ಬಾದಾಮಿ ಬೆಲೆ : Tea time story

ಊರಿಗೆ ಹೋಗಿದ್ದ ಗೆಳೆಯನ ಅಂಗಡಿ ನೋಡಿಕೊಳ್ಳುವ ಜವಾಬ್ದಾರಿ ಮುಲ್ಲಾ ನಸ್ರುದ್ದೀನನ ಹೆಗಲಿಗೇರಿತ್ತು. ಅದೊಂದು ಡ್ರೈ ಫ್ರೂಟ್ಸ್ ಅಂಗಡಿ. ಅಲ್ಲಿಗೆ ಒಬ್ಬ ಅಪರಿಚಿತ ಬಂದ. ಬಾದಾಮಿಯನ್ನು ಕೈಲಿ ಹಿಡಿದು, “ಒಂದು ಕೇಜಿಗೆ ಬೆಲೆ ಎಷ್ಟು?” ಕೇಳಿದ. ನಸ್ರುದ್ದೀನ್ ಛಾವಣಿ ನೋಡುತ್ತಾ “ಹತ್ತು ಚಿನ್ನದ ನಾಣ್ಯ” ಅಂದ. ಬಂದವನ ಪಿತ್ಥ ನೆತ್ತಿಗೇರಿತು. ಬಾದಾಮಿಯನ್ನು ವಾಪಸ್ ಜಾಡಿಗೆ ಎಸೆದ. “ಏನಯ್ಯಾ ನೀನು! ಯಾವನಿಗೆ ಬೇಕು ನಿನ್ನ ಬಾದಾಮಿ?” ಅಂದವನೇ ಉಸಿರು ನುಂಗಿ “ಸ್ವಲ್ಪವಾದ್ರೂ ಮನುಷ್ಯತ್ವ ಇದೆಯಾ!?” ಅಂತ ಕಿರುಚಾಡಿದ. ನಸ್ರುದ್ದೀನ್ ತಣ್ಣಗೆ, […]

ಬೇಗ ಏಳುವುದರ ನಷ್ಟ : ನಸ್ರುದ್ದೀನನ ಕಥೆಗಳು

ಮುಲ್ಲಾ ನಸ್ರುದ್ದೀನನ ತಂದೆ ಹೇಳಿದ, “ಮಗನೇ, ನಾಳೆಯಿಂದ ನೀನು ಬೆಳಗ್ಗೆ ಬೇಗ ಏಳೋದು ರೂಢಿ ಮಾಡಿಕೋ” “ಯಾಕೆ?” ಕೇಳಿದ ನಸ್ರುದ್ದೀನ್. ತಂದೆ : ಅದು ಒಳ್ಳೆ ಅಭ್ಯಾಸ ನಸ್ರುದ್ದೀನ್ : ನನಗೆ ಹಲವು ಒಳ್ಳೆ ಅಭ್ಯಾಸಗಳಿವೆ. ಇದರಲ್ಲೇನು ವಿಶೇಷ? ತಂದೆ : ಇವತ್ತು ಬೇಗ ಎದ್ದು ಮುಂಜಾನೆಯ ವಿಹಾರಕ್ಕೆ ಹೋದಾಗ ರಸ್ತೆಯಲ್ಲಿ ನನಗೆ ಬಂಗಾರದ ನಾಣ್ಯಗಳ ಸಂಚಿ ಸಿಕ್ಕತು. ನೋಡು! ಬೇಗ ಎದ್ದರೆ ಇಂಥಾ ಲಾಭಗಳುಂಟು. ನಸ್ರುದ್ದೀನ್ : ಹೋ! ನೆನ್ನೆ ರಾತ್ರಿ ನಾನು ಬಹಳ ತಡವಾಗಿ […]

ಪರಿಪೂರ್ಣ ಗುರುವನ್ನು ಹುಡುಕಿ ಹೊರಟ ತರುಣ : tea time story

ಬಾಗ್ದಾದಿನ ಒಬ್ಬ ತರುಣನಿಗೆ, ತಾನು ಪರಿಪೂರ್ಣ ಜ್ಞಾನಿಯೊಬ್ಬನ ಶಿಷ್ಯನಾಗಿ ಸಾಧನೆ ನಡೆಸಿದಂತೆ ಕನಸು ಬಿತ್ತು. ಆ ಕನಸನ್ನು ನನಸು ಮಾಡಿಕೊಳ್ಳುವ ಉತ್ಕಟ ಬಯಕೆ ಅವನಲ್ಲಿ ಉಂಟಾಯಿತು. ಜ್ಞಾನ ಪಡೆದರೆ ಕನಸಿನಲ್ಲಿ ಕಂಡಂತೆ ಪರಿಪೂರ್ಣ ಗುರುವಿನ ಬಳಿಯೇ ಎಂದು ದೃಢ ನಿಶ್ಚಯ ಮಾಡಿಕೊಂಡ. ಹಾಗೆ ನಿರ್ಧರಿಸಿದ ದಿನವೇ ಅವನು ಮನೆ ಬಿಟ್ಟು ಹೊರಟ. ಊರೂರು ಅಲೆದ. ಸಿಕ್ಕವರ ಬಳಿಯೆಲ್ಲ ಅಂಥಹಾ ಗುರುವನ್ನು ನೋಡಿದ್ದೀರಾ ಎಂದು ವಿಚಾರಿಸಿದ. ನಿರಾಶಾದಾಯಕ ಉತ್ತರವೇ ದೊರೆಯುತ್ತಿದ್ದರೂ ತನ್ನ ನಿರ್ಧಾರದಲ್ಲಿ ಅಚಲನಾಗಿದ್ದ. ಹೀಗೆ ಅಲೆಯುತ್ತ ತರುಣ […]

ಖಾಲಿಯಾಗದ ಖಜಾನೆಯ ಮಹಿಳೆ ಮತ್ತು ಯಾತ್ರಿಕ : Tea time story

ಅಫ್ಘಾನಿಸ್ತಾನದ ಬೆಟ್ಟಗಳಲ್ಲಿ ಒಬ್ಬ ಸೂಫಿ ಮಹಿಳೆ ವಾಸಿಸುತ್ತಿದ್ದಳು. ಬೆಟ್ಟ ಗುಡ್ಡಗಳ ನಡುವೆ ಕುರಿ ಮೇಯಿಸುತ್ತಾ ತನ್ನ ಪಾಡಿಗೆ ತಾನು ಖುಷಿಯಾಗಿದ್ದ ಅವಳಿಗೆ, ಒಮ್ಮೆ ಒಂದು ಕೊಳದ ಬಳಿ ಅಮೂಲ್ಯ ಹರಳು ಸಿಕ್ಕಿತು. ಅವಳು ಅದನ್ನು ತನ್ನ ಬುತ್ತಿ ಚೀಲದಲ್ಲಿಟ್ಟುಕೊಂಡು ಕುರಿಗಳಿಗೆ ನೀರು ಕುಡಿಸಿ, ತನ್ನ ಪಾಡಿಗೆ ತಾನುಳಿದಳು. ದಿನಗಳು ಕಳೆದವು. ಸೂಫಿ ಮಹಿಳೆ ದಿನವೂ ಕುರಿ ಮೇಯಿಸಲು ಹೋಗುತ್ತಿದ್ದಳು. ಅವಳು ಬೆಟ್ಟದ ತಪ್ಪಲಿನಲ್ಲಿ ಕುಳಿತಿದ್ದಾಗ ಯಾತ್ರಿಕನೊಬ್ಬ ಬಂದ. ಬಹಳ ಆಯಾಸಗೊಂಡಿದ್ದ ಆತ, “ಹಸಿವಾಗಿದೆ… ತಿನ್ನಲು ಏನಾದರೂ ಸಿಗಬಹುದೇ?” […]

ದೇವರ ಪ್ರತ್ಯುತ್ತರ : ಅನಾಮಿಕ ಸೂಫಿ ಹೇಳಿದ ಕಥೆ

ಒಮ್ಮೆ ಒಬ್ಬ ಮನುಷ್ಯ ಕಾಡಿನಲ್ಲಿ ಹೋಗುತ್ತಿದ್ದೆ. ವಾಸನೆ ಹಿಡಿದ ಹುಲಿ, ಅವನನ್ನು ಹುಡುಕಿಕೊಂಡು ಬಂದಿತು. ಅದನ್ನು ನೋಡುತ್ತಲೇ ಮನುಷ್ಯ ಭಯದಿಂದ ಓಡಲಾರಂಭಿಸಿದ. ಹುಲಿಯೂ ಅವನ ಬೆನ್ನಟ್ಟತೊಡಗಿತು. ಮನುಷ್ಯ ಓಡುತ್ತ ಓಡುತ್ತ ಬೆಟ್ಟದ ಅಂಚಿಗೆ ಬಂದ. ಕೆಳಗೆ ಬಗ್ಗಿ ನೋಡಿದರೆ ಪ್ರಪಾತ! ಮುಂದೆ ಹುಲಿ, ಹಿಂದೆ ಧರೆ!! ಏನೂ ತೋಚದೆ ಗಲಿಬಿಲಿಗೊಂಡ. ಅಂಚಿನಲ್ಲೊಂದು ಮರವಿದ್ದು, ಅದರ ಕೊಂಬೆಗಳು ಕೆಳಗೆ ಚಾಚಿಕೊಂಡಿದ್ದವು. ಆ ಮನುಷ್ಯ ಹಿಂದೆ ಮುಂದೆ ನೋಡದೆ ಕೆಳಗೆ ಧುಮುಕಿ ಅದನ್ನು ಗಟ್ಟಿಯಾಗಿ ಹಿಡಿದುಕೊಂಡು ಜೋತಾಡತೊಡಗಿದ. ಆದರೇನು ಮಾಡೋದು!? […]

ಹಸನ್ ಬಸ್ರಿಗೆ ಪವಾಡದ ಮೋಹ ಬಿಡಿಸಿದ ರಾಬಿಯಾ : Tea time story

ಒಮ್ಮೆ ಸುಪ್ರಸಿದ್ಧ ಪೀರ ಹಸನ್ ಬಸ್ರಿ ರಾಬಿಯಾಳನ್ನು ಭೇಟಿಯಾಗಲು ಬಂದ. ಅವಳು ಆಗ ನದೀ ತಟದಲ್ಲಿ ನೆಲೆಸಿದ್ದಳು. ಇಬ್ಬರೂ ಅಧ್ಯಾತ್ಮ ಸಂಬಂದ ವಿಷಯಗಳನ್ನು ಮಾತಾಡುತ್ತಿರುವಾಗ ನಮಾಜ್ ಸಮಯವಾಯಿತು. ಹಸನ್ ತಮ್ಮ ಚಾಪೆಯನ್ನು ನದೀನೀರಿನ ಮೇಲೆ ಹಾಸಿಕೊಂಡು ಅದರ ಮೇಲೆ ನಮಾಜಿಗೆ ಕುಳಿತ; ಮತ್ತು, ರಾಬಿಯಾಳಿಗೆ ನಮಾಜ್ ಪಠಿಸಲು ಹೇಳಿದ. ಆಗ ರಾಬಿಯಾ ತನ್ನ ಚಾಪೆಯನ್ನು ಮೇಲೆ ಗಾಳಿಯಲ್ಲಿ ಹಾಸುತ್ತಾ, “ನಾನು ಕೆಳಗೆ ಕುಳಿತು ನಮಾಜ್ ಪಠಿಸುವುದಿಲ್ಲ, ಮೇಲಿಂದಲೇ ಓದುತ್ತೇನೆ. ನೀನೂ ಇಲ್ಲಿಗೇ ಬಾ” ಅಂದಳು. ಇದನ್ನು ನೋಡಿ […]

ಖಯಾಮರು ಸೊಳ್ಳೆಗೆ ಹೆದರಿದ್ದೇಕೆ!? : Tea time story

ಉಮರ್ ಖಯಾಮರು ಒಮ್ಮೆ ತಮ್ಮ ಶಿಷ್ಯನೊಡನೆ ದಟ್ಟ ಅಡವಿಯಲ್ಲಿ ಹೋಗುತ್ತಿದ್ದರು. ಹೋಗುತ್ತಾ ಸಂಜೆಯಾಯಿತು. ಖಯ್ಯಾಮರು ತಮ್ಮ ಬಗಲಲ್ಲಿದ್ದ ಚಾಪೆ ಹಾಸಿಕೊಂಡು ನಮಾಜ್ ಮಾಡಲು ಕುಳಿತರು. ಅದೇ ಸಮಯಕ್ಕೆ ಸ್ವಲ್ಪ ದೂರದಲ್ಲಿ ಸಿಂಹ ಘರ್ಜಿಸುವುದು ಕೇಳಿಸಿತು. ಹೆದರಿದ ಶಿಷ್ಯ ಕೂಡಲೇ ಸಮೀಪವಿದ್ದ ಮರವೇರಿ ಕುಳಿತುಕೊಂಡ. ಮನುಷ್ಯವಾಸನೆ ಹಿಡಿದು ಬಂದ ಸಿಂಹ ಖಯಾಮರು ಇದ್ದಲ್ಲಿಗೆ ಬಂತು. ಅವರ ಮುಂದೆಯೇ ನಿಂತಿತು. ಖಯಾಮರು ಚೂರೂ ಕದಲಿಲ್ಲ. ತಮ್ಮ ಪ್ರಾರ್ಥನಾವಿಧಿಗಳನ್ನು ಮುಂದುವರೆಸಿದರು. ಸಿಂಹ ಒಂದೆರಡು ಘಳಿಗೆ ನಿಂತಿದ್ದು ಹೊರಟುಹೋಯಿತು. ಆಮೇಲೆ ಶಿಷ್ಯ ಕೆಳಗಿಳಿದ. […]

ಸ್ವರ್ಗದ ಹಣ್ಣು ತಿನ್ನಬಯಸಿದ ಹೆಂಗಸು ಮತ್ತು ಸಬರ್ ಎಂಬ ದರ್ವೇಶಿ : ಸೂಫಿ ಕಥೆ

ಒಂದೂರಿನಲ್ಲಿ ಒಬ್ಬ ಹೆಂಗಸಿದ್ದಳು. ಅವಳಿಗೆ ಸ್ವರ್ಗದ ಹಣ್ಣಿನ ಬಗ್ಗೆ ತೀರದ ಕುತೂಹಲ. ಅದನ್ನು ತಿಂದರೆ ಏನೆಲ್ಲ ಪರಿಣಾಮಗಳಾಗ್ತವೆ? ಎಂದು ಯಾವಾಗಲೂ ಯೋಚಿಸುತ್ತ ಕೂರುವಳು. ಒಮ್ಮೆ ಅವಳೂರಿಗೆ ದರ್ವೇಶಿಯೊಬ್ಬ ಬಂದ. ಆ ಹೆಂಗಸು ಅವನನ್ನು ಭೇಟಿಯಾಗಿ ಕೇಳಿದಳು, “ಸ್ವರ್ಗದ ಹಣ್ಣು ಎಲ್ಲಿ ಸಿಗುತ್ತದೆ? ಅದನ್ನು ತಿಂದರೆ ನಾನು ಆ ಕ್ಷಣವೇ ಜ್ಞಾನೋದಯ ಹೊಂದಬಹುದೆ?” “ಈ ಪ್ರಶ್ನೆಗೆ ಉತ್ತರ ಬೇಕೆಂದರೆ ನನ್ನ ಜೊತೆ ಇದ್ದು ಅಭ್ಯಾಸ ನಡೆಸಬೇಕು. ನಾನು ಹೇಳಿದಷ್ಟು ವರ್ಷ ಕಾಯಬೇಕು” ದರ್ವೇಶಿ ಉತ್ತರಿಸಿದ. “ಹಾಗೆ ಮಾಡದೆ ಹೋದರೆ […]

ಖೊಟ್ಟಿ ನಾಣ್ಯ : ಒಂದು ಸೂಫಿ ಕಥೆ

ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ ಒಂದೂರಿನಲ್ಲಿ ಒಬ್ಬ ಭೋಳೆ ಮನುಷ್ಯ ಇದ್ದ. ಸಣ್ಣ ಅಂಗಡಿ ಇಟ್ಟುಕೊಂಡಿದ್ದ. ಸಣ್ಣ ಪುಟ್ಟ ಸಾಮಾನುಗಳನ್ನು ಮಾರಿ ಜೀವನ ನಡೆಸುತ್ತಿದ್ದ. ಆ ಊರಿನ ಜನ ಅವನನ್ನು ಸಾಮಾನ್ಯ ಜ್ಞಾನ ಇಲ್ಲದ, ಲಾಭ ನಷ್ಟ ಗೊತ್ತಿಲ್ಲದ ಪೆದ್ದ ಎಂದು ತಿಳಿದುಕೊಂಡಿದ್ದರು. ಕೆಲವರು, ಕೊಂಡ ವಸ್ತುಗಳಿಗೆ ಬದಲಾಗಿ ಅವನಿಗೆ ಖೊಟ್ಟಿ ನಾಣ್ಯಗಳನ್ನು ಕೊಡುತ್ತಿದ್ದರು. ಕೆಲವರಂತೂ ದುಡ್ಡು ಕೊಟ್ಟು ಬಿಟ್ಟಿದ್ದೇವೆ ಎಂದು ಸುಳ್ಳು ಹೇಳಿ ಮೋಸ ಮಾಡುತ್ತಿದ್ದರು. ಆದರೆ ಈ ಮನುಷ್ಯ ಯಾರೊಂದಿಗೂ ಜಗಳ ಆಡುತ್ತಿರಲಿಲ್ಲ. […]

ಸೂಫಿ ಮತ್ತು ಝೆನ್: ಎರಡು ಚುಟುಕು ಸಂಭಾಷಣೆ

ಹಸನ್ ಬಸ್ರಿ ಒಮ್ಮೆ ಒಬ್ಬ ಹುಡುಗ ದೀಪ ಹಿಡಿದುಕೊಂಡು ಬರುತ್ತಿರುವುದನ್ನು ನೋಡಿ ಆ ಹುಡುಗನನ್ನು ಪ್ರಶ್ನೆ ಮಾಡಿದ. “ಈ ದೀಪ ಎಲ್ಲಿಂದ ತಂದೆ? “ ಹುಡುಗ ಕೂಡಲೇ ದೀಪ ಆರಿಸಿ ಉತ್ತರಿಸಿದ. “ಹಸನ್, ಮೊದಲು ದೀಪ ಎಲ್ಲಿ ಹೋಯಿತು ಹೇಳು, ಆಮೇಲೆ ನಾನು ಹೇಳುತ್ತೇನೆ, ದೀಪ ಎಲ್ಲಿಂದ ಬಂತು ಅಂತ “ ~ ಸನ್ಯಾಸಿಯೊಬ್ಬ ಮಾಸ್ಟರ್ ಯೂಹ್ ಶಾನ್ ನನ್ನು ಪ್ರಶ್ನೆ ಮಾಡಿದ. ಸನ್ಯಾಸಿ : ಧ್ಯಾನ ಮಾಡುವಾಗ ಏನು ವಿಚಾರ ಮಾಡುತ್ತಿರುತ್ತಾರೆ? ಮಾಸ್ಟರ್ : ವಿಚಾರ […]