ಆಗಮ ಸೂತ್ರದಿಂದ ಒಂದು ಕಥೆ

ಒಬ್ಬ ಮನುಷ್ಯನಿಗೆ ನಾಲ್ಕು ಜನ ಹೆಂಡಂದಿರಿದ್ದರು. ಮೊದಲನೇಯವಳು ಸದಾ ಅವನೊಡನೇ ಇರುತ್ತಿದ್ದಳು. ಅವನಿಗೂ ಕೂಡ ಆಕೆ ಎಂದರೆ ಬಲು ಪ್ರೇಮ, ಅವಳಿಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಮಾಡಿಕೊಡುತ್ತಿದ್ದ. ಎರಡನೇಯವಳ ಜೊತೆ ಅವನಿಗೆ ಅಂಥ ಮಧುರ ಬಾಂಧವ್ಯ ಏನಿರಲಿಲ್ಲ, ಆದರೂ ಅವಳು ದೂರವಿದ್ದಾಗ ಮಾತ್ರ ಅವಳು ಬೇಕನಿಸುತ್ತಿತ್ತು, ಅವಳಿಗಾಗಿ ತೀವ್ರ ಚಡಪಡಿಕೆಯಾಗುತ್ತಿತ್ತು. ಮೂರನೇಯವಳು ಬಹುತೇಕ ಎರಡನೇಯವಳ ಥರ, ಒಂದು ವ್ಯತ್ಯಾಸವೆಂದರೆ ತನಗೆ ತೊಂದರೆ, ಸಂಕಟ ಆದಾಗಲೆಲ್ಲ ಅವ, ಇವಳ ಜೊತೆ ತನ್ನ ತಳಮಳವ ಹಂಚಿಕೊಳ್ಳುತ್ತಿದ್ದ. ಅದನ್ನು ಬಿಟ್ಟರೆ ಹಬ್ಬ […]

ಮೈಕೇಲ್ ಏಂಜೆಲೋ ನೀಡಿದ ಉತ್ತರ

ಪ್ರಸಿದ್ಧ ಶಿಲ್ಪ ಕಲಾವಿದ ಮೈಕೇಲ್ ಎಂಜೆಲೋನ ಕಲಾಕೇಂದ್ರಕ್ಕೆ ಒಮ್ಮೆ ಕಲಾಪ್ರೇಮಿ ಸಂದರ್ಶಕನೊಬ್ಬ ಬಂದನಂತೆ. ಮೈಕೇಲ್ ತಾನು ಸದ್ಯ ತಯಾರಿಸುತ್ತಿದ್ದ ಮೂರ್ತಿಯನ್ನು ಕುರಿತು ವಿವರಿಸುತ್ತಿದ್ದ. ಆ ಮೂರ್ತಿಯ ನಿರ್ಮಾಣ ಕಾರ್ಯವನ್ನು ನೋಡಲು ಅದೇ ಸಂದರ್ಶಕ ಹಿಂದೆಯೂ ಒಮ್ಮೆ ಬಂದಿದ್ದ. ಅವನು ಬಂದು ಹೋದಾಗಿನಿಂದ ಏನೆಲ್ಲ ಕೆಲಸಗಳು ನಡೆದವು ಎಂಬುದನ್ನು ಮೈಕೇಲ್ ವಿವರಿಸಿದ : “ಆ ಭಾಗವನ್ನು ಸ್ವಲ್ಪ ಬದಲಿಸಿದೆ, ಕೈಗಳ ಮಾಂಸಖಂಡ ಬಲಿಷ್ಠವಾಗಿ ತೋರುವಂತೆ ಮಾಡಿದೆ, ತುಟಿಗಳಲ್ಲಿ ಕೊಂಚ ಭಾವ ಪ್ರಕಾಶವಾಗುವ ಹಾಗೆ ಮಾಡಿದೆ, ಕಾಲುಗಳು ಶಕ್ತವಾಗಿ ಕಾಣುವಂಥ […]

ಅಂಬೆಯ ನೆನಪಲ್ಲಿ ಭೀಷ್ಮನ ಸ್ವಗತ…

ಕಾಯುತ್ತಲೇ ಇದ್ದ ಭೀಷ್ಮ. ಸಾಯುತ್ತಲೇ ಇದ್ದ ದಿನದಿನವೂ…. ಕುರುಕುಲ ಸಿಂಹಾಸನ ಬರಿದಾದಾಗಲೆಲ್ಲ; ಗಂಡುಗಳು ಬರಡಾದಾಗಲೆಲ್ಲ; ಸತ್ಯವತಿ ತಲೆಮೇಲೆ ಕೈಹೊತ್ತು ಮೂಲೆ ಹಿಡಿದಾಗಲೆಲ್ಲ; ರಾಜಕಾರಣದ ಪುರುಸೊತ್ತಿನ ನಡುವೆ ಅಂಬೆಯ ಮುನಿಸಿನ ಮುದ್ದು ಮುಖ ನೆನಪಾದ ಘಳಿಗೆ ಘಳಿಗೆಯೆಲ್ಲ…! ~ ಚೇತನಾ ತೀರ್ಥಹಳ್ಳಿ ಮಾತೆತ್ತಿದರೆ ಸತ್ಯವತಿ ತಲೆಮೇಲೆ ಕೈಹೊತ್ತು ಮಲಗುತ್ತಾಳೆ. ಅಪ್ಪ ಸತ್ತಾಗ ಮೊದಲ ಸಾರ್ತಿ ಹೀಗೆ ಮೂಲೆ ಹಿಡಿದು ಕುಂತಿದ್ದಳು. ಚಿತ್ರ- ವಿಚಿತ್ರ ವೀರ್ಯರನ್ನ ಸಾಕುವ ಹೊಣೆ ನಾನೇ ಹೊತ್ತೆ. ಒಬ್ಬ ಯುದ್ಧದಲ್ಲಿ ಸತ್ತ. ಮತ್ತೊಬ್ಬನಿಗೆ ಮದುವೆ ಮಾಡಲು ನಾನು ಹೆಣ್ಣುಗಳನ್ನ […]

ಅಲೆಕ್ಸಾಂಡರ್ ಬಳಿ ಡಯೊಜಿನಿಸ್ ಕೇಳಿದ್ದೇನು?

ಅಲೆಕ್ಸಾಂಡರ್‌ನನ್ನು ಗ್ರೀಸ್‌ನ ಎಲ್ಲ ಜನರೂ ಹೊಗಳುತ್ತಿದ್ದರು. ಅವನಿಗೆ ವಿಶೇಷ ಗೌರವ ಸಲ್ಲಿಸುತ್ತಿದ್ದರು ಹಾಗು ಅವನ ಸಾಧನೆಗಳನ್ನು ಶ್ಲಾಘಿಸುತ್ತಿದ್ದರು. ಆದರೆ ದಾರ್ಶನಿಕ ಡಯೊಜಿನಿಸ್‌ ಮಾತ್ರ ಅಲೆಕ್ಸಾಂಡರನ ಬಗ್ಗೆ ಏನೂ ಹೇಳುತ್ತಿರಲಿಲ್ಲ. ಜನ ಆತನನ್ನು ಅಲೆಕ್ಸಾಂಡರ್’ಗಿಂತಲೂ ತುಸು ಹೆಚ್ಚಾಗಿಯೇ ಪ್ರೀತಿಸುತ್ತಿದ್ದರು.  ಡಯೊಜಿನಿಸ್ ನದು ವಿಲಕ್ಷಣ ವ್ಯಕ್ತಿತ್ವ. ತನ್ನೆಲ್ಲ ಆಸ್ತಿಯನ್ನೂ ದಾನವಾಗಿ ಕೊಟ್ಟಿದ್ದ ಆತ, ಬೆತ್ತಲೆಯಾಗಿ ಮಾರುಕಟ್ಟೆಯಲ್ಲೊಂದು ಪೀಪಾಯಿಯ ಒಳಗೆ ಕುಳಿತು ಕಾಲ ಕಳೆಯುತ್ತಿದ್ದ. ಈತನ ಬಗ್ಗೆ ಕೇಳಿದ ಅಲೆಕ್ಸಾಂಡರ್, ತಾನೊಮ್ಮೆ ಈ ವಿಚಿತ್ರ ವ್ಯಕ್ತಿಯನ್ನು ಭೇಟಿ ಮಾಡಬೇಕೆಂದು ಹೊರಟ. ಡಯೊಜಿನಿಸ್‌ […]

ಮನುಷ್ಯ ಹಲವು ವಸ್ತುಗಳ ಜೋಡಣೆ

ಆಚಾರ್ಯ ನಾಗಾರ್ಜುನ ಮತ್ತು ಸಾಮ್ರಾಟ ಮಿಲಿಂದರ ನಡುವಿನ ಈ ಒಂದು ಸಂಭಾಷಣೆ ಬಹಳ ಪ್ರಸಿದ್ಧವಾದುದು. ಕಳಚಿನೋಡದೆ ಪೂರ್ಣವು ದಕ್ಕುವುದಿಲ್ಲ ಎಂಬುದನ್ನು ಈ ಸಂಭಾಷಣೆ ಮನದಟ್ಟು ಮಾಡುತ್ತದೆ. ಸಾಮ್ರಾಟ ಮಿಲಿಂದ ತನ್ನ ಆಸ್ಥಾನಕ್ಕೆ ಬಂದ ನಾಗಾರ್ಜುನನ್ನು ಸ್ವಾಗತಿಸುತ್ತಾ, `ನಾಗಾರ್ಜುನನಿಗೆ ಸ್ವಾಗತ’ ಅನ್ನುತ್ತಾನೆ. ನಾಗಾರ್ಜುನ ನಗುತ್ತಾ `ಇಲ್ಲಿ ನಾಗಾರ್ಜುನ ಎಂಬುವವನಿಲ್ಲ!’ ಎಂದು ನಗುತ್ತಾನೆ. ಅದನ್ನು ವಿವರಿಸುವಂತೆ ಸಾಮ್ರಾಟ ಕೇಳುತ್ತಾನೆ. ನಾಗಾರ್ಜುನ ತಾನು ಬಂದ ರಥವನ್ನು ತೋರಿಸುತ್ತಾ ಕೇಳುತ್ತಾನೆ, `ಅದು ಏನು?’ `ರಥ’ ಎನ್ನುತ್ತಾನೆ ಸಾಮ್ರಾಟ. ರಥದಿಂದ ಕುದುರೆಗಳನ್ನು ಬೇರ್ಪಡಿಸುವಂತೆ ಹೇಳಿದ […]

ದಾವೂದ ಆರಿಸಿದ ಕುದುರೆಗಳ ವೈಶಿಷ್ಟ್ಯ

ಇಸ್ರೇಲಿನ ದೊರೆ ದಾವೂದ ತನ್ನ ಸೇನಾಬಲವನ್ನು ವಿಸ್ತರಿಸುತ್ತಿದ್ದ. ಆಶ್ವದಳಕ್ಕೆ ಹೊಸ ಕುದುರೆಗಳನ್ನು ಸೇರಿಸಬೇಕಾಗಿತ್ತು. ಅದಕ್ಕಾಗಿ ಇಬ್ಬರು ಅಶ್ವದಳದ ಮೇಲ್ವಿಚಾರಕರನ್ನು ನಿಯೋಜಿಸಿದ. ವಾರಗಳ ನಂತರ ತಲಾ ಆರು ಕುದುರೆಗಳೊಂದಿಗೆ ಮರಳಿ ಬಂದ ಅಶ್ವದಳದ ಮೇಲ್ವಿಚಾರಕರು ದಾವೂದನ ಎದುರು ಅವನ್ನು ನಿಲ್ಲಿಸಿದರು. ದಾವೂದ ಮೊದಲನೆಯ ಮೇಲ್ವಿಚಾರಕನ್ನು ಕುರಿತ, “ನೀನು ತಂದಿರುವ ಕುದುರೆಗಳ ವೈಶಿಷ್ಟ್ಯತೆ ಏನು?” ಎಂದು ಕೇಳಿದ. ಅವನು ಕುದುರೆಗಳಿಗೆ ಸನ್ನೆ ಮಾಡಿದ. ಮೊದಲನೆ ಕುದುರೆ ಹಿಂಗಾಲುಗಳ ಮೇಲೆ ನಿಂತಿತು. ಎರಡನೆಯದು ಮುಂಗಾಲುಗಳ ಮೇಲೆ ನಿಂತಿತು. ಮೂರನೆಯದು ಹಾರುವ ಭಂಗಿಯಲ್ಲೂ […]

ಬುದ್ಧ ಸ್ವೀಕರಿಸದೆ ಬಿಟ್ಟ ಬೈಗುಳಗಳು ಏನಾದವು?

ಭಗವಾನ್ ಬುದ್ಧ ಎಂದಿನಂತೆ ಮರದ ಕೆಳಗೆ ಕುಳಿತುಕೊಂಡು ಶಿಷ್ಯರೊಡನೆ ಮೌನ ಸಂವಾದ ನಡೆಸಿದ್ದ. ಅಲ್ಲಿ ನಿಶ್ಶಬ್ದದ ವಿನಾ ಬೇರೇನೂ ಇರಲಿಲ್ಲ. ಇದ್ದಕ್ಕಿದ್ದ ಹಾಗೆ ಅಲ್ಲಿಗೆ ಯಾರೋ ದಾಪುಗಾಲಿಟ್ಟುಕೊಂಡು ಬರುತ್ತಿರುವ ಸಪ್ಪಳವಾಯ್ತು. ಬುದ್ಧನ ನಿಮೀಲಿತ ಕಣ್ಣುಗಳು ತೆರೆದುಕೊಂಡವು. ಭಂತೇಗಣ ಕತ್ತು ತಿರುಗಿಸಿ ನೋಡಿತು. ಒಬ್ಬ ಉರಿಮುಖದ ಮನುಷ್ಯ ಮುಷ್ಟಿ ಬಿಗಿದುಕೊಂಡು ಬಂದ. ಬಿಕ್ಖುಗಳ ನಡುವೆ ನುಗ್ಗಿ ಬುದ್ಧನೆದುರು ನಿಂತ. ಬುದ್ಧನ ಮುಖದಲ್ಲಿ ಚೂರೂ ಬದಲಾವಣೆ ಉಂಟಾಗಲಿಲ್ಲ. ಬದ್ಧನ ನೋಟ ಅವನತ್ತ ಹರಿಯಲೂ ಇಲ್ಲ. ಬಂದ ಉರಿಮುಖದ ವ್ಯಕ್ತಿ ಬುದ್ಧನನ್ನು […]

ಅಮೃತಮತಿಯ ಕಥೆ

ಅಷ್ಟಾವಕ್ರ ಮತ್ತು ಅಮೃತಮತಿಯರ ಪ್ರಣಯ ಪ್ರಸಂಗ ಕನ್ನಡದ ಮಹಾಕವಿ ಜನ್ನನ `ಯಶೋಧರ ಚರಿತ’ ಮಹಾಕಾವ್ಯದಲ್ಲಿ ಬರುತ್ತದೆ. ಮೂಲದಲ್ಲಿ ಈ ಕಥನದ ಉದ್ದೇಶ ಹಿಂಸೆಯ ಸಂಕಲ್ಪವೇ ಮಹಾಪಾಪ ಎನ್ನುವುದನ್ನು ಸಾರುವುದಾಗಿದೆ. ಯಶೋಧರ ಒಬ್ಬ ಸದ್ಗುಣಿ ರಾಜ. ಅಮೃತಮತಿ ಅವನ ಸ್ಫುರದ್ರೂಪಿ ಹೆಂಡತಿ. ಸಾತ್ತ್ವಿಕ ಗುಣದ ರಾಜನಲ್ಲಿ ರುಚಿ ಕಾಣದ ಅಮೃತಮತಿ, ಇರುಳಲ್ಲಿ ಪಾನಮತ್ತನಾಗಿ ಹಾಡುವ ಮಾವುತನ ಮೋಹಕ್ಕೆ ಬೀಳುತ್ತಾಳೆ. ಅವನೋ ಎಂಟು ಕಡೆ ಗೂನುಳ್ಳ ಕುರೂಪಿ ಅಷ್ಟಾವಕ್ರ. ಕ್ರೂರಿ, ಶುದ್ಧ ಒರಟ. ಅವನೊಡನೆ ಪ್ರಣಯ ಸಲ್ಲಾಪದ ಬಯಕೆಯಿಂದ ರಾಣಿ […]

ಸತ್ಯವನ್ನು ಮಾರಲೊಲ್ಲದ ಮಹಾವೀರ ಮತ್ತು ರಾಜನಿಗೆ ಪಾಠ ಹೇಳಿದ ಜಾಡಮಾಲಿ

ಒಮ್ಮೆ ಹೀಗಾಯ್ತು. ಮೇಲಿಂದ ಮೇಲೆ ಮಹಾವೀರನ ಗುಣಗಾನವನ್ನು ಕೇಳಿ ಬೇಸತ್ತಿದ್ದ ರಾಜಾ ಬಿಂಬಾಸುರನಿಗೆ ಆತನನ್ನು ಒಂದು ಕೈ ನೋಡೇಬಿಡುವ ಎಂದು ಮನಸಾಯ್ತು. ತನ್ನ ಮಂತ್ರಿಯನ್ನು ಕರೆದು, “ಯಾಕೆ ನಮ್ಮ ಪ್ರಜೆಗಳು ದಂಡುಗಟ್ಟಿಕೊಂಡು ಮಹಾವೀರನ ಬಳಿ ಹೋಗುತ್ತಾರೆ? ಆತನ ಬಳಿ ಅಂಥದ್ದೇನಿದೆ?” ಎಂದು ಕೇಳಿದನು. ಅದಕ್ಕೆ ಮಂತ್ರಿ, “ಮಹಾಪ್ರಭೂ, ಮಹಾವೀರನ ಬಳಿ ಸತ್ಯವಿದೆ.” ಎಂದು ಚುಟುಕಾಗಿ ಉತ್ತರಿಸಿದನು. ಬಿಂಬಾಸುರನಿಗೆ ತಲೆ ಕೆಟ್ಟಿತು. ಯಕಶ್ಚಿತ್ ಸತ್ಯಕ್ಕಾಗಿ ಜನ ತಮ್ಮ ಸಮಯ ಪೋಲು ಮಾಡಿಕೊಂಡು ಹೋಗಿ ಅವನ ಕಾಲ ಬಳಿ ಕೂರುವುದೇ!? […]

ಹುಟ್ಟಿ ಬೆಳೆದ ಮರವನ್ನು ಬಿಡಲೊಪ್ಪದ ಗಿಳಿ ಮತ್ತು ದೇವೇಂದ್ರ

ಹೀಗೇ ಒಂದು ದಿನ ದೇವೇಂದ್ರ ತನ್ನ ಪರಿವಾರದೊಂದಿಗೆ ಲಕ್ಷ್ಮೀ ಕಟಾಕ್ಷ ಹೊಂದುವ ಸಲುವಾಗಿ ಹೊರಟಿದ್ದ. ದಾರಿಯುದ್ದಕ್ಕೂ ಬಗೆ ಬಗೆಯ ವೃಕ್ಷರಾಜಿಗಳು ಕಂಗೊಳಿಸ್ತಿದ್ದವು. ಬಗೆ ಬಗೆಯ ಹೂ ಹಣ್ಣು ಹೊತ್ತ ಮರಗಳು. ಅವುಗಳಲ್ಲಿ ಮನೆ ಮಾಡಿ ಚಿಲಿಪಿಲಿಗುಟ್ಟುತ್ತ ಹರ್ಷಿಸುತ್ತಿದ್ದ ಹಕ್ಕಿಗಳು, ಚಿನ್ನಾಟವಾಡುತ್ತಿದ್ದ ಮೃಗ ಸಮೂಹ ಇವೆಲ್ಲವೂ ಶಚೀಪತಿಯ ಮನಸ್ಸನ್ನು ಉಲ್ಲಾಸಗೊಳಿಸಿತ್ತು. ಹೀಗಿರಲಾಗಿ, ದಾರಿಯಲ್ಲೊಂದು ದೈತ್ಯಾಕಾರದ ವೃಕ್ಷವೊಂದು ಎದುರಾಯ್ತು. ಆದರೆ ಅದು ಪೂರ್ತಿಯಾಗಿ ಒಣಗಿ, ಬೋಳಾಗಿಹೋಗಿತ್ತು. ಜೀವವಿಲ್ಲದ ತೊಗಟೆಗಳನ್ನು ಹೊದ್ದು ನಿಂತಿದ್ದ ಆ ಮರ ವಿಕಾರವಾಗಿಯೂ ಭಯಾನಕವಾಗಿಯೂ ತೋರುತ್ತಿತ್ತು. ಅದರ […]