ಒಡೆತನ ಸಾಧಿಸಿದರೆ ಸಂಬಂಧ ಒಡೆಯುವುದು…

ನಮಗೆ ಯಾವುದು ಪ್ರಿಯವೋ ಅದು ನಮ್ಮೊಡನೆ ಇದ್ದಷ್ಟು ಹೊತ್ತು ಅದರ ಪಾಡಿಗೆ ಅದನ್ನು ಇರಲುಬಿಟ್ಟು ನೋಡುತ್ತಾ ಆನಂದವನ್ನು ಅನುಭವಿಸಬೇಕೆ ಹೊರತು, ಒಡೆತನ ಸಾಧಿಸಲು ಮುಷ್ಠಿಗಟ್ಟಿದರೆ, ಶಾಶ್ವತವಾಗಿ ಅದನ್ನು ಕಳೆದುಕೊಂಡು ಬಿಡುವ ಅಪಾಯವೇ ಬಹಳ. ಒಂದು ಸುಂದರವಾದ ಹೂವು ಅರಳಿ ನಿಂತಿದೆ. ಅದರ ಸಹಜ ಆಯಸ್ಸು ಒಂದೆರಡು ದಿನಗಳಿರಬಹುದು ಅಥವಾ ಒಂದು ವಾರ. ತನ್ನ ಪಾಡಿಗೆ ಅರಳಿಕೊಂಡು ಘಮ ಹರಡಿ ಮುದುಡಿ ಬಾಗುವ ನಿಯತಿ ಅದರದ್ದು. ಆಗತಾನೆ ಅರಳಿದ ಆ ಹೂವು ನಮಗಿಷ್ಟವಾಗುತ್ತದೆ ಎಂದಿಟ್ಟುಕೊಳ್ಳೋಣ. ನಮಗೆ ಸಾಧ್ಯವಿರುವಷ್ಟು ಹೊತ್ತು […]

ದೂರಾದವರು ದೂರುವುದೇಕೆ? : ಬೇರ್ಪಟ್ಟ ಮೇಲೆ ಘನತೆ ಉಳಿಸಿಕೊಳ್ಳಿ

ಪ್ರೀತಿ ಯಾವತ್ತೂ ಪ್ರಮಾದಗಳ ಲೆಕ್ಕವಿಡೋದಿಲ್ಲ. ನೀವು ಪರಸ್ಪರ ಪ್ರೇಮಿಸಿದ್ದು ನಿಜವೇ ಆದರೆ, ಯಾವ ಕಾರಣದಿಂದ ಬೇರ್ಪಟ್ಟರೋ ಆ ಕಾರಣವನ್ನು ಕುರಿತು ಯೋಚಿಸಿ. ಬಹಳ ಸಲ ನಾವಿದನ್ನು ನೋಡಿರುತ್ತೇವೆ. ಅಥವಾ ಮಾಡಿರುತ್ತೇವೆ. ಗೆಳೆತನದಲ್ಲೇ ಆಗಲಿ, ಸಾಂಗತ್ಯ ಮತ್ತು ದಾಂಪತ್ಯದಲ್ಲೇ ಆಗಲಿ. ಇಬ್ಬರು ಬೇರ್ಪಟ್ಟ ನಂತರ ಒಬ್ಬರನ್ನೊಬ್ಬರು ಹಳಿಯತೊಡಗುತ್ತಾರೆ. ಅವರಿಂದ ತಮಗಾದ ಕಷ್ಟನಷ್ಟಗಳನ್ನು ದೂರತೊಡಗಿರುತ್ತಾರೆ. ಗೆಳೆತನಕ್ಕಿಂತ ಹೆಚ್ಚಾಗಿ ಸಾಂಗತ್ಯದಲ್ಲಿ ಇದು ಹೆಚ್ಚು. ಕಚ್ಚಾ ಪ್ರೇಮಿಗಳಲ್ಲಂತೂ ಇದು ಸರ್ವೇ ಸಾಮಾನ್ಯ. ಬೇರ್ಪಟ್ಟ ಇಬ್ಬರೂ ತಮ್ಮ ತಮ್ಮ ನಿಟ್ಟಿನಲ್ಲೇ ಕಥೆ ಹೇಳುತ್ತ ಇರುತ್ತಾರೆ. […]

ಸ್ಪೇಸ್ ಇದ್ದಲ್ಲಿ ಪೊಸೆಸ್ಇವ್’ನೆಸ್ ಇರದು

ನಮ್ಮ ಪ್ರೀತಿಪಾತ್ರರೊಂದಿಗೆ ಯಾವುದೇ ನಿರೀಕ್ಷೆಗಳನ್ನು ಹೊಂದದೇ ಇರುವುದು ಅಸಾಧ್ಯವಿರಬಹುದು. ಆದ್ದರಿಂದ, ಇಟ್ಟುಕೊಳ್ಳುವುದೇ ಆದರೆ, ಸಕಾರಣ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಕು. ನೀರಿಕ್ಷೆಗಳು ಸಕಾರಣವಾಗಿದ್ದು, ಜ್ಞಾನ ಹಾಗೂ ವಿವೇಕದ ಮೇಲೆ ಆಧಾರಿತವಾಗಿರಬೇಕು. ಬೆಂಕಿ ಬಿಸಿಯಾಗಿರುತ್ತದೆ ಎಂದು ನಮಗೆ ಗೊತ್ತಿದೆ. ಆ ವಾಸ್ತವಾಂಶವನ್ನು ಒಪ್ಪಿದ್ದೇವೆ. ಬೆಂಕಿಯನ್ನು ಮುಟ್ಟಿ ಸುಟ್ಟುಕೊಂಡರೆ ಬೆಂಕಿಯನ್ನು ನಿಂದಿಸುವುದಿಲ್ಲ. ಇಡೀ ಮನೆಯೇ ಸುಟ್ಟಾಗ, ನಾವು ಬೇರೆ ಅಂಶಗಳನ್ನು ನಿಂದಿಸಬಹುದು ಅಥವಾ ನಮ್ಮ ನಿರ್ಲಕ್ಷ್ಯವನ್ನು ಹಳಿಯುತ್ತೇವೆ. ಆದರೆ ಬೆಂಕಿ ಇರುವುದೇ ಹಾಗೆ ಎಂದು ಒಪ್ಪಿಕೊಳ್ಳುತ್ತೇವೆ. ಹಿಮದ ತಂಪನ್ನು, ಹೂ, ಹಣ್ಣು, ಮರಗಿಡಗಳ  […]

ಹೆಸರು ಅಳಿಯುವ ಹೆದರಿಕೆ ಏಕೆ!?

ನಮ್ಮನ್ನು ನಾವು ಭೌತಿಕವಾಗಿ ಸಾಬೀತುಪಡಿಸಿಕೊಳ್ಳಲು ಹೆಸರಿನ ಗುರುತಿಗೆ ಮೊರೆ ಹೋಗುತ್ತೇವೆ. ಸಂಪೂರ್ಣವಾಗಿ ಅದರ ಮೇಲೆ ಅವಲಂಬಿತರಾಗುತ್ತೇವೆ. ನಾವು ನಮ್ಮ ಗುರುತಿನ ವಲಯದಿಂದ ಅಂತರ ಕಾಯ್ದುಕೊಂಡರೆ, ಅದರಿಂದ ಹೊರಗೆ ಬಂದರೆ ಎಲ್ಲಿ ಜನ ನಮ್ಮನ್ನು ಮರೆತುಬಿಡುತ್ತಾರೋ ಅನ್ನುವ ಅಭದ್ರತಾ ಭಾವ ಕಾಡತೊಡಗುತ್ತದೆ.  ಕಣ್ಣಿಗೆ ಕಾಣದ್ದನ್ನು ನಿರಾಕರಿಸಬೇಕು, ಯಾವುದು ವೈಚಾರಿಕವಾಗಿ ಸ್ಥಾಪಿತವೋ ವೈಜ್ಞಾನಿಕವಾಗಿ ಸಾಬೀತಾಗಿದೆಯೋ ಅದನ್ನು ಒಪ್ಪಬೇಕು ಎಂದು ಅತೀತಗಳನ್ನು ಆಚೆಗಿಟ್ಟು ವಾದ ಹೂಡುವ ನಾವು, ಕಣ್ಣಿಗೆ ಕಾಣುವ, ವೈಚಾರಿಕವಾಗಿಯೂ ವೈಜ್ಞಾನಿಕವಾಗಿಯೂ ಸ್ಥಾಪಿತವಾಗಿರುವ ಸಾವನ್ನು ಮಾತ್ರ ಒಪ್ಪಿಕೊಳ್ಳಲು ಹಿಂಜರಿಯುತ್ತೇವೆ. ಮಾತುಕತೆಯಲ್ಲಿ […]

ಪವರ್ ಆಫ್ ಪ್ಲೀಸ್ : ಸಜ್ಜನಿಕೆ ಹೃದಯಗಳನ್ನು ಆಳುವುದು

ಅಧಿಕಾರ ಚಲಾಯಿಸುವುದು ಎಂದರೆ ತೀರ ಬಿಗುವಾಗಿ ವರ್ತಿಸುವುದೇ? ಕೆಲಸ ಮಾಡದೆ ಇರುವವರನ್ನು ಶಿಕ್ಷಿಸುವುದೇ? ಅಥವಾ ದಂಡ ವಿಧಿಸುವುದೇ? ಖಂಡಿತವಾಗಿಯೂ ಕೆಲಸ ಸುಸೂತ್ರವಾಗಿ ನೆರವೇರಲು ಈ ಎಲ್ಲವೂ ಕೂಡಾ ದಾರಿಗಳೇ ಆಗಿದ್ದರೂ ಇವೇ ದಾರಿಗಳಾಗಿ ಉಳಿದುಬಿಡಬಾರದು. ಕೆಲವೊಮ್ಮೆ ಹೀಗಾಗುತ್ತದೆ. ನಾವು ಅಧಿಕಾರದಲ್ಲಿ ಇದ್ದರೂ ನಮ್ಮಿಂದ ಅದರ ಸರಿಯಾದ ಬಳಕೆ ಸಾಧ್ಯವಾಗುವುದಿಲ್ಲ. ಪ್ರಜಾಪ್ರಭುತ್ವದ ಈ ಕಾಲದಲ್ಲಿ ಅಧಿಕಾರವೆಂದರೆ ಹುದ್ದೆ ನಿಭಾಯಿಸುವುದು. ದೊಡ್ಡ ಹುದ್ದೆಯಲ್ಲಿ ಇರುವವರು ಅಧಿಕಾರ ನಡೆಸುವುದು ಅವರ ಪಾಲಿನ ಕರ್ತವ್ಯವೂ ಆಗಿರುತ್ತದೆ. ಆದ್ದರಿಂದ ತಮ್ಮ ಕೆಳಗಿನವರಿಂದ ಕೆಲಸ ಮಾಡಿಸುವುದು […]

ಏಕಾಂತ: ನಮ್ಮೊಡನೆ ನಾವಿರುವ ಸುಂದರ ಅವಕಾಶ

ನಾವು ಎಷ್ಟೇ ಸಹಜೀವನದಲ್ಲಿದ್ದರೂ ಕುಟುಂಬ ವ್ಯವಸ್ಥೆಯಲ್ಲಿದ್ದರೂ ಆಜೀವ ಸಂಗಾತದಲ್ಲಿದ್ದರೂ ನಮ್ಮ ಬದುಕನ್ನು ನಾವೇ ನಡೆಸಬೇಕಿರುತ್ತದೆ. ಒಂದೇ ತಟ್ಟೆಯಲ್ಲಿ ಊಟ ಮಾಡುವಾಗ ನಮ್ಮ ಪಾಲಿನದನ್ನು ನಾವೇ ಅಗಿದು ನುಂಗಬೇಕಿರುವಂತೆಯೇ ಇದು ಕೂಡ. ನಮ್ಮ ಬದುಕಿನ ಕುರಿತಾದ ಆತ್ಯಂತಿಕ ನಿರ್ಣಯಗಳನ್ನು ನಾವೇ ಕೈಗೊಳ್ಳಬೇಕು. ಯಾರಿಂದ ಎಷ್ಟೇ ಸಲಹೆ ಪಡೆದುಕೊಂಡರೂ ನಮ್ಮ ಆಂತರ್ಯ ಏನು ಹೇಳುತ್ತದೆಯೋ ಅದರಂತೆ ನಡೆಯಬೇಕು. ಏಕಾಕಿತನದ ನೋವನ್ನು ಅಭಿವ್ಯಕ್ತ ಪಡಿಸಲು ಭಾಷೆಯು `ಒಂಟಿತನ’ವೆಂಬ ಪದವನ್ನು ಸೃಷ್ಟಿಸಿತು. ಅದರ ವೈಭವವನ್ನು ಬಣ್ಣಿಸಲು `ಏಕಾಂತ’ವೆಂಬ ಪದವನ್ನು ಹುಟ್ಟುಹಾಕಿತು ಎನ್ನುತ್ತಾನೆ ತತ್ತ್ವಶಾಸ್ತ್ರಜ್ಞ […]