ಫ್ರಾನ್ಸ್ ನ ಸಂತ ಗುರ್ಜೀಫ್ ಹೇಳಿದ ದೃಷ್ಟಾಂತ ಕಥೆ : Tea time story

ಒಂದು ಊರಿನಲ್ಲಿ ಒಬ್ಬ ಮಾಂತ್ರಿಕನಿದ್ದ. ವೃತ್ತಿಯಿಂದ ಅವನೊಬ್ಬ ಕುರಿ ಕಾಯುವವ. ಅವನ ಹಟ್ಟಿಯಲ್ಲಿ ನೂರಾರು ಕುರಿಗಳಿದ್ದವು. ಆ ಮಾಂತ್ರಿಕ ದೊಡ್ಡ ಜುಗ್ಗ. ಅವನಿಗೆ ಕೆಲಸದವರಿಗೆ ಸಂಬಳ ಕೊಡಲು ಇಷ್ಟವಿರಲಿಲ್ಲ. ಅದಕ್ಕೇ ಅವನು ಯಾವ ಕಾವಲುಗಾರರನ್ನೂ ಕೆಲಸಕ್ಕೆ ಇಟ್ಟು ಕೊಂಡಿರಲಿಲ್ಲ. ಆದರೆ ಅವನಿಗೆ ಕುರಿಗಳನ್ನು ತೋಳಗಳು ತಿಂದು ಬಿಟ್ಟರೆ ಏನು ಮಾಡೋದು ಎನ್ನುವ ಚಿಂತೆ ಶುರುವಾಯಿತು. ಮಾಂತ್ರಿಕ ಒಂದು ಉಪಾಯ ಮಾಡಿದ. ಒಂದೊಂದೇ ಕುರಿಯನ್ನು ಕರೆಸಿ ಅವುಗಳ ಮೇಲೆ ಸಮ್ಮೋಹಿನಿ ವಿದ್ಯೆ ಪ್ರಯೋಗ ಮಾಡಿದ. ಪ್ರತಿಯೊಂದು ಕುರಿಗೂ ನೀನು […]

ಯೋಚಿಸಿದ್ದೆಲ್ಲ ಕರುಣಿಸುವ ಮರ ಮತ್ತು ದಾರಿಹೋಕ : ಝೆನ್ ಕಥೆ

ಒಬ್ಬ ಮನುಷ್ಯ ಕಾಡಿನ ಮೂಲಕ ಹಾಯ್ದು ಬೇರೆ ಊರಿಗೆ ಹೋಗುತ್ತಿದ್ದ. ತುಂಬ ಹೊತ್ತು ಪ್ರವಾಸ ಮಾಡಿದ್ದರಿಂದ ಬಹಳ ದಣಿದಿದ್ದ. ಅವನ ಹೊಟ್ಟೆ ಚುರುಗುಡುತ್ತಿತ್ತು. ದಣಿವಾರಿಸಿಕೊಳ್ಳಲು ಅವ ಒಂದು ದೊಡ್ಡ ಮರದ ಕೆಳಗೆ ಹೋಗಿ ಕುಳಿತುಕೊಂಡ. ಆ ಮರ ಜನರಿಗೆ ಕೇಳಿಕೊಂಡಿದ್ದನ್ನು ಕೊಡುವ ಅಪರೂಪದ ಮರ. ಅವನಿಗೆ ಮರದ ಈ ಅದ್ಭುತ ಶಕ್ತಿಯ ಬಗ್ಗೆ ತಿಳಿದಿರಲಿಲ್ಲ. ಆ ಮನುಷ್ಯ ಸ್ವಲ್ಪ ಹೊತ್ತು ಅಲ್ಲಿ ಕುಳಿತು ದಣಿವಾರಿಸಿಕೊಂಡ. “ ಇಲ್ಲೇ ಎಲ್ಲಾದರೂ ಒಂದಿಷ್ಟು ಊಟ ಸಿಕ್ಕಿದ್ದರೆ ಚೆನ್ನಾಗಿತ್ತು” ಎಂದು ಮನಸ್ಸಿನಲ್ಲೇ […]

ಕತ್ತೆಯ ಮೇಲೆ ನಾನು ಕುಳಿತಿದ್ದರೆ! : ಒಂದು ನಸ್ರುದ್ದೀನ್ ಕಥೆ

ಮುಲ್ಲಾ ನಸರುದ್ದೀನ್ ಮೇಲಿಂದ ಮೇಲೆ ತನ್ನ ಕತ್ತೆಯನ್ನ ಕಳೆದುಕೊಳ್ಳುತ್ತಿದ್ದ. ಒಮ್ಮೆ ಹೀಗೆ ತನ್ನಕಳೆದುಕೊಂಡ ಕತ್ತೆಯನ್ನ ಹುಡುಕುತ್ತ ಮುಲ್ಲಾ ಹಾಡುತ್ತ, ಕುಣಿಯುತ್ತ ಭಗವಂತನಿಗೆ ಧನ್ಯವಾದ ಹೇಳುತ್ತ ಒಂದು ಊರಿನ ರಸ್ತೆಯ ಮೂಲಕ ಹಾಯ್ದು ಹೋಗುತ್ತಿದ್ದ. ಮುಲ್ಲಾ ಇಷ್ಟು ಖುಶಿಯಾಗಿದ್ದನ್ನ ಕಂಡ ಒಬ್ಬ ದಾರಿಹೋಕ ಪ್ರಶ್ನೆ ಮಾಡಿದ. “ ಯಾಕೆ ನಸರುದ್ದೀನ ಇಷ್ಟು ಖುಶಿಯಾಗಿದ್ದೀಯ ? ಯಾರೋ ಹೇಳಿದರು ನಿನ್ನ ನೆಚ್ಚಿನ ಕತ್ತೆ ಕಾಣೆಯಾಗಿದೆಯೆಂದು, ಆದರೂ ನೀನು ಖುಶಿಯಾಗಿದ್ದೀಯಲ್ಲ, ಕತ್ತೆ ಸಿಕ್ತಾ?” “ ಇನ್ನೂ ಸಿಕ್ಕಿಲ್ಲ ಗೆಳೆಯ ಆದರೆ ಖುಶಿಯ […]

“ನನಗೆ ಕುರಾನಿನಲ್ಲಿ ಏನಿದೆ ಗೊತ್ತು” : ಇದ್ರಿಸ್ ಶಾ ಹೇಳಿದ ದರ್ವೇಶಿ ಕಥೆ

ಬೆಕ್ತಾಶಿ ದರ್ವೇಶಿಯೊಬ್ಬ ತನ್ನ ವಿನಯಶೀಲ ನಡವಳಿಕೆಯಿಂದ ಎಲ್ಲರ ಮನ್ನಣೆ ಪಡೆಯುತ್ತಿದ್ದ. “ನೀನು ಇಷ್ಟು ಪವಿತ್ರನಾಗಿರುವುದು ಹೇಗೆ?” ಎಂದು ಯಾರಾದರೂ ಕೇಳಿದರೆ, “ನನಗೆ ಕುರಾನಿನಲ್ಲಿ ಏನಿದೆ ಎಂದು ಗೊತ್ತು”  ಅನ್ನುತ್ತಿದ್ದ. ಒಂದು ದಿನ ದರ್ವೇಶಿ ಚಹಾಖಾನೆಯಲ್ಲಿ ಕುಳಿತಿದ್ದ. ಅಲ್ಲಿದ್ದ ಅಪರಿಚಿತನೊಬ್ಬ ಅವನಿಗೆ ಸಲ್ಲುತ್ತಿದ್ದ ಮನ್ನಣೆ ಕಂಡು ಆಶ್ಚರ್ಯಚಕಿತನಾದ. ದರ್ವೇಶಿಗೆ ಎಲ್ಲರು ಕೇಳುತ್ತಿದ್ದ ಪ್ರಶ್ನೆಯನ್ನೇ ಕೇಳಿದ, “ನೀನು ಇಷ್ಟು ಪವಿತ್ರನಾಗಿರುವುದು ಹೇಗೆ?” ದರ್ವೇಶಿ ಚಹಾ ಹೀರುತ್ತ ಹೇಳಿದ, “ನನಗೆ ಕುರಾನಿನಲ್ಲಿ ಏನಿದೆ ಎಂದು ಗೊತ್ತು” . “ಓಹೋ!? ಅದು ಸರಿ… […]

ಮುಯ್ಯಿ ತೀರಿಸಿದ ನಸ್ರುದ್ದೀನ್ : Tea time story

ಒಂದು ಸಂಜೆ, ದೇಶಾಂತರದಲ್ಲಿದ್ದ ವಿದ್ವಾಂಸನೊಬ್ಬ ಮುಲ್ಲಾ ನಸ್ರುದ್ದೀನನ ಮನೆ ಬಾಗಿಲು ಬಡಿದ. “ಸ್ವಲ್ಪ ನೀರು ಕೊಡಿ” ಅಂದ. ಅತಿಥಿ ದೇವೋ ಭವ ಎಂದು ನಂಬಿದ್ದ ನಸ್ರುದ್ದೀನ್, ಅವನನ್ನು ಒಳಗೆ ಕರೆದ. ಕೂಡಿಸಿ ನೀರು, ಶರಬತ್ತು, ಖರ್ಜೂರಗಳನ್ನು ಕೊಟ್ಟ. ಅವನ್ನೆಲ್ಲ ತಿನ್ನುತ್ತ ಕುಡಿಯುತ್ತ ವಿದ್ವಾಂಸ ತನ್ನ ಜ್ಞಾಣ ಪ್ರದರ್ಶನಕ್ಕಿಳಿದ. ಜಗತ್ತಿನ ತತ್ವಶಾಸ್ತ್ರದ ಬಗೆಗೆಲ್ಲ ಗಂಟೆಗಟ್ಟಲೆ ಕೊರೆಯತೊಡಗಿದ. ಅವನ ಮಾತುಗಳನ್ನು ಕೇಳಿಸಿಕೊಳ್ಳುತ್ತಲೇ ನಸ್ರುದ್ದೀನ್ ಅವನಿಗಾಗಿ ಚಹಾ ಮಾಡಿ ಕೊಟ್ಟ. ರಾತ್ರಿಯ ಅಡುಗೆ ಮಾಡಿದ. ಊಟವನ್ನೂ ಹಾಕಿದ. ಕೊನೆಗೆ ಪಾನ್ ಕೂಡ […]