ಕಾಲಿಗೆ ಸೋರೆಕಾಯಿ ಕಟ್ಟಿಕೊಂಡ ಮೂರ್ಖ ~ ಜಾಮಿ ಹೇಳಿದ ಕಥೆ

ಅಬ್ದುರ್ ರೆಹಮಾನ್ ಒಬ್ಬ ಸೂಫಿ ಸಂತ.  ಒಮ್ಮೆ ಮೂರ್ಖಶಿಖಾಮಣಿಯೊಬ್ಬ ಒಂದು ದೊಡ್ಡ ನಗರಕ್ಕೆ ಬಂದ. ನಗರದ ಯಾವ ಬೀದಿಯಲ್ಲಿ ನೋಡಿದರೂ ಜನ ತುಂಬಿ ತುಳುಕಾಡುತ್ತಿತ್ತು. ಜನಸಾಗರವೋ ಅನ್ನುವಂತೆ ಇದ್ದ ಆ ನಗರವನ್ನು ಕಂಡು ಅವನು ಗಾಬರಿಯಾದ. ಈ ನಗರದಲ್ಲಿ ನಿದ್ದೆ ಮಾಡುವುದಾದರೂ ಹೇಗಪ್ಪಾ ಎಂದು ಅವನಿಗೆ ಚಿಂತೆಯಾಯಿತು. ಬೆಳಗ್ಗೆ ಎದ್ದಾಗ ತನ್ನ ಗುರುತೇ ನನಗೆ ಸಿಗದಂತಾಗಿಬಿಟ್ಟರೆ ಹೇಗೆ ಅನ್ನುವ ಭಯ ಅವನನ್ನು ಕಾಡತೊಡಗಿತು. ಆದ್ದರಿಂದ ಅವನು ತನ್ನ ಗುರುತು ಕಳೆದುಹೋಗದಿರಲಿ ಎಂದುಕೊಂಡು ಕಾಲಿಗೆ ಒಂದು ಸೋರೆಕಾಯಿ ಕಟ್ಟುಕೊಂಡು […]

ನಮ್ಮದಲ್ಲದ ಕೆಲಸವನ್ನು ಮಾಡಿದರೆ ಇದೇ ಗತಿ!

ಅದೊಂದು ಅಗಸನ ಮನೆ. ಅಲ್ಲೊಂದು ಕತ್ತೆ, ಮತ್ತೆ ಮತ್ತೊಂದು ನಾಯಿ. ಒಂದು ರಾತ್ರಿ ಆ ಮನೆಗೆ ಕಳ್ಳ ಬರ್ತಾನೆ. ಕತ್ತೆಗೆ ಎಚ್ಚರ ಆಗತ್ತೆ. ನಾಯಿಯನ್ನ ತಿವಿದು, “ಏಯ್! ಕಳ್ಳ ಬಂದಿದಾನೆ, ಕೂಗು. ಅಗಸನ್ನ ಎಬ್ಬಿಸು…” ನಾಯಿ ಗೊಣಗುತ್ತೆ. “ಉಹು… ಅಂವ ಸರಿಯಾಗಿ ಅನ್ನ ಹಾಕೋದೇ ಇಲ್ಲ. ನಿನಗಂತೂ ಅಷ್ಟು ದುಡಿದು ಪೆಟ್ಟು ತಿನ್ನೋದೇ ಕೆಲ್ಸ. ತೆಪ್ಪಗೆ ಬಿದ್ದುಕೋಬಾರದಾ?” ಪಾಪ ಕತ್ತೆ, ನಾನೇ ಎಬ್ಬಿಸ್ತೀನಿ ಅಂದುಕೊಂಡು ಜೋರಾಗಿ ಕೂಗಿಕೊಳ್ಳುತ್ತೆ. ಕತ್ತೆಯ ಕಿರುಚಾಟಕ್ಕೆ ಹೆದರಿ ಕಳ್ಳ ಓಡಿಹೋಗ್ತಾನೆ. ಅಗಸಂಗೆ ಎಚ್ಚರವಾಗಿಬಿಡತ್ತೆ. […]

ಆತ್ಮಹತ್ಯೆ ಮಹಾಪಾಪ

~ ಪುನೀತ್ ಅಪ್ಪು ಭೀಕರ ಬರಗಾಲದ ಸಮಯ … ಸಂತ ಶಿಷ್ಯರೊಡನೆ ತೀರ್ಥ ಯಾತ್ರೆಗೆ ಹೊರಟಿದ್ದ. ಎಲ್ಲೆಲ್ಲೂ ಹಸಿವು ನೀರಡಿಕೆ ತಾಂಡವವಾಡುತಿತ್ತು. ಮರುಭೂಮಿಯ ಉದ್ದಗಲಕ್ಕೂ ಸತ್ತ ಮತ್ತು ಸಾಯುತ್ತಿರುವ ಪಶು ಪಕ್ಷಿಗಳ ಸಾಲು. ಶಿಷ್ಯರು ಹಸಿವಿನಿಂದ ಕಂಗಾಲಾದರು. ಒಂದು ಕಡೆ ತೀವ್ರ ಮೇವಿನ ಕೊರತೆಯಿಂದ ಸಾಯುತ್ತಿದ್ದ ಜಾನುವಾರಿನ ಬಳಿ ನಿಂತ ಸಂತ ತನ್ನ ಬಳಿಯಿದ್ದ ಚಾಕುವಿನಿಂದ ಆ ಪ್ರಾಣಿಯ ಕತ್ತು ಕುಯ್ದು ಮಾಂಸ ತುಂಡು ಮಾಡಿದ. ಶಿಷ್ಯರು ಕಂಗಾಲಾದರು. ‘ಗುರುಗಳೇ ಏನು ಮಾಡಿ ಬಿಟ್ಟಿರಿ?’  ಸಂತ ಮೆಲ್ಲನೆ ಹೇಳಿದ “ಆತ್ಮಹತ್ಯೆ ಮಹಾಪಾಪ!”. #ನಾಸ್ತಿಕಸಂತ ಸರಣಿ

ಶೋಹಿಚಿ ತೀರಿಕೊಂಡಿದ್ದು ಗೊತ್ತಾಗಿದ್ದು ಹೇಗೆ?

ಶೋಹಿಚಿ ಒಬ್ಬ ಒಕ್ಕಣ್ಣ ಝೆನ್ ಗುರು. ಅವನು ತೊಫುಕು ದೇವಾಲಯದಲ್ಲಿ ಶಿಕ್ಷಣ ನೀಡುತ್ತಿದ್ದ. ಅಪಾರ ಜ್ಞಾನವನ್ನು ಹೊಂದಿದ್ದ ಶೋಹಿಚಿ ವ್ಯರ್ಥವಾಗಿ ಮಾತಾಡುವುದನ್ನಾಗಲೀ ಸಂಕೇತಗಳನ್ನಾಗಲೀ ಇಷ್ಟಪಡುತ್ತಿರಲಿಲ್ಲ. ಅವನ ಶಿಕ್ಷಣ ವಿಧಾನವೆಂದರೆ ಮೌನದ ಸಾಧನೆ. ಶೋಹಿಚಿಯ ಕಾರಣದಿಂದ ತೊಫುಕು ದೇವಾಲಯದಲ್ಲಿ ಯಾವ ಸದ್ದೂ ಇರುತ್ತಿರಲಿಲ್ಲ. ಸಂಪೂರ್ಣ ನಿಶ್ಶಬ್ದ. ಅಲ್ಲಿ ಅವನು ಧರ್ಮ ಸೂತ್ರಗಳನ್ನು ಪಠಿಸುವುದಕ್ಕೂ ಅನುಮತಿ ನೀಡುತ್ತಿರಲಿಲ್ಲ. ಅವನ ಶಿಷ್ಯರು ಮೌನ ಧ್ಯಾನವನ್ನು ಬಿಟ್ಟು ಬೇರೆ ಯಾವ ಸಾಧನೆಯನ್ನು ಮಾಡಬೇಕಾಗಿಯೂ ಇರಲಿಲ್ಲ. ವರ್ಷಗಳು ಉರುಳಿದವು. ಒಂದು ದಿನ ತೊಫುಕು ದೇವಾಲಯದ ಸಮೀಪದಲ್ಲಿ […]

ಮೂರ್ಖತ್ವದ ಮಾನದಂಡ

~ ಯಾದಿರಾ ಮರುಭೂಮಿಯ ಮಹಾಯೋಗಿನಿ ರಾ-ಉಮ್ ಬಳಿಗೆ ಮೂರ್ಖನೊಬ್ಬ ಬಂದ. ಈಚಲ ಮರದ ಕೆಳಗೆ ಧ್ಯಾನಾಸಕ್ತಳಾಗಿದ್ದ ರಾ-ಉಮ್ ಕಣ್ಣು ತೆರೆದಳು. ‘ಅಮ್ಮಾನಾನೊಬ್ಬ ಮೂರ್ಖ ಎಂದು ನನಗೆ ಗೊತ್ತಿದೆ. ಮೂರ್ಖತ್ವವನ್ನು ಹೇಗೆ ಕಳೆದುಕೊಳ್ಳುವುದು ಎಂದು ಮಾತ್ರ ಗೊತ್ತಾಗುತ್ತಿಲ್ಲ’ ಎಂದು ಆ ಮೂರ್ಖ ಅಲವತ್ತುಕೊಂಡ. ರಾ-ಉಮ್ ಗಹಗಹಿಸಿ ನಕ್ಕು. ‘ಅಂದರೆ ನೀನು ಮೂರ್ಖ ಎಂದು ನಿನಗೆ ಗೊತ್ತಿದೆ. ಹಾಗಾದರೆ ನೀನು ಮೂರ್ಖನಾಗಿರಲು ಸಾಧ್ಯವೇ ಇಲ್ಲ’ ಎಂದಳು. ಮೂರ್ಖನಿಗೆ ತಲೆಕೆಟ್ಟಂತಾಯಿತು. ಅವನು ವಿವರಿಸಿದ: ‘ಎಲ್ಲರೂ ನನ್ನನ್ನು ಮೂರ್ಖ ಎನ್ನುತ್ತಾರೆ’ ರಾ-ಉಮ್ ಗೆ […]

ಮೀನಿನಿಂದ ಫಜೀತಿಗೊಳಗಾದ ಹದ್ದು

ಒಮ್ಮೆ ಹದ್ದೊಂದು ಕೆರೆಯ ದಡದಲ್ಲಿ ಬೆಸ್ತನು ಹಿಡಿದಿಟ್ಟ ಮೀನನ್ನು ಎತ್ತಿಕೊಂಡು ಹಾರಿತು. ಹದ್ದಿನ ಕೊಕ್ಕಿನಲ್ಲಿ ಮೀನನ್ನು ಕಂಡೊಡನೆ ಹತ್ತಾರು ಕಾಗೆಗಳು ಕಾವ್ ಕಾವ್ ಅನ್ನುತ್ತಾ ಅದರ ಸುತ್ತ ಸುತ್ತುವರಿದವು. ಹದ್ದು ಎತ್ತ ಹೋದರೂ ಕಾಗೆಗಳ ಹಿಂಡು ಅದನ್ನು ಹಿಂಬಾಲಿಸಿದವು. ಹತ್ತರಷ್ಟಿದ್ದ ಹಿಂಡಿಗೆ ನೂರಾರು ಕಾಗೆಗಳು ಸೇರಿಕೊಂಡವು. ಅವುಗಳ ಮುತ್ತಿಗೆಯಿಂದ ತಪ್ಪಿಸಿಕೊಳ್ಳಲು ಹದ್ದು ಪರದಾಡಿತು. ಈ ಪರದಾಟದಲ್ಲಿ ಅದರ ಕೊಕ್ಕಿನಲ್ಲಿದ್ದ ಮೀನು ಕೆಳಗೆ ಬಿತ್ತು. ಮೀನು ಕೆಳಗೆ ಬೀಳುತ್ತಿದ್ದಂತೆಯೇ ಹದ್ದನ್ನು ಬಿಟ್ಟು ಕಾಗೆಗಳು ಅದರತ್ತ ಮುಗಿಬಿದ್ದವು. ಈ ಎಲ್ಲ […]

ಅತಿಯಾದ ಪರಿಚಯ ಅವಜ್ಞೆಗೆ ಕಾರಣ

~ ಪುನೀತ್ ಅಪ್ಪು ಕಾಡಿನ ದಾರಿಯಲ್ಲಿ ಸಾಗುತ್ತಿದ್ದ ಶಿಷ್ಯರೊಡನೆ ಸಾಗುತ್ತಿದ್ದ ಸಂತ ಒಂದು ಪ್ರದೇಶದಲ್ಲಿ ಉಳಿದುಕೊಂಡ. ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನ ಸೋತ ಶಿಷ್ಯರು ಸ್ವಲ್ಪ ಕಾಲ ಇಲ್ಲಿಯೇ ಇರೋಣ ಎಂದು ಒತ್ತಾಯಿಸಿದರು. ದೀರ್ಘಕಾಲದವರೆಗೆ ಉಳಿದುಕೊಂಡ ಕಾರಣ ಅಲ್ಲಿನ ಜನರು ಮತ್ತು ಸಂತನ ಶಿಷ್ಯರು ಒಳ್ಳೆಯ ಸ್ನೇಹಿತರಾದರು. ಸಜ್ಜನರಾದ ಶಿಷ್ಯರು ಅವರ ದೈನಂದಿನ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡಲು ತೊಡಗಿದರು. ಬರಬರುತ್ತಾ ಹೆಚ್ಚಿನ ಜನರು ಆ ಶಿಷ್ಯರನ್ನು ತಮ್ಮ ಕೆಲಸದವರಂತೆಯೇ ಕಾಣ ತೊಡಗಿದರು. ಒಂದು ದಿನ ಬೇಸರಗೊಡ […]

ಭಾರತ ದೇಶದ ಗಿಳಿ : ಒಂದು ‘ರೂಮಿ’ ಕಥೆ

ಪರ್ಷಿಯಾದ ವ್ಯಾಪಾರಿಯೊಬ್ಬ ಭಾರತದಿಂದ ಗಿಳಿಯೊಂದನ್ನು ತಂದು ಸಾಕಿದ್ದ. ಅದನ್ನು ಚೆಂದದ ಪಂಜರದೊಳಗೆ ಇಟ್ಟು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದ. ಆದರೆ ಆ ಗಿಳಿಗೆ ಸರಳುಗಳ ಒಳಗೆ ಬಂಧಿಯಾಗಿ ಜೀವನವೇ ಜಿಗುಪ್ಸೆ ಬಂದಿತ್ತು. ಒಮ್ಮೆ ಆ ವ್ಯಾಪಾರಿ ವ್ಯವಹಾರ ನಿಮಿತ್ತ ಭಾರತಕ್ಕೆ ತೆರಳಬೇಕಾಗಿ ಬಂತು. ಪಂಜರದ ಬಳಿ ಬಂದು “ನಿನ್ನ ತಾಯ್ನಾಡಿನಿಂದ ಏನ್ನನಾದರೂ ತರಬೇಕೇ?” ಎಂದು ಕೇಳಿದ. ಮೊದಲೇ ಬೇಸರದಿಂದ ಇದ್ದ ಗಿಳಿಯು “ನೀನು ನನ್ನ ಭಾರತ ದೇಶಕ್ಕೆ ಹೋಗುತ್ತಿದ್ದೀಯ. ಪ್ರಯಾಣದ ನಡುವೆ ಯಾವುದಾದರೊಂದು ಕಾಡಿಗೆ ಹೋಗು. ಅಲ್ಲಿ ನನ್ನ ಸಮುದಾಯದ […]

ಬಟ್ಟೆಯ ಗಂಟು ಮತ್ತು ಝೆನ್

ತಾಂಗ್ ವಂಶಸ್ಥರ ಆಳ್ವಿಕೆಯ ಕಾಲದಲ್ಲಿ ಹೋಟಿ ಎಂಬ ಝೆನ್ ಗುರು ಇದ್ದ. ಅವನಿಗೆ ತಾನು ಝೆನ್ ಗುರು ಎಂದು ಹೇಳಿಕೊಳ್ಳುವ ಆಸೆ ಇರಲಿಲ್ಲ. ಶಿಷ್ಯರನ್ನು ಗುಂಪುಗೂಡಿಸಿಕೊಳ್ಳುವ ಹಂಬಲವಿರಲಿಲ್ಲ. ಯಾವಾಗಲೂ ಹೆಗಲ ಮೇಲೆ ಸದಾ ಬಟ್ಟೆಯ ಗಂಟೊಂದನ್ನು ಹೊತ್ತು ಬೀದಿಗಳಲ್ಲಿ ನಡೆಯುತ್ತಿದ್ದ. ಅದರಲ್ಲಿ ಮಿಠಾಯಿ, ಹಣ್ಣು, ಇಂಥ ತಿನಿಸು ತುಂಬಿರುತ್ತಿದ್ದವು. ಬೀದಿಮಕ್ಕಳಿಗೆ ಅವನ್ನು ಹಂಚುತ್ತ ಅವರೊಡನೆ ಆಡುತ್ತಾ ಕಾಲ ಕಳೆಯುತ್ತಿದ್ದ. ಹೀಗೇ ಒಂದು ದಿನ ತನ್ನ ಆಟದ ಕಾಯಕದಲ್ಲಿ ಅವನು ತೊಡಗಿರುವಾಗ ಇನ್ನೊಬ್ಬ ಝೆನ್ ಗುರು ಅಲ್ಲಿಗೆ ಬಂದ. […]

ದೊರೆಯ ಗರ್ವ ಕಳೆದ ಫಕೀರ

ದರ್ಬಾರಿನ ನಡುವೆ ಪ್ರವೇಶಿಸಿದ ಫಕೀರನನ್ನು ಕಂಡು ಇಬ್ರಾಹೀಮನ ಹುಬ್ಬು ಮೇಲೇರಿತು. ಅವನು ನೋಡನೋಡುತ್ತಿದ್ದಂತೆಯೇ ಫಕೀರ ಅರಮೆನಯ ಒಂದು ಮೂಲೆಯಲ್ಲಿ ತನ್ನ ಚಾಪೆ ಬಿಡಿಸಿ ಹಾಸತೊಡಗಿದ…..