ಸಂಬಂಧವೆಂಬ ನದಿಯ ಬಿಂಬ : ಅಧ್ಯಾತ್ಮ ಡೈರಿ

ಯಾವುದೇ ಸಂಬಂಧ ಅದೆಷ್ಟು ಆಪ್ತವಾಗಿದ್ದರೂ; ಅದು ನೆನೆಯದ, ಮುಳುಗದ, ಜೊತೆ ಹರಿಯದ ಬಿಂಬ ಮಾತ್ರ ಅನ್ನುವುದನ್ನು ಒಪ್ಪಿಕೊಳ್ಳಬೇಕು ~ ಅಲಾವಿಕಾ ನದಿಯೊಳಗೆ ತೇಲುವ ಬಿಂಬ ಹರಿಯುವುದಿಲ್ಲ ಜೊತೆಗೆ. ಸಂಬಂಧಗಳು ಬಿಂಬದ ಹಾಗೆ. ಒಂದು ವ್ಯಕ್ತಿ ನದಿಯಾದರೆ, ಮತ್ತೊಂದು ವ್ಯಕ್ತಿ ದಡ ಅಥವಾ ಆಕಾಶದಲ್ಲಿರುವ ವಸ್ತು. ಒಮ್ಮೆ ಒಬ್ಬರ ಪಾಲಿಗೆ ನದಿಯಾದವರು ಮತ್ತೊಮ್ಮೆ ಮತ್ತೊಬ್ಬರ ಪಾಲಿಗೆ ವಸ್ತುವಾಗಬಹುದು. ಹೀಗೆ ಪ್ರತಿಯೊಬ್ಬರೂ ನದಿಯೂ ವಸ್ತುವೂ ಆಗುತ್ತ ಬಿಂಬ ಬೆಸೆಯುವರು. ಅಂದರೆ, ಸಂಬಂಧ ಹೊಸೆಯುವರು. ನದಿಯ ಹರಿವಿನೆದೆ ಮೇಲೆ ಬಿಂಬ ಮೂಡುತ್ತದೆ. […]

ಅಧ್ಯಾತ್ಮ ಡೈರಿ : ಖಾಲಿಯೂ ಒಂದು ಇರುವಿಕೆ !

ಯಾವುದೇ ವಸ್ತುವನ್ನು ಹಿಡಿದಿಟ್ಟುಕೊಳ್ಳಲೊಂದು ಖಾಲಿ ‘ಇರಬೇಕು’. ಅನಸ್ತಿತ್ವವೇ ‘ಅಸ್ತಿ’ – `ಇದೆ’ ಎಂದಾಗಬೇಕು. ಈ ಅನಸ್ತಿತ್ವದ ಅಸ್ತಿತ್ವವೇ ಅತ್ಯುಪಯುಕ್ತ, ಇದೇ ಸೃಷ್ಟಿ ಸಾಧ್ಯತೆಯ ಅನಂತ ದಿಬ್ಬ ~ ಅಲಾವಿಕಾ ಮೂವತ್ತು ಅರೆಗಳಿದ್ದರೂ ಚಕ್ರವನ್ನ ಹಿಡಿದಿಡೋದು ಅವನ್ನು ಒಗ್ಗೂಡಿಸುವ ರಂಧ್ರ. ಕುಂಬಾರ ಮಣ್ಣು ತುಳಿತುಳಿದು ಚೆಂದದ ಮಡಿಕೆ ಮಾಡಿದರೂ ಉಪಯೋಗಕ್ಕೆ ಬರೋದು ಆಕಾರವಲ್ಲ, ಅದರೊಳಗಿನ ಖಾಲಿ. ಬಾಗಿಲಿಲ್ಲದೆ ಕೋಣೆಯೊಳಕ್ಕೆ ಬರಲಾಗದು, ಕಿಟಕಿಗಳಿಲ್ಲದೆ ಕೋಣೆಯೊಳಕ್ಕೆ ಬರಿ ಕತ್ತಲು. ಅನಸ್ತಿತ್ವ ನಿಜಕ್ಕೂ ಬಹೂಪಯೋಗಿಯಾಗಿರುವುದು  ~ ಅನ್ನುತ್ತಾನೆ ತತ್ತ್ವಜ್ಞಾನಿ ಲಾವೋತ್ಸು ತನ್ನ `ತಾವೋ ತೆ […]

ದಾದೂ ದಯಾಲ್ ಹೇಳಿದ್ದು : ಅರಳಿಮರ POSTER

ಇಸ್ಕ್ ಅಲಾ ಕೀ ಜಾತ್ ಹೈ ಇಸ್ಕ್ ಅಲಾ ಕಾ ಅಂಗ್ | ಇಸ್ಕ್ ಅಲಾ ಕಾ ವಜೂದ್ ಹೈ ಇಸ್ಕ್ ಅಲಾ ಕ ರಂಗ್ || ~ ಸಂತ ದಾದೂ ದಯಾಲ್ ಸಂತ ದಾದೂ ದಯಾಲರನ್ನು ಭೇಟಿ ಮಾಡಿದ ಅಕ್ಬರ್, ಭಗವಂತನ ಜಾತಿ, ಅಂಗ, ಬಣ್ಣ, ಚಹರೆಗಳೇನೆಂದು ಕೇಳುತ್ತಾನೆ. ಆಗ ದಾದೂ ಕೊಟ್ಟ ಉತ್ತರ ಇದು; “ಭಗವಂತನ (ಅಲ್ಲಾ) ಜಾತಿ, ಅಂಗ, ಬಣ್ಣ, ಚಹರೆಗಳೆಲ್ಲವೂ ಒಂದೇ. ಅದು, ಪ್ರೇಮ” ಎಂದು!

ಮನಸಿನಂತೆ ಮಹಾದೇವ : ಒಂದು Fun test

ನಿಮ್ಮ ನೋಟವನ್ನು ಕಂಡುಕೊಳ್ಳುವ ಎರಡು fun testಗಳನ್ನು ಇಲ್ಲಿ ನೀಡುತ್ತಿದ್ದೇವೆ. ಚಿತ್ರಗಳನ್ನು ಗಮನಿಸಿ. ನೋಡಿದ ಕೂಡಲೇ ಮೊದಲು ಏನು ಕಂಡಿತೋ ಅದನ್ನು ಮಾತ್ರ ಪರಿಗಣಿಸಿ. ಅದರ ವಿಶ್ಲೇಷಣೆಯನ್ನು ಓದಿಕೊಳ್ಳಿ. ನಿಮ್ಮ ಅಂತರಂಗದೊಳಗೆ ಹಣಕುವ ಚಿಕ್ಕ ಮನರಂಜನೆ ಇದು. “ನೋಡು, ಅದು ಕಾಣುತ್ತದೆ” ಅನ್ನುತ್ತಾನೆ ಪ್ರಾಚೀನ ಗ್ರೀಕ್ ತತ್ತ್ವಜ್ಞಾನಿ ಸಫೋಕ್ಲಿಸ್. ಯಾವುದು ಕಾಣುತ್ತದೆ? ನಾವೇನು ನೋಡುತ್ತಿದ್ದೇವೋ ಅದು! ನಾವೇನು ನೋಡುತ್ತೇವೆ? ನಾವು ಏನನ್ನು ನೋಡಲು ಬಯಸುತ್ತಿದ್ದೇವೋ ಅದನ್ನೇ! “ಮನಸಿನಂತೆ ಮಹಾದೇವ” ಅನ್ನುತ್ತಾರಲ್ಲವೆ? ಹಾಗೆಯೇ ಇದೂ. ಯಾವ ವಸ್ತುವನ್ನೇ ನೋಡಿದರೂ […]

ಏಸು ಕ್ರಿಸ್ತ ಹೇಳಿದ್ದು : ಅರಳಿಮರ POSTER

ದೈನ್ಯ ತೋರುವುದು ಎಂದರೆ ಅಹಂಕಾರ ತೋರದಿರುವವರು ಎಂದು. ತಮ್ಮ ಅಸ್ತಿತ್ವ, ಸಾಧನೆ, ಸಂಪತ್ತೆಲ್ಲವೂ ಭಗವಂತನ ದೇಣಿಗೆ ಎಂಬ ಅರಿವು ಹೊಂದಿದವರು. ಅಂಥವರೇ ಧನ್ಯರು. ದೇವರು ಅಂಥವರನ್ನು ಪುರಸ್ಕರಿಸುತ್ತಾನೆ. ತಮ್ಮ ತಪ್ಪುಗಳಿಗಾಗಿ ಪಶ್ಚಾತ್ತಾಪದಿಂದ ದುಃಖಿಸುವವರು ಧನ್ಯರು. ಅವರಿಗೆ ಸಮಾಧಾನ ದೊರೆಯುತ್ತದೆ. ಸಮಾಧಾನ ಹೊಂದಿದವರು ಜೀವನದ ಇತರ ಸಂಗತಿಗಳನ್ನು ಸರಾಗವಾಗುತ್ತದೆ. ವಿನಯವಂತರು ಧನ್ಯರು. ಅವರಿಗೆ ಎಲ್ಲೆಡೆ ಮನ್ನಣೆ ದೊರೆಯುತ್ತದೆ. ಎಲ್ಲರೂ ಅವರನ್ನು ಪ್ರೀತಿಸುತ್ತಾರೆ. ಈ ಅರ್ಥದಲ್ಲಿ ಭೂಮಿ ಅವರದಾಗುತ್ತದೆ. 

ಸಾದಿ ಹೇಳಿದ್ದು… : ಅರಳಿಮರ POSTER

ಪಂಡಿತರೊಡನೆ ವಾಗ್ವಾದಕ್ಕಿಳಿದು ನಿಮ್ಮ ಬುದ್ಧಿವಂತಿಕೆಯ ಪ್ರದರ್ಶನ ಮಾಡುತ್ತಿದ್ದೇವೆ ಅಂದುಕೊಳ್ಳಬೇಡಿ. ವಾಸ್ತವದಲ್ಲಿ ಅವರು ನಿಮ್ಮ ಮೌಢ್ಯಕ್ಕೆ ಮರುಕ ಪಡುತ್ತಿರುತ್ತಾರೆ. ~ ಸಾದಿ ಶಿರಾಜಿ | ಸೂಫಿ ಕವಿ