ಆಯ್ಕೆಯಲ್ಲಿ ಎಚ್ಚರವಿರಬೇಕು : ಅರಳಿಮರ POSTER

‘ನಮ್ಮ ಇರುವಿಕೆಯಂತೆ ಜಗತ್ತು ಇರುವುದು’ ಎನ್ನಲಾಗುತ್ತದೆ. ‘ಜಗತ್ತಿನಂತೆ ನಾವು ಇರುತ್ತೇವೆ’ ಎನ್ನುವುದು ಕೂಡ ಅಷ್ಟೇ ಸತ್ಯ. ಆದರೆ ಈ ಎರಡೂ ಹೇಳಿಕೆಯಲ್ಲಿ, ಮುಖ್ಯವಾಗುವುದು ನಮ್ಮ ಆಯ್ಕೆ. ನಾವು ಸಕಾರಾತ್ಮಕ ಚಿಂತನೆ ಹೊಂದಿದ್ದರೆ, ನಾವು ಧೀರರೂ ಸಹಿಷ್ಣುಗಳೂ ಆಗಿದ್ದರೆ, ನಮ್ಮ ಸುತ್ತಲಿನ ಜಗತ್ತು ಕೂಡಾ ಹಾಗೆಯೇ ಇರುತ್ತದೆ. ನಮ್ಮ ಸುತ್ತಲಿನ ಜನರು ನಮ್ಮ ಪ್ರಭಾವಕ್ಕೆ ಬಂದು, ತಾವೂ ಬದಲಾಗಿ, ‘ನಮ್ಮಂತೆ ಇರುವಿಕೆಯಂತೆ’ ಜಗತ್ತನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. ಅದಕ್ಕೆ ಬದಲಾಗಿ ನಾವು ದುರ್ಬಲರೂ  ಅರಿವುಗೇಡಿಗಳೂ ಆಗಿದ್ದರೆ, ಬಹಳ ಬೇಗ ಜಗತ್ತಿನ […]

ಪ್ರತಿದಿನವೂ ಉಡುಗೊರೆ : ಅರಳಿಮರ POSTER

“ನಿಮ್ಮ ಹಕ್ಕಿನಿಂದ ಈ ದಿನ ನಿಮಗೆ ದೊರೆತಿಲ್ಲ. ಇದು ನಿಮಗೆ ಕೊಡಲಾದ ಉಡುಗೊರೆ” ಕೆಲವೊಮ್ಮೆ ನಾವು ನಮ್ಮ ದಿನವನ್ನು ಅದೆಷ್ಟು ಉಡಾಫೆಯಾಗಿ ಕಳೆದುಬಿಡುತ್ತೇವೆ. ಈ ಇಪ್ಪತ್ನಾಲ್ಕು ಗಂಟೆಗಳು ನಮ್ಮ ಹಕ್ಕಿನವು, ನಾವು ಅದನ್ನು ಏನು ಬೇಕಾದರೂ ಮಾಡುತ್ತೇವೆ ಅನ್ನುವ ಧೋರಣೆ ನಮಗಿರುತ್ತದೆ. ಈ ಧೋರಣೆಯಿಂದ ನಮಗೆ ನಷ್ಟ ಮಾಡಿಕೊಳ್ಳುವುದು ಮಾತ್ರವಲ್ಲ, ಇತರರಿಗೂ ಹಾನಿಯಾಗುವ ಸಾಧ್ಯತೆ ಹೆಚ್ಚು.  ವಾಸ್ತವದಲ್ಲಿ ದಿನದ ಇಪ್ಪತ್ನಾಲ್ಕು ಗಂಟೆಗಳು ನಮ್ಮ ಹಕ್ಕಲ್ಲ. ಅವು ನಮಗೆ ಕೊಡಲ್ಪಟ್ಟ ಉಡುಗೊರೆ ಎಂದು ಭಾವಿಸಬೇಕು. ಅವನ್ನು ಗೌರವದಿಂದ ವಿನಯೋಗಿಸಬೇಕು. […]

ಸುಳ್ಳುಬುರುಕರಿಗೆ ಅತಿ ದೊಡ್ಡ ಶಿಕ್ಷೆ ಎಂದರೆ… : ಅರಳಿಮರ POSTER

ಸದಾ ಸುಳ್ಳು ಹೇಳುವವರು ಅನುಭವಿಸಬಹುದಾದ ಅತಿ ದೊಡ್ಡ ಶಿಕ್ಷೆ ಎಂದರೆ, ಅವರು ಅಪರೂಪಕ್ಕೆ ನಿಜ ಹೆಳಿದರೂ ಯಾರೂ ನಂಬದೇ ಇರುವುದು! ಪ್ರಾಥಮಿಕ ಶಾಲೆಯಲ್ಲಿ ಓದಿದ “ಹುಲಿ ಬಂತು ಹುಲಿ” ಕಥೆ ನೆನಪಾಯಿತೇ? ಯಾವಾಗಲೂ ಸುಳ್ಳು ಹೇಳುವ ಕೆಟ್ಟ ರೂಢಿಯಾಗಿಬಿಟ್ಟರೆ; ಮೊದಲನೆಯದಾಗಿ, ನಮಗೆ ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಎರಡನೆಯದಾಗಿ, ನಾವು ನಿಜ ಹೇಳತೊಡಗಿದರೂ ಯಾರೂ ನಂಬುವುದಿಲ್ಲ!  ಇದರಿಂದ ನಾವು ಹಲವು ಬಗೆಯ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಸಮಾಜದಲ್ಲಿ ಮಾನ ಹಾನಿಯಾಗುವುದಂತೂ ಖಾತ್ರಿ. ಜೊತೆಗೆ ಆರ್ಥಿಕ ನಷ್ಟ,  ಉದ್ಯೋಗ ಸ್ಥಳದಲ್ಲಿ ಅಪನಂಬಿಕೆ […]

ಅಧ್ಯಾತ್ಮ ಡೈರಿ ~ ಮಾತು, ಮರು ಮಾತನ್ನು ಬಡಿದೆಬ್ಬಿಸುವಂತೆ ಇರಬಾರದು!

ಸ್ಪಂದನೆ ಮೌನವೂ ಆಗಬಹುದು. ಮತ್ತೊಂದು ಕ್ರಿಯೆಯಲ್ಲಿ ತೊಡಗಿಕೊಳ್ಳುವುದೂ ಆಗಬಹುದು. ಸ್ಪಂದನೆ, ಕೇಳಿಸಿಕೊಂಡ ಮಾತಿನ ಅರ್ಥಗ್ರಹಿಸಿ ಅದಕ್ಕೆ ತಕ್ಕಂತೆ ನಡೆದುಕೊಳ್ಳುವ ಅಥವಾ ನಿರಾಕರಿಸುವ ಸ್ವಾತಂತ್ರ್ಯವೂ ಆಗಬಹುದು. ಸಂಪೂರ್ಣ ಮಾತು ಕೇಳಿಸಿಕೊಂಡ ನಂತರ ಸ್ಪಂದನೆಯ ಸ್ವರೂಪ ನಿರ್ಧಾರಗೊಳ್ಳುವುದು. ಹಾಗೆಂದೇ ಬುದ್ಧ ಸಂಪೂರ್ಣ ಕೇಳಿಸಿಕೋ, ಆ ತಾಳ್ಮೆ ಬೆಳೆಸಿಕೋ ಅನ್ನೋದು ~ ಅಲಾವಿಕಾ ಕೇಳುವಿಕೆ ನಮ್ಮಲ್ಲಿ ಮೌನವನ್ನು ಹುಟ್ಟಿಸಬೇಕೇ ಹೊರತು ಮಾತನ್ನಲ್ಲ. ಹಾಗೆಯೇ ನಮ್ಮ ಮಾತು ಕೂಡ ಮೌನವನ್ನು ಸ್ಥಾಪಿಸಬೇಕೇ ಹೊರತು ಮರುಮಾತನ್ನು ಬಡಿದೆಬ್ಬಿಸುವಂತಲ್ಲ. ಆದರೆ ನಾವೀಗ ಮಾತಾಡಲೆಂದೇ ಕೇಳಿಸಿಕೊಳ್ಳತೊಡಗಿದ್ದೇವೆ ಮತ್ತು […]

ಐನ್’ಸ್ಟೀನ್ ಹೇಳಿದ್ದು : ಅರಳಿಮರ POSTER

ನಮಗೆ ಮರ ಹತ್ತುವುದೊಂದು ಅದ್ಭುತ ಸಾಧನೆ ಅನ್ನಿಸಿದರೆ, ಪ್ರತಿಯೊಬ್ಬರನ್ನೂ ಅದರ ಮೂಲಕವೇ ಅಳೆಯತೊಡಗುತ್ತೇವೆ. ಯಾರಿಗೆ ಮರ ಹತ್ತಲು ಬರುತ್ತದೆಯೋ ಅವರು ಮಾತ್ರ ಯೋಗ್ಯರು, ಇಲ್ಲವಾದರೆ ಅಯೋಗ್ಯರು ಎಂದು ಭಾವಿಸುತ್ತೇವೆ ! ಪ್ರತಿಯೊಂದು ಜೀವಿಗೂ ತನ್ನದೇ ಆದ ಯೋಗ್ಯತೆ ಇರುತ್ತದೆ. ಪ್ರತಿಯೊಂದು ಜೀವಿಗೂ ತನ್ನ ಬದುಕನ್ನು ಬಾಳುವ ಅರ್ಹತೆ ಇರುತ್ತದೆ. ಆದರೆ ನಾವು ಆ ಜೀವಿಗಳ ಯೋಗ್ಯತೆಯನ್ನು ನಮ್ಮ ಮಾನದಂಡಗಳ ಮೂಲಕ ಅಳೆಯುತ್ತೇವೆ. ನಮ್ಮ ಬಳಿ ಇರುವ ಮಾಪನಗಳಾದರೋ ನಮ್ಮ ಸೀಮಿತ ತಿಳಿವಳಿಕೆಯದ್ದು. ನಮಗೆ ಮರ ಹತ್ತುವುದೊಂದು ಅದ್ಭುತ […]

ಅಧ್ಯಾತ್ಮ ಡೈರಿ : ನನಗೇ ಏಕೆ ಹೀಗಾಗುತ್ತದೆ?

ನಿಮ್ಮ ಬದುಕು ಸುಂದರವಾಗಿರಬೇಕು ಎಂದಾದಲ್ಲಿ, ನೀವು ಒಂದು ಮಾತು ನೆನಪಿಟ್ಟುಕೊಳ್ಳಬೇಕು; ಅದು, “ಹೋಲಿಕೆಗಿಂತ ಕುರೂಪವಾದುದು ಸೃಷ್ಟಿಯಲ್ಲಿ ಯಾವುದೂ ಇಲ್ಲ” ಅನ್ನೋದು. ಈ ಕುರೂಪ ನಮ್ಮ ಅಂತರಂಗ ಹೊಕ್ಕಿತೆಂದರೆ, ನಮ್ಮ ಜೀವನ ಸೌಂದರ್ವೇ ನಾಶವಾಗಿ ಹೋಗುತ್ತದೆ. ಸದಾ ಅತೃಪ್ತಿ ನಮ್ಮಲ್ಲಿ ಮನೆ ಮಾಡುತ್ತದೆ. ಈ ಅತೃಪ್ತಿಯೇ ಬಹಳ ಬಾರಿ ನಮ್ಮ ಯಶಸ್ಸಿಗೆ ಅಡ್ಡಿಯಾಗೋದು ~ ಅಲಾವಿಕಾ “ನಾನು ಯಾವ ಕೆಲಸ ಮಾಡಲು ಹೋದರೂ ಸುಸೂತ್ರ ಆಗೋದಿಲ್ಲ. ನನಗಿಂತ ಕಡಿಮೆ ಎಫರ್ಟ್ ಹಾಕಿದ್ರೂ ಅವರದು ಆಗಿಬಿಡತ್ತೆ. ಯಾಕೆ ಯಾವಾಗ್ಲೂ ನನಗೇ […]

ಎರಡು ಬಾರಿ ಸತ್ತ ಮನುಷ್ಯ : ಡೈರಿ ಕಥೆಗಳು

ಮೈ ತಣ್ಣಗಾಯಿತು. ತನ್ನನ್ನು ತಾನು ಮುಟ್ಟಿ ನೋಡಿಕೊಂಡ. ಹೆಂಡತಿಯ ಮಾತು ನೆನಪಾಯಿತು. “ಹಾಗಾದರೆ ನಾನೀಗ ಸತ್ತುಹೋಗಿದ್ದೇನೆ!” ಅವನು ಯೋಚಿಸಿದ…. ~ ಅಲಾವಿಕಾ ಒಂದೂರಲ್ಲಿ ಒಬ್ಬನಿಗೆ ಸಾವು ಅಂದರೆ ವಿಪರೀತ ಭಯ. ಊರಿನಲ್ಲಿ ಯಾರಾದರೂ ಸತ್ತುಹೋದರು ಎಂದು ಗೊತ್ತಾದರೆ ತಾನು ನಡುಗಿಹೋಗುತ್ತಿದ್ದ. ತಾನು ಯಾವಾಗ, ಎಲ್ಲಿ, ಹೇಗೆ ಸಾಯಬಹುದು ಎಂದು ಚಿಂತೆಗೆ ಬೀಳುತ್ತಿದ್ದ. ಒಂದು ದಿನ ಅವನ ಪಕ್ಕದ ಮನೆಯವನ ಹೆಂಡತಿ ಸತ್ತುಹೋದಳು. ಚಿಕ್ಕವಯಸ್ಸಿನ ಹೆಂಗಸು. ಅವಳ ಸಾವಿನ ಸುದ್ದಿ ಕೇಳಿದ ಮೇಲೆ ಈತನಿಗೆ ವಿಪರೀತ ಭಯವಾಗತೊಡಗಿತು. ಗಂಡ […]

ಓದುಗರ ಮೂರು ಪ್ರಶ್ನೆಗಳಿಗೆ ಉತ್ತರ : ಅರಳಿಮರ ಸಂವಾದ

ಅರಳಿಮರ ಫೇಸ್’ಬುಕ್ ಮತ್ತು ವಾಟ್ಸಪ್’ಗಳಲ್ಲಿ ಕೇಳಲಾಗಿದ್ದೆ ಪ್ರಶ್ನೆಗಳಿಗೆ ಉತ್ತರಿಸುವುದು ಕಾರಣಾಂತರಗಳಿಂದ ತಡವಾಗಿದೆ. ಮುಂದಿನ ದಿನಗಳಲ್ಲಿ ಶೀಘ್ರದಲ್ಲೇ ಸ್ಪಂದಿಸಲು ಪ್ರಯತ್ನಿಸುತ್ತೇವೆ. ಓದುಗರ ಪ್ರಶ್ನೆಗಳಲ್ಲಿ ಮೂರನ್ನು ಆಯ್ದು ಅರಳಿಬಳಗದ ಚಿತ್ಕಲಾ ಉತ್ತರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಉಳಿದ ಪ್ರಶ್ನೆಗಳಿಗೂ ಉತ್ತರಿಸಲಾಗುವುದು.  ನಾಗರತ್ನ ಕೊಂಡ್ಲಿ ಅವರ ಪ್ರಶ್ನೆ : ನಾನು ಪ್ರಾಮಾಣಿಕವಾಗಿ ನಮ್ಮ ಊರಿನ ಜನರಿಗೆ ಸಹಾಯ ಮಾಡಲು ನೋಡುತ್ತಿದ್ದೇನೆ. ನನಗೆ ಕೆಲವು ವ್ಯಕ್ತಿಗಳು ಹಾಗೂ ದುಷ್ಟ ಶಕ್ತಿಗಳು ತೊಂದರೆ ಕೊಡುತ್ತಿದ್ದಾರೆ. ಹೇಗೆ ಮಾಡುವುದು? ಏನು ಮಾಡುವುದು ನಾನಂತೂ ಯಾರಿಗೂ ಭಯ […]

ಅಧ್ಯಾತ್ಮ ಡೈರಿ : ಸಮಸ್ಯೆ ಒಂದು ತಾತ್ಕಾಲಿಕ ಸ್ಥಿತಿ….

ನೀರಿಗೆ ಬಿದ್ದಾಗ ಈಜುವುದು ಜಾಣತನ. ಅದನ್ನು ಬಿಟ್ಟು ನೀರಿಗೆ ಹೇಗೆ ಬಿದ್ದೆ, ಯಾಕೆ ಬಿದ್ದೆ, ಯಾರಾದರೂ ದೂಡಿದರೋ ನಾನೇ ಬಿದ್ದೆನೋ ಎಂದೆಲ್ಲ ಯೋಚಿಸುತ್ತ ಆ ಒಂದು ಘಟನೆಯನ್ನು ಸಮಸ್ಯೆಯನ್ನಾಗಿ ಮಾರ್ಪಡಿಸಿಕೊಳ್ಳುತ್ತೇವೆ! ~ ಅಲಾವಿಕಾ ಸಮಸ್ಯೆ ಒಂದು ತಾತ್ಕಾಲಿಕ ಸ್ಥಿತಿ. ಮನುಷ್ಯನ ಮನಸ್ಥಿತಿಯನ್ನು ಅವಲಂಬಿಸಿದ ಒಂದು ಮಿಥ್ಯಾವಸ್ಥೆಯದು. ವಾಸ್ತವದಲ್ಲಿ ಸಮಸ್ಯೆ ಎಂಬುದೇ ಇಲ್ಲ. ಅದನ್ನು ನಾವೇ ಹುಟ್ಟುಹಾಕಿಕೊಳ್ಳುತ್ತೇವೆ. ನಾವು ಅವಕಾಶ ಮಾಡಿಕೊಡದ ಹೊರತು ಯಾವ ಸಂಗತಿಯೂ ನಮ್ಮನ್ನು ಬಾಧಿಸಲಾರವು. ಆದ್ದರಿಂದ ಸಮಸ್ಯೆಗಳು ತಲೆದೋರಿದಾಗ ಅವುಗಳ ಬೇರು ನಮ್ಮೊಳಗೇ ಇದೆ […]

ಗೆಳೆಯರು ನಮ್ಮ ಬದುಕಿಗೆ ಬಾಧ್ಯಸ್ಥರಲ್ಲ : ಫೇಸ್ ಬುಕ್ ಕಲಿಸುವ ಪಾಠ

ನಾವು ಯಾರಾದರೂ ನಮಗೆ ಸಹಾಯ ಮಾಡಬೇಕೆಂದು, ನಮ್ಮ ಕಷ್ಟ ಸುಖಕ್ಕೆ ಒದಗಬೇಕೆಂದು ಯಾಕೆ ಬಯಸಬೇಕು? ಕೇವಲ ಪರದೆಯ ಮೇಲೆ ಮೂಡುವ ಅಕ್ಷರಗಳಲ್ಲಿ ಮತ್ತು ಅಪ್’ಲೋಡ್ ಮಾಡುವ ಫೋಟೋಗಳಲ್ಲಿ ಮಾತ್ರ ಅಸ್ತಿತ್ವ ಹೊಂದಿರುವ ಜಾಲತಾಣದ ಗೆಳೆಯರಿಂದ ಯಾಕಾದರೂ ಅದನ್ನು ನಿರೀಕ್ಷಿಸಬೇಕು? ~ ಅಲಾವಿಕಾ ಸಾಮಾಜಿಕ ಜಾಲತಾಣಗಳಲ್ಲಿ ಫೇಸ್ ಬುಕ್ ಸಾಕಷ್ಟು ಜನಪ್ರಿಯ. ಬಹುಶಃ ಅದರಲ್ಲಿ ನಿಮ್ಮದೂ ಒಂದು ಖಾತೆ ಇರಬಹುದು. ಹಾಗಿದ್ದಲ್ಲಿ ನಿಮಗೆ ಆಗಾಗ ಒಂದು ಮಾತು ಕಿವಿಗೆ ಬಿದ್ದಿರುತ್ತದೆ. “ಫೇಸ್ ಬುಕ್’ನಲ್ಲಿ ಅಷ್ಟು ಗೆಳೆಯರಿದ್ದಾರೆ, ಇಷ್ಟು ಫ್ಯಾನ್ […]