ಹೆಣ್ಣಾಗಿ ಹೊತ್ತ ಹರಕೆಯನ್ನು ಗಂಡಾಗಿ ತೀರಿಸಿದ ಐಫಿಸ್ : ಗ್ರೀಕ್ ಪುರಾಣ ಕಥೆಗಳು ~ 34

ಇದೊಂದು ವಿಚಿತ್ರ ಕಥೆ. ಹೆಣ್ಣಾಗಿ ಹುಟ್ಟಿದ ಐಫಿಸ್, ಮದುವೆಯ ಹಿಂದಿನ ಗಂಡಾಗಿ ಮಾರ್ಪಾಟುಹೊಂದಿದ ಕಥೆ. ಇದೆಲ್ಲ ನಡೆದಿದ್ದು ಹೀಗೆ… ಸಂಗ್ರಹ ಮತ್ತು ಅನುವಾದ: ಚೇತನಾ ತೀರ್ಥಹಳ್ಳಿ ಕ್ರೀಟ್ ದ್ವೀಪದ ಫೀಸ್ಟಸ್ ಎಂಬಲ್ಲಿ ಜೀವಿಸಿದ್ದ ಲಿಗ್ಡಸ್, ಕಡು ಬಡವನಾಗಿದ್ದ. ಟೆಲಿಥೂಸ ಅವನ ಹೆಂಡತಿ. ಅವಳು ತುಂಬು ಗರ್ಭಿಣಿಯಾಗಿದ್ದಾಗ ಲಿಗ್ಡಸ್ ಚಿಂತಾಕ್ರಾಂತನಾಗಿ ತಲೆ ಮೇಲೆ ಕೈಹೊತ್ತು ಕುಳಿತುಬಿಡುತ್ತಿದ್ದ. ಯಾಕೆ ಹೀಗೆ ಯೋಚನೆಯಲ್ಲಿ ಮುಳುಗಿದ್ದೀಯ ಎಂದು ಹೆಂಡತಿ ಕೇಳಿದರೆ ಏನಿಲ್ಲವೆಂದು ತಲೆಯಾಡಿಸುತ್ತಿದ್ದ. ಗಂಡನ ಅನ್ಯಮನಸ್ಕತೆಯಿಂದ ಬೇಸರಗೊಂಡ ಟೆಲಿಥೂಸ ಒಂದು ದಿನ ಅವನನ್ನು […]

ತನ್ನನ್ನೇ ತಾನು ಬದುಕಿಸಿಕೊಂಡ ಅಸ್’ಕ್ಲೀಪಿಯಸ್ : ಗ್ರೀಕ್ ಪುರಾಣ ಕಥೆಗಳು ~ 33

ಅಪೋಲೋನ ಅವಕೃಪೆಗೆ ಪಾತ್ರಳಾಗಿ ಸತ್ತ ಕೊರೊನಿಸಾಳ ಹೊಟ್ಟೆಯ ಭ್ರೂಣವನ್ನು ಹರ್ಮಿಸ್ ಬದುಕಿಸಿದ ಕಥೆಯನ್ನು (ಕೊಂಡಿ ಇಲ್ಲಿದೆ: ) ಓದಿದ್ದೀರಿ. ಮುಂದೆ ಈ ಮಗುವೇ ದೇವ ವೈದ್ಯ ಅಸ್’ಕ್ಲೀಪಿಯಸ್ ಎನ್ನುತ್ತದೆ ಗ್ರೀಕ್ ಪುರಾಣಕಥನದ ಒಂದು ಪಠ್ಯ. ಪಾಠಾಂತರದ ಪ್ರಕಾರ ಬೇರೊಂದೇ ಕಥೆ ಇದ್ದು, ಅದು ಹೀಗಿದೆ: ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಉತ್ತರ ಥೆಸಲಿಯಲ್ಲಿ ಲ್ಯಾಪಿತ ಜನಾಂಗದ ಪಾರಮ್ಯವಿತ್ತು. ದೊರೆ ಫ್ಲೆಜಿಯಸ್ ಅದರ ಆಳ್ವಿಕೆ ನಡೆಸುತ್ತಿದ್ದ. ಆತನ ಮಗಳು ಕೊರೊನಿಸಾ ಪರಮ ಸುಂದರಿ. ಅವಳ ಸೌಂದರ್ಯದ […]

ಕೊರೋನಿಸಳ ದೆಸೆಹಯಿಂದ ಕಪ್ಪಾಯಿತು ಕಾಗೆ  :  ಗ್ರೀಕ್ ಪುರಾಣ ಕಥೆಗಳು ~ 32

ಅಪೋಲೋಗೆ ಕೊರೊನಿಸಾಳ ಅನ್ಯಮನಸ್ಕತೆ ಅನುಮಾನ ತರಿಸಿತ್ತು. ಅವನು ತನ್ನ ನೆಚ್ಚಿನ ಪಕ್ಷಿಯಾದ ಕಾಗೆಯನ್ನು ಅವಳ ಮೇಲೆ ಕಣ್ಣಿಡಲು ನೇಮಿಸಿದ್ದ… ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಥೆಲಿಸಿ ರಾಜ್ಯವನ್ನು ಆಳುತ್ತಿದ್ದ ಫ್ಲೆಜಿಯಸ್ ಎಂಬ ರಾಜನ ಮಗಳು ಕೊರೋನಿಸಾ. ಇವಳು ಸುಂದರಿಯೂ ಕಲಾವಿದೆಯೂ ಆಗಿದ್ದಳು. ಕೊರೋನಿಸಾಳ ಸೌಂದರ್ಯಕ್ಕೆ ಕಾವ್ಯ ಹಾಗೂ ಸಂಗೀತಾಭಿಮಾನಿ ದೇವತೆಯಾದ ಅಪೋಲೋ ಕೂಡಾ ಮರುಳಾಗಿದ್ದನು. ಅವಳಲ್ಲಿ ಮೋಹಗೊಂಡು, ಮನವೊಲಿಸಿ ತನ್ನ ಪ್ರೇಯಸಿಯನ್ನಾಗಿ ಮಾಡಿಕೊಂಡನು. ಕೊರೊನಿಸಾಳಿಗೆ ಅಪೋಲೋನ ಸಹವಾಸ ಹೆಮ್ಮೆಯ ವಿಷಯವಾಗಿತ್ತು. ಸ್ವರ್ಗಲೋಕದ ದೇವಸಭೆಯ ಪ್ರತಿಷ್ಠಿತ […]

ಹೀರಾ ದೇವಿಯ ಸಂಚಿಗೆ ಬಲಿಯಾದ ಹಿಪೊಲಿಟಾ, ಸವಾಲು ಗೆದ್ದ ಹೆರಾಕ್ಲೀಸ್    :  ಗ್ರೀಕ್ ಪುರಾಣ ಕಥೆಗಳು ~ 31

ಹೆರಾಕ್ಲೀಸನ ಮೇಲಿನ ಅಸೂಯೆಯಿಂದ ಹೀರಾದೇವಿಯು ಯೂರಿಸ್ತ್ಯೂಸನನ್ನು ಮುಂದಿಟ್ಟುಕೊಂಡು ಸಂಚು ಹೂಡಿದ್ದನ್ನು ಈ ಹಿಂದೆ ಓದಿದ್ದೀರಿ (ಕೊಂಡಿ ಇಲ್ಲಿದೆ: https://aralimara.com/2018/05/14/greek16/ ) ಈ ಸಂಚಿನ ಭಾಗವಾಗಿ ತನೆಗ ಹಾಕಲಾದ 8 ಸವಾಲುಗಳನ್ನು ಗೆದ್ದ ಹೆರಾಕ್ಲೀಸ್ ಎದುರಿಸಿದ 9ನೇ ಸವಾಲು ಇಲ್ಲಿದೆ. ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಅಮೇಜಾನರ ರಾಣಿ (ಅಮೆಜಾನ್ ಧೀರೆಯರ ಮಹಿಳಾ ರಾಜ್ಯದ ಕಥನ  ಇಲ್ಲಿದೆ:  https://aralimara.com/2018/04/26/greek8/ ) ಹಿಪೊಲಿಟಾ ಎಷ್ಟು ಧೀರಳೋ ಅಷ್ಟೇ ಸುಂದರಿ. ಅವಳ ಕೆಚ್ಚನ್ನು ಮೆಚ್ಚಿ ಯುದ್ಧದೇವತೆ ಏರಿಸ್ ಅವಳಿಗೊಂದು ರತ್ನಖಚಿತ ಚಿನ್ನದ […]

ಸಿಸಿಫಸ್’ಗೆ ವಿಧಿಸಿದ ವಿಚಿತ್ರ ಶಿಕ್ಷೆ :  ಗ್ರೀಕ್ ಪುರಾಣ ಕಥೆಗಳು ~ 30

ಕೈಗೂಡದ ವ್ಯರ್ಥ ಪ್ರಯತ್ನಕ್ಕೆ ‘ಸಿಸಿಫನ್ ಟಾಸ್ಕ್’ ಎಂದೂ ದಿನ ಬೆಳಗಾದರೆ ಹಿಂದಿನ ದಿನದ ಕೆಲಸಗಳನ್ನೇ ಪುನರಾವರ್ತಿಸಬೇಕಾದ ಏಕತಾನತೆಯನ್ನು ‘ಸಿಸಿಫನ್ ಮಾರ್ನಿಂಗ್’ ಎಂದೂ ಹೇಳುವುದು ರೂಢಿಯಲ್ಲಿದೆ. ಇದರ ಹಿಂದಿನ ಕಥೆ ಏನು ಗೊತ್ತೆ? ಸಂಗ್ರಹ ಮತ್ತು ಅನುವಾದ: ಚೇತನಾ ತೀರ್ಥಹಳ್ಳಿ  ಕಾರಿಂಥದ ದೊರೆ ಸಿಸಿಫಸ್ ಆ ಕಾಲದಲ್ಲಿ ಅತ್ಯಂತ ಚತುರಮತಿ ಎಂದು ಖ್ಯಾತಿ ಪಡೆದಿದ್ದ. ಇಂಥಾ ಸಿಸಿಫಸ್ ಕೂಡಾ ಮಹಾದೇವ ಸ್ಯೂಸನ ಅವಕೃಪೆಗೆ ಒಳಗಾಗುವ ಸನ್ನಿವೇಶ ಬಂದುಬಿಟ್ಟಿತು. ಒಮ್ಮೆ ಸ್ಯೂಸ್ ದೇವನು ಹದ್ದಿನ ರೂಪ ಧರಿಸಿ ಅಸೋಪಸ್ ನದೀದೇವತೆಯ […]

ಮಹಾ ಪ್ರೇಮಿ ಆರ್ಫಿಯಸನ ದುರಂತ ಕಥೆ   :  ಗ್ರೀಕ್ ಪುರಾಣ ಕಥೆಗಳು ~ 29

ಆರ್ಫಿಯಸನಿಗೆ ಯೂರಿಡೈಸ್ ತನ್ನ ಹಿಂದೆ ಬರುತ್ತಿದ್ದಾಳೋ ಇಲ್ಲವೋ ಎಂಬ ಅನುಮಾನ ಶುರುವಾಯಿತು. ದೇವದಂಪತಿಗಳ ಎಚ್ಚರಿಕೆ ನೆನಪಾದರೂ ಇನ್ನೇನು ಹೆಬ್ಬಾಗಿಲು ತಲುಪಲು ನಾಲ್ಕೇ ಹೆಜ್ಜೆ ಎಂದು ಉಡಾಫೆ ಮಾಡಿದ. ಹಿಂತಿರುಗಿ ನೋಡಿದ. ಆಗ… ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಆರ್ಫಿಯಸ್, ಕಾವ್ಯ ಮತ್ತು ಸಂಗೀತದ ಅಧಿದೇವತೆ ಅಪಾಲೋನಿಗೆ ವಿದ್ಯಾಭಿಮಾನಿ ದೇವತೆ ಕಲಿಯೋಪಿಯಲ್ಲಿ ಹುಟ್ಟಿದವನು. ಆರ್ಫಿಯಸ್’ನ ಮೇಲೆ ವಿಶೇಷ ಪ್ರೀತಿಯನ್ನು ಹೊಂದಿದ್ದ ಅಪಾಲೋ ಅವನಿಗೊಂದು ದಿವ್ಯ ಲೈರ್ ವಾದ್ಯವನ್ನು ನೀಡಿದ್ದ. ಕಲಿಯೋಪಿಯು ಅವನಿಗೆ ಅದನ್ನು ನುಡಿಸಲು ಕಲಿಸಿಕೊಟ್ಟಳು. […]

ಪಿರಾಮಸ್ ಮತ್ತು ಥಿಸ್ಬೆಯ ದುರಂತ ಪ್ರೇಮ ಕಥೆ :  ಗ್ರೀಕ್ ಪುರಾಣ ಕಥೆಗಳು ~ 28

ಗ್ರೀಕ್ ಪುರಾಣ ಕಥನಗಳಲ್ಲಿ ಅತ್ಯಂತ ದಾರುಣ ಪ್ರೇಮ ಕಥೆ ಎಂದರೆ ಪಿರಾಮಸ್ ಮತ್ತು ಥಿಸ್ಬೆಯದು. ಕಾರಣವೇ ಇಲ್ಲದೆ, ಕೇವಲ ತಪ್ಪು ತಿಳುವಳಿಕೆಯಿಂದ ಈ ಇಬ್ಬರೂ ತಮ್ಮನ್ನು ತಮ್ಮ ಕೈಯಾರೆ ಕೊಂದುಕೊಂಡು ಕೊನೆಯಾಗುತ್ತಾರೆ. ಮುಂದೆ ಇವರ ಕಥನವನ್ನು ಹೋಲುವ ಸಾಲುಸಾಲು ದುರಂತ ಪ್ರೇಮ ಕಥನಗಳನ್ನು ನಾವು ವಿಶ್ವ ಸಾಹಿತ್ಯದಲ್ಲಿ ಕಾಣುತ್ತೇವೆ. ಪಿರಾಮಸ್ ಮತ್ತು ಥಿಸ್ಬೆ, ಬ್ಯಾಬಿಲಾನ್ ನಗರದಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ವಾಸ ಮಾಡುತ್ತಿದ್ದರು. ನೆರೆಹೊರೆಯ ವ್ಯಾಜ್ಯದಿಂದ ಎರಡೂ ಮನೆಯವರಲ್ಲಿ ವೈಷಮ್ಯ ಬೆಳೆದಿತ್ತು. ಈ ಕೌಟುಂಬಿಕ ವೈಷಮ್ಯ ಯುವಪ್ರೇಮಿಗಳ ನಡುವೆ […]

ನದಿ ತಿರುಗಿಸಿ ಆಜೀಯಸನ ಕೊಟ್ಟಿಗೆ ತೊಳೆದ ಹೆರಾಕ್ಲೀಸ್ :  ಗ್ರೀಕ್ ಪುರಾಣ ಕಥೆಗಳು ~ 27

ಹೆರಾಕ್ಲೀಸ್ ಹೀರಾ ದೇವಿಯ ಪಿತೂರಿಯಿಂದ 12 ಸಾಹಸ ಕಾರ್ಯಗಳನ್ನು ಮಾಡಬೇಕಾಗಿ ಬಂದ ಪ್ರಕರಣವನ್ನು ಇಲ್ಲಿ (https://aralimara.com/2018/05/14/greek16/   ಮತ್ತು  https://aralimara.com/2018/05/15/greek17/ ಕೊಂಡಿಯನ್ನು ಕ್ಲಿಕ್ ಮಾಡಿ) ಓದಿದ್ದೀರಿ. ಈ ಹನ್ನೆರಡು ಸಾಹಸಗಳಲ್ಲಿ – ಹೆರಾಕ್ಲೀಸನು ಅಲ್ಫೀಯಸ್ ಮತ್ತು ಪೆನೀಯಸ್ ನದಿಗಳನ್ನು ಹರಿಸಿ ಆಜೀಯಸನ ಕೊಟ್ಟಿಗೆ ತೊಳೆದದ್ದು ಐದನೇ ಸಾಹಸವಾಗಿತ್ತು. ಅವನ ಈ ಸಾಹಸ Cleaning the Augean stables ಎಂಬ ನುಡಿಗಟ್ಟು ಚಾಲ್ತಿಗೆ ಬರಲು ಕಾರಣವಾಯಿತು. ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಹೆರಾಕ್ಲೀಸ್ ವಾಸವಿದ್ದ ಮೈಕಿನೀ ನಗರದಿಂದ […]

ಟ್ರಾಯ್ ಯುದ್ಧ ಮತ್ತು ಟ್ರೋಜನ್ ಕುದುರೆ :  ಗ್ರೀಕ್ ಪುರಾಣ ಕಥೆಗಳು ~ 26

ಟ್ರಾಯ್ ಮತ್ತು ಗ್ರೀಕ್ ನಡುವೆ ನಡೆದ ಯುದ್ಧ ಪುರಾಣೇತಿಹಾಸಗಳಲ್ಲಿ ಟ್ರೋಜನ್ ಯುದ್ಧ ಎಂದೇ ಹೆಸರಾಗಿದೆ. ಈ ಯುದ್ಧದ ಮುಕ್ತಾಯ ಹಂತದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಯುದ್ಧವನ್ನು ಗೆಲ್ಲಿಸಿದ್ದು ಟ್ರೋಜನ್ ಕುದುರೆ. ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಹತ್ತು ವರ್ಷಗಳಷ್ಟು ದೀರ್ಘ ಕಾಲ ಕಾದಾಡಿದರೂ ಗ್ರೀಕರಿಗೆ ಟ್ರಾಯ್ ಅನ್ನು ಗೆದ್ದುಕೊಳ್ಳಲು ಸಾಧ್ಯವಾಗಲಿಲ್ಲ. ಹತಾಶರಾದ ಅವರು ವಂಚನೆಯಿಂದಲಾದರೂ ಸರಿ, ಯುದ್ಧವನ್ನು ಗೆಲ್ಲಲೇಬೇಕು ಎಂದು ತೀರ್ಮಾನಸಿದರು. ಅದಕ್ಕಾಗಿ ಒಂದು ಉಪಾಯ ಹೂಡಿದರು. ಅದರಂತೆ, ಭಾರೀ ಗಾತ್ರದ ಮರದ ಕುದುರೆಯೊಂದನ್ನು […]

ಒಲಿಂಪಿಕ್ಸ್ ಕ್ರೀಡಾಕೂಟ ಆರಂಭಿಸಿದ್ದು ಯಾರು ಗೊತ್ತೆ? :  ಗ್ರೀಕ್ ಪುರಾಣ ಕಥೆಗಳು ~ 25

ಒಲಿಂಪಿಕ್ಸ್ ಕ್ರೀಡಾ ಕೂಟವನ್ನು ಮೊದಲ ಬಾರಿಗೆ ಆರಂಭಿಸಿದವನು ಹೆರಾಕ್ಲೀಸ್. ತನ್ನ ತಂದೆ ಸ್ಯೂಸ್ ದೇವನ ಗೌರವಾರ್ಥ ಅವನು ಇದನ್ನು ಆರಂಭಿಸಿದ.  ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಒಮ್ಮೆ ಸ್ವರ್ಗ ಲೋಕದ ಮೇಲೆ ರಾಕ್ಷಸರು ಆಕ್ರಮಣ ನಡೆಸಲು ಸಜ್ಜಾಗುತ್ತಿದ್ದರು. ಭೂಮಿಯಲ್ಲಿ ಹುಟ್ಟಿದ ವೀರನೊಬ್ಬನ ಸಹಾಯ ಪಡೆಯದೆ ಅವರನ್ನು ಎದುರಿಸಲು ಸಾಧ್ಯವಿಲ್ಲ ಎಂದು ದೈವವಾಣಿಯಾಗಿತ್ತು. ಇದನ್ನು ನಿಮಿತ್ತ ಮಾಡಿಕೊಂಡು ಮಹಾ ದೇವ ಸ್ಯೂಸ್, ಟ್ರೋಜನ್ ನಗರದ ಅರಸ ಆಂಫಿಟ್ರಿಯೋನನ ಹೆಂಡತಿ ಅಲ್ಕ್ ಮೀನಿಯಿಂದ ಗಂಡುಮಗುವನ್ನು ಪಡೆದ. ಆ […]