕಳುಹಿಸಿ ತಪೋಭಂಗ ಮಾಡುತ್ತಿದ್ದ. ಈ ಬಗೆಯ ಕಥೆಗಳಲ್ಲಿ ವಿಶ್ವಾಮಿತ್ರನ ತಪೋಭಂಗದ ಕಥೆ ಅತಿ ಜನಪ್ರಿಯ. ಅಂಥದೇ ಇಲ್ಲಿ, ಮತ್ತೊಂದು. ಈ ಕಥೆ ಭಾಗವತ ಪುರಾಣದ ನಾಲ್ಕನೆ ಸ್ಕಂಧದಲ್ಲಿ ಬರುತ್ತದೆ. ಸಂಗ್ರಹ ಮತ್ತು ನಿರೂಪಣೆ : ಗಾಯತ್ರಿ ಹೀಗೊಬ್ಬನಿದ್ದ ಕಂಡು ಮಹರ್ಷಿ. ಆತನೂ ಒಮ್ಮೆ ತಪಸ್ಸಿಗೆ ಕುಂತ. ಹೆದರಿದ ಇಂದ್ರ ಪ್ರಮ್ಲೋಚೆ ಎಂಬ ಅಪ್ಸರೆಯನ್ನು ತಪಸ್ಸು […]

ನಭಗ ಮತ್ತು ನಾಭಾಗ ~ ಭಾಗವತದ ಒಂದು ಕಥೆ : ಪುರಾಣ ಕಥಾ ಸರಣಿ

ಭಾಗವತದ  9ನೇ ಸ್ಕಂಧ, 4ನೇ ಅಧ್ಯಾಯದಲ್ಲಿ  ನಭಗ ಮತ್ತು ನಾಭಾಗರ ಕಥೆ ಬರುತ್ತದೆ.  ಸಂಗ್ರಹ ಮತ್ತು ನಿರೂಪಣೆ : ಗಾಯತ್ರಿ ಮಹಾರಾಜ ನಭಗ, ನಾಭಾ ಹೆಸರಿನ ಮನುವಿನ ಪುತ್ರ. ಈ ನಭಗನ ಪುತ್ರರಲ್ಲೊಬ್ಬನಾದ ನಾಭಾಗ ದೀರ್ಘ ಕಾಲದವರೆಗೆ ಗುರುಕುಲದಲ್ಲಿ ವ್ಯಾಸಂಗ ಮಾಡುತ್ತಿದ್ದ. ಈ ಕಾಲದಲ್ಲಿ ಅವನ ಹಿರಿಯ ಸಹೋದರರು ನಾಭಾಗನು ಇಷ್ಟು ವರ್ಷವಾದರೂ ಮರಳಿಬಾರದಿದ್ದುದರಿಂದ ಆತನೆಲ್ಲೋ ಸಂನ್ಯಾಸಿಯಾಗುವ ವ್ರತ ಕೈಗೊಂಡಿರಬೇಕೆಂದು ತಿಳಿದು, ರಾಜ್ಯದಲ್ಲಿ ಅವನಿಗೆ ಪಾಲು ಕೊಡಬೇಕೆನ್ನುವುದನ್ನು ಪರಿಗಣಿಸದೆ ತಮ್ಮ ತಮ್ಮಲ್ಲೆ ಹಂಚಿಕೊಂಡುಬಿಟ್ಟರು. ನಾಭಾಗ ಹಿಂದಿರುಗಿದಾಗ ತಮ್ಮ […]

ತೊಡೆಯ ಮಾಂಸವನ್ನೇ ಕತ್ತರಿಸಿಟ್ಟ ಶಿಬಿ ಚಕ್ರವರ್ತಿ : ಪುರಾಣ ಕಥೆ

ಶಿಬಿ ಚಕ್ರವರ್ತಿಯ ಕಥೆಯು ತ್ಯಾಗ ಮತ್ತು ನ್ಯಾಯಪರಿಪಾಲನೆಯ ಉತ್ಕೃಷ್ಟ ಉದಾಹರಣೆಯಾಗಿ ನೆನೆಯಲ್ಪಡುತ್ತದೆ. ಪ್ರಪ್ರಾಚೀನ ಕಾಲದಲ್ಲಿ ಶಿಬಿ ಎಂಬ ಹೆಸರಿನ ಚಕ್ರವರ್ತಿಯು ದಾನ ಧರ್ಮಗಳನ್ನು ಮಾಡುತ್ತಾ ತನ್ನ ರಾಜ್ಯವನ್ನು ಆಳುತ್ತಿದ್ದನು. ಅವನು ತ್ಯಾಗಕ್ಕೆ ಪ್ರಸಿದ್ಧನಾಗಿದ್ದನು. ಅವನು ಯಾರೇ ಏನೇ ಕೇಳಿ ಬಂದರೂ ಇಲ್ಲ ಎಂದು ಹೇಳುತ್ತಿರಲಿಲ್ಲ. ಇವನ ಪ್ರಸಿದ್ಧಿಯು ಎಲ್ಲೆಡೆ ಹರಡಿ ಕೊನೆಗೆ ದೇವತೆಗಳನ್ನು ತಲುಪಿತು. ಇವನ ತ್ಯಾಗಬುದ್ಧಿಯ ತೀವ್ರತೆಯನ್ನು ಪರೀಕ್ಷಿಸಬೇಕೆಂದು ಇಂದ್ರ ಮತ್ತು ಯಮಧರ್ಮರು ಆಲೋಚಿಸಿ ಒಂದು ತಂತ್ರವನ್ನು ಹೂಡಿದರು. ಯಮಧರ್ಮನು ಗಿಡುಗನ ಅವತಾರವಾಗಿಯೂ ಇಂಧ್ರನು ಪಾರಿವಾಳವಾಗಿಯೂ […]