ರಾವಣನು ಲಕ್ಷ್ಮಣನಿಗೆ ಬೋಧಿಸಿದ 5 ಸಂಗತಿಗಳು

ಲಂಕೆಯಲ್ಲಿ ಮಹಾಯುದ್ಧ ನಡೆದು ರಾವಣ ರಾಮಬಾಣಕ್ಕೆ ತುತ್ತಾಗಿ ಧರೆಗುರುಳಿದ. ಅವನು ಇನ್ನೂ ಮರಣಶಯ್ಯೆಯಲ್ಲಿರುವಾಗ ರಾಮ, “ಲಕ್ಷ್ಮಣಾ, ರಾವಣ ಮಹಾ ಪಂಡಿತ. ಅಧ್ಯಯನ ಮತ್ತು ಅನುಭವದಿಂದ ಅಪಾರ ಜ್ಞಾನ ಗಳಿಸಿದ್ದಾನೆ. ಅವನ ಬಳಿ ಹೋಗಿ, ಅವನ ಅಂತಿಮ ಬೋಧನೆಗಳನ್ನು ಪಡೆದು ಬಾ” ಅನ್ನುತ್ತಾನೆ. ಅದರಂತೆ ಲಕ್ಷ್ಮಣ ರಾವಣನ ಪಾದದ ಬಳಿ ನಿಂತು, ರಾವಣನ ಬೋಧನೆಗಳನ್ನು ಆಲಿಸಿ, ಹೃದ್ಗತ ಮಾಡಿಕೊಳ್ಳುತ್ತಾನೆ. ಹೀಗೆ ಲಕ್ಷ್ಮಣನು ರಾವಣನಿಂದ ಪಡೆದ 5 ಬೋಧನೆಗಳು ಇಲ್ಲಿವೆ. ಶುಭಸ್ಯ ಶೀಘ್ರಂ ದೃಢತೆ ಮುಖ್ಯ ಯಾವ ಶತ್ರುವೂ ದುರ್ಬಲನಲ್ಲ […]

ಸ್ಟೀವ್ ಜಾಬ್ಸ್ ಹೇಳಿದ್ದು : ಅರಳಿಮರ POSTER

“ಎಲ್ಲರನ್ನೂ ಖುಷಿ ಪಡಿಸಬೇಕು ಅನ್ನುವ ಯೋಚನೆ ನಿಮ್ಮದಾಗಿದ್ದರೆ, ನಾಯಕರಾಗುವ ಕನಸು ಬಿಟ್ಟುಬಿಡಿ; ಐಸ್ ಕ್ರೀಮ್ ವ್ಯಾಪಾರ ಶುರುಹಚ್ಚಿಕೊಳ್ಳಿ!!” ~ ಸ್ಟೀವ್ ಜಾಬ್ಸ್ ಯಾವಾಗಲೂ ಎಲ್ಲರನ್ನೂ ಖುಷಿ ಪಡಿಸಲು ಸಾಧ್ಯವಿಲ್ಲ. ನಾವೂ ಸೇರಿದಂತೆ ಪ್ರತಿಯೊಬ್ಬರೂ ಮತ್ತೊಬ್ಬರ ಮೇಲೆ ನಮ್ಮದೇ ನಿರೀಕ್ಷೆ ಇಟ್ಟುಕೊಂಡಿರುತ್ತೇವೆ. ಯಾವ ವ್ಯಕ್ತಿಯಿಂದಲೂ ತನ್ನ ಮೇಲಿನ ಎಲ್ಲ ನಿರೀಕ್ಷೆಗಳನ್ನು ಈಡೇರಿಸುವುದು ಸಾಧ್ಯವಿಲ್ಲ. “ಐಸ್ ಕ್ರೀಂ ಅಂಗಡಿಯಲ್ಲಿ ವಿವಿಧ ಗ್ರಾಹಕರಿಗಾಗಿ ವಿವಿಧ ಫ್ಲೇವರಿನ ಐಸ್ ಕ್ರೀಂ ಇಟ್ಟಿರುತ್ತಾರೆ. ಯಾರಿಗೆ ಯಾವುದು ಬೇಕೋ ಅದನ್ನು ಕೊಡುತ್ತಾರೆ. ಹಾಗೆ ನಾವು ಕೂಡಾ […]

ಪ್ರೀತಿಸಲ್ಪಡಲು ಬೇಕಾದ 10 ಮುಖ್ಯ ಲಕ್ಷಣಗಳು : ಬುದ್ಧ ಸಂದೇಶ

ಹಾಗೆ ನೋಡಿದರೆ, ಪ್ರೀತಿಸುವುದು ಸುಲಭ; ಪ್ರೀತಿಸಲ್ಪಡುವುದು ಬಹಳ ಕಷ್ಟ. ಸುತ್ತಮುತ್ತಲಿನ ಜನರಿಗೆ ಇಷ್ಟವಾಗುವಂಥ ವ್ಯಕ್ತಿತ್ವವನ್ನು ನಾವು ಬೆಳೆಸಿಕೊಳ್ಳಬೇಕಾಗುತ್ತದೆ. ಅದಕ್ಕೆ ಬುದ್ಧನ ಬೋಧನೆಗಳಿಂದ ಆಯ್ದು ತೆಗೆದ 10 ಟಿಪ್ಸ್ ಇಲ್ಲಿವೆ… ಸಂತಸವನ್ನೇ ವಿತರಿಸಿ ನಿಮ್ಮನ್ನು ಪ್ರೀತಿಸಿಕೊಳ್ಳಿ ಪ್ರತಿಕ್ರಿಯೆ ಬೇಡ, ಸ್ಪಂದಿಸಿ… ಆಲಿಸುವ ಗೌರವ ಮೆಚ್ಚುಗೆ ಸೂಚಿಸುವುದು ಅಪರಾಧೀಪ್ರಜ್ಞೆ ನೀವು ಏನಾಗಿದ್ದೀರಿ? ಒಡನಾಟವೆಂದರೆ… ಮನಸ್ಸೇ ವಂಚಿಸುವುದು ಈ ಮೂರು ಸಂಗತಿಗಳು…

ಬೆಳಗಿನಲ್ಲಿ ಶಿವ ಸ್ಮರಣೆ : ಪ್ರಾತಃಸ್ಮರಣ ಸ್ತೋತ್ರಗಳು

ಇಂದು ಮಹಾಶಿವರಾತ್ರಿ. ತನ್ನಿಮಿತ್ತ ಶ್ರೀ ಶಂಕರಾಚಾರ್ಯರು ರಚಿಸಿದ ಪ್ರಾತಃಸ್ಮರಣ ಶಿವ ಸ್ತೋತ್ರಗಳನ್ನು ಇಲ್ಲಿ ನೀಡಲಾಗಿದೆ. ಶಿವ ಸ್ಮರಣೆ ಸರ್ವರಿಗೂ ಮಂಗಳ ಉಂಟು ಮಾಡಲಿ…. *** ***  

ನೀವು ಕುಡಿಯುವ ನೀರಿನ ಧಾರೆ ಒಂದೇ ಆಗಿರಲಿ, ನಿಮ್ಮ ಆಹಾರದ ಭಾಗವೂ ಒಂದೇ ಆಗಿರಲಿ : ಅಥರ್ವ ವೇದ

ಪ್ರಕೃತಿಯೂ ಪಂಚಭೂತಗಳೂ ಎಲ್ಲ ಜೀವಿಗಳಿಗೆ ಸಮನಾಗಿ ಹಂಚಲ್ಪಟ್ಟಿವೆ. ಯಾವುದರ ಮೇಲೂ ಯಾರಿಗೂ ಹೆಚ್ಚಿನ ಅಥವಾ ಕಡಿಮೆ ಅಧಿಕಾರವಿಲ್ಲ. ಆದ್ದರಿಂದ ಮೇಲು – ಕೀಳೆಂಬ ತರತಮ ಭಾವವನ್ನು ಕಿತ್ತೊಗೆದು ಒಗ್ಗಟ್ಟಿನಿಂದ ಬಾಳಿ ಎನ್ನುತ್ತದೆ ಅಥರ್ವ ವೇದ.    ಸಮಾನೀ ಪ್ರಪಾ ಸಹ ವೋsನ್ನಭಾಗಃ ಸಮಾನೇ ಯೋಕ್ತ್ರೇ ಸಹ ವೋ ಯುನಜ್ಮಿ | ಸಮ್ಯಂಚೋsಗ್ನಿಂ ಸಪರ್ಯತಾರಾ ನಾಭಿಮಿವಾಭಿತಃ || (ಅಥರ್ವ.೩.೩೦.೬.) “ನೀವು ಕುಡಿಯುವ ನೀರಿನ ಧಾರೆ ಒಂದೇ ಆಗಿರಲಿ. ನಿಮ್ಮ ಆಹಾರದ ಭಾಗವೂ ಒಂದೇ ಆಗಿರಲಿ. ನೀವೆಲ್ಲರೂ ಒಂದೇ ಬಂಧನದಲ್ಲಿ ಬೆಸೆದುಕೊಂಡಿದ್ದೀರಿ […]

ಯಶಸ್ವೀ ಬದುಕಿಗೆ ಭಗವದ್ಗೀತೆ ಹೇಳುವ ಸ್ಥಿತಪ್ರಜ್ಞತೆಯ 7 ಲಕ್ಷಣಗಳು

ಸುಖ ಬಂದಾಗ ಹೆಚ್ಚು ಹಿಗ್ಗದೇ, ಮತ್ತು ದುಃಖ ಬಂದಾಗ ಕುಗ್ಗಿ ಕುಸಿಯದೇ ಮನಸ್ಸಿನ ಸಮತೋಲನವನ್ನು ಕಾಪಾಡಿಕೊಳ್ಳುವುದು ಸ್ಥಿತಪ್ರಜ್ಞನ ಲಕ್ಷಣ. ಈ ಸ್ಥಿತಪ್ರಜ್ಞತೆಯೇ ಯಶಸ್ವೀ ಬದುಕಿಗೆ ಮುನ್ನುಡಿ. ಶ್ರೀ ಕೃಷ್ಣನು ಭಗವದ್ಗೀತೆಯ ಎರಡನೇ ಅಧ್ಯಾಯದಲ್ಲಿ ಸ್ಥಿತಪ್ರಜ್ಞತೆಯ ಲಕ್ಷಣಗಳನ್ನು ವಿವರಿಸಿದ್ದು, ಅವು ಈ ದಿನಮಾನಕ್ಕೆ ಅತ್ಯಂತ ಪ್ರಸ್ತುತವಾಗಿದೆ.  ಸ್ಥಿತಪ್ರಜ್ಞಸ್ಯ ಕಾ ಭಾಷಾ ಸಮಾಧಿಸ್ಥಸ್ಯ ಕೇಶವ | ಸ್ಥಿತಧೀಃ ಕಿಂ ಪ್ರಭಾಷೇತ ಕಿಮಾಸೀತ ವ್ರಜೇತ ಕಿಮ್ || 2:54 || ಅರ್ಥ : ಕೇಶವ, ಸ್ಥಿತಪ್ರಜ್ಞನ ಲಕ್ಷಣಗಳೇನು ? ಅವನು ಹೇಗೆ […]

ಸೋಮಾರಿಗಳಿಗೆ ಗೆಲುವಿಲ್ಲ ~ ಸಾಮವೇದ : ಬೆಳಗಿನ ಹೊಳಹು

ಸೋಮಾರಿತನ ಮತ್ತು ಉಡಾಫೆ ಪ್ರವೃತ್ತಿಯವರಿಗೆ ಯಾವ ಕೆಲಸದಲ್ಲೂ ಗೆಲುವಾಗುವುದಿಲ್ಲ. ಮನುಷ್ಯಮಾತ್ರದವರಿರಲಿ, ದೇವತೆಗಳೂ ಇಂಥವರ ಮೇಲೆ ದಯೆ ತೋರುವುದಿಲ್ಲ.  ಮನುಷ್ಯ ಪ್ರಯತ್ನದಿಂದ ಸಾಧಿಸಲು ಸಾಧ್ಯವಾಗದೆ ಇರುವಂಥದ್ದು ಏನಿದೆ? ದೈವ ಬಲ, ಅದೃಷ್ಟ ಬಲಗಳೆಲ್ಲ ಇದ್ದರೂ ಮನುಷ್ಯ ತನ್ನ ಪ್ರಯತ್ನವನ್ನೂ ಜೊತೆಗೆ ಹಾಕದೆ ಹೋದರೆ ಅವನಿಗೆ ಗೆಲುವು ಸಿದ್ಧಿಸುವುದೇ? ಖಂಡಿತಾ ಇಲ್ಲ. ಸಾಮವೇದ ಹೇಳುತ್ತಿರುವುದೂ ಇದನ್ನೇ; “ಸೋಮಾರಿತನ ಮತ್ತು ಉಡಾಫೆ ಪ್ರವೃತ್ತಿಯವರಿಗೆ ಅದೃಷ್ಟವೂ ಒಲಿಯುವುದಿಲ್ಲ, ದೇವತೆಗಳೂ ಒಲಿಯುವುದಿಲ್ಲ” ಎಂದು. ಏನಾದರೊಂದು ಗುರಿಯನ್ನು ಎದುರಿಟ್ಟುಕೊಂಡರೆ, ಆ ನಿಟ್ಟಿನಲ್ಲಿ ಶ್ರದ್ಧೆಯಿಂದ ಕೆಲಸ ಮಾಡಬೇಕಾಗುತ್ತದೆ. […]

ಯುದ್ಧ ಮತ್ತು ಬದುಕು : ಭಗವದ್ಗೀತೆಯ 8 ಪಾಠಗಳು

ಬದುಕೇ ಒಂದು ಯುದ್ಧ. ಯುದ್ಧ ಪ್ರಕ್ರಿಯೆ ಕೂಡಾ ಬದುಕಿನ ಸವಾಲುಗಳಿಗಿಂತ ಬೇರೆಯಲ್ಲ. ಯುದ್ಧಕ್ಕೂ ಬದುಕಿಗೂ ಹೊಂದುವಂಥ ಬೋಧನೆಗಳನ್ನು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ನಮಗೆ ನೀಡಿದ್ದಾನೆ. ಅವುಗಳಲ್ಲಿ 8 ಮುಖ್ಯ ಹೇಳಿಕೆಗಳು ಇಲ್ಲಿವೆ… 1.ಯುದ್ಧವಿರಲಿ, ಬದುಕು… ನಮ್ಮ ಪ್ರಯತ್ನ ಪ್ರಾಮಾಣಿಕವಾಗಿರಬೇಕು. ದೇಶ – ಕಾಲ – ಸಮಯ – ಸಂದರ್ಭದ ಜೊತೆ ನಮ್ಮ ಪ್ರಯತ್ನಕ್ಕೆ ತಕ್ಕಂತೆ ಪ್ರತಿಫಲ ಅಗತ್ಯವಾಗಿ ದೊರೆಯುವುದು.  2. ನಾನು ಯುದ್ಧ ಮಾಡುವುದಿಲ್ಲವೆಂದು ಅರ್ಜುನ ತಲೆ ತಗ್ಗಿಸಿದಾಗ ‘ಹೇಡಿಯಂತಾಡಬೇಡ ಪಾರ್ಥ!” ಎಂದು ತಿವಿಯುತ್ತಾನೆ ಗೀತಾಚಾರ್ಯ. ಎಂಥದೇ ಸವಾಲು […]

ಕನ್’ಫ್ಯೂಶಿಯಸ್ ಹೇಳಿದ್ದು…. : ಅರಳಿಮರ POSTER

ನಮಗೆ ಬದುಕಲು ಒಂದೇ ಅವಕಾಶ ಇರುವುದು ಎಂಬುದು ಮನದಟ್ಟಾಗಿಬಿಟ್ಟರೆ, ಆ ಕ್ಷಣದಿಂದಲೇ ನಾವು ನಮ್ಮ ಬದುಕನ್ನು ಸುಂದರವಾಗಿಟ್ಟುಕೊಳ್ಳುವ ಪ್ರಯತ್ನ ಆರಂಭಿಸುತ್ತೇವೆ, ಹೊಸತಾಗಿ ಬದುಕಲು ತೊಡಗುತ್ತೇವೆ – ಅನ್ನುವುದು ಕನ್’ಫ್ಯೂಶಿಯಸ್ ಮಾತಿನ ಅರ್ಥ ~ ‘ಲಾ   ಬದುಕು ಮನುಷ್ಯ ಜೀವಿಗಳಿಗೆ ಮಾತ್ರ ಇರುವಂಥದ್ದು. ಉಳಿದೆಲ್ಲ ಜೀವಿಗಳು ಹುಟ್ಟು – ಸಾವಿನ ನಡುವೆ ಆಹಾರ, ಸಂಭೋಗ ಮತ್ತು ನಿದ್ರೆಗಳ ಚಕ್ರದಲ್ಲಿ ಸುತ್ತುತ್ತಾ ಇರುತ್ತವೆ. ಮನುಷ್ಯರ ಜೀವನ ಚಕ್ರದಲ್ಲಿ ಧರ್ಮ, ದುಡಿಮೆ, ಕಾಮ ಮತ್ತು ಮುಕ್ತಿಯ ಹೆಚ್ಚುವರಿ ಉದ್ದೇಶಗಳೂ ಇರುವುದರಿಂದ […]