ಭಗವಂತ ಮೋಹಗೊಂಡು ಮುತ್ತಿಟ್ಟರೇನು ಮಾಡುವೆ? : ಸೂಫಿ ಕಾವ್ಯ

ಮೂಲ: ನಜತ್ ಒಝ್ಕಾಯಾ (ಸೂಫಿ ಸಂತಕವಿ) | ಕನ್ನಡಕ್ಕೆ: ಚಿದಂಬರ ನರೇಂದ್ರ ಭಗವಂತನ ಬಗ್ಗೆ ತೀವ್ರವಾಗಿ ಉದ್ವೇಗಗೊಂಡಿದ್ದ ಒಬ್ಬ ಸಾಧಕ ನನ್ನಂಥ ಅನುಭವಿ ದರ್ವೇಶಿಯಿಂದ ಸಲಹೆ ಪಡೆಯಲು ನಿನ್ನೆ ನನ್ನ ಮನೆಗೆ ಬಂದಿದ್ದ. “ಚುಂಬನ ಇಷ್ಟಾನಾ?” ನಾನು ಕೇಳಿದ್ದೇ ತಡ ಆತ, ಅಲ್ಲಿದ್ದ ಖುರ್ಚಿ ಎತ್ತಿ ನನ್ನ ಮೇಲೆ ಎಸೆದ; “ನಿಮ್ಮಂಥವರ ಬಗ್ಗೆ ಕೇಳಿದ್ದೆ, ಇವತ್ತು ನೋಡಿದೆ” ಆತ ಸಿಟ್ಟಿನಿಂದ ಕಂಪಿಸುತ್ತಿದ್ದ… ಸುತ್ತಿ ಬಳಸಿ ಕೇಳಿ ಪ್ರಯೋಜನವಿಲ್ಲವೆಂದು ನೇರವಾಗಿ ಮಾತಿಗಿಳಿದೆ; “ಭಗವಂತ ಮೋಹಗೊಂಡು ನಿನ್ನ ಕುತ್ತಿಗೆಯಿಂದ ಪಾದದವರೆಗೆ […]

ನಸ್ರುದ್ದೀನನ ಕಥೆ : ತಪ್ಪು ಬದಿಗೆ ಬೆಣ್ಣೆ!

ಮುಲ್ಲಾ ನಸ್ರುದ್ದೀನ್ ಪ್ರವಚನ ನೀಡುತ್ತಾನೆ ಅಂದರೆ ಊರಿಗೆ ಊರೇ ಬಂದು ಸೇರುತ್ತಿತ್ತು. ಅವನು ಉದಾಹರಣೆ ಸಹಿತವಾಗಿ ವಿಷಯಗಳನ್ನು ವಿವರಿಸುವುದು ಅವರಿಗೆ ಖುಷಿ ಕೊಡುತ್ತಿತ್ತು. ಜನರಿಗೆ ಖುಷಿಯಾಗಲೆಂದು ನಸ್ರುದ್ದೀನ್ ಕೂಡಾ ಉತ್ಸಾಹದಲ್ಲಿ ಏನೋ ಒಂದು ಹೇಳಿಬಿಡುತ್ತಿದ್ದ. ಆ ದಿನ ನಸ್ರುದ್ದೀನ್ ಮಾತನಾಡುತ್ತಾ, “ನೀವು ರೊಟ್ಟಿಯ ಒಂದು ಬದಿಗೆ ಬೆಣ್ಣೆ ಹಚ್ಚಿ ಮೇಲಕ್ಕೆ ಎಸೆಯಿರಿ. ನೀವು ಹೇಗೇ ಎಸೆದರೂ ಕೆಳಕ್ಕೆ ಬಿದ್ದಾಗ ಬೆಣ್ಣೆ ಹಚ್ಚಿದ ಬದಿ ಮೇಲಕ್ಕೇ ಇರುತ್ತದೆ” ಎಂದ. ಜನರೆಲ್ಲಾ ಅತ್ಯಂತ ಆಸಕ್ತಿಯಿಂದ ಕೇಳಿಕೊಂಡರು. ರೊಟ್ಟಿಯನ್ನು ಎಸೆದಂತೆಯೂ, ಬೆಣ್ಣೆ […]

ನಸ್ರುದ್ದೀನ್ ಕಳ್ಳಸಾಗಾಣಿಕೆ ಮಾಡುತ್ತಿದ್ದುದು ಏನು?

ಮುಲ್ಲಾ ನಸ್ರುದ್ದೀನ್ ಪ್ರತಿದಿನವೂ ತನ್ನ ಕತ್ತೆಯನ್ನು ರಾಜ್ಯದ ಗಡಿಯಾಚೆಗೆ ಒಯ್ಯುತ್ತಿದ್ದ. ಕತ್ತೆಯ ಬೆನ್ನ ಮೇಲೆ ಮರಳಿನ ಮೂಟೆಗಳಿರುತ್ತಿದ್ದವು. ಗಡಿ ಕಾವಲು ಕಾವಲುಗಾರರು ಪ್ರತಿದಿನವೂ ತಪಾಸಣೆ ಮಾಡುತ್ತಿದ್ದರು. ಮೂಟೆಗಳಲ್ಲಿ ಮರಳು ಇರುವುದನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದರು. ಆದರೆ ನಸ್ರುದ್ದೀನ್ ಮಾತ್ರ ಬಹಳ ಪ್ರಾಮಾಣಿಕತೆಯಿಂದ ತಾನು ಕಳ್ಳಸಾಗಾಣಿಕೆ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದ. ಕಾವಲುಗಾರರು ಅವನು ತಮಾಷೆ ಮಾಡುತ್ತಿದ್ದಾನೆಂದು ನಕ್ಕು ಸುಮ್ಮನಾಗುತ್ತಿದ್ದರು. ಹೀಗೆ ಇದು ನಡೆಯುತ್ತಲೇ ಇತ್ತು. ಗಡಿ ಕಾವಲುಗಾರರು ತಡೆದು ಮೂಟೆಗಳನ್ನು ಪರಿಶೀಲಿಸುವುದು, ನಸ್ರುದ್ದೀನ್ ತಾನು ಕಳ್ಳಸಾಗಾಣೀಕೆ ಮಾಡುತ್ತಿದ್ದೀನೆಂದು ಹೇಳುವುದು ನಡೆದೇ ಇತ್ತು. […]

ತರುಣ ವ್ಯಾಪಾರಿಯನ್ನು ಸಮುದ್ರಕ್ಕೆಸೆದ ಸೂಫಿ

ಒಮ್ಮೆ ಒಂದು ಹಡಗಿನಲ್ಲಿ ಸುಲ್ತಾನ ಪ್ರಯಾಣ ಹೊರಟಿದ್ದ. ಅವನ ಜೊತೆ ರಾಜ ಪರಿವಾರವೂ ಇತ್ತು. ಅದೇ ಹಡಗಿನಲ್ಲಿ ಒಬ್ಬ ತರುಣ ವ್ಯಾಪಾರಿ ಮತ್ತು ಒಬ್ಬ ಸೂಫಿ ಕೂಡಾ ಪ್ರಯಾಣ ಹೊರಟಿದ್ದರು. ತರುಣ ವ್ಯಾಪಾರಿಗೆ ಅದು ಮೊದಲ ಹಡಗು ಪ್ರಯಾಣ. ಆತ ವಿಪರೀತ ಆತಂಕದಲ್ಲಿದ್ದ. ಹೊಸತಾಗಿ ಮದುವೆಯಾಗಿದ್ದ ಹೆಂಡತಿಯ ಮುಖ ಕಣ್ಮುಂದೆ ಬರುತ್ತಿತ್ತು. “ನಾನು ಹಡಗಿನಲ್ಲಿ ಮುಳುಗಿ ಸತ್ತು ಹೋದರೆ…” ಅನ್ನುವ ಯೋಚನೆ ಕಣ್ಣೀರಾಗಿ ಹರಿದು ಅವಳ ಬಿಂಬವನ್ನೂ ಕೆಳಗೆ ಚೆಲ್ಲುತ್ತಿತ್ತು. ಸೂಫಿ ಅವನ ದುಃಖವನ್ನು ಗಮನಿಸುತ್ತಲೇ ಇದ್ದ. […]

ಈ ಕನಸಿನ ವ್ಯಾಖ್ಯಾನವೇನು?

ಕುರಾನ್ ಬಗ್ಗೆ ತನಗಿರುವಷ್ಟು ಅಗಾಧ ಪಾಂಡಿತ್ಯವನ್ನು ಬೇರಾರಿಗೂ ಇಲ್ಲ ಎಂಬ ಅಹಂಕಾರದಿಂದ ಮೆರೆಯುತ್ತಿದ್ದ ವ್ಯಕ್ತಿಯೊಬ್ಬನಿದ್ದ. ಚಿಸ್ತಿ ಪೀರ್ ನ ಸೂಫಿಯನ್ನು ವಾದಕ್ಕೆಳೆದು ತನ್ನ ಪಾಂಡಿತ್ಯವನ್ನು ಪ್ರದರ್ಶಿಸಬೇಕು ಮತ್ತು ಅವನನ್ನು ವಾದದಲ್ಲಿ ಸೋಲಿಸಬೇಕೆಂದು ಆತ ಬಯಸಿದ್ದ. ಹಾಗೆಂದೇ ಒಂದು ದಿನ ಅವನು ಸೂಫಿಯಲ್ಲಿಗೆ ಬಂದ. ಆ ಅಹಂಕಾರಿಯ ಆಲೋಚನೆಯನ್ನು ನೋಟದಲ್ಲೇ ಗ್ರಹಿಸಿದ ಸೂಫಿಯು, ಕುರಾನಿನಲ್ಲಿ ಯೂಸಫ಼ನಿಗೆ ಬಿದ್ದಿತೆಂದು ಹೇಳಲಾಗದ ಕನಸನ್ನು ಪ್ರಸ್ತಾಪಿವುದರೊಂದಿಗೆ ತಾನಾಗಿಯೇ ಸಂಭಾಷಣೆಯನ್ನು ಪ್ರಾರಂಭಿಸಿದ. ನಂತರ ಆ ವ್ಯಕ್ತಿಯನ್ನು ಕುರಿತು, “ನನಗೂ ಹಾಗೆಯೇ ಒಂದು ಕನಸು ಬಿದ್ದಿತ್ತು. […]

ಕಾಲಿಗೆ ಸೋರೆಕಾಯಿ ಕಟ್ಟಿಕೊಂಡ ಮೂರ್ಖ ~ ಜಾಮಿ ಹೇಳಿದ ಕಥೆ

ಅಬ್ದುರ್ ರೆಹಮಾನ್ ಒಬ್ಬ ಸೂಫಿ ಸಂತ.  ಒಮ್ಮೆ ಮೂರ್ಖಶಿಖಾಮಣಿಯೊಬ್ಬ ಒಂದು ದೊಡ್ಡ ನಗರಕ್ಕೆ ಬಂದ. ನಗರದ ಯಾವ ಬೀದಿಯಲ್ಲಿ ನೋಡಿದರೂ ಜನ ತುಂಬಿ ತುಳುಕಾಡುತ್ತಿತ್ತು. ಜನಸಾಗರವೋ ಅನ್ನುವಂತೆ ಇದ್ದ ಆ ನಗರವನ್ನು ಕಂಡು ಅವನು ಗಾಬರಿಯಾದ. ಈ ನಗರದಲ್ಲಿ ನಿದ್ದೆ ಮಾಡುವುದಾದರೂ ಹೇಗಪ್ಪಾ ಎಂದು ಅವನಿಗೆ ಚಿಂತೆಯಾಯಿತು. ಬೆಳಗ್ಗೆ ಎದ್ದಾಗ ತನ್ನ ಗುರುತೇ ನನಗೆ ಸಿಗದಂತಾಗಿಬಿಟ್ಟರೆ ಹೇಗೆ ಅನ್ನುವ ಭಯ ಅವನನ್ನು ಕಾಡತೊಡಗಿತು. ಆದ್ದರಿಂದ ಅವನು ತನ್ನ ಗುರುತು ಕಳೆದುಹೋಗದಿರಲಿ ಎಂದುಕೊಂಡು ಕಾಲಿಗೆ ಒಂದು ಸೋರೆಕಾಯಿ ಕಟ್ಟುಕೊಂಡು […]

ಭಾರತ ದೇಶದ ಗಿಳಿ : ಒಂದು ‘ರೂಮಿ’ ಕಥೆ

ಪರ್ಷಿಯಾದ ವ್ಯಾಪಾರಿಯೊಬ್ಬ ಭಾರತದಿಂದ ಗಿಳಿಯೊಂದನ್ನು ತಂದು ಸಾಕಿದ್ದ. ಅದನ್ನು ಚೆಂದದ ಪಂಜರದೊಳಗೆ ಇಟ್ಟು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದ. ಆದರೆ ಆ ಗಿಳಿಗೆ ಸರಳುಗಳ ಒಳಗೆ ಬಂಧಿಯಾಗಿ ಜೀವನವೇ ಜಿಗುಪ್ಸೆ ಬಂದಿತ್ತು. ಒಮ್ಮೆ ಆ ವ್ಯಾಪಾರಿ ವ್ಯವಹಾರ ನಿಮಿತ್ತ ಭಾರತಕ್ಕೆ ತೆರಳಬೇಕಾಗಿ ಬಂತು. ಪಂಜರದ ಬಳಿ ಬಂದು “ನಿನ್ನ ತಾಯ್ನಾಡಿನಿಂದ ಏನ್ನನಾದರೂ ತರಬೇಕೇ?” ಎಂದು ಕೇಳಿದ. ಮೊದಲೇ ಬೇಸರದಿಂದ ಇದ್ದ ಗಿಳಿಯು “ನೀನು ನನ್ನ ಭಾರತ ದೇಶಕ್ಕೆ ಹೋಗುತ್ತಿದ್ದೀಯ. ಪ್ರಯಾಣದ ನಡುವೆ ಯಾವುದಾದರೊಂದು ಕಾಡಿಗೆ ಹೋಗು. ಅಲ್ಲಿ ನನ್ನ ಸಮುದಾಯದ […]

ದೊರೆಯ ಗರ್ವ ಕಳೆದ ಫಕೀರ

ದರ್ಬಾರಿನ ನಡುವೆ ಪ್ರವೇಶಿಸಿದ ಫಕೀರನನ್ನು ಕಂಡು ಇಬ್ರಾಹೀಮನ ಹುಬ್ಬು ಮೇಲೇರಿತು. ಅವನು ನೋಡನೋಡುತ್ತಿದ್ದಂತೆಯೇ ಫಕೀರ ಅರಮೆನಯ ಒಂದು ಮೂಲೆಯಲ್ಲಿ ತನ್ನ ಚಾಪೆ ಬಿಡಿಸಿ ಹಾಸತೊಡಗಿದ…..

ಜಗತ್ತು ಯಾವಾಗ ಕೊನೆಗೊಳ್ಳುತ್ತದೆ?

ಒಮ್ಮೆ ಪಂಚಾಯ್ತಿ ಕಟ್ಟೆಯಲ್ಲಿ ಭಾರೀ ಚರ್ಚೆ ಏರ್ಪಟ್ಟಿತು. ಹಳ್ಳಿಯ ಹತ್ತು ಸಮಸ್ತರು ಬಂದು ಕುಳಿತಿದ್ದರು. ತತ್ತ್ವಜ್ಞಾನಿಗಳು, ಪಂಡಿತರು ಅಲ್ಲಿದ್ದರು. “ಜಗತ್ತು ಯಾವಾಗ ಕೊನೆಗೊಳ್ಳುತ್ತದೆ” ಎನ್ನುವುದು ಅವರ ಚರ್ಚೆಯ ವಿಷಯವಾಗಿತ್ತು. ಸಂಜೆ ಮುಗಿದರೂ ಅವರ ಚರ್ಚೆ ಮುಗಿಯುವ ಲಕ್ಷಣಗಳು ಕಾಣಲಿಲ್ಲ. ಪಶ್ಚಿಮದಲ್ಲಿ ಮುಳುಗುವ ಸೂರ್ಯನ ಕೆಂಬಣ್ಣದ ಹಿನ್ನೆಲೆಯಲ್ಲಿ ಮುಲ್ಲಾ ನಸ್ರುದ್ದಿನ್ ಕತ್ತೆ ಹೊಡೆದುಕೊಂಡು ಬರುತ್ತಿರುವುದು ಕಾಣಿಸಿತು. ಇನ್ನು ಮಾತಾಡಿ ಉಪಯೋಗವಿಲ್ಲ ಎಂದು ಬಟ್ಟೆ ಕೊಡವಿಕೊಂಡು ಏಳುತ್ತಿದ್ದವರೆಲ್ಲ ಹಾಗೇ ಕುಳಿತರು. ಸಮಸ್ತರಲ್ಲಿ ಒಬ್ಬ ಮುಲ್ಲಾ ನಸ್ರುದ್ದೀನನನ್ನು ತಡೆದು, “ನೋಡು, ಬೆಳಗಿನಿಂದ […]

ಪ್ರಾರ್ಥನೆ ಮಾಡುವುದು ಅಂದರೆ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದು ಎಂದಲ್ಲ!

ನಮ್ಮ ಜವಾಬ್ದಾರಿಗಳನ್ನು ದೇವರೆಂದು ನಂಬಿಕೊಂಡು ಅತೀತ ಶಕ್ತಿಯ ಮೇಲೆ ಹೊರೆಸುತ್ತೇವೆ. ಜವಾಬ್ದಾರಿ ನಿಭಾಯಿಸುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ತೇವೆ. ಹಾಗೆ ದೇವರು ಹೊಣೆ ಹೊರಲೆಂದು ಪೂಜೆ ಪ್ರಾರ್ಥನೆಗಳ ದೇಣಿಗೆಯನ್ನೂ ಕೊಟ್ಟು ‘ನಾವು ಕೊಟ್ಟೆವು, ನಾವು ಬೇಡಿದೆವು’ ಎಂದು ಲೆಕ್ಕ ಕೊಡುತ್ತೇವೆ. ಒಂಟೆಯನ್ನು ಸಾಕಿದ್ದ ವ್ಯಾಪಾರಿಯೊಬ್ಬ ಒಂದು ದಿನ ಬಾಜಾರಿನಲ್ಲಿ ವ್ಯಾಪಾರ ಮುಗಿಸಿ ಊರಿಗೆ ವಾಪಸಾಗುತ್ತಿದ್ದ. ಅವತ್ತು ಭರ್ಜರಿ ಲಾಭ ಸಿಕ್ಕ ಖುಷಿಯಲ್ಲಿ ಆತ ಹಾಡು ಗುನುಗುತ್ತ ಒಂಟೆಯ ಮೇಲೆ ಸಾಗುತ್ತಿದ್ದ. ಅವನು ಸಾಗುತ್ತಿದ್ದ ರಸ್ತೆಯ ಒಂದು ಬದಿಯಲ್ಲಿ ಮಸೀದಿ ಕಾಣಿಸಿತು. […]