ಗೆಳೆತನವೊಂದು ‘ಸಕಲ ಸಂಬಂಧ’

ಉಳಿದೆಲ್ಲ ಸಂಬಂಧಗಳೂ ಒಂದು ಕಾರಣದ ಎಳೆಯನ್ನು ಹೊತ್ತುಕೊಂಡೇ ಇರುತ್ತವೆಯಾದರೆ, ಗೆಳೆತನ ಅಕಾರಣವಾಗಿ ಘಟಿಸುತ್ತದೆ ಮತ್ತು ಜೊತೆಗಿರುತ್ತದೆ. ಮತ್ತು ಉಳಿದೆಲ್ಲ ಸಂಬಂಧಗಳೂ ಗೆಳೆತನವನ್ನು ಒಳಗೊಂಡಿದ್ದರಷ್ಟೆ ಅವು ಪರಿಪೂರ್ಣವೆನ್ನಿಸುತ್ತವೆ!  ~ ಗಾಯತ್ರಿ  ಸಂಬಂಧಗಳಲ್ಲಿ ಅತ್ಯಂತ ಶ್ರೇಷ್ಟವಾದ ಬಾಂಧವ್ಯವೆಂದರೆ, ಅದು ಗೆಳೆತನ. ಕಾಲಾಂತರದಲ್ಲಿ ಮಾನವನ ಧಾವಂತ, ಸ್ಪರ್ಧೆ ಹಾಗೂ `ಬಲಶಾಲಿಗಷ್ಟೆ ಬದುಕು’ ಅನ್ನುವಂಥ ಚಿಂತನೆಗಳಿಂದ ಗೆಳೆತನದ ಹೆಸರು ಅಷ್ಟಿಷ್ಟು ದುರುಪಯೋಗವಾಗಿದೆ ಅನ್ನುವುದನ್ನು ಅಲ್ಲಗಳೆಯಲಾಗದು. ಆದರೂ ಈತನಕ ಜಗತ್ತಿನಲ್ಲಿ ಸೌಹಾರ್ದ ನೆಲೆಯಾಗಿದೆ ಎಂದರೆ ಅದಕ್ಕೆ ಕಾರಣ ಈ ಕಾರಣ ಬಾಂಧವ್ಯವೇ. ಯಾವುದೇ ಸಂಬಂಧದಲ್ಲಿ ಇಬ್ಬರು […]

ಅಂತಿಮ ಗುರಿ ಇರದವನು… : ಇಕ್ಯೂ ಹಾಯ್ಕು, ಓಶೋ ವಿವರಣೆ

ಇಕ್ಯೂ ತನ್ನನ್ನು “ಯಾವ ಅಂತಿಮ ಗುರಿ ಇರದವನು, ಯಾವ ಮೌಲ್ಯವೂ ಇರದವನು” ಎಂದು ಹೇಳಿಕೊಂಡಿದ್ದಾನೆ. ಗುರಿಯೂ ಇಲ್ಲದ, ಮೌಲ್ಯವೂ ಇಲ್ಲದ ಬದುಕನ್ನು ನಿರುಮ್ಮಳವಾಗಿ ಅನುಭವಿಸಬಹುದು. ಇದರಿಂದ ಲಾಭವೇನು ಎಂದು ತಲೆ ಕೆಡಿಸಿಕೊಳ್ಳಬೇಕಿಲ್ಲ. ಇದರ ಪಾಪ ಪುಣ್ಯಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಬದುಕನ್ನು ಲೀಲಾಮಾತ್ರವಾಗಿ ಅನುಭವಿಸಬೇಕು   ಕಾಲಗಟ್ಟಲೆ ಮೊದಲು ನಾನು ಪ್ರಕೃತಿಯಲ್ಲಿ ಇಲ್ಲವಾದವನು: ಯಾವ ಅಂತಿಮ ಗುರಿ ಇರದವನು ಯಾವ ಮೌಲ್ಯವೂ ಇರದವನು ~ ಇಕ್ಯೂ Myself of long ago, In nature Nonexistent: No final destination, […]

ಸಹಜೀವಿಗಳಿಗೆ ನೀರುಣಿಸಿ… ಇದು ಬೇಸಿಗೆಯ ಧರ್ಮ!

ಬೇಸಿಗೆ ಕಾಲಿಟ್ಟಿದೆ. ಇವು ನಡುನೆತ್ತಿಯ ಸುಡುಬಿಸಿಲಿನ ದಿನಗಳು. ದೇಹದ ಸಂಕಟ ಉಕ್ಕಿ ಬೆವರಾಗಿ ಹರಿದು ಬಳಲಿಸುತ್ತದೆ. ಇಂಥಾ ದಿನಗಳಲ್ಲಿ ನಾವು ನಮ್ಮ ಮನುಷ್ಯತ್ವದ ಖಾತೆಯಲ್ಲಿ ಹಿತಾನುಭವ ಸಂಚಯ ಮಾಡಿಕೊಳ್ಳುವುದು ಹೇಗೆ? ಬೇಸಿಗೆಯ ಧರ್ಮವನ್ನು ಅನುಸರಿಸುವ ಮೂಲಕ ಇದನ್ನು ಸಾಧಿಸಬಹುದು ~ ಗಾಯತ್ರಿ ಬೇಸಿಗೆ ದಾಳಿಯಿಟ್ಟಿದೆ. ಗಂಟಲೊಣಗಿ ದರಗಾಗುವ ಕಾಲವಿದು. ಮನುಷ್ಯರಿಗಾದರೂ ಎಲ್ಲಿಂದಲಾದರೂ ಹನಿ ನೀರು ಹೊಂಚಿಸಿಕೊಂಡು ಜೀವ ಉಳಿಸಿಕೊಳ್ಳುವ ಅವಕಾಶವುಂಟು. ಆದರೆ ಪ್ರಾಣಿ ಪಕ್ಷಿಗಳಿಗೆ? ಪ್ರತಿ ಬೇಸಿಗೆಯಲ್ಲಿ ಸಾವಿರಕ್ಕೂ ಮೀರಿ ಪಕ್ಷಿಗಳು ದಾಹದಿಂದ ಸಾವಪ್ಪುತ್ತವೆಯಂತೆ. ಮೊದಲಾದರೆ ಕಂಡಲ್ಲಿ […]

ನಿಮ್ಮ ಆಯ್ಕೆಯ ಬಣ್ಣ ಯಾವುದು ತಿಳಿಸಿ… ನಿಮ್ಮ ಗುಣವನ್ನು ಹೇಳುತ್ತೇವೆ!!

ಕೆಲವರಿಗೆ ಕೆಲವು ಬಣ್ಣ ಇಷ್ಟವಾಗುವುದೇ ಇಲ್ಲ. ಮತ್ತೆ ಕೆಲವರಿಗೆ ಕೆಲವು ಬಣ್ಣಗಳು ಬಹಳ ಇಷ್ಟ. ಹಲವು ಬಣ್ಣಗಳು ನಮಗೆ ಖುಷಿ ಕೊಟ್ಟರೂ ‘ನಮ್ಮ ಮೊದಲ ಮತ್ತು ಕೊನೆಯ ಆಯ್ಕೆ’ ಎಂಬುದೊಂದು ಇದ್ದೇ ಇರುತ್ತದೆ. ವಿಶೇಷವಾಗಿ ಹೆಣ್ಣುಮಕ್ಕಳು ತಮ್ಮ ಕ್ಲೋಸೆಟ್ ತೆಗೆದು ನೋಡಿದರೆ, ತಮಗೇ ಅರಿವಿಲ್ಲದಂತೆ ತಮಗಿಷ್ಟದ ಬಣ್ಣದ ಬಟ್ಟೆಗಳೇ ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ನೋಡಬಹುದು. ನಮಗೆ ನಿರ್ದಿಷ್ಟ ಬಣ್ಣವು ಇಷ್ಟವಾಗಲು ಕಾರಣವೇನು? ನಮ್ಮ ಬಣ್ಣದ ಆಯ್ಕೆ ನಮ್ಮ ಯಾವ ಗುಣವನ್ನು ತೋರುತ್ತದೆ? ಇಲ್ಲಿದೆ, ಭಾವಕ್ಕೆ ತಕ್ಕಂತೆ ಬಣ್ಣಗಳ ಚುಟುಕು […]

ನೀವೂ ಗುಡಾಕೇಶರಾಗಿ! : ನೆಮ್ಮದಿಯ ನಿದ್ರಿಗೆ ಈ 5 ಸೂತ್ರಗಳನ್ನು ಅನುಸರಿಸಿ…

ನಾವು ತೀರಾ ನಿದ್ರೆಯನ್ನು ಹೀಗೆ ನಿಯಂತ್ರಿಸಲಾಗದೆ ಇದ್ದರೂ, ಕೊನೆ ಪಕ್ಷ ರಾತ್ರಿಗಳಲ್ಲಿ ಸುಖನಿದ್ರೆಯನ್ನು ಹೊಂದುವ ಪ್ರಯತ್ನ ಮಾಡಬಹುದು, ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಈ 5 ಉಪಾಯಗಳನ್ನು ಅನುಸರಿಸಿ ನೋಡಿ. ಜೀವ ಕೋಟಿಗಳಲ್ಲಿ ನಿದ್ರೆಗೆ ಪರದಾಡುವುದು ಮನುಷ್ಯ ಜೀವಿ ಮಾತ್ರ. ಇದನ್ನು ಮನುಷ್ಯರ ‘ಆಲೋಚಿಸುವ ಸಾಮರ್ಥ್ಯ’ದ ಸೈಡ್ ಎಫೆಕ್ಟ್ ಅನ್ನಲಡ್ಡಿಯಿಲ್ಲ. ಕೆಲವರು ಎಲ್ಲೆಂದರಲ್ಲಿ ಕಣ್ಮುಚ್ಚಿದ ಕೂಡಲೇ ನಿದ್ರೆಗೆ ಜಾರಿದರೆ, ನಿದ್ರೆಗಾಗಿ ನಾನಾ ಬಗೆಯ ಕಸರತ್ತುಗಳನ್ನೂ ಔಷಧಗಳನ್ನೂ ಮಾಡಿ ದಣಿಯುವವರ ಸಂಖ್ಯೆ ಬಹಳವಿದೆ. ವಾಸ್ತವದಲ್ಲಿ ನಿದ್ರೆಗೂ ಮನಸ್ಸಿಗೂ ನೇರ ಸಂಬಂಧವಿದೆ. […]

Facebookನಲ್ಲಿ ಯಾರಾದರೂ tag ಮಾಡಿದರೆ ನಮಗೆ ಕೋಪವೇಕೆ ಬರುತ್ತದೆ?

ನಮಗೆ ಸಣ್ಣ ವಿಷಯಗಳಲ್ಲಿ ಆಸಕ್ತಿ ಕಡಿಮೆ. ಹಾಗೆ ನೋಟಿಫಿಕೇಶನ್ ಅನ್ನು ಟರ್ನ್ ಆಫ್ ಮಾಡುವುದು ನಮ್ಮ ಅಹಂಕಾರವನ್ನು ತೃಪ್ತಿ ಪಡಿಸುವುದಿಲ್ಲ. ಅಂತಹ ಆಯ್ಕೆಗಳಿದ್ದೂ ಅವನ್ನು ಬಳಸದೆ ಎಲ್ಲರಿಗೂ ಕಾಣಿಸುವಂತೆ ಬೈಯುವುದೇ ನಮಗೆ ಸುಖ! ~ ಅಲಾವಿಕಾ ಫೇಸ್ ಬುಕ್’ನಲ್ಲಿ ನಾವು ಸಾಮಾನ್ಯವಾಗಿ ಇದನ್ನು ನೋಡಿರುತ್ತೇವೆ. ಕೆಲವರು ಮೇಲಿಂದ ಮೇಲೆ “ಯಾರೂ ನನ್ನನ್ನು ಟ್ಯಾಗ್ ಮಾಡಬೇಡಿ” ಎಂದೋ “ದಯವಿಟ್ಟು ಟ್ಯಾಗ್ ಮಾಡಬೇಡಿ” ಎಂದೋ; ತೀರಾ ರೊಚ್ಚಿಗೆದ್ದು ಕೆಲವರು “ಇನ್ನೊಂದ್ಸಲ ಟ್ಯಾಗ್ ಮಾಡಿದರೆ ಹುಡುಕಿಕೊಂಡು ಬಂದು ಹೊಡಿತೀನಿ” ಎಂದೋ ಪೋಸ್ಟ್ […]

ಕನ್’ಫ್ಯೂಶಿಯಸ್ ಹೇಳಿದ್ದು…. : ಅರಳಿಮರ POSTER

ನಮಗೆ ಬದುಕಲು ಒಂದೇ ಅವಕಾಶ ಇರುವುದು ಎಂಬುದು ಮನದಟ್ಟಾಗಿಬಿಟ್ಟರೆ, ಆ ಕ್ಷಣದಿಂದಲೇ ನಾವು ನಮ್ಮ ಬದುಕನ್ನು ಸುಂದರವಾಗಿಟ್ಟುಕೊಳ್ಳುವ ಪ್ರಯತ್ನ ಆರಂಭಿಸುತ್ತೇವೆ, ಹೊಸತಾಗಿ ಬದುಕಲು ತೊಡಗುತ್ತೇವೆ – ಅನ್ನುವುದು ಕನ್’ಫ್ಯೂಶಿಯಸ್ ಮಾತಿನ ಅರ್ಥ ~ ‘ಲಾ   ಬದುಕು ಮನುಷ್ಯ ಜೀವಿಗಳಿಗೆ ಮಾತ್ರ ಇರುವಂಥದ್ದು. ಉಳಿದೆಲ್ಲ ಜೀವಿಗಳು ಹುಟ್ಟು – ಸಾವಿನ ನಡುವೆ ಆಹಾರ, ಸಂಭೋಗ ಮತ್ತು ನಿದ್ರೆಗಳ ಚಕ್ರದಲ್ಲಿ ಸುತ್ತುತ್ತಾ ಇರುತ್ತವೆ. ಮನುಷ್ಯರ ಜೀವನ ಚಕ್ರದಲ್ಲಿ ಧರ್ಮ, ದುಡಿಮೆ, ಕಾಮ ಮತ್ತು ಮುಕ್ತಿಯ ಹೆಚ್ಚುವರಿ ಉದ್ದೇಶಗಳೂ ಇರುವುದರಿಂದ […]

ನಾರ್ಸಿಸಿಸ್ಟ್ ಪ್ರೇಮಿಯನ್ನು ಗುರುತಿಸುವುದು ಹೇಗೆ?

ನೀವು ಒಬ್ಬ/ಳು ಪ್ರೇಮಿಯಾಗಿದ್ದು, ನಿಮ್ಮಲ್ಲಿ ನಾರ್ಸಿಸಿಸ್ಟ್ ಗುಣವಿದ್ದರೆ, ನಿಮ್ಮ ಪ್ರೇಮ ಯಾವತ್ತೂ ಸಫಲವಾಗುವುದಿಲ್ಲ. ಏಕೆಂದರೆ ಪ್ರೇಮವು ಪರಸ್ಪರ ಪೂರಕವಾದ ಪ್ರಕ್ರಿಯೆ. ಅಲ್ಲಿ ನೀವು ನಿಮ್ಮ ಕುರಿತು ಕಡಿಮೆ ಮತ್ತು ಪ್ರೇಮಿಯ ಕುರಿತು ಹೆಚ್ಚು ಯೋಚಿಸಬೇಕಾಗುತ್ತದೆ. ನಿಮ್ಮಲ್ಲಿ ಈ ಕೆಳಗಿನ ಸಂಭಾಷಣೆಯಲ್ಲಿ ಕಾಣಿಸುವಂಥ ಆಲೋಚನೆ ಅಥವಾ ಅಸಹನೆ ಇರುವುದೇ ಆದರೆ, ನೀವು ನಾರ್ಸಿಸಿಸ್ಟ್ ಆಗಿದ್ದೀರಿ ಎಂದರ್ಥ ~ ಅಲಾವಿಕಾ ಈ ಸಂಭಾಷಣೆಯನ್ನು ಗಮನಿಸಿ. ಪ್ರೇಮಿಗಳಿಬ್ಬರು ಮಾತಾಡುತ್ತಾ ಕುಳಿತಿರುತ್ತಾರೆ. ಅವಳ ಫೋನ್’ಗೆ ಅವಳ ಅಮ್ಮನ ಕರೆ ಬರುತ್ತದೆ. ಅವನು : […]

ರಿಚರ್ಡ್ ಮೊರಿಸ್ ಹೇಳಿದ್ದು… : ಅರಳಿಮರ Poster

ಮೌಲ್ಯಗಳನ್ನು ಕೇವಲ ಬಾಯಿಪಾಠ ಮಾಡಿದರೆ ಸಾಲದು. ಅವುಗಳ ಪದಶಃ ಅರ್ಥ ತಿಳಿದುಕೊಂಡರೂ ಹೆಚ್ಚಿನ ಪ್ರಯೋಜನವೇನಿಲ್ಲ. ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರಷ್ಟೆ ಅವುಗಳಿಗೆ ನ್ಯಾಯ ಸಲ್ಲಿಸಿದಂತೆ.  ಮತ್ತು, ಈ ಮೌಲ್ಯಗಳು ವಿಚಾರಪೂರ್ಣವಾಗಿರುವುದು ಅತ್ಯಗತ್ಯ. ತಲೆಬುಡವಿಲ್ಲದ, ಕೇವಲ ಸಾಂಪ್ರದಾಯಿಕ ಅಥವಾ ರೂಢಿಗತವಾದ ಮಾತ್ರಕ್ಕೆ ಮೌಲ್ಯಗಳು ಅರ್ಥಪಡೆಯುವುದಿಲ್ಲ. ಇಂಥಾ ಅರ್ಥಹೀನ ಮೌಲ್ಯಗಳನ್ನು ಅನುಸರಿಸುವುದು ಅಂಧಶ್ರದ್ಧೆಯಾಗುತ್ತದೆ. ನಮ್ಮ ಬುದ್ಧಿಗುರುಡುತನವಾಗುತ್ತದೆ.  ಹಾಗೆಯೇ ಮೌಲ್ಯಗಳಲ್ಲಿ ಭಾವನೆ ಇರಬೇಕು. ಅವು ನಮ್ಮ ಅಂತಃಕರಣಕ್ಕೆ ತಾಕುವಂತಿರಬೇಕು. ಕೇವಲ ಕರ್ಮಠತನ ಮೌಲ್ಯಗಳಿಗೆ ಬಲ ತುಂಬಲಾರವು. ಅಲ್ಲಿ ಭಾವನೆಯೂ ಇದ್ದರಷ್ಟೆ ಅವು ಸಬಲ. […]

ಕುರಾನ್ ಹೇಳುತ್ತದೆ…. : ಅರಳಿಮರ Poster

ಮೂಲತಃ ಧರ್ಮಗಳು ಬೋಧಿಸುವುದು ಬದುಕನ್ನು. ಮತ್ತು ಬದುಕು ಸಾಮರಸ್ಯದ ಮೊತ್ತ. ಹಾಗೆಯೇ ಕುರಾನ್ ಕೂಡಾ  “ನಿಮಗೆ ನಿಮ್ಮ ಧರ್ಮ, ನನಗೆ ನನ್ನ ಧರ್ಮ (109.6)” ಎನ್ನುವ ಮೂಲಕ  ಸಹಿಷ್ಣುತೆಯನ್ನು, ಸಾಮರಸ್ಯವನ್ನು ಬೋಧಿಸಿದೆ.  “ಪ್ರತಿಯೊಬ್ಬನಿಗೂ ಒಂದು ನಿಯ, ಮತ್ತು ಮಾರ್ಗ ನೀಡಲಾಗಿದೆ. ದೇವರು ಇಷ್ಟಪಟ್ಟಿದ್ದರೆ ನಿಮ್ಮೆಲ್ಲರನ್ನೂ ಒಂದೇ ರೀತಿಯವರನ್ನಾಗಿ (ಒಂದೇ ಮಾರ್ಗಾವಲಂಬಿಗಳನ್ನಾಗಿ) ಮಾಡಬಹುದಿತ್ತು. ಆದರೆ ಅವನು ಬೇರೆ ರೀತಿಯಾಗಿಯೇ ಮಾಡಿರುವನು. ನಿಮಗೆ ಪ್ರತ್ಯೇಕವಾಗಿ ಯಾವುದನ್ನು ನೀಡಲಾಗಿದೆಯೋ ಅದೇ ಮಾರ್ಗದಲ್ಲಿಯೇ ನೀವು ಸತ್ಕಾರ್ಯದಲ್ಲಿ ಮುಂದುವರಿಯಬೇಕೆಂಬುದು ಅವನ ಇಚ್ಛೆ. ನೀವು ಭಗವಂತನೆಡೆಗೆ […]